ಮಂಡ್ಯ ಕಾಂಗ್ರೆಸ್‌ಗೆ ಕೈಕೊಟ್ಟ ಸಚಿವ ನಾರಾಯಣಗೌಡ: ಬಿಜೆಪಿಯಲ್ಲಿ ಉಳಿಯುವುದು ಕನ್ಫರ್ಮ್‌

Published : Mar 23, 2023, 10:25 PM IST
ಮಂಡ್ಯ ಕಾಂಗ್ರೆಸ್‌ಗೆ ಕೈಕೊಟ್ಟ ಸಚಿವ ನಾರಾಯಣಗೌಡ: ಬಿಜೆಪಿಯಲ್ಲಿ ಉಳಿಯುವುದು ಕನ್ಫರ್ಮ್‌

ಸಾರಾಂಶ

ಬಿಜೆಪಿಯನ್ನು ತೊರೆದು ಕಾಂಗ್ರೆಸ್‌ ಸೇರಲು ಸಿದ್ಧವಾಗಿದ್ದ ಸಚಿವ ನಾರಾರಣಗೌಡ ಅವರನ್ನು ಕಡೆಸಿಕೊಂಡ ಬಿಜೆಪಿ ಚಾಣಾಕ್ಷ ಅಮಿತ್‌ ಶಾ, ಪಕ್ಷ ಬಿಡದಂತೆ ಸೂಚನೆ ನೀಡಿದ್ದಾರೆ.

ಮಂಡ್ಯ (ಮಾ.23): ರಾಜ್ಯದ ವಿಧಾನಸಭೆ ಚುನಾವಣೆಯ ದಿನಾಂಕ ಘೋಷಣೆಗೆ ಇನ್ನು ದಿನಗಣನೆ ಆರಂಭವಾಗಿದೆ. ಇಂತಹ ಸಂದರ್ಭದಲ್ಲಿ ಬಿಜೆಪಿಯನ್ನು ತೊರೆದು ಕಾಂಗ್ರೆಸ್‌ ಸೇರಲು ಸಿದ್ಧವಾಗಿದ್ದ ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ನಾರಾರಣಗೌಡ ಅವರನ್ನು ಕಡೆಸಿಕೊಂಡ ಬಿಜೆಪಿ ಚಾಣಾಕ್ಷ ಅಮಿತ್‌ ಶಾ, ಪಕ್ಷ ಬಿಡದಂತೆ ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ 2023ರ ದಿನಾಂಕ ಘೋಷಣೆ ಹತ್ತಿರ ಆಗುತ್ತಿದ್ದಂತೆ ಟಿಕೆಟ್‌ ಆಕಾಂಕ್ಷಿಗಳು ಪಕ್ಷಾಂತರ ಮಾಡುವ ಪರ್ವ ಆರಂಭವಾಗಿದೆ. ಇನ್ನು ಆರಂಭಗದಲ್ಲಿ ಕಾರ್ಯಕರ್ತರಿಂದ ಆರಂಭವಾದ ಪಕ್ಷಾಂತರ ಪರ್ವವು, ನಂತರ ಮಾಜಿ ಶಾಸಕರು, ಮಾಜಿ ಸಚಿವರವರೆಗೆ ವಿಸ್ತರಣೆಹಗೊಂಡಿತು. ನಂತರ, ಹಾಲಿ ವಿಧಾನ ಪರಿಷತ್‌ ಸದಸ್ಯರು ಹಾಗೂ ಹಾಲಿ ಸಚಿವರಗೂ ವಿಸ್ತರಣೆ ಆಗಿದ್ದು, ಈಗಾಗಲೇ ತಾವಿರುವ ಪಕ್ಷವನ್ನು ಬಿಟ್ಟು ಬೇರೊಂದು ಪಕ್ಷದ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಲು ಪ್ರಚಾರ ಕಾರ್ಯವನ್ನೂ ಆರಂಭಿಸಿದ್ದಾರೆ. ಇನ್ನು ಬಿಜೆಪಿ ಸರ್ಕಾರದಲ್ಲಿ ಸಚಿವನಾಗಿದ್ದುಕೊಂಡು, ಕಾಂಗ್ರೆಸ್‌ಗೆ ಹೋಗಲು ಸಿದ್ಧವಾಗಿದ್ದ ನಾರಾಯಣಗೌರನ್ನು ದೆಹಲಿಗೆ ಕರೆಸಿಕೊಂಡ ಅಮಿತ್‌ ಶಾ ಅವರು ಕಾಂಗ್ರೆಸ್‌ ಹೋಗದಂತೆ ಸೂಚನೆ ನೀಡಿದ್ದಾರೆ.

ನಾರಾಯಣಗೌಡ ನಮ್ಮ ಪಕ್ಷದ ಸೂಪರ್‌ ಸ್ಟಾರ್‌, ಅವರು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ: ಸಚಿವ ಅಶ್ವತ್ಥ ನಾರಾಯಣ

ಜೆಡಿಎಸ್‌ ಭದ್ರಕೋಟೆಯಲ್ಲಿ ಕಮಲ ಅರಳಿಸಲು ಕಸರತ್ತು: ಹಳೆಯ ಮೈಸೂರು ಪ್ರಾಂತ್ಯದಲ್ಲಿನ ಜೆಡಿಎಸ್‌ ಭದ್ರಕೋಟೆಯಲ್ಲಿ ಇದೇ ಮೊದಲ ಬಾರಿಗೆ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರದ  ಉಪ ಚುನಾವಣೆಯಲ್ಲಿ ಕೆ.ಸಿ. ನಾರಾಯಣಗೌಡ ಬಿಜೆಪಿಯಿಂದ ಗೆಲುವು ಸಾಧಿಸಿದ್ದರು. ಇನ್ನು ಮಂಡ್ಯದಲ್ಲಿ ಬಿಜೆಪಿ ಗೆದ್ದು ಇತಿಹಾಸ ಸೃಷ್ಟಿಸಿದ್ದು, ಈ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹುಟ್ಟಿದ ಕ್ಷೇತ್ರದಲ್ಲಿ ಬಿಜೆಪಿ ಕಮಲವನ್ನು ಅರಳಿಸಿ ಸಾರ್ಥಕತೆ ಮೆರೆದಿದ್ದರು. ಜೊತೆಗೆ, ಮುಂಬರುವ ಚುನಾವಣೆಯಲ್ಲಿ ಬಿಜೆಪಿ ತನ್ನ ಬಾಹುಗಳನ್ನು ವಿಸ್ತರಣೆ ಮಾಡಿಕೊಳ್ಳಲು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಕೂಡ ಬಂದು ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಬಿಜೆಪಿಯಿಂದ ಗೆದ್ದ ಒಬ್ಬ ಅಭ್ಯರ್ಥಿ ಕೂಡ ಪಕ್ಷ ತೊರೆಯಲು ಮುಂದಾಗಿದ್ದು, ಬಿಜೆಪಿಗೆ ನುಂಗಲಾರದ ತುತ್ತಾಗಿತ್ತು. ಹೀಗಾಗಿ ಉಳಿಸಿಕೊಳ್ಳಲು ಭಾರಿ ಕಸರತ್ತು ಮಾಡಿತ್ತು.

ನಿನ್ನೆ ಯಡಿಯೂರಪ್ಪ ಇಂದು ಅಮಿತ್ ಶಾ: ಇನ್ನು ಸಚಿವ ಕೆ.ಸಿ. ನಾರಾಯಣಗೌಡ ಅವರೊಂದಿಗೆ ಬಿಜೆಪಿಯ ರಾಜಾಹುಲಿ ಎಂದು ಖ್ಯಾತರಾಗಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರೇ ಖುದ್ದು ಕರೆಸಿಕೊಂಡು ಚರ್ಚೆ ಮಾಡಿ, ಬಿಜೆಪಿಯಲ್ಲಿ ಉಳಿಯುವಂತೆ ಸೂಚನೆ ನೀಡಿದ್ದರು. ಇದಾದ ಬಳಿಕ ನಾರಾಯಣಗೌಡರನ್ನು ದೆಹಲಿಗೆ ಕರೆಸಿಕೊಂಡ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬಿಜೆಪಿ ತೊರೆಯದಂತೆ ಸೂಚನೆ ನೀಡಿದ್ದಾರೆ. ಜೊತೆಗೆ, ಪಕ್ಷ ಬಿಡಲು ಇರುವ ಕಾರಣವನ್ನು ತಿಳಿದುಕೊಂಡಿದ್ದು, ಇಲ್ಲಿ ಆಗುತ್ತಿರುವ ಎಲ್ಲ ಸಮಸ್ಯೆಯನ್ನೂ ಬಗೆಹರಿಸುವುದಾಗಿ ಭರವಸೆ ನಿಡಿದ್ದಾರೆ. ಇನ್ನು ಪಕ್ಷದ ಘಟಾನುಘಟಿ ನಾಯಕರುಗಳೇ ಹೇಳಿದ್ದರಿಂದ ಸಚಿವ ನಾರಾಯಣಗೌಡ ಅವರು ಬಿಜೆಪಿಯಲ್ಲೇ ಉಳಿಯಲು ನಿರ್ಧಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Bengaluru Breaking: ಮೆಜೆಸ್ಟಿಕ್‌ನಲ್ಲಿ ಸಿಕ್ಕ ಸಿಕ್ಕವರಿಗೆ ಚಾಕು ಇರಿದ ವ್ಯಕ್ತಿ: ಓರ್ವ ಸಾವು- ಇಬ್ಬರ ಸ್ಥಿತಿ ಗಂಭೀರ

ನಾರಾಯಣಗೌಡಗೆ ಮಂಡ್ಯ ಜಿಲ್ಲೆಯ ನಾಯಕತ್ವ: ದೆಹಲಿಯಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರು, ಮಂಡ್ಯ ಜಿಲ್ಲೆಯ ರಾಜಕಾರಣದ ಕುರಿತು ಸಚಿವ ಡಾ.ನಾರಾಯಣಗೌಡ ಅವರೊಂದಿಗೆ ಸುದೀರ್ಘವಾಗಿ ಚರ್ಚಿಸಿದರು. ನಂತರ, ಮಂಡ್ಯ ಜಿಲ್ಲೆಯಲ್ಲಿ ನಾಯಕತ್ವ ತೆಗೆದುಕೊಂಡು ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸುವಂತೆ ಜವಾಬ್ದಾರಿ ನೀಡಿದ್ದಾರೆ. ಜೊತೆಗೆ, ಇದಕ್ಕಾಗಿ ಯಾವ ತಂತ್ರಗಳನ್ನು ಮಾಡಬೇಕು ಎಂಬುದರ ಕುರಿತು ಮಾತುಕತೆ ನಡೆಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಕೃಷ್ಣತತ್ತ್ವ ನಂಬಿದವನೇ ಹೊರತು, ಕಾಂಗ್ರೆಸ್‌ನ ಕಂಸ ಹಿಂಸೆಯನ್ನಲ್ಲ: ಹೆಚ್.ಡಿ.ಕುಮಾರಸ್ವಾಮಿ!
ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್