'ಬಿಜೆಪಿ ಹರ್ಷನ ತಂಗಿಗೆ MLA, ತಾಯಿಗೆ MP ಟಿಕೆಟ್ ಕೊಡಲಿ, ಅವಿರೋಧವಾಗಿ ಆಯ್ಕೆ ಮಾಡಿಸೋಣ'

By Suvarna News  |  First Published Mar 1, 2022, 10:23 PM IST

* ಹರ್ಷನ ಕುಟುಂಬಕ್ಕೆ ಎಂಎಲ್‌ಎ ಟಿಕೆಟ್ ನೀಡಬೇಕೆಂದು ಅಭಿಯಾನ
* ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್
* ಹರ್ಷನ ತಂಗಿಗೆ, ಎಂಪಿ ಟಿಕೆಟ್ ತಾಯಿಗೆ ಕೊಡಲಿ ಅವಿರೋಧವಾಗಿ ಆಯ್ಕೆ ಮಾಡಿಸೋಣ ಎಂದ ಇಬ್ರಾಹಿಂ


ಕೊಡಗು/ಶಿವಮೊಗ್ಗ, (ಮಾ.01): ಕಳೆದ ಭಾನುವಾರ ಶಿವಮೊಗ್ಗ ನಗರದ ಭಾರತಿ ಕಾಲನಿಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಜರಂಗದಳದ ಕಾರ್ಯಕರ್ತ ಹರ್ಷನ ಕುಟಂಬಕ್ಕೆ ಮುಂದಿನ 2023ರ ಚುನಾವಣೆಗೆ ಶಿವಮೊಗ್ಗ ನಗರದಿಂದ ಮೃತ ಹರ್ಷನ ಕುಟುಂಬ ಸದಸ್ಯರಿಗೆ ಬಿಜೆಪಿಯಿಂದ ಟಿಕೆಟ್ ನೀಡಬೇಕು ಎಂಬ ಕೂಗು ವ್ಯಾಪಕವಾಗಿ ಕೇಳಿ ಬರುತ್ತಿದೆ. 

ಇನ್ನು ಈ ಬಗ್ಗೆ ಸಿಎಂ ಇಬ್ರಾಹಿಂದ ಪ್ರತಿಕ್ರಿಯಿಸಿದ್ದು,ಸಚಿವರಾಗಿರುವ ಸ್ಥಳೀಯ ಶಾಸಕ ಕೆ ಎಸ್​ ಈಶ್ವರಪ್ಪ (KS Eshwarappa) ತಮ್ಮ ಟಿಕೆಟ್ ತ್ಯಜಿಸಿ ಮೃತಪಟ್ಟ ಹರ್ಷನ ತಂಗಿಗೆ ಎಂಎಲ್ಎ ಟಿಕೆಟ್ ನೀಡಲಿ. ತಂಗಿಗೆ ಟಿಕೆಟ್ ನೀಡಿದರೆ ನಾವು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಅವಿರೋಧವಾಗಿ ಆಕೆಯನ್ನು ವಿಧಾನ ಸಭೆಗೆ ಕಳುಹಿಸುತ್ತೇವೆ ಎಂದು ಹೇಳಿದರು. 

Tap to resize

Latest Videos

Harsha Murder Case: ಹಂತಕರನ್ನು ಹುಡುಕಿ ಹುಡುಕಿ ಗಲ್ಲಿಗೇರಿಸಲಾಗುತ್ತೆ: ತೇಜಸ್ವಿ ಸೂರ್ಯ

ಹಾಗೆಯೇ, ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರ ಮಗ ಬಿವೈ ರಾಘವೇಂದ್ರ ಸಹ (BY Raghavendra) ಎಂಪಿ ಸ್ಥಾನ ತ್ಯಜಿಸಲಿ. ಹರ್ಷ ಅವರ ತಾಯಿಗೆ ಎಂಪಿ ಸ್ಥಾನಕ್ಕೆ ಟಿಕೆಟ್ ಕೊಡಲಿ. ಇದರಿಂದ ಹಿಂದೂ ಸಂಸ್ಕೃತಿಗೆ ನಿಜವಾದ ಗೌರವ ಸಿಕ್ಕಂತಾಗುತ್ತದೆ ಎಂದು ಸಿ ಎಂ ಇಬ್ರಾಹಿಂ ತಮ್ಮ ಆಶಯ ವ್ಯಕ್ತಪಡಿಸಿದರು.

26 ವರ್ಷದ ತೇಜಸ್ವಿ ಸೂರ್ಯ ಪಾರ್ಲಿಮೆಂಟ್ ಗೆ ಹೋದ. ಅದೇ ವಯಸ್ಸಿನ ಹರ್ಷ ಸ್ಮಶಾನ ಸೇರಿದ. ಕಂಡವರ ಮಕ್ಕಳನ್ನ ಬಾವಿಗೆ ತಳ್ಳಿ, ಆಳ ನೋಡೋ ಮುಂ.. ಮಕ್ಕಳು ಬಿಜಿಪಿ ಅವರು ಎಂದು  ಟೀಕಾ ಪ್ರಹಾರ ನಡೆಸಿದರು.

ಬಿಜೆಪಿಗೆ ಮುಜುಗರ
ಶಿವಮೊಗ್ಗದಲ್ಲಿ ಹರ್ಷ ಹತ್ಯೆ ಪ್ರಕರಣ ಬಿಜೆಪಿಗೆ ನಾಯಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹತ್ಯೆಯಾದ ಹರ್ಷ ತಾಯಿಗೆ ಎಂಎಲ್‌ಎ ಟಿಕೆಟ್ ಕೊಡುವಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭವಾಗಿದೆ. ಇತ್ತ ಕಾಂಗ್ರೆಸ್‌  ಕೂಡಾ ಇದಕ್ಕೆ ತೀಕ್ಷಣವಾಗಿ ಪ್ರತಿಕ್ರಿಯಿಸಿದ್ದು, ಹರ್ಷ ಕುಟುಂಬಕ್ಕೆ ಬಿಜೆಪಿ ಟಿಕೆಟ್‌ ಕೊಟ್ಟರೆ ಕಾಂಗ್ರೆಸ್‌ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಿಲ್ಲ ಎಂದು ಪರಿಷತ್‌ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್‌ ಹೇಳಿರುವುದು ಬಿಜೆಪಿಗೆ ಮುಜುಗರ ತಂದಿದೆ.

 ದೇಶಕ್ಕಾಗಿ ಹರ್ಷ ಪ್ರಾಣ ತ್ಯಾಗ ಮಾಡಿದ್ದಾನೆ, ಹಾಗಾಗಿ  ಸಚಿವ ಕೆಎಸ್​ ಈಶ್ವರಪ್ಪ, ಮಾಜಿ ಸಿಎಂ ಯಡಿಯೂರಪ್ಪ ಕುಟುಂಬಕ್ಕೆ ಈ ಬಾರಿ ಟಿಕೆಟ್ ಬೇಡ ,  ಹರ್ಷ ತಾಯಿಗೆ ಟಿಕೆಟ್​ ಕೊಡಿ ಎಂಬ ಕೂಗು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿದೆ.  ಬಜರಂಗದಳದ ಕಾರ್ಯಕರ್ತರು ಹಿಂದೂಗಳಿಗಾಗಿ ಹತ್ಯೆಯಾಗಿದ್ದಾರೆ , ಹಿಂದೂಗಳಿಗಾಗಿ ಹತ್ಯೆಯಾದ ಹರ್ಷ ಕುಟುಂಬಕ್ಕೆ ಎಲ್‌ಎ ಟಿಕೆಟ್ ಕೊಡಿ. ಹಿಂದೂ ಹೆಸರಿನಲ್ಲಿ ಅಧಿಕಾರ ಅನುಭವಿಸಿರುವ ಕುಟುಂಬಗಳಿಗೆ ಟಿಕೆಟ್ ಬೇಡ. ಹಿಂದೂಗಳಿಗಾಗಿ ಜೀವಕೊಟ್ಟ ಹರ್ಷ ಕುಟುಂಬಕ್ಕೆ ಟಿಕೆಟ್ ಕೊಡಿ ಎಂದು ಅಭಿಯಾನ  ನಡೆಸುತ್ತಿದ್ದಾರೆ.

ಹರ್ಷ ದೇಶಕ್ಕಾಗಿ ಪ್ರಾಣವನ್ನೇ ಕೊಟ್ಟಿದ್ದಾನೆ. ಅವರ ಕುಟುಂಬದವರಿಗೆ ಸಾಂತ್ವನ, ಭಾಷಣ, ಆರ್ಥಿಕ ನೆರವು ನೀಡಿದರಷ್ಟೇ ಸಾಲದು. ಅವರ ತಾಯಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ನೀಡಬೇಕು. ದೇಶಭಕ್ತನ ಮನೆಯಿಂದ ಒಬ್ಬರು ಎಂಎಲ್‌ಎ ಹುಟ್ಟಿಬರಲಿ. ಇಂತಹ ಸ್ಥಾನಗಳು ಈಶ್ವರಪ್ಪ, ಯಡಿಯೂರಪ್ಪ ಅವರ ಕುಟುಂಬದವರಿಗಷ್ಟೇ ಮೀಸಲಾಗಬಾರದು. ನಮ್ಮ ಬೇಡಿಕೆ ಈಡೇರಿಸಿದರೆ ಬಿಜೆಪಿಗೊಂದು ಸಲಾಂ’ ಎಂದು ಪೋಸ್ಟರ್‌ಗಳನ್ನು ಶೇರ್‌ ಮಾಡಲಾಗುತ್ತಿದೆ.

ಈಶ್ವರಪ್ಪ ಹೇಳಿದ್ದನು?
ಹರ್ಷನ ತಾಯಿ ಈಶ್ವರಪ್ಪ ತಮ್ಮ ಕ್ಷೇತ್ರ ಬಿಟ್ಟುಕೊಡಲಿ.  ಬಿಟ್ಟುಕೊಟ್ಟರೆ ಕಾಂಗ್ರೆಸ್ ಕ್ಯಾಂಡಿಡೇಟ್ ಹಾಕುವುದಿಲ್ಲ ಎಂದು ಎಂದು ಇತ್ತೀಚೆಗೆ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿಕೆ ಹರಿಪ್ರಸಾದ್ ಸವಾಲು ಹಾಕಿದ್ದರು.
 
ಇದಕ್ಕೆ ಈಶ್ವರಪ್ಪ ಪ್ರತಿಕ್ರಿಯಿಸಿ, ಬಿಜೆಪಿ ಸೂಚಿಸಿದರೆ ಶಿವಮೊಗ್ಗದಲ್ಲಿ ಈಚೆಗೆ ಕೊಲೆಯಾದ ಬಜರಂಗದಳ ಕಾರ್ಯಕರ್ತ ಹರ್ಷ (Bajarangadal Activist Harsha) ಕುಟುಂಬಕ್ಕೆ ಶಾಸಕ ಸ್ಥಾನ ಬಿಟ್ಟುಕೊಡಲು ನಾನು ಸಿದ್ಧ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ಹೇಳಿದ್ದಾರೆ.

 ಹರ್ಷ ಸಹೋದರಿಗೆ ಟಿಕೆಟ್ ಕೊಡುವ ವಿಚಾರದಲ್ಲಿ ನನಗೆ ಯಾವುದೇ ತಕರಾರು ಇಲ್ಲ. ರಾಜಕಾರಣದಲ್ಲಿ ಅವಕಾಶ ನೀಡಿದರೆ ನಾನು ಮತ್ತೊಬ್ಬ ಹಿಂದೂಗೆ ಕೊಡುತ್ತೇನೆಯೇ ಹೊರತು ಮುಸಲ್ಮಾನರಿಗೆ ಅಲ್ಲ. ಆದರೆ ಕಾಂಗ್ರೆಸ್ ನಾಯಕರು ಹೀಗೆ ಮಾಡಬಲ್ಲರಾ? ಕಾಂಗ್ರೆಸ್​ನವರಿಗೆ ಸ್ಥಾನ ಬೇಕು. ಮುಸಲ್ಮಾನರ ವೋಟು ಬೇಕು. ಕೊನೆಗೆ ಬಿಜೆಪಿಯನ್ನು ಟೀಕಿಸಬೇಕು. ಅದಷ್ಟೇ ಅವರ ಗುರಿ ಎಂದು ಎಂದಿದ್ದರು.

. ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣವನ್ನು ಪ್ರಸ್ತಾಪಿಸಿ ಈಶ್ವರಪ್ಪ ಕಾಂಗ್ರೆಸ್ ಪಕ್ಷವನ್ನು ಮನಸೋಯಿಚ್ಛೆ ಟೀಕಿಸಿದರು. ಮುಸ್ಲಿಮರು ಕಾಂಗ್ರೆಸ್ ಪಕ್ಷದ ಬೀಗರು. ನಾನೊಬ್ಬನೇ ಹಿಂದುವಲ್ಲ. ಪಕ್ಷ ಸೂಚಿಸಿದರೇ ಹರ್ಷನ ಸಹೋದರಿಗೆ ಸೀಟು ಬಿಟ್ಟು ಕೊಡಲು ನಾನು ಸಿದ್ಧನಿದ್ದೇನೆ. ಆದರೆ ಎಂದಿಗೂ ಮುಸ್ಲಿಮರಿಗೆ ಕೊಡುವುದಿಲ್ಲ ಎಂದು ಟೀಕಿಸಿದ್ದರು.

click me!