ಶಿವಮೊಗ್ಗ (ಅ.11) : ಬಿಜೆಪಿಯಿಂದ ಸಮಾಜವಾದಿ ಅಲ್ಲಿಂದ ಜೆಡಿಎಸ್ ಈಗ ಕಾಂಗ್ರೆಸ್‌ಗೆ ಹೋಗಿದ್ದಾರೆ. ಶೇ.101 ಸತ್ಯ ಮಧು ಬಂಗಾರಪ್ಪ ಕಾಂಗ್ರೆಸ್‌ನಲ್ಲಿ ಉಳಿಯಲ್ಲ, ಮುಂದಿನ ಚುನಾವಣೆಗೆ ಮತ್ತೆ ಯಾವ ಪಕ್ಷ ಹುಡುಕುತ್ತಾರೋ? ಗೊತ್ತಿಲ್ಲ ಎಂದು ಸೊರಬ ಶಾಸಕ ಕುಮಾರ್ ಬಂಗಾರಪ್ಪ ಭವಿಷ್ಯ ನುಡಿದರು.
ಸಮ ಸಮಾಜಕ್ಕೆ ಶ್ರಮಿಸಿದ್ದ ನಾರಾಯಣ ಗುರು; ಮಧು ಬಂಗಾರಪ್ಪ
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮಧು ಬಂಗಾರಪ್ಪ ಜೆಡಿಎಸ್ ಒಡೆದು ಯಾಕೆ ಹೊರಬಂದರು ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಬೇಕು. ಮಧು ಬಂಗಾರಪ್ಪ ಬಿಜೆಪಿ ಅಭ್ಯರ್ಥಿಯಾಗಿದ್ದನ್ನು ಮರೆಯಬಾರದು ಎಂದು ಎಚ್ಚರಿಸಿದರು.
ಭೂತನ ಬಾಯಲ್ಲಿ ಭಗವದ್ಗೀತೆ:
ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಮಧು ಬಂಗಾರಪ್ಪ ಸ್ವತಃ ಹಗರಣಗಳಲ್ಲಿ ಭಾಗಿಯಾಗಿರುವುದು ಭೂತನ ಬಾಯಲ್ಲಿ ಭಗವದ್ಗೀತೆ ಹೇಳಿದಂತೆ ಆಗಿದೆ. ಮಧುಬಂಗಾರಪ್ಪ ಅಧಿಕಾರಾವಧಿಯಲ್ಲಿ ಸೊರಬ ತಾಲೂಕಿನಲ್ಲಿ ಬಗರ್ ಹುಕುಂನಲ್ಲಿ ಭ್ರಷ್ಟಾಚಾರ ನಡೆದಿದೆ. ಶರಾವತಿ ಡೆಂಟಲ್ ಕಾಲೇಜ್ ಹಗರಣ ಸೊರಬದಲ್ಲಿ ಬಗರ ಹುಕುಂ ಹಗರಣ ಎಲ್ಲದರಲ್ಲೂ ಮಧು ಬಂಗಾರಪ್ಪ ಇದಾರೆ. ತಂದೆ ಬಂಗಾರಪ್ಪನವರ ಸಮಾಧಿಯನ್ನು 10 ವರ್ಷಗಳಿಂದ ತಂದೆಯ ಸಮಾಧಿ ಮಾಡುತ್ತಲೇ ಇದ್ದಾರೆ. ಸಮಾಧಿ ಮಾಡುವ ಯೋಗ್ಯತೆ ಅವರಿಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯಡಿಯೂರಪ್ಪ ಅವರು ಬಂಗಾರಪ್ಪ ಸಮಾಧಿಯ ಸ್ಮಾರಕಕ್ಕೆ ಅನುದಾನ ಕೂಡ ಕೊಟ್ಟಿದ್ದರು. ಆದರೆ, ಅದು ಸರಿಯಾಗಿ ಬಳಕೆ ಆಗಿಲ್ಲ. ಕಾಂಗ್ರೆಸ್ಸಿಗರಿಗೆ ರಸ್ತೆ ಸೇತುವೆ ಮಾಡಿದರೆ ಸಂತೋಷ ಆಗೋಲ್ಲ ಪೆಟ್ರೋಲ್ ಬೆಲೆ ಇಳಿಕೆಯಾದರೂ ಸಂತೋಷ ಆಗೋಲ್ಲ ಯುಕ್ರೇನ್ ನಿಂದ ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದ್ರು ಸಂತೋಷ ಆಗಲ್ಲ ಎಂದು ಪ್ರಧಾನಿ ಹೇಳಿದ್ದು ಸತ್ಯ ಎಂದರು.
ಗ್ಯಾಂಗ್‌ಸ್ಟಾರ್ ಮಧು ಬಂಗಾರಪ್ಪ:
ಮಧು ಬಂಗಾರಪ್ಪ ಗ್ಯಾಂಗ್ ಸ್ಟಾರ್ ಇದ್ದಹಾಗೆ. ಅವರು ಎಂದೂ ಕೂಡ ಸಾಥ್ವಿಕ ರಾಜಕಾರಣಿಯಾಗಿ ಬೆಳೆಯಲೇ ಇಲ್ಲ. ಎಲ್ಲರಿಗೂ ಮೂರು ನಾಮ ಹಾಕಿ ಸಿನಿಮಾ ತೆಗೆಯಲು ಹೋಗಿದ್ದರು. ಈ ಸಿನಿಮಾ ತೆಗೆಯಲು ಹಣ ಎಲ್ಲಿಂದ ಬಂತು ಎಂದು ದಾಖಲಾತಿ ನೀಡಲಿ. ಇವರ ಸಿನಿಮಾದ ಡಬ್ಬಗಳು ಎಲ್ಲಿ ಹೋದವು ಲೆಕ್ಕ ಕೊಡಲಿ. ಸಮಾಜವಾದಿ, ಜೆಡಿಎಸ್ ಪಕ್ಷದ ಪಾರ್ಟಿ ಫಂಡ್ ಗಳಲ್ಲೂ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
2013ರಿಂದ 2018 ರವರೆಗೆ ಸೊರಬ ತಾಲೂಕಿನಲ್ಲಿ ಎಷ್ಟುರಸ್ತೆ ಎಷ್ಟುನೀರಾವರಿ ಯೋಜನೆ ತಂದಿದ್ದಾರೆ ಮಧು ಲೆಕ್ಕ ಕೊಡಲಿ. ಭಾರತ್ ಜೋಡೋ ಕಾರ್ಯಕ್ರಮದಲ್ಲಿ ಮಧು ಬಂಗಾರಪ್ಪ ಭಾಗವಹಿಸಿ ರಾಹುಲ್ ಗಾಂಧಿ ಕೈ ಹಿಡಿದ ಮಾತ್ರಕ್ಕೆ ದೊಡ್ಡ ಲೀಡರ್ ಅಂದುಕೊಂಡಿದ್ದಾರೆ. ಚಂದ್ರಗುತ್ತಿ ಪಲ್ಲಕ್ಕಿ ಅಲ್ಲಾಡಿಸಿ ರೌಡಿಸಂ ಮಾಡಿದ್ದಾರೆ. ಸೊರಬ ತಾಲೂಕಿನಲ್ಲಿ ಅದೆಲ್ಲಾ ನಡೆಯೋಲ್ಲ. ಆರ್‌ಎಸ್‌ಎಸ್ ಹಿರಿಯ ದತ್ತಾತ್ರೇಯ ಹೊಸಬಾಳೆ ಹೆಸರನ್ನು ಮಧು ಬಂಗಾರಪ್ಪ ಬಳಸಿರುವುದು ಶೋಭೆ ತರೋಲ್ಲ ಎಂದು ಟೀಕಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಕಾಶ್ ಇದ್ದರು.
ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ: ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕುಮಾರ್ ಬಂಗಾರಪ್ಪಗೆ ಬಿಗ್ ಶಾಕ್!
ಸೊರಬದ ಗೊಂದಲ ಬಿಜೆಪಿ ವರಿಷ್ಠರ ಗಮನಕ್ಕೆ:
ಬಿಜೆಪಿ ಕಟ್ಟಿದ ಹಿರಿಯ ಪದ್ಮನಾಭ ಆ ರೀತಿ ಹೇಳಿಕೆ ಕೊಟ್ಟಿದ್ದು ಸರಿಯಲ್ಲ. ಕೆಲವೊಮ್ಮೆ ಅನ್ನ ಸರಿಯಾಗಿ ಬೇಯಲ್ಲ ಎರಡು ಮೂರು ಬಾರಿ ನೀರಿನಲ್ಲಿ ಮುಳುಗಿಸಿದ ಮೇಲೆ ಚೆನ್ನಾಗಿ ಬೇಯುತ್ತದೆ ಎಂದು ಪ್ರಶ್ನೆಯೊಂದಕ್ಕೆ ಮಾರ್ಮಿಕವಾಗಿ ಉತ್ತರಿಸಿದ ಕುಮಾರ್ ಬಂಗಾರಪ್ಪ, ಸೊರಬ ಬಿಜೆಪಿ ಗೊಂದಲವನ್ನು ಬಿಜೆಪಿ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಅಧ್ಯಕ್ಷ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.