ಚಿತ್ರದುರ್ಗ: ಭಾರತ್ ಜೋಡೋ ಯಾತ್ರೆಗೆ ಮತ್ತೆ ಪೋಸ್ಟರ್ ಬಿಸಿ, ಕಾಂಗ್ರೆಸ್‌ಗೆ ಬಿಜೆಪಿ ಠಕ್ಕರ್..!

By Girish Goudar  |  First Published Oct 11, 2022, 8:47 AM IST

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿ ವಿವಿಧೆಡೆ ಪಿಎಫ್ಐ ಭಾಗ್ಯ ಎಂದು ಪೋಸ್ಟರ್ ಅಂಟಿಸಿದ ಬಿಜೆಪಿ   


ಚಿತ್ರದುರ್ಗ(ಅ.11):  ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ 12ನೇ ದಿನದ ಪಾದಯಾತ್ರೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿಂದು (ಮಂಗಳವಾರ) ಮಳೆ ಕಾರಣದಿಂದ ಗಂಟೆ ತಡವಾಗಿ ಆರಂಭವಾಗಿದೆ. ಇನ್ನು ಪಿಎಎಫ್ಐ ಪೋಸ್ಟರ್ ಅಂಟಿಸುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರಿಗೆ ಬಿಜೆಪಿ ಶಾಕ್ ನೀಡಿದೆ. ಚಳ್ಳಕೆರೆ ಪಟ್ಟಣದ ವಿವಿಧೆಡೆ ಈ ಪೋಸ್ಟರ್ ಅಂಟಿಸಲಾಗಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯ 12ನೇ ದಿನದ ಪಾದಯಾತ್ರೆ ಇಂದು ಒಂದು ಗಂಟೆ ತಡವಾಗಿ ಆರಂಭವಾಗಿದೆ. ಬೆಳಗ್ಗೆ 6.30ಕ್ಕೆ ಆರಂಭವಾಗುತ್ತಿದ್ದ ಯಾತ್ರೆ ಬೆಳಗ್ಗೆ 7.30ಕ್ಕೆ ಪ್ರಾರಂಭವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿ ದಿನ ಬೆಳಗ್ಗೆ 6 ಗಂಟೆಗೆ ಭಾರತ್ ಐಕ್ಯತಾ ಯಾತ್ರೆ ಆರಂಭ ಆಗುತ್ತಿತ್ತು. ‌ಮಳೆ ಕಾರಣಕ್ಕೆ ತಡವಾಗಿದೆ. ಈ ಕುರಿತು ರಾತ್ರಿ ತೀರ್ಮಾನ ತೆಗೆದುಕೊಳ್ಳಲಾಗಿತ್ತು ಎಂದು ತಿಳಿಸಿದ್ದಾರೆ. 

ಮುಲಾಯಂ ಸಿಂಗ್ ಯಾದವ್ ಅಂತ್ಯಕ್ರಿಯೆಗೆ ಪ್ರಿಯಾಂಕ:

Tap to resize

Latest Videos

ಮುಲಾಯಾಂ ಸಿಂಗ್ ಯಾದವ್ ಅಂತ್ಯಕ್ರಿಯೆಯಲ್ಲಿ ರಾಹುಲ್ ಗಾಂಧಿ ಭಾಗವಹಿಸುವ ಒತ್ತಡ ಇತ್ತು. ಈ ಬಗ್ಗೆ ರಾತ್ರಿ ಬಹಳ ಚರ್ಚೆ ನಡೆದಿದೆ. ಆದರೆ, ರಾಹುಲ್ ಇಲ್ಲದೇ ಯಾತ್ರೆ ಮಾಡುವುದು ಸರಿಯಗುವುದಿಲ್ಲ ಎಂದು ಭಾವಿಸಿ, ಇಲ್ಲಿಯೇ ಗೌರವ ಸಲ್ಲಿಸುತ್ತಾ ಮುಂದುವರೆಸಲು ತೀರ್ಮಾನಿಸಲಾಗಿದೆ. ಮುಲಾಯಂ ಸಿಂಗ್ ದೊಡ್ಡ ಹೋರಾಟಗಾರ. ಸಮಾಜವಾದಿ ಪಕ್ಷ ಕಟ್ಟಿ ರಾಷ್ಟ್ರದ ಅಭಿವೃದ್ದಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಶಿಮ್ಲಾದಲ್ಲಿದ್ದು ಅವರು ಭಾಗವಹಿಸುವಂತೆ ವ್ಯವಸ್ಥೆ ಮಾಡಲಾಗಿದೆ ಅಂತ ಮಾಹಿತಿ ನೀಡಿದ್ದಾರೆ. 

ಭಾರತ್ ಜೋಡೋ ಯಾತ್ರೆಯಿಂದ ಬಿಜೆಪಿಗೆ ನಡುಕ; ಶಿವರಾಜ ತಂಗಡಗಿ

ಅ. 17ರಂದು ಎಐಸಿಸಿ ಚುನಾವಣೆ ನಡೆಯಲಿದ್ದು, ಯಾತ್ರಿಗಳು ಮತ ಹಾಕಲು ಇಲ್ಲಿಯೇ ಬೂತ್ ತೆರೆಯಲಾಗುತ್ತದೆ. ಕೆಪಿಸಿಸಿ ಸದಸ್ಯರಿಗೆ, ಬೆಂಗಳೂರಿನಲ್ಲಿ ಕೆಪಿಸಿಸಿ ಕಚೇರಿಯಲ್ಲಿ ವ್ಯವಸ್ಥೆ ಮಾಡಲಾಗುತ್ತದೆ ಅಂತ ಡಿಕೆಶಿ ಹೇಳಿದ್ದಾರೆ. 
ಮೀಸಲಾತಿ ಮಾಡಬೇಕು ಅಂತ ಸಮಿತಿ ರಚಿಸಿದ್ದು. ನಾವೇ ಬೇರು. ಇಷ್ಟೊತ್ತಿಗೆ ಅನುಷ್ಠಾನಕ್ಕೆ ತಂದು ಸಂಸತ್ತಿನಲ್ಲಿ ಅನುಮೋದನೆ ನೀಡಬಹುದಿತ್ತು. ಈಗ ಮಾಡಲಿ. ನಮ್ಮದು ವಿರೋಧ ಇಲ್ಲ. ಬಿಜೆಪಿಗರು ಇಷ್ಟು ದಿನ ಜನಕ್ಕೆ ಸಂಕಲ್ಪವೇ ಮಾಡಿರಲಿಲ್ಲ. ಜನಸ್ಪಂದನ ಆಯ್ತು, ಈಗ ಸಂಕಲ್ಪ ಎಂದು ಜನರ ಹತ್ತಿರ ಹೋಗುವ ಪ್ರಯತ್ನ ಮಾಡುತ್ತಿದ್ದಾರೆ ಅಂತ ಬಿಜೆಪಿ ವಿರುದ್ಧ ಡಿಕೆಶಿ ಕಿಡಿ ಕಾರಿದ್ದಾರೆ.  ಇದೇ ವೇಳೆ ಮುಸ್ಲಿಮರ ಮೀಸಲಾತಿ ತೆಗೆಯುವ ಅರವಿಂದ ಬೆಲ್ಲದ್ ಹೇಳಿಕೆಗೆ ಪ್ರತಿಕ್ರಿಯಿಸಲು ಡಿ.ಕೆ.ಶಿವಕುಮಾರ್ ನಿರಾಕರಿಸಿದರು.

ಇಂದಿನ ಪಾದಯಾತ್ರೆಗೂ‌ ಸಿದ್ದರಾಮಯ್ಯ ಗೈರು

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದಿನ ಪಾದಯಾತ್ರೆಗೂ ಗೈರಾಗಲಿದ್ದಾರೆ. ಸಿದ್ದರಾಮಯ್ಯ ಅವರು ಬಳ್ಳಾರಿ ಕಾರ್ಯಕ್ರಮ ತಯಾರಿಯಲ್ಲಿದ್ದಾರೆ. ಹೀಗಾಗಿ ಇಂದಿನ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. 

ಇನ್ನು ರಾಹುಲ್ ಗಾಂಧಿ ನೋಡಲು ಮಕ್ಕಳು ನಿಂತಿದ್ದರು. ಇದನ್ನು ಕಂಡು 4 ಜನ ಮಕ್ಕಳನ್ನ ಕರೆದು ರಾಹುಲ್ ಮಾತನಾಡಿಸಿ ಮಕ್ಕಳ ಜೊತೆ ಕೈ ಹಿಡಿದು ಹೆಜ್ಜೆ ಹಾಕಿದ್ದಾರೆ. ಇನ್ನು ಇದೇ ವೇಳೆ ಮಕ್ಕಳ‌ನ್ನ ಕರೆದಾಗ ವ್ಯಕ್ತಿಯೊಬ್ಬ ರಾಹುಲ್ ಬಳಿಕ ಬರಲು ‌ಪ್ರಯತ್ನಿಸಿದ್ದರು. ಕೂಡಲೇ ಭದ್ರತಾ ಸಿಬ್ಬಂದಿ ವ್ಯಕ್ತಿಯನ್ನ ತಡೆದು ಪಕ್ಕಕ್ಕೆ ಕಳಿಸಿದ್ದಾರೆ.  ರಾಹುಲ್ ಗಾಂಧಿ ನೋಡಲು ಚಿಕ್ಕ ಹುಡುಗನೊಬ್ಬಕಾಂಗ್ರೆಸ್ ಬಾವುಟ ಹಿಡಿದು ರಸ್ತೆ ಪಕ್ಕದಲ್ಲಿ ನಿಂತಿದ್ದನು. ಹುಡುಗ ನಿಂತಿರುವ ಜಾಗಕ್ಕೆ ಹೋಗಿ ಅವನನ್ನು ಕರೆದುಕೊಂಡು ಬಂದು ಕೊನೆಗೆ ಅವನ ಕೈ ಹಿಡಿದು ರಾಹುಲ್ ಗಾಂಧಿ ಹೆಜ್ಜೆ ಹಾಕಿದ್ದಾರೆ. 

ಮಕ್ಕಳಿಗೆ ಕಾಂಪಿಟೆಷನ್ ಹಚ್ಚಿದ ರಾಹುಲ್

ಹರ್ತಿಕೋಟೆ ಬಳಿ ಮಕ್ಕಳೊಂದಿಗೆ ರಾಹುಲ್ ಹೆಜ್ಜೆ ಹಾಕಿತ್ತಿರುವಾಗ ಐದಾರು ಮಕ್ಕಳನ್ನು ರನ್ನಿಂಗ್ ರೇಸ್ ಮಾಡಿಸಿದ್ದಾರೆ. ರಾಹುಲ್ ಎದುರು ಸ್ಪರ್ಧೆಗೆ ಬಿದ್ದು ಮಕ್ಕಳು ಓಡಿದ್ದಾರೆ. ಮತ್ತೆ ಮಕ್ಕಳನ್ನು ಹತ್ತಿರ ಕರೆದು ರಾಹುಲ್‌ ಗಾಂಧಿ ಹೆಜ್ಜೆ ಹಾಕಿದ್ದಾರೆ. 

ರಾಹುಲ್ ಗಾಂಧಿ ಕೈಯಲ್ಲಿ ಅಪ್ಪು ಫೋಟೋ; 'ಭಾರತ್ ಜೋಡೋ ಯಾತ್ರೆ'ಯಲ್ಲಿ ಪುನೀತ್‌ಗೆ ನಮನ

ಕಾಂಗ್ರೆಸ್ ಪೇಸಿಎಂ ಪೋಸ್ಟರ್‌ಗೆ ಬಿಜೆಪಿ ಠಕ್ಕರ್

ಹೌದು, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿ ವಿವಿಧೆಡೆ ಪಿಎಫ್ಐ ಭಾಗ್ಯ ಎಂದು ಬಿಜೆಪಿ ಪೋಸ್ಟರ್ ಅಂಟಿಸಿದೆ.  ಸಿದ್ರಾಮುಲ್ಲಾನ ಉಗ್ರಭಾಗ್ಯ ಲೀಲೆಗಳನ್ನು ತಿಳಿಯಲು ಸ್ಕ್ಯಾನ್ ಮಾಡಿ ಎಂದು ಪೋಸ್ಟರ್ ಅಂಟಿಸಲಾಗಿದೆ. ಪೋಸ್ಟರ್‌ನಲ್ಲಿ ಸಿದ್ದರಾಮಯ್ಯ ಟಿಪ್ಪು ಪೇಟ ಧರಿಸಿ ತಲವಾರ್ ಹಿಡಿದ ಫೋಟೋ ಇದೆ.  ಚಳ್ಳಕೆರೆಗೆ ಭಾರತ್ ಜೋಡೋ ಯಾತ್ರೆ ಎಂಟ್ರಿ ವೇಳೆ ಪೋಸ್ಟರ್ ಅಂಟಿಸಲಾಗಿದೆ. 

ಭಾರತ್ ಜೋಡೋ ಫ್ಲೆಕ್ಸ್ ಅಳವಡಿಸಿದ ಸ್ಥಳದಲ್ಲೂ ಪಿಎಫ್ಐ ಭಾಗ್ಯ ಪೋಸ್ಟರ್ ಅಂಟಿಸಲಾಗಿದೆ. ಈ ಮೂಲಕ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಗೆ ಮತ್ತೆ ಫೋಸ್ಟರ್ ಬಿಸಿ ಎದುರಾಗಿದೆ. ಚಳ್ಳಕೆರೆಗೆ ಪಾದಯಾತ್ರೆ ಬರುವ ಮುನ್ನವೇ ಕಾಂಗ್ರೆಸ್‌ಗೆ ಫೋಸ್ಟರ್ ಬಿಸಿ ತಟ್ಟಿದೆ. 
 

click me!