ಮೇಕೆದಾಟು ಹಾಗೂ ಮಹದಾಯಿ ವಿಷಯವಾಗಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷದ ನಡುವೆ ಜಟಾಪಟಿ ನಡೆಯಿತು. ಉತ್ತರ ಕರ್ನಾಟಕದ ಮೇಲಿನ ಚರ್ಚೆ ಬಳಿಕ ಉತ್ತರ ನೀಡುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ಹಾಗೂ ಬಿಜೆಪಿಗರನ್ನು ಟೀಕಿಸುತ್ತಿದ್ದರು.
ವಿಧಾನಸಭೆ (ಡಿ.16): ಮೇಕೆದಾಟು ಹಾಗೂ ಮಹದಾಯಿ ವಿಷಯವಾಗಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷದ ನಡುವೆ ಜಟಾಪಟಿ ನಡೆಯಿತು. ಉತ್ತರ ಕರ್ನಾಟಕದ ಮೇಲಿನ ಚರ್ಚೆ ಬಳಿಕ ಉತ್ತರ ನೀಡುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ಹಾಗೂ ಬಿಜೆಪಿಗರನ್ನು ಟೀಕಿಸುತ್ತಿದ್ದರು. ಮಹದಾಯಿಗೆ ಕೇಂದ್ರ ಸರ್ಕಾರದ ಪರಿಸರ ಇಲಾಖೆಯಿಂದ ಅನುಮತಿ ಸಿಗುತ್ತಿಲ್ಲ. ಮೇಕೆದಾಟು ವಿಷಯವಾಗಿ ತಮಿಳುನಾಡು ವಿನಾಕಾರಣ ರಾಜಕಾರಣ ಮಾಡುತ್ತಿದೆ ಎಂದು ತಿಳಿಸಿದರು.
ಆಗ ಮಧ್ಯಪ್ರವೇಶಿಸಿದ ಪ್ರತಿಪಕ್ಷದ ನಾಯಕ ಆರ್.ಅಶೋಕ್, ನಿಮ್ಮ ಪಕ್ಷ ಮೈತ್ರಿ ಮಾಡಿಕೊಂಡಿರುವ ಇಂಡಿಯಾ ಮೈತ್ರಿಕೂಟದಲ್ಲಿರುವವರೇ ತಮಿಳನಾಡಿನಲ್ಲಿ ಆಡಳಿತದಲ್ಲಿದ್ದಾರೆ. ಅವರೊಂದಿಗೆ ಚರ್ಚಿಸಿ ಮೇಕೆದಾಟು ಸಮಸ್ಯೆ ಬಗೆಹರಿಸಿ ಎಂದು ಕಿಚಾಯಿಸಿದರು.ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೋವಾದಲ್ಲಿ ನಿಮ್ಮ ಪಕ್ಷವೇ ಆಡಳಿತದಲ್ಲಿದೆ. ನೀವು ಮಾತನಾಡಿ ಆ ಸಮಸ್ಯೆಯನ್ನು ಕ್ಲಿಯರ್ ಮಾಡಿಬಿಡಿ. ಮಹದಾಯಿ ಪ್ರಾರಂಭಿಸಿ ಬಿಡೋಣ ಎಂದರು.
undefined
ರೈತರ ಮಕ್ಕಳಿಗೆ ಹೆಣ್ಣು ಕೊಡ್ಸಿ ಮೇಡಂ: ಜನತಾದರ್ಶನದಲ್ಲಿ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ ಅನ್ನದಾತ!
ಬಿಜೆಪಿಗೆ ಸಾಮಾಜಿಕ ನ್ಯಾಯ ಬಗ್ಗೆ ಮಾತಾಡೋ ಹಕ್ಕಿಲ್ಲ: ಸಾಮಾಜಿಕ ನ್ಯಾಯ ಕುರಿತು ಮಾತನಾಡುವ ನೈತಿಕ ಹಕ್ಕು ಬಿಜೆಪಿಗೆ ಇಲ್ಲ, ಈ ವಿಷಯದಲ್ಲಿ ಎಂದೂ ಕೂಡಾ ನಮ್ಮ ಬದ್ಧತೆ ಬದಲಾಗುವುದಿಲ್ಲ. ದಲಿತರ ಬಗ್ಗೆ ನಿಜವಾಗಿ ಬಿಜೆಪಿ ಸದಸ್ಯರಿಗೆ ಕಾಳಜಿ ಇದ್ದಿದ್ದರೇ ಕೇಂದ್ರ ಹಾಗೂ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಕರ್ನಾಟಕದ ಎಸ್‌ಸಿಪಿ ಟಿಎಸ್‌ಪಿ ಕಾಯ್ದೆ ಜಾರಿಗೆ ತರಲು ಒತ್ತಾಯಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.
2023-24ನೇ ಸಾಲಿನ ₹3542.10 ಕೋಟಿಗಳ ಪೂರಕ ಅಂದಾಜುಗಳ ಪ್ರಸ್ತಾವನೆ ವೇಳೆ ಬಿಜೆಪಿ ಸದಸ್ಯರು, ಪರಿಶಿಷ್ಟರಿಗೆ ಮೀಸಲಾದ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸುವ ಮೂಲಕ ದಲಿತರಿಗೆ ಅನ್ಯಾಯ ಮಾಡಲಾಗಿದೆ, ಸಣ್ಣ ಸಮುದಾಯಗಳ ಅಭಿವೃದ್ಧಿ ನಿಗಮಗಳಿಗೆ ಹಣ ನೀಡಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿ ಹಣ ಮೀಸಲಿಟ್ಟು ವೆಚ್ಚ ಮಾಡಿದ್ದು ಕಾಂಗ್ರೆಸ್ ಸರ್ಕಾರ, ಅವಕಾಶ ವಂಚಿತರು, ಅಕ್ಷರ ವಂಚಿತ ಜನರಿಗೆ ಶಕ್ತಿ ತುಂಬಬೇಕು ಎಂಬ ಕಾರಣದಿಂದ ಕಾಯ್ದೆ ಜಾರಿಗೆ ತಂದಿದ್ದೇವೆ. ಈ ಮೊದಲು ಪರಿಶಿಷ್ಟರಿಗೆ ಬಜೆಟ್‌ನಲ್ಲಿ ₹6-7 ಸಾವಿರ ಕೋಟಿ ವೆಚ್ಚವಾಗುತ್ತಿತ್ತು.
ರಾಜ್‌ಕುಮಾರ್ ಅಪಹರಣ ವೇಳೆ ವೀರಪ್ಪನ್ ಹಿಡಿಯಲು ನಡೆದಿತ್ತು ಸಿದ್ಧತೆ: ಶಂಕರ್ ಬಿದರಿ
ಕಾಯ್ದೆ ಜಾರಿಗೆ ತಂದ ನಂತರ ಬಜೆಟ್ ಗಾತ್ರಕ್ಕೆ ತಕ್ಕಂತೆ ಹಚ್ಚಾಗುತ್ತಾ ಬಂದಿದೆ. ಈ ವರ್ಷ ₹34 ಸಾವಿರ ಕೋಟಿ ನಿಗದಿ ಮಾಡಲಾಗಿದೆ ಎಂದು ವಿವರಿಸಿದರು. ಬಿಜೆಪಿ ಆಡಳಿತ ಅವಧಿಯಲ್ಲಿ ಬಜೆಟ್ ಗಾತ್ರ ಹೆಚ್ಚಾದರೂ ಪರಿಶಿಷ್ಟರಿಗೆ ಮೀಸಲಿಡಬೇಕಾದ ಹಣದ ಪ್ರಮಾಣ ಕಡಿಮೆಯಾಯಿತು. ಈ ವಿಷಯ ಅಸತ್ಯವಾಗಿದ್ದರೆ ಬಿಜೆಪಿ ಸದಸ್ಯರು ಅದನ್ನು ಸಾಬೀತುಪಡಿಸಬೇಕು ಎಂದರು. ಕಾಂಗ್ರೆಸ್ ಸಂವಿಧಾನಕ್ಕೆ ಬದ್ಧರಾಗಿ ಕೆಲಸ ಮಾಡುತ್ತೇವೆ. ಆದರೆ, ನೀವು ಸಂವಿಧಾನ ಬದಲಾವಣೆ ಮಾಡಲು ಹೊರಟವರು, ನಿಮ್ಮ ಸಂಸದರು ನಾವು ಅಧಿಕಾರಕ್ಕೆ ಬಂದಿರೋದೆ ಸಂವಿಧಾನ ಬದಲಾವಣೆ ಮಾಡಲು ಎಂದಿದ್ದರು ಎಂದು ಚುಚ್ಚಿದರು.