Assembly election: ಹಿಂದುಗಳ ಕೊಲೆಗೆ ಬಿಜೆಪಿ, ಆರ್‌ಎಸ್‌ಎಸ್‌ ಕಾರಣ: ಸಿದ್ದರಾಮಯ್ಯ ಗಂಭೀರ ಆರೋಪ

By Sathish Kumar KH  |  First Published Feb 7, 2023, 2:38 PM IST

ನಮ್ಮ‌ಕಾಲದಲ್ಲಿ ಹಿಂದುಗಳ‌‌ ಮರ್ಡರ್ ಆಗಿಲ್ಲ, ಹಿಂದು ಅಲ್ಪಸಂಖ್ಯಾತರದ್ದು ಆಗಿದೆ ಅದು ಬೇರೆ ವಿಚಾರವಾಗಿದೆ. ಆದರೆ, ಹೀಗೆ ಹಿಂದೂಗಳ ಮರ್ಡರ್‌ ಆಗಲು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಕಾರಣವಾಗಿದೆ.


ಕಲಬುರಗಿ (ಫೆ.07): ನಮ್ಮ‌ಕಾಲದಲ್ಲಿ ಹಿಂದುಗಳ‌‌ ಮರ್ಡರ್ ಆಗಿಲ್ಲ, ಹಿಂದು ಅಲ್ಪಸಂಖ್ಯಾತರದ್ದು ಆಗಿದೆ ಅದು ಬೇರೆ ವಿಚಾರವಾಗಿದೆ. ಆದರೆ, ಹೀಗೆ ಹಿಂದೂಗಳ ಮರ್ಡರ್‌ ಆಗಲು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಕಾರಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. 

ಕಲಬುರಗಿಯಲ್ಲಿ ಕಾಂಗ್ರೆಸ್‌ ಪ್ರಜಾಧ್ವನಿ ಯಾತ್ರೆಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಅಧಿಕಾರದ ಅವಧಿಯಲ್ಲಿ ಹಿಂದೂಗಳ ಕೊಲೆಯ ಆಗಿಲ್ಲ. ಆದರೆ, ಬಿಜೆಪಿ ಆಡಳಿತದ ಅವಧಿಯಲ್ಲಿ ಹಿಂದೂಗಳ ಮರ್ಡರ್ ಗಳು ಆಗಲಿಕ್ಕೆ ಬಿಜೆಪಿ , ಆರ್‌ಎಸ್‌ಎಸ್ ನವರು ಕಾರಣವಾಗಿದ್ದಾರೆ. ಪರೇಶ್‌ ಮೇಸ್ತಾ ಕೊಲೆಯಾದಾಗ ದೊಡ್ಡ ಗಲಾಟೆ ಮಾಡಿದ್ದರು. ಈ ಪ್ರಕರಣವನ್ನು ಸಿಬಿಐಗೆ ಕೊಟ್ಟೆ ಏನಾಯಿತು? ಆತನ‌ ಸಾವು ಸಹಜ‌ ಸಾವು ಎಂದು ತನಿಖೆಯಿಂದ ಬಯಲಾಯಿತು ಎಂದು ಹೇಳಿದರು. 

Tap to resize

Latest Videos

undefined

ಸಂವಿಧಾನಕ್ಕೆ ವಿರುದ್ಧವಾದುದ್ದೇ ಹಿಂದುತ್ವ, ಅದೇ ಮನುವಾದ: ಸಿದ್ದರಾಮಯ್ಯ

ಆರ್‌ಎಸ್‌ಎಸ್‌ ಗಿರಾಕಿಗಳದ್ದು ಸುಳ್ಳು ಹೇಳುವುದೇ ಕೆಲಸ: ರಾಜ್ಯದಲ್ಲಿ ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ಅವರು ಹೇಳುವ ಸುಳ್ಳಿಗೆ ಉತ್ತರ ಕೊಡ್ತಾ ಕೂಡಕ್ಕಾಗಲ್ಲ. ಸಿ.ಟಿ.ರವಿ ಇವರು ಆರ್‌ಎಸ್‌ಎಸ್‌ ಗಿರಾಕಿಗಳು ಬರಿ ಸುಳ್ಳು ಹೇಳುವುದೆ ಇವರ ಕೆಲಸ. ನಾನು ಹಿಂದು ಧರ್ಮದವನು, ಹಿಂದು ಧರ್ಮದ ಬಗ್ಗೆ ನಾನು ಮಾತಾಡಿಯೇ ಇಲ್ಲ, ವಿರೋಧನೇ ಮಾಡಿಲ್ಲ. ಯಾವ ಧರ್ಮದಲ್ಲಿ ಕೊಲೆ ಮಾಡಿ ಹಿಂಸೆ ಮಾಡಿ ಅಂತ ಹೇಳ್ತಾರೆ ಹೇಳಿ? ನಾವೆಲ್ಲಾ ಹಿಂದುಗಳೆ, ನಾವೆಲ್ಲಾ ಹಿಂದು ಧರ್ಮ ಪಾಲನೆ ಮಾಡವರು ಅಲ್ವಾ? ಎಲ್ಲೂ ಕೂಡಾ  ಕ್ರೌರ್ಯಕ್ಕೆ ಹಿಂಸೆಗೆ ಅವಕಾಶ ಇಲ್ಲ ಎಂದು ನಾನು ಹೇಳಿದ್ದೇನೆ ಅಷ್ಟೇ. ಜಗತ್ತಿನಲ್ಲಿ ಯಾವುದೇ ಧರ್ಮ ಹಿಂಸೆಗೆ ಪ್ರಚೋದನೆ ಮಾಡಿದರೆ ಅದಕ್ಕೆ ಧರ್ಮದ ಹೆಸರು ಕೊಡೋದು‌ ಸರಿಯಲ್ಲ. ಸಮಾಜದ ಸಾಮರಸ್ಯ ಹಾಳು ಮಾಡುವುದೇ ಬಿಜೆಯವರ ಕೆಲಸ ಆಗಿದೆ ಎಂದು ತಿಳಿಸಿದರು.

ಲಂಬಾಣಿ ಸಮುದಾಯ ನೃತ್ಯ ಮಾಡಿದ ಸಿದ್ದರಾಮಯ್ಯ: ಬಿಜೆಪಿಗೆ ಸೆಡ್ಡು ಹೊಡೆಯುತ್ತಿದೆ ಕೈ ನಾಯಕರ ಪ್ರಚಾರ. ಲಂಬಾಣಿ ಸಮುದಾಯದ ಮತಗಳನ್ನು ಸೇಳೆಯಲು ಮುಂದಾದ ಕಾಂಗ್ರೆಸ್. ಕಳೆದ ಒಂದು ತಿಂಗಳ ಹಿಂದೆಯಷ್ಟೆ ಕಲಬುರಗಿಯಲ್ಲಿ ಕಂದಾಯ ಗ್ರಾಮಗಳ‌ಹಕ್ಕು ಪತ್ರ ನೀಡಲು ಪ್ರಧಾನಿ ಮೋದಿ ಆಗಮಿಸಿದ್ದರು. ಈಗ ಬಿಜೆಪಿ ಕಡೆಗೆ ವಾಲಿದ್ದ ತಾಂಡಾ ಜನಾಂಗದ ಮತಗಳನ್ನು ಸೆಳೆಯಲು ಕೈ ನಾಯಕರ ಕಸರತ್ತು ನಡೆಸಿದ್ದಾರೆ. ಎರಡು ದಿನಗಳಿಂದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಲಂಬಾಣಿ ಜನಾಂಗದವರಿಂದಲೇ ಸನ್ಮಾನ ಮಾಡಲಾಗುತ್ತಿದೆ.  ಆಳಂದ ಪ್ರಜಾಧ್ವನಿ ಯಾತ್ರೆಯಲ್ಲಿ ಸಿದ್ದರಾಮಯ್ಯಗೆ ಲಂಬಾಣಿ ಮಹಿಳೆಯರಿಂದ ಸನ್ಮಾನ ಮಾಡಲಾಗಿತ್ತು. ಈ ವೇಳೆ ಸನ್ಮಾನಿಸಿದ ಲಂಬಾಣಿ‌‌ ಸಮುದಾಯದ ಜನರೊಂದಿಗೆ ಸಿದ್ದು ಸ್ಟೆಪ್ ಹಾಕಿದ್ದರು. 

ಮುಸ್ಲಿಂ ಆಜಾನ್‌ ವೇಳೆ ವೇದಿಕೆ ಸೈಲೆಂಟ್: ಜಮೀರ್ ಅಹ್ಮದ್ ಭಾಷಣ ವೇಳೆ ಅಜಾನ್ ಕೂಗು. ಅಜಾನ್ ಸೌಂಡ್ ಬರುತ್ತಿದ್ದಂತೆ ಸೈಲೆಂಟ್ ಆದ ಜಮೀರ್ ಅಹ್ಮದ್. ಮುಂದಕ್ಕೆ ಮಾತಾಡು ಎಂದು ಮಾಜಿ ಸಿಎಂ ಸಿದ್ದು ಹೇಳಿದರು. ಅಜಾನ್ ಓದುತ್ತಿದ್ದಾರೆ ಸ್ವಲ್ಪ ಕಾಯೋಣ ಎಂದು ಸನ್ನೆ ಮಾಡಿದರು. ಜಮೀರ್ ಅಹ್ಮದ್ ಸನ್ನೆಗೆ ಓಕೆ ಎಂದ ಮಾಜಿ ಸಿಎಂ ಸಿದ್ದರಾಮಯ್ಯ. ಅಜಾನ್‌ ಕೂಗು ವೇಳೆ ವೇದಿಕೆ ಮೇಲಿದ್ದ ಎಲ್ಲ ಕೈ ನಾಯಕರು ಕೆಲ‌ಕಾಲ ಸೈಲೆಂಟ್ ಆಗಿದ್ದರು. ನಂತರ ಮಾತನಾಡಿದ ಜಮೀರ್‌ ಅಹಮದ್‌, ಜನತಾ ದಳದಲ್ಲಿ (ಜೆಡಿಎಸ್‌) ನಾನು ಸ್ಟೇರಿಂಗ್ ಆಗಿದ್ದರೆ ಸಿದ್ದರಾಮಯ್ಯಾ ಇಂಜಿನ್ ಆಗಿದ್ದರು. ನಾವು ಬಿಟ್ಟಮೇಲೆ‌ ಜೆಡಿಎಸ್ ಮುಗೀತು. ಆದರೆ, ಈಗ ಸ್ಟೇರಿಂಗ್ ಹಿಡಿದುಕೊಂಡು‌ ಏನು ಮಾಡ್ತೀರಾ ಸಿಎಂ ಇಬ್ರಾಹಿಂ ಅವರೇ.? ಇಂಜಿನ್ ನಮ್ಮ ಬಳಿ ಇದೆ. ಗಾಡಿಯನ್ನ ತಳ್ಳಿಕೊಂಡು ಹೋಗ್ತೀರಾ? ಜನತಾದಳಕ್ಕೆ ಓಟು ಕೊಟ್ರೆ ಅದು ಬಿಜೆಪಿಗೆ ಓಟು ಕೊಟ್ಟಂತೆ. ಈ ಬಾರಿ ಬಿ.ಆರ್. ಪಟೀಲ್ ಗೆ ಮತಹಾಕಿ ಕಾಂಗ್ರೆಸ್‌ ಬಲಪಡಿಸಿ ಎಂದ ಜಮೀರ್ ಅಹ್ಮದ್‌ ಮನವಿ ಮಾಡಿದರು. 

ಹಿಂದುತ್ವ ಬೇರೆ, ಹಿಂದು ಧರ್ಮ ಬೇರೆ: ಸಿದ್ದರಾಮಯ್ಯ

ಬಿಜೆಪಿ ಅಲ್ಪಸಂಖ್ಯಾತರ ಮತಗಳನ್ನ ಖರೀದಿ ಮಾಡಿತ್ತು: ಕಲಬುರಗಿ ಅಳಂದದಲ್ಲಿ ಪ್ರಜಾಧ್ವನಿಯಾತ್ರೆಯಲ್ಲಿ ಮಾತನಾಡಿದ ಜಮೀರ್‌ ಅಹಮದ್‌ ಅವರು, ಅಳಂದದಲ್ಲಿ ಜನ ಹಾಲಿ ಶಾಸಕರ ವಿರುದ್ಧ ಬೇಸತ್ತಿದ್ದಾರೆ. ಸ್ವತಃ ಹಾಲಿ ಶಾಸಕರ ಸಹೋದರ ಕಾಂಗ್ರೇಸ್ ಗೆ ಸೇರ್ಪಡೆಗೊಂಡಿದ್ದಾರೆ. ಕಳೆದ ಬಾರಿ ೬೦೦ ಮತಗಳಿಂದ ಬಿ ಆರ್ ಪಾಟೀಲ್ ಸೋತಿದ್ದಾರೆ. ಕಳೆದ ಬಾರಿ ಅಲ್ಪಸಂಖ್ಯಾತರು ಓಟ್ ಹಾಕದಂತೆ ಮಾಡಿದ್ದಾರೆ. ಬಿಜೆಪಿ ಬಡ ಅಲ್ಪಸಂಖ್ಯಾತ ರ ಮತಗಳನ್ನ ಖರೀದಿ ಮಾಡಿತ್ತು. ಒಂದು ದಿನದಲ್ಲಿ ಹಣ ಖರ್ಚು ಮಾಡಿ ಐದು ವರ್ಷದ ಭವಿಷ್ಯ ಹಾಳುಮಾಡಿಕೊಂಡಿದ್ದಾರೆ. ಹಾಗಾಗಿ ಈ ಬಾರಿ ನಮ್ಮ ಮುಗ್ಧ ಅಲ್ಪಸಂಖ್ಯಾತ ರು ಮಾರು ಹೋಗಬೇಡಿ. ಬಿಜೆಪಿ ಕೇವಲ ಹಿಂದೂ- ಮುಸ್ಲಿಂ ಎಂದು ಜಗಳ ಮಾಡಿಸಿದ್ದಾರೆ. ಬಿಜೆಪಿಗೆ ಹಿಂದೂಗಳು ಬೇಡ ಮುಸ್ಲಿಂ ಸಹ ಬೇಡ ಅವರಿಗೆ ಕೇವಲ ಅಧಿಕಾರ ಬೇಕು. ಬಿಜೆಪಿ ನಮ್ಮ ನಮ್ಮಲ್ಲಿ ಜಗಳ ಮಾಡಿಸಿ ಮತಗಳ ಡಿವೈಡ್ ಮಾಡೋದಕ್ಕೆ ಅಲ್ಪಸಂಖ್ಯಾತ ರನ್ನ ಚುನಾವಣೆಗೆ ನಿಲ್ಲಿಸಿದ್ದರು ಎಂದು ಹೇಳಿದರು.

click me!