* ಕರ್ನಾಟಕ ರಾಜಕಾರಣಲ್ಲಿ ಬದಲಾವಣೆ ಚರ್ಚೆ
* ನಾಯಕರು ಸಂಪರ್ಕದಲ್ಲಿದ್ದಾರೆ ಎಂದು ಪರಸ್ಪರ ಹೇಳಿಕೆ
* ಪಕ್ಷಕ್ಕೆ ಬರುವವರಿಗೆ ಸ್ವಾಗತ ಎಂದ ಸಿದ್ದರಾಮಯ್ಯ
* ನನ್ನನ್ನು ಕರೆದುಕೊಂಡು ಹೋಗುವ ಶಕ್ತಿ ಯಾರಿಗೂ ಇಲ್ಲ
ಹಾಸನ (ಜ.26) ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ನಾಯಕರು ಹೇಳಿಕೆ ಮೇಲೆ ಹೇಳಿಕೆ ನೀಡುತ್ತಲೇ ಇದ್ದಾರೆ. ಹಾಸನ (Hassan) ಜಿಲ್ಲೆಗೆ ನಾನೇ ಮುಖ್ಯಮಂತ್ರಿ ಯಡಿಯೂರಪ್ಪ (BS Yediyurappa) ಸಿಎಂ ಆಗಿದ್ದಾಗ ಎಲ್ಲಾ ರೀತಿಯ ಸಹಕಾರ ಕೊಟ್ಟಿದ್ದಾರೆ. ಈಗಿನ ಮುಖ್ಯಮಂತ್ರಿಗಳು (Basavaraj Bommai) ಹಾಗೂ ಸಚಿವರು ಬೆನ್ನು ತಟ್ಟುತ್ತಿದ್ದಾರೆ. ಪಕ್ಷ ಹಾಗೂ ಮುಖ್ಯಮಂತ್ರಿಗಳು ತೆಗೆದುಕೊಳ್ಳುವ ತೀರ್ಮಾನದ ಬಗ್ಗೆ ಬಹಿರಂಗವಾಗಿ ಮಾತನಾಡುವ ಅಪ್ರಬುದ್ಧತೆ ತೋರುವುದಿಲ್ಲ ಪಕ್ಷದ ಹಿರಿಯರು ಹಾಗೂ ಮುಖ್ಯಮಂತ್ರಿಗಳು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧ ಎಂದು ಶಾಸಕ ಪ್ರೀತಂ ಗೌಡ (Preetham Gowda) ಹೇಳಿದ್ದಾರೆ.
ಎಲ್ಲವೂ ದೊಡ್ಡವರಿಗೆ ಬಿಟ್ಟ ವಿಚಾರ. ನಾನು ಮೊದಲನೇ ಸಾರಿ ಶಾಸಕನಾಗಿದ್ದೇನೆ, ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಸೀಮಿತವಾಗಿ ಕೆಲಸ ಮಾಡುತ್ತೇನೆ
ಒಳ್ಳೆಯ ರೀತಿಯಲ್ಲಿ ಸರ್ಕಾರ ನಡಿತಿದೆ. ಮುಂದಿನ ಬಜೆಟ್ ನಲ್ಲಿ ಹಾಸನ ಜಿಲ್ಲೆಗೆ ಹೆಚ್ಚು ಅನುದಾನ ನೀಡಲಿದ್ದಾರೆ. ನನಗೆ ಅದೇ ಬೇಕು, ಇದೇ ಬೇಕು ಎಂದು ಕೇಳುವುದಿಲ್ಲ. ಹಿಂದೆ ಕ್ಯಾಬಿನೆಟ್ ದರ್ಜೆಯ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಟ್ಟಿದ್ದರು. ನನಗೆ ಬೇಡ ಎಂದು ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದೆ ನಾನು ಯಾವುದನ್ನು ಕೇಳಿ ಪಡೆಯುವುದಿಲ್ಲ. ರಾಜ್ಯದ ಅಧ್ಯಕ್ಷರು, ದೆಹಲಿಯ ನಾಯಕರು ಹಾಗೂ ಮುಖ್ಯಮಂತ್ರಿಗಳು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದನಾಗಿದ್ದೇನೆ ಎಂದು ತಿಳಿಸಿದರು.
Karnataka Politics: ಸಂಪರ್ಕದಲ್ಲಿರುವವರ ಪಟ್ಟಿ ಬಿಡುಗಡೆ ಮಾಡಲಿ, ಕಾಂಗ್ರೆಸ್‌ಗೆ ಸುಧಾಕರ್ ಸವಾಲು
ಕಾಂಗ್ರೆಸ್ ಸೇರ್ಪಡೆ ವದಂತಿ ವಿಚಾರದ ಬಗ್ಗೆ ಮಾತನಾಡಿದ ಶಾಸಕರು, ನನಗೆ ಅದರ ಬಗ್ಗೆ ಏನು ಮಾಹಿತಿಯಿಲ್ಲ. ನಾನು ರಾಜಕಾರಣ ಆರಂಭ
ಮಾಡಿರುವುದು ಭಾರತೀಯ ಜನತಾ ಪಾರ್ಟಿಯಲ್ಲಿ. ನಾನೊಬ್ಬ ಸ್ವಯಂಸೇವಕ, ಬದುಕಿರುವವರೆಗೆ ರಾಜಕಾರಣವನ್ನು ಬಿಜೆಪಿಯಲ್ಲೇ ಮಾಡುತ್ತೇನೆ. ಮಾತನಾಡುವವರ ನಾಲಿಗೆ ಚಪಲ ತೀರುತ್ತೆ ಹೊರತು, ಪ್ರೀತಂಗೌಡನ ಮನಸ್ಥಿತಿ ಚೇಂಜ್ ಆಗಲ್ಲ ಈ ರೀತಿ ಮಾತನಾಡಿ ಪ್ರೀತಂಗೌಡರನ್ನ ವೀಕ್ ಮಾಡಬೇಕು ಎಂದುಕೊಂಡಿದ್ದರೆ ಅದು ಅವರ ಭ್ರಮೆ. ಹಾಸನ ಜಿಲ್ಲೆಯಲ್ಲಿ ಒಬ್ಬನೇ ಬಿಜೆಪಿ ಶಾಸಕನಿದ್ದೇನೆ. ಜಿಲ್ಲೆಯಲ್ಲಿ ಪಕ್ಷವನ್ನು ಗಟ್ಟಿ ಮಾಡುವ ಕೆಲಸ ಮಾಡುತ್ತಿದ್ದೇನೆ ಎಂದು ತಿರುಗೇಟು ನೀಡಿದರು.
ನಾನೇ ಕಾಂಗ್ರೆಸ್ ಅವರನ್ನು ಬಿಜೆಪಿಗೆ ಕರೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ. ನಾನು ಡಿಕೆಶಿ ಜೊತೆ ಒಂದು ಸುತ್ತು ಎರಡು ಸುತ್ತು, ನೂರು ಸುತ್ತು
ಮಾತನಾಡುತ್ತಿಲ್ಲ. ಯಾರೂ ರಾಷ್ಟ್ರೀಯತೆ ಒಪ್ಪುತ್ತಾರೆ, ಯಾರಿಗೆ ದೇಶದ ಮೇಲೆ ಭಕ್ತಿ ಇದೆ, ಪ್ರೇಮ ಇದೆ.. ಯಾರೂ ದೇಶದ ಅಖಂಡತೆಯನ್ನು ಉಳಿಸಿಬೇಕು ಅಂಥಾ ಹೇಳಿ ಯೋಚನೆ ಮಾಡುವ ಎಲ್ಲಾ ಪಕ್ಷದ ಕಾರ್ಯಕರ್ತರನ್ನು ಬಿಜೆಪಿ ಕರೆ ತರುತ್ತೇನೆ. ದೊಡ್ಡ ಲೀಡರ್ ಕರೆದುಕೊಂಡು ಬರುವ ಶಕ್ತಿ ನನಗಿಲ್ಲ. ನನ್ನನ್ನು ಕರೆದುಕೊಂಡು ಹೋಗುವ ಶಕ್ತಿ ಯಾವ ಲೀಡರ್‌ಗೂ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದರು.
ಸಿದ್ದರಾಮಯ್ಯ ಹೇಳಿಕೆ: ಜೆಡಿಎಸ್ ಮತ್ತು ಬಿಜೆಪಿ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿರುವುದು ನಿಜ. ಆದರೆ ಅವರ ಹೆಸರನ್ನು ಮಾತ್ರ ಈಗ ಹೇಳುವುದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದ್ದರು. ಅಲ್ಲದೆ, ಯಾವುದೇ ಷರತ್ತು ಇಲ್ಲದೆ ಪಕ್ಷ ಸೇರ್ಪಡೆಯಾಗುವುದಾದರೆ ಸ್ವಾಗತ ಎಂದು ಕರೆ ನೀಡಿದ್ದರು.
'ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಬಂದವರಿಗೆ ಸ್ವಾಗತ. ಪಕ್ಷ ಬಿಟ್ಟು ಹೋದವರನ್ನು ಸೇರಿಸಿಕೊಳ್ಳುತ್ತೇನೆಂದು ಎಲ್ಲಿ ಹೇಳಿದ್ದೇನೆ.? ನಾನು ಯಾವ ಶಾಸಕರೊಂದಿಗೂ ಮಾತಾಡಿಲ್ಲ. ಅವರೇ ನನ್ನ ಬಳಿ ಮಾತನಾಡಿದ್ದಾರೆ. ಬಿಜೆಪಿ ಸವಾಲುಗಳಿಗೆಲ್ಲಾ ಉತ್ತರ ಕೊಡುವ ಕೆಲಸ ಮಾಡುವುದಿಲ್ಲ ಎಂದು ಮಂಗಳೂರಿನಲ್ಲಿ ಹೇಳಿದ್ದರು.