ಆರ್.ವಿ. ದೇಶಪಾಂಡೆ ಹಾಗೂ ಅವರ ಬಲಗೈ ಬಂಟನಾಗಿದ್ದ ಎಸ್.ಎಲ್. ಘೋಟ್ನೇಕರ್ ನಡುವಿನ ಬಿರುಕು ವಿಚಾರ ಸಂಬಂಧಿಸಿ ಮಾಜಿ ಶಾಸಕ ಸುನೀಲ್ ಹೆಗಡೆ ಪ್ರತಿಕ್ರಿಯಿಸಿದ್ದಾರೆ.
ಉತ್ತರಕನ್ನಡ(ಜ.21): ಹಳಿಯಾಳದಲ್ಲಿ ಮಾಜಿ ಸಚಿವ ಹಾಗೂ ಶಾಸಕ ಆರ್.ವಿ. ದೇಶಪಾಂಡೆ ಹಾಗೂ ಅವರ ಬಲಗೈ ಬಂಟನಾಗಿದ್ದ ಎಸ್.ಎಲ್. ಘೋಟ್ನೇಕರ್ ನಡುವಿನ ಬಿರುಕು ವಿಚಾರ ಸಂಬಂಧಿಸಿ ಮಾಜಿ ಶಾಸಕ ಸುನೀಲ್ ಹೆಗಡೆ ಪ್ರತಿಕ್ರಿಯಿಸಿದ್ದಾರೆ.
ಹಳಿಯಾಳದಲ್ಲಿ ಶಾಸಕ ಆರ್.ವಿ. ದೇಶಪಾಂಡೆ ಹಾಗೂ ಎಸ್.ಎಲ್. ಘೋಟ್ನೇಕರ್ ಜತೆಯಲ್ಲಿದ್ದಾಗಲೂ ಬಿಜೆಪಿ ಪ್ರಬಲವಾಗಿತ್ತು. ಸೋತಂತಹ ಚುನಾವಣೆಯಲ್ಲೂ ನಾನು ಕೇವಲ ನಾಲ್ಕೈದು ಸಾವಿರ ಮತಗಳಿಂದ ಮಾತ್ರ ಸೋತಿದ್ದೇನೆ. ದೇಶ್‌ಪಾಂಡೆ ಹಾಗೂ ಘೋಟ್ನೇಕರ್ ಇಬ್ಬಾಗದ ಲಾಭ ಪಡೆಯುವಷ್ಟು ಕನಿಷ್ಠ ಮಟ್ಟಕ್ಕೆ ಬಿಜೆಪಿ ಇಳಿದಿಲ್ಲ. ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ಯರು ಗಟ್ಟಿಯಾಗಿ ಪಕ್ಷವನ್ನು ಕಟ್ಟಿದ್ದಾರೆ. ಪಕ್ಷದ ಸಂಘಟನೆ ಹಾಗೂ ಶಕ್ತಿಯ ಮೇಲೆ ಈ ಸಲದ ಚುನಾವಣೆ ನಾವು ಗೆಲ್ತೇವೆ. ದೇಶ್‌ಪಾಂಡೆ ಹಾಗೂ ಘೋಟ್ನೇಕರ್ ಜತೆಗಿದ್ದಾಗಲೂ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಉತ್ತಮ ಸ್ಥಾನ ಪಡೆದಿದ್ವಿ. ದೇಶ್‌ಪಾಂಡೆ, ಘೋಟ್ನೇಕರ್ ವಿರೋಧಿ ಮತಗಳು ನಮ್ಮತ್ತ ವರ್ಗಾವಣೆಯಾಗುತ್ತಿದೆ. ಯಾರೂ ಯಾವ ಪಕ್ಷಕ್ಕೆ ಸೇರಲು ಪಕ್ಷಗಳ ನಾಯಕರು ತಕರಾರು ಮಾಡುವುದಿಲ್ಲ. ಅನಿವಾರ್ಯತೆಯ ಸೇರ್ಪಡೆ ಮಾಡಿಸುವ ಅವಶ್ಯಕತೆ ನಮ್ಮ ಪಕ್ಷದಲ್ಲಿ ಬಿದ್ದಿಲ್ಲ ಅಂತ ಸುನೀಲ್ ಹೆಗಡೆ ತಿಳಿಸಿದ್ದಾರೆ.
undefined
ರಾಮಕೃಷ್ಣ ಹೆಗಡೆ ಮಾರ್ಗದಲ್ಲಿ ಸ್ಪೀಕರ್ ಕಾಗೇರಿ: ಪ್ರಹ್ಲಾದ್ ಜೋಶಿ
ನಮ್ಮ ಪಕ್ಷದ ಸಂಘಟನೆ ಗಟ್ಟಿಯಾಗಿದ್ದು, ಯಾವುದನ್ನೂ ಎದುರಿಸುವ ಶಕ್ತಿ ನಮ್ಮಲ್ಲಿದೆ. ಘೋಟ್ನೇಕರ್ ಅವರಿಗೆ ಮೋದಿ ಹಾಗೂ ಬಿಜೆಪಿ ನಾಯಕರ ಮೇಲೆ ಅಭಿಮಾನ ಇದ್ದಿದಿದ್ರೆ 6 ತಿಂಗಳ ಹಿಂದೆಯೇ ಭಿನ್ನಾಭಿಪ್ರಾಯ ಕಾಣಿಸಿಕೊಂಡಿದ್ದ ಸಂದರ್ಭದಲ್ಲೇ ಬಿಜೆಪಿಗೆ ಬರ್ತಿದ್ರು ಅಂತ ಹೇಳಿದ್ದಾರೆ.
ಘೋಟ್ನೇಕರ್ ವ್ಯಾಪಾರೀ ರಾಜಕಾರಣ ನಡೆಸಿದ್ದರು. ಬಿಜೆಪಿಗೆ ಬಂದು ತಾನು ವಯಕ್ತಿಕವಾಗಿ ಬೆಳೆಯಬೇಕು ಅನ್ನೋ ಅವರ ಯೋಚನೆ ಕಂಡು ಬರುತ್ತೆ.ಇದಕ್ಕೆ ಭಾರತೀಯ ಜನತಾ ಪಕ್ಷದಲ್ಲಿ ಅವಕಾಶವಿಲ್ಲ. ಘೋಟ್ನೇಕರ್‌ಗೆ ಕಾಂಗ್ರೆಸ್‌ನಲ್ಲಿ ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಸೇರಲು ಅವರು ಹಿಂಜರಿಯುತ್ತಾರೆ. ಅವರು ಹಿಂದೆ ನಡೆಸಿದ ದೌರ್ಜನ್ಯ ತಳಮಟ್ಟದ ಕಾರ್ಯಕರ್ತರ ಮನಸ್ಸಿನಲ್ಲೂ ಇದೆ. ಅವರ ಸೇರ್ಪಡೆ ಮಾಡುವ ವಿಚಾರ ಮಂಡಲ ಹಾಗೂ ಜಿಲ್ಲಾಮಟ್ಟದ ಮುಖಂಡರ ಬಳಿ ಇನ್ನೂ ಬಂದಿಲ್ಲ. ಘೋಟ್ನೇಕರ್‌ಗೆ ಇನ್ನೂ ಕಾಂಗ್ರೆಸ್ ಬಗ್ಗೆ ಸಾಫ್ಟ್ ಕಾರ್ನರ್ ಇದೆ. ಬಿಜೆಪಿಯನ್ನು ಮುಗಿಸಲು ಅವರ ಕಾರ್ಯಕರ್ತರನ್ನು ಕಾಂಗ್ರೆಸಿಗೆ ಕರೆದುಕೊಂಡು ಬರ್ತೇನೆ ಎಂದು ಅವರು ಈ ಹಿಂದೆ ಹೇಳಿದ್ರು. ಇಂತಹ ಮನಸ್ಥಿತಿಯುಳ್ಳವರು ಬಿಜೆಪಿಗೆ ಸೇರ್ಪಡೆಯ ನಿರ್ಧಾರ ಮಾಡಿರೋದು ಅವರ ನೈತಿಕತೆಗೆ ಬಿಟ್ಟ ವಿಚಾರ ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ತಿಳಿಸಿದ್ದಾರೆ.