Bengaluru: ಬಿಬಿಎಂಪಿ ಚುನಾವಣೆಗೆ ಬಿಜೆಪಿ ಸಿದ್ಧತೆ ಚುರುಕು

By Kannadaprabha NewsFirst Published Jan 27, 2022, 5:32 AM IST
Highlights

*   ಸಿಎಂ ಭೇಟಿಗೆ ಜನಪ್ರತಿನಿಧಿಗಳ ನಿಯೋಗ
*   ನಗರ ಘಟಕಗಳ ಸಭೆಯಲ್ಲಿ ನಿರ್ಧಾರ
*   ಪಕ್ಷ ಬಲಪಡಿಸುವ ಬಗ್ಗೆ ಚರ್ಚೆ: ಸಿಎಂ
 

ಬೆಂಗಳೂರು(ಜ.27):  ಬಿಬಿಎಂಪಿ(BBMP) ಚುನಾವಣೆಗೆ(Election) ಪೂರ್ವ ಸಿದ್ಧತೆ ಆರಂಭಿಸಿರುವ ಆಡಳಿತಾರೂಢ ಬಿಜೆಪಿಯು(BJP) ನಗರದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸರ್ಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ ಬರುವ ಸೋಮವಾರ ಶಾಸಕರು, ಸಂಸದರನ್ನು ಒಳಗೊಂಡ ಪಕ್ಷದ ನಿಯೋಗವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರನ್ನು ಭೇಟಿ ಮಾಡಲಿದೆ. ಬುಧವಾರ ಪಕ್ಷದ ಕಚೇರಿಯಲ್ಲಿ ನಡೆದ ಮುಖಂಡರು ಹಾಗೂ ಪಕ್ಷದ ನಗರ ಘಟಕಗಳ ಪದಾಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ(Tejasvi Surya), ಬೆಂಗಳೂರು(Bengaluru) ನಗರದಲ್ಲಿನ ಮೂಲಸೌಕರ್ಯ, ಕೊಳಚೆ ಪ್ರದೇಶದಲ್ಲಿ ಸಮಸ್ಯೆ ಸೇರಿದಂತೆ ಆಯಾ ಕ್ಷೇತ್ರದಲ್ಲಿ ಎದುರಿಸಲಾಗುತ್ತಿರುವ ಕುಂದುಕೊರತೆಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತರಲಾಗುವುದು. ಮುಖ್ಯಮಂತ್ರಿಗಳು ಸಹ ಸಮಸ್ಯೆಗಳ ಪಟ್ಟಿಯನ್ನು ನೀಡುವಂತೆ ಹೇಳಿದ್ದಾರೆ. ಅವುಗಳನ್ನು ಒಂದು ವಾರದಲ್ಲಿ ಬಗೆಹರಿಸುವ ವಿಶ್ವಾಸ ನೀಡಿದ್ದಾರೆ ಎಂದರು.

Covid 19 ನಿಯಮ ಉಲ್ಲಂಘಿಸಿ ಹುಟ್ಟುಹಬ್ಬ: ಬಿಜೆಪಿ ಮುಖಂಡ ಎನ್ ಆರ್ ರಮೇಶ್ ವಿರುದ್ದ ಎರಡನೇ FIR !

ಎರಡು ದಿನಗಳ ಕಾಲ ನಡೆದ ಸಭೆಯಲ್ಲಿ ಬಿಬಿಎಂಪಿ ಚುನಾವಣೆ ಸಿದ್ಧತೆ ಕುರಿತು ಚರ್ಚೆ ನಡೆಸಲಾಗಿದೆ. ಚುನಾವಣೆ ಯಾವಾಗ ಎದುರಾದರೂ ಜಯಗಳಿಸುವ ಶಕ್ತಿ, ಸಾಮರ್ಥ್ಯ ಗಳಿಸುವುದು ಹಾಗೂ ಕಾರ್ಯತಂತ್ರ(Strategy) ಮಾಡುವುದು ನಮ್ಮ ಕೆಲಸ. ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯ ನಿರ್ವಹಿಸಲಾಗುವುದು. ನಗರದ ಬಿಜೆಪಿ ಶಾಸಕರಿಗೆ ಮತ್ತು ಪಕ್ಷದ ಶಾಸಕರು ಇಲ್ಲದ ಕ್ಷೇತ್ರಗಳಿಗೆ ಸಂಸದರಿಗೆ ಜವಾಬ್ದಾರಿ ನೀಡಲಾಗಿದ್ದು, ಪಕ್ಷದ ಸಂಘಟನೆಗೊಳಿಸಬೇಕು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿಗಳು ಮತ್ತು ಪಕ್ಷದ ರಾಜ್ಯಾಧ್ಯಕ್ಷರು(Nalin Kumar Kateel) ಸೂಚನೆ ನೀಡಿದ್ದಾರೆ. ಬಿಬಿಎಂಪಿಯಲ್ಲಿ ಅಧಿಕಾರ ಗದ್ದುಗೆ ಹಿಡಿಯುವಲ್ಲಿ ಶ್ರಮ ವಹಿಸುವಂತೆ ಕರೆ ನೀಡಿದ್ದಾರೆ ಎಂದು ತಿಳಿಸಿದರು.

ಬಿಬಿಎಂಪಿ ಚುನಾವಣೆ(BBMP Election) ದೃಷ್ಟಿಯಿಂದ ಸರ್ಕಾರ ಮತ್ತು ಪಕ್ಷ ಸಮನ್ವಯತೆಯಿಂದ ಕೆಲಸ ಮಾಡಬೇಕು. ಬೂತ್‌ ಮಟ್ಟದಲ್ಲಿ ಯಾವ ರೀತಿ ಸಂಘಟನೆ ಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು(Government of Karnataka) ಬೆಂಗಳೂರಿಗೆ ನೀಡಿರುವ ಕೊಡುಗೆಗಳೇನು? ನಮ್ಮ ಸರ್ಕಾರದ(BJP Government) ಅವಧಿಯಲ್ಲಿ ಬೆಂಗಳೂರಿಗೆ ಬಂದಿರುವ ಯೋಜನೆಗಳು ಸೇರಿದಂತೆ ಇತರೆ ಮಾಹಿತಿಗಳನ್ನು ಜನರಿಗೆ ಯಾವ ರೀತಿ ಪರಿಣಾಮಕಾರಿಯಾಗಿ ತಲುಪಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

Vrushabhavathi Revival: 2 ವಾರದಲ್ಲಿ ವರದಿ ನೀಡಲು ಬಿಬಿಎಂಪಿಗೆ ಹೈಕೋರ್ಟ್‌ ನಿರ್ದೇಶನ!

ಪಕ್ಷ ಬಲಪಡಿಸುವ ಬಗ್ಗೆ ಚರ್ಚೆ: ಸಿಎಂ

ಪಕ್ಷದ ಸಂಘಟನೆ, ವಾರ್ಡ್‌ನಲ್ಲಿ ಬಲವರ್ಧನೆ, ಸರ್ಕಾರ ಮತ್ತು ಸಂಘಟನೆ ನಡುವಿನ ಸಮನ್ವಯ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಮೂರು ಲೋಕಸಭಾ ಕ್ಷೇತ್ರಗಳಿವೆ. ಉತ್ತರ, ಕೇಂದ್ರ ಮತ್ತು ದಕ್ಷಿಣ ಕ್ಷೇತ್ರದ ಸಭೆಗಳನ್ನು ನಡೆಸಲಾಗಿದೆ. ಸಭೆಯಲ್ಲಿ ಪಕ್ಷದ ಸಂಘಟನೆ, ವಾರ್ಡ್‌ನ ಬಲವರ್ಧನೆ, ಜನರ ವಿಚಾರಗಳು, ಸರ್ಕಾರ ಮತ್ತು ಸಂಘಟನೆ ನಡುವೆ ಯಾವ ರೀತಿ ಸಮನ್ವಯವಾಗಬೇಕು ಎಂಬ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ಬೆಂಗಳೂರಲ್ಲಿ ಪಕ್ಷದ ಶಾಸಕರು ಸದೃಢವಾಗಿದ್ದಾರೆ. ಅಲ್ಲದೇ, ಮೂರು ಕ್ಷೇತ್ರಗಳಲ್ಲಿ ಪಕ್ಷದ ಸಂಸದರೇ ಇದ್ದಾರೆ. ಬಿಬಿಎಂಪಿ ಚುನಾವಣೆಯ ಆಯ್ಕೆ ಮತ್ತು ಮುಂದಿನ ದಿನದಲ್ಲಿ ಮತ್ತಷ್ಟುಪಕ್ಷವನ್ನು ಗಟ್ಟಿಯಾಗಿ ಕಟ್ಟಿ ಚುನಾವಣೆಗೆ ಸನ್ನದ್ಧಗೊಳಿಸುವ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.
 

click me!