: ಕಾಂಗ್ರೆಸ್ ಪಕ್ಷ ಚುನಾವಣೆಗೆ ಮೊದಲು ರಾಜ್ಯದ ಜನತೆಗೆ ಭರವಸೆ ನೀಡಿರುವ 5 ಗ್ಯಾರಂಟಿಗಳನ್ನು ಯಥಾವತ್ತಾಗಿ ಜಾಗೊಳಿಸಬೇಕು, ಇಲ್ಲದಿದ್ದಲ್ಲಿ ಮುಂದಿನ ವಾರದಿಂದ ಉಡುಪಿ ಜಿಲ್ಲಾದ್ಯಂತ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಎಚ್ಚರಿಕೆ ನೀಡಿದ್ದಾರೆ.
ಉಡುಪಿ (ಮೇ.28) : ಕಾಂಗ್ರೆಸ್ ಪಕ್ಷ ಚುನಾವಣೆಗೆ ಮೊದಲು ರಾಜ್ಯದ ಜನತೆಗೆ ಭರವಸೆ ನೀಡಿರುವ 5 ಗ್ಯಾರಂಟಿಗಳನ್ನು ಯಥಾವತ್ತಾಗಿ ಜಾಗೊಳಿಸಬೇಕು, ಇಲ್ಲದಿದ್ದಲ್ಲಿ ಮುಂದಿನ ವಾರದಿಂದ ಉಡುಪಿ ಜಿಲ್ಲಾದ್ಯಂತ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಎಚ್ಚರಿಕೆ ನೀಡಿದ್ದಾರೆ.
ಅವರು ಶನಿವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಟಿಕೆಟ್‌ಗೆ ಹಣ ಕೊಡಬೇಡಿ, ಬಸ್ ಸಿಬ್ಬಂದಿ ಕಿರಿಕ್ ಮಾಡಿದರೆ ಉಡುಪಿ ಜಿಲ್ಲಾ ಬಿಜೆಪಿಗೆ ಕರೆ ಮಾಡಿ, ನಾವು ನಿಮ್ಮ ಬೆಂಬಲಕ್ಕೆ ಬರುತ್ತೇವೆ ಎಂದು ಕುಯಿಲಾಡಿ ಹೇಳಿದರು. ಯಾರೂ ವಿದ್ಯುತ್ ಬಿಲ್ ಕಟ್ಟಬೇಡಿ, ಹಾಗಂತ ಮೆಸ್ಕಾಂ ಸಿಬ್ಬಂದಿ ಜೊತೆ ಗಲಾಟೆ ಮಾಡಬೇಡಿ, ಸಿದ್ದರಾಮಯ್ಯ, ಡಿಕೆಶಿ ಉಚಿತ ವಿದ್ಯುತ್ ನೀಡುವುದಾಗಿ ಹೇಳಿದ್ದಾರೆ, ಆದ್ದರಿಂದ ಬಿಲ್ ಕಟ್ಟುವುದಿಲ್ಲ ಎನ್ನಿ ಎಂದವರು ಹೇಳಿದರು.
undefined
ಎಲ್ಲ ನಿರುದ್ಯೋಗಿ ಪದವೀಧರರಿಗೆ 2 ಸಾವಿರ ರು. ನೀಡುವುದಾಗಿ ಕಾಂಗ್ರೆಸ್ ಹೇಳಿದೆ. ಈಗ ಈ ವರ್ಷ ಪಾಸಾದ ಪದವೀಧರರಿಗೆ ಎಂದು ಹೇಳುತ್ತಿದೆ. ಎಲ್ಲ ಪದವೀಧರರಿಗೆ 2 ಸಾವಿರ ನೀಡದಿದ್ದರೆ ಅಂತಹ ಪದವೀದರರೊಂದಿಗೆ ಬಿಜೆಪಿ ಯುವ ಮೋರ್ಚಾ ಬೀದಿಗಿಳಿದು ಹೋರಾಟ ನಡೆಸಲಿದೆ. ಮಹಿಳೆಯರಿಗೆ 2 ಸಾವಿರ ರು., 10 ಕೆಜಿ ಉಚಿತ ಅಕ್ಕಿ ಗ್ಯಾರಂಟಿಗಳನ್ನೂ ಬೇಷರತ್ತಾಗಿ ನೀಡಬೇಕು, ಇಲ್ಲದಿದ್ದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಹೋರಾಟಕ್ಕೆ ಸಿದ್ಧವಾಗಿದೆ ಎಂದು ಕುಯಿಲಾಡಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ವಕ್ತಾರ ರಾಘವೇಂದ್ರ ಕಿಣಿ, ಸಹವಕ್ತಾರ ಶಿವಕುಮಾರ್, ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ, ಕಚೇರಿ ಕಾರ್ಯದರ್ಶಿ ಸತ್ಯಾನಂದ ನಾಯಕ್ ಇದ್ದರು.
ಆರೆಸ್ಸೆಸ್ ಬ್ಯಾನ್- ನಾವು ಬಳೆ ತೊಟ್ಟು ಕುಳಿತಿಲ್ಲ
ಪ್ರಿಯಾಂಕ ಖರ್ಗೆ ಬಜರಂಗದಳ, ಆರ್‌ಎಸ್‌ಎಸ್‌ನ್ನು ನಿಷೇಧಿಸುವುದಾಗಿ ಹೇಳಿದ್ದಾರೆ. ಕೇವಲ ಮುಸ್ಲೀಮರನ್ನು ಖುಷಿಪಡಿಸಲು ಅವರು ಹೀಗೆ ಹೇಳುತ್ತಿರಬಹುದು. ನೆಹರೂ, ಇಂದಿರಾಗಾಂಧಿ ಅವರಿಗೇ ಇದು ಸಾಧ್ಯವಾಗಿರಲಿಲ್ಲ. ಈಗ ಖರ್ಗೆ ಅವರಿಗೆ ಈ ತಾಕತ್ತು ಇದ್ದರೆ ನಿಷೇಧ ಮಾಡಿ ತೋರಿಸಲಿ, ಬಿಜೆಪಿಯವರು ಕೈಗೆ ಬಳೆ ತೊಟ್ಟು ಕುಳಿತಿಲ್ಲ ಎಂದು ಕುಯಿಲಾಡಿ ಖಾರವಾಗಿ ಹೇಳಿದರು.
ಮುಸ್ಲಿಂರ ಓಲೈಕೆಗೆ ಕಾಂಗ್ರೆಸ್ ಬಜರಂಗದಳ ನಿಷೇಧ ಘೋಷಣೆ: ಕುಯಿಲಾಡಿ ಸುರೇಶ್ ನಾಯಕ್
ಬಿಜೆಪಿ ಪಕ್ಷದ ವಿರೋಧಿಗಳ ಮೇಲೆ ಕ್ರಮ ಗ್ಯಾರಂಟಿ
ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಪಕ್ಷ ವಿರೋಧಿ ಕೆಲಸ ಮಾಡಿದವರ ಬಗ್ಗೆ ಜಿಲ್ಲೆಯ ಎಲ್ಲ ಮಂಡಲಗಳಿಂದ ವರದಿ ನೀಡುವಂತೆ ಸೂಚಿಸಲಾಗಿದೆ. ವರದಿಯಂತೆ ಜಿಲ್ಲಾ ಅಥವಾ ರಾಜ್ಯ ಮಟ್ಟದದಲ್ಲಿ ಸೂಕ್ತ ಕ್ರಮ ಜರಗುತ್ತದೆ. ಚುನಾವಣಾ ಪ್ರಚಾರಕ್ಕೆ ಬಾರದ ಬೈಂದೂರಿನ ಮಾಜಿ ಶಾಸಕ ಸುಕುಮಾರ್ ಶೆಟ್ಟಿಅವರ ಬಗ್ಗೆಯೂ ಬೈಂದೂರು ಮಂಡಲದಿಂದ ವರದಿ ಕೇಳಲಾಗಿದೆ ಎಂದು ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.