ಪಕ್ಷದಲ್ಲಿ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡಿದ್ದೇನೆ. ಕೆಲಸಕ್ಕೆ ತಕ್ಕಂತೆ ಉನ್ನತ ಹುದ್ದೆಗಳು ಪಕ್ಷದಿಂದ ಲಭಿಸಿವೆ. ಪಶ್ಚಿಮ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ನಾನೂ ಒಬ್ಬ: ಈರೇಶ ಅಂಚಟಗೇರಿ
ಧಾರವಾಡ(ಮಾ.23): ಈವರೆಗಿನ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಇತಿಹಾಸದಲ್ಲಿ ಮೇಯರ್ ಆದವರು ಶಾಸಕರಾಗಿಲ್ಲ ಎಂಬ ಸಂಪ್ರದಾಯ ಈ ಬಾರಿ ಮುರಿಯುವ ಸಾಧ್ಯತೆಗಳು ಎದ್ದು ಕಾಣುತ್ತಿವೆ.
ಹೌದು, ಹು-ಧಾ ಪಶ್ಚಿಮ ಮತಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿ ಶಾಸಕ ಅರವಿಂದ ಬೆಲ್ಲದ ಹೊರತು ಪಡಿಸಿ ಮತ್ತಾರೂ ಇಲ್ಲವೇ ಇಲ್ಲ ಎಂದುಕೊಳ್ಳಲಾಗಿತ್ತು. ಇದೀಗ ಪ್ರಸ್ತುತ ಮೇಯರ್ ಆಗಿರುವ ಈರೇಶ ಅಂಚಟಗೇರಿ ಸಹ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ರಾಹುಲ್ ಭೇಟಿಯಿಂದ ರಾಜ್ಯಕ್ಕೆ ಯಾವುದೇ ಪರಿಣಾಮ ಬೀರಿಲ್ಲ: ಸಿಎಂ ಬೊಮ್ಮಾಯಿ
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿರುವ ಈರೇಶ ಅಂಚಟಗೇರಿ ಅವರು, ಪಕ್ಷದಲ್ಲಿ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡಿದ್ದೇನೆ. ಕೆಲಸಕ್ಕೆ ತಕ್ಕಂತೆ ಉನ್ನತ ಹುದ್ದೆಗಳು ಪಕ್ಷದಿಂದ ಲಭಿಸಿವೆ. ಪಶ್ಚಿಮ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ನಾನೂ ಒಬ್ಬ. ಈವರೆಗೂ ಬಿಜೆಪಿ ಬೆಲ್ಲದ ಅವರು ಸೇರಿದಂತೆ ಯಾರಿಗೆ ಟಿಕೆಟ್ ನೀಡುತ್ತೇವೆಂದು ಘೋಷಣೆ ಮಾಡಿಲ್ಲ. ಆದರೆ, ಈ ಬಾರಿ ಮಾತ್ರ ಸ್ಥಳೀಯವಾಗಿ ಟಿಕೆಟ್ ಹಂಚಿಕೆಯಾಗದೇ ಕೇಂದ್ರ ಸಂಸದೀಯ ಮಂಡಳಿಯಿಂದ ಟಿಕೆಟ್ ಘೋಷಣೆ ಮಾಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ನನಗೆ ಟಿಕೆಟ್ ಸಿಗುವ ಸಾಧ್ಯತೆಗಳೂ ಹೆಚ್ಚಿವೆ. ಒಂದು ವೇಳೆ ಬೆಲ್ಲದ ಅವರಿಗೆ ಟಿಕೆಟ್ ಘೋಷಣೆ ಮಾಡಿದರೆ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದು ಅಂಚಟಗೇರಿ ಹೇಳಿದರು.