ಸರ್ಕಾರಿ ನೌಕರರಿಗೆ ವೇತನ ಹಾಗೂ ರೈತರಿಗೆ ಬೆಳೆ ಹಾನಿಗೆ ಪರಿಹಾರ ನೀಡಲು ಕಾಂಗ್ರೆಸ್ ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲ. ಮುಖ್ಯಮಂತ್ರಿ ಆದಿಯಾಗಿ ಯಾರಿಗೂ ಕೆಲಸ ಮಾಡುವ ಮನಸ್ಸೂ ಇಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.
ರಾಮನಗರ (ಅ.26): ಸರ್ಕಾರಿ ನೌಕರರಿಗೆ ವೇತನ ಹಾಗೂ ರೈತರಿಗೆ ಬೆಳೆ ಹಾನಿಗೆ ಪರಿಹಾರ ನೀಡಲು ಕಾಂಗ್ರೆಸ್ ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲ. ಮುಖ್ಯಮಂತ್ರಿ ಆದಿಯಾಗಿ ಯಾರಿಗೂ ಕೆಲಸ ಮಾಡುವ ಮನಸ್ಸೂ ಇಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀಡಿದ ಅನುದಾನದ ಕೆಲಸಗಳು ಈಗ ಎಲ್ಲೆಡೆ ನಡೆಯುತ್ತಿವೆ. ಖಜಾನೆ ಬರಿದಾಗಿದ್ದು, ಇದೊಂದು ಪಾಪರ್ ಆಗಿರುವ ಸರ್ಕಾರ ಎಂದು ಲೇವಡಿ ಮಾಡಿದರು.
ಪ್ರತಿನಿತ್ಯ ಅಕ್ರಮ - ಹಗರಣಗಳ ಸರಮಾಲೆಯಲ್ಲಿಯೇ ಕಾಂಗ್ರೆಸ್ ಸರ್ಕಾರ ಸಿಲುಕಿದೆ. ವಾಲ್ಮೀಕಿ, ಮುಡಾ ಹಗರಣದ ನಂತರ ಇದೀಗ ಗಣಿ ಹಗರಣದಲ್ಲಿ ಕಾಂಗ್ರೆಸ್ ಶಾಸಕ ಸತಿಶ್ ಸೈಲ್ ಗೆ ಶಿಕ್ಷೆ ಆಗಿ ಜೈಲು ಪಾಲಾಗಿದ್ದಾರೆ. ಈ ಮೂಲಕ ಕಾಂಗ್ರೆಸ್ ಲೂಟಿಕೋರರ ಪಾರ್ಟಿ ಅಂತ ಸಾಬೀತಾಗಿದೆ ಎಂದರು. ಈ ಹಿಂದೆ ಗಣಿ ಹಗರಣ ವಿಚಾರವಾಗಿ ಸಿದ್ದರಾಮಯ್ಯ ಪಂಚೆ ಎತ್ತಿಕೊಂಡು ಪಾದಯಾತ್ರೆ ಮಾಡಿದರು. ದಾರಿಯುದ್ದಕ್ಕೂ ಡ್ಯಾನ್ಸ್ ಮಾಡಿಕೊಂಡು ಬಳ್ಳಾರಿಗೆ ಹೋದರು. ಈಗ ಅವರದೇ ಪಕ್ಷದ ಶಾಸಕ ಗಣಿ ಲೂಟಿ ಮಾಡಿದ್ದಾರೆ. ಈ ಲೂಟಿಕೋರ ಪಕ್ಷವನ್ನು ಮತದಾರರು ಉಪಚುನಾವಣೆಯಲ್ಲಿ ಗೆಲ್ಲಿಸುವುದಿಲ್ಲ ಎಂದು ಹೇಳಿದರು.
undefined
ಮಳೆಯಿಂದಾಗಿ ತೇಲುತ್ತಿರುವ ಬೆಂಗಳೂರು, ಮುಳುಗುತ್ತಿರುವ ಬೆಂಗಳೂರು ಎಂದೆಲ್ಲ ಮಾಧ್ಯಮಗಳು ವ್ಯಾಖ್ಯಾನ ಮಾಡುತ್ತಿವೆ. ಇಡೀ ಉತ್ತರ ಕರ್ನಾಟಕ, ಮಲೆನಾಡು ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಬೆಳೆ ಹಾನಿಗೆ ಪರಿಹಾರ ನೀಡಲು ಖಜಾನೆಯಲ್ಲಿ ಹಣ ಇಲ್ಲ. ಮುಖ್ಯಮಂತ್ರಿ ಮಾತ್ರವಲ್ಲದೆ ಯಾರೊಬ್ಬರಿಗೂ ಕೆಲಸ ಮಾಡುವ ಮನಸ್ಸು ಇಲ್ಲ ಎಂದು ಅಶೋಕ್ ಕಿಡಿಕಾರಿದರು.
ಮೃತ ಕಾಡಾನೆಗೆ ಅಂತಿಮ ನಮನ ಸಲ್ಲಿಸಿದ 17 ಕಾಡಾನೆಗಳು: ಟ್ರ್ಯಾಪ್ ಕ್ಯಾಮೆರಾದಲ್ಲಿ ಸೆರೆಯಾಯ್ತು ಫೋಟೋ!
ಪಾಟ್ನರ್ ಶಿಪ್ ಧರ್ಮ ಪಾಲನೆ: ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧವೇ ಹೋರಾಟ ನಡೆಸಿಕೊಂಡ ಬಂದ ಬಿಜೆಪಿ, ಈಗ ಅದೇ ಕುಟುಂಬದವರ ಪರವಾಗಿ ಚುನಾವಣಾ ಪ್ರಚಾರ ನಡೆಸುವ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ, ಗೊಂದಲಕ್ಕೀಡಾದ ಅಶೋಕ್, ಬದಲಾದ ರಾಜಕೀಯ ವಿದ್ಯಮಾನಗಳಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿಕೂಟವಾಗಿದೆ. ಎನ್ ಡಿಎ ಪಾಟ್ನರ್ ಆಗಿ ಜೆಡಿಎಸ್ ಬಂದಿರುವ ಕಾರಣ ಪಾಟ್ನರ್ ಶಿಪ್ ಧರ್ಮ ಪಾಲನೆ ಮಾಡುತ್ತಿದ್ದೇವೆ. ಈಗಿಲ್ಲಿ ಪಾರಂಪರಿಕ ರಾಜಕಾರಣದ ಪ್ರಶ್ನೆ ಬರುವುದಿಲ್ಲ ಎಂದು ಹೇಳಿ ಜಾರಿಕೊಂಡರು.