ಬ್ಲಾಕ್‌ಮೇಲ್ ಅಲ್ಲದೇ ಮತ್ತೇನು, ಕಾಂಗ್ರೆಸ್‌ನವರಿಗೆ ನಾಚಿಕೆಯಾಗಬೇಕು: ಬಿ.ವೈ.ವಿಜಯೇಂದ್ರ ಹೇಳಿದ್ದೇನು?

By Govindaraj S  |  First Published Jan 31, 2024, 2:00 PM IST

ಲೋಕಸಭೆ ಚುನಾವಣೆ ಹಿನ್ನಲೆ ಅಕ್ಷತೆ ಬೇಕಾ? ಗ್ಯಾರೆಂಟಿ ಬೇಕಾ? ಎಂದು ಜನರು ತೀರ್ಮಾನ ಮಾಡುತ್ತಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಜ.31): ಲೋಕಸಭೆ ಚುನಾವಣೆ ಹಿನ್ನಲೆ ಅಕ್ಷತೆ ಬೇಕಾ? ಗ್ಯಾರೆಂಟಿ ಬೇಕಾ? ಎಂದು ಜನರು ತೀರ್ಮಾನ ಮಾಡುತ್ತಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಬಿಜೆಪಿ ಕಚೇರಿಯಲ್ಲಿ ನಡೆಯುತ್ತಿರುವ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ  ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತಾಡಿದ ಅವರು ಶಾಸಕ ಬಾಲಕೃಷ್ಣ ಹೇಳಿಕೆಗೆ ಪ್ರತಿಕ್ರಿಯಿಸಿ ಬ್ಲಾಕ್ ಮೇಲ್ ಅಲ್ಲದೆ, ಮತ್ತೇನು ಕಾಂಗ್ರೆಸ್ ನವರಿಗೆ ನಾಚೀಕೆ ಯಾಗಬೇಕು ಎಂದು ಕಿಡಿಕಾರಿದರು.

Tap to resize

Latest Videos

undefined

ಒಂದು ಹೊಸ ಯೋಜನೆ ಜಾರಿಗೆ ತಂದಿಲ್ಲ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು 8 ತಿಂಗಳು ಕಳೆದಿದೆ. ಒಂದು ಹೊಸ ಯೋಜನೆ ಜಾರಿಗೆ ತಂದಿಲ್ಲ. ಇವರ ಗ್ಯಾರೆಂಟಿಯಿಂದ ರಾಜ್ಯದ ಜನ ಬೀದಿಗೆ ಬರುವ ಪರಿಸ್ಥಿತಿ ಬಂದಿದೆ. ಶಾಲೆಗೆ ಹೋಗುವ ಮಕ್ಕಳಿಗೆ ಬಸ್ ಇಲ್ಲ, ರೈತರ ಪಂಪ್ ಸೆಟ್ ಗೆ ವಿದ್ಯುತ್ ಇಲ್ಲ ಇವರು ಯಾವ ಗ್ಯಾರೆಂಟಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ದ ಹರಿಹಾಯ್ದರು. ಗ್ಯಾರೆಂಟಿ ಬಗ್ಗೆ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ.

ಹೆಸರಿನಲ್ಲಿ ರಾಮ ಇದ್ದರೆ ಸಾಲದು, ಆತನ ಸಂಸ್ಕೃತಿ, ಗುಣವೂ ಮುಖ್ಯ: ಎಚ್.ಡಿ.ಕುಮಾರಸ್ವಾಮಿ

ದೇಶ ಮತ್ತು ರಾಜ್ಯದ ಜನರ ಕ್ಷಮೆ ಕೇಳಬೇಕು: ಚುನಾವಣೆಗೂ ಮುನ್ನಾ ಕಾಂಗ್ರೆಸ್ ತನ್ನ ಸೋಲು ಒಪ್ಪಿಕೊಂಡಿದೆ. ರಾಜ್ಯದಲ್ಲಿ ಇಪ್ಪತ್ತುಕ್ಕೂ ಸ್ಥಾನ ಗೆಲ್ಲುತ್ತೇ ವೆಂಬ ಭ್ರಮೆಯಲ್ಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ 28 ಸ್ಥಾನ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ. ಕಾಂಗ್ರೆಸ್ ಪಕ್ಷದ ಮುಖಂಡರಲ್ಲಿ ಈ ಅನುಮಾನ ಕಾಡುತ್ತಿದೆ ಎಂದರು.ರಾಮ ಮಂದಿರ ಪುನರ್ ಪ್ರತಿಷ್ಠಾಪನೆ ಬಳಿಕ ದೇಶದ ವಾತಾವರಣ ಬದಲಾಗಿದೆ. ಹೊಸ ವಾತಾವರಣದಿಂದ ಕಾಂಗ್ರೆಸ್ ಭಯಭೀತವಾಗಿದೆ. ಹಾಗಾಗಿ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ.  

ವಿಧಾನಸಭೆ ಚುನಾವಣೆಯಲ್ಲಿ ಬೋಗಸ್ ಗ್ಯಾರೆಂಟಿ ಯಿಂದ ಅಧಿಕಾರಕ್ಕೆ ಬಂದಿರೋದು, ಕಾಂಗ್ರೆಸ್ ಜನರಿಗೆ ಅನ್ಯಾಯ ಮಾಡಲು ನಾವು ಬಿಡೋದಿಲ್ಲ. ಕಾಂಗ್ರೆಸ್ ನವರ ಕಿವಿ ಹಿಂಡಿ ಕೆಲಸ ಮಾಡಿಸಬೇಕು ಗೊತ್ತಿದೆ ಎಂದು ತಿಳಿಸಿದರು. ಮಂಡ್ಯ ಪ್ರಕರಣ ರಾಜಕೀಯ ಬಳಕೆ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಧ್ವಜ ಸ್ಥಂಭ ನಿರ್ಮಿಸಿದ್ದೇ ರಾಮಧ್ವಜ ಹಾರಿಸಬೇಕೆಂದು, ಆದರೆ, ಭಾವನೆ ವಿರುದ್ದ ಸರ್ಕಾರ ನಡೆದುಕೊಳ್ಳುತ್ತಿದೆ. ಜನವರಿ 26ರಂದು ರಾಷ್ಟ್ರಧ್ವಜ ಹಾರಿಸಿ ಗೌರವ ಕೊಟ್ಟಿದ್ದೇವೆ, ರಾಷ್ಟ್ರ ಧ್ವಜಕ್ಕೆ ಅಗೌರವ ತೋರಿದ್ದು ಕಾಂಗ್ರೆಸ್ ಸರ್ಕಾರ. 

ನಾನು ಕಾಂಗ್ರೆಸ್ಸಿಗೆ ಹೋಗಲ್ಲ, ಬಿಜೆಪಿಯಲ್ಲೇ ಇರುವೆ: ಶಂಕರ ಪಾಟೀಲ ಮುನೇನಕೊಪ್ಪ ಸ್ಪಷ್ಟನೆ

ರಾಜ್ಯ ಸರ್ಕಾರಕ್ಕೆ ರಾಷ್ಟ್ರಧ್ವಜ ಹೇಗೆ ಹಾರಿಸಬೇಕು ಗೊತ್ತಿಲ್ಲ ಎಂದರು. ಧ್ವಜಕ್ಕೆ ಯಾವ ಅಳತೆ ಇರಬೇಕು ಇದ್ಯಾವುದನ್ನೂ ಲೆಕ್ಕಿ ಸದೆ ಸರ್ಕಾರ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದೆ. ಕಾಂಗ್ರೆಸ್ ಮೊದಲು ದೇಶ ಮತ್ತು ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದರು. ಗ್ರಾಮ ಪಂಚಾಯತ್ ಸದಸ್ಯರ ತೀರ್ಮಾನದಂತೆ ಧ್ವಜ ಹಾರಿಸಿರೋದು, ಕಾಂಗ್ರೆಸ್ ಮುಖಂಡರು ಮುಖ್ಯಮಂತ್ರಿ ದ್ವಂದದಲ್ಲಿದ್ದಾಗ ಯಾವುದೇ ತೀರ್ಮಾನ ಮಾಡಲಾಗುತ್ತಿಲ್ಲ. ಪ್ರತಿಯೊಬ್ಬ ರಾಮ ಭಕ್ತರು ದುಷ್ಟ ರಾಜ್ಯ ಸರ್ಕಾರದ ನಡವಳಿಕೆ ಗಮನಿಸುತ್ತಿದ್ದಾರೆ. ರಾಜ್ಯ ದೇಶದಲ್ಲಿ ಹನುಮ ಧ್ವಜಕ್ಕೆ ಕಾಂಗ್ರೆಸ್ ವಿರೋಧಿಸುವುದು ನಾಚಿಕೆಗೇಡಿನ ಸಂಗತಿ‌ಯಾಗಿದೆ ಎಂದರು.

click me!