ಆತ್ಮವಿಶ್ವಾಸ ಮೂಡಿಸುವ ಆತ್ಮನಿರ್ಭರ ಭಾರತದ ಸ್ವಾವಲಂಬನೆ ಕಡೆ ಹೆಜ್ಜೆ ಹಾಕುವ ಬಜೆಟ್: ಶಾಸಕ ಸಿ.ಟಿ ರವಿ
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಫೆ.01): ಈ ಬಾರಿಯ ಬಜೆಟ್‌ನಲ್ಲಿ ಅಂತ್ಯೋದಯಕ್ಕೆ ಆದ್ಯತೆ ನೀಡಿ ಕಟ್ಟಕಡೆಯ ಮನುಷ್ಯನ ವರೆಗೂ ತಲುಪುವ ಯೋಜನೆ ಸೇರಿದಂತೆ ಏಳು ವಿಷಯಗಳಿಗೆ ಆಧ್ಯತೆ ಕೊಟ್ಟಿದ್ದು ಇದೊಂದು ದೇಶದ ಹಿತದೃಷ್ಟಿ ಮತ್ತು ದೂರದೃಷ್ಟಿಯ ಬಡವರ ಸ್ನೇಹಿಯಾದ ಬಜೆಟ್ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಚಿಕ್ಕಮಗಳೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 9 ಬಜೆಟ್ ನೋಡಿದಾಗ ದೇಶ ಹಿತವನ್ನೆ ಆಧ್ಯತೆಯಾಗಿಟ್ಟುಕೊಂಡು ಬಡವರಿಗೆ ಬಲಕೊಡುವ ವಿಶ್ವಾಸವಿತ್ತು ಅದೇ ರೀತಿ ಬಜೆಟ್‌ನ್ನು ನೀಡಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದಿಸುತ್ತೇನೆ. ಇದು ಆತ್ಮ ವಿಶ್ವಾಸ ಮೂಡಿಸುವ ಆತ್ಮನಿರ್ಭರ ಭಾರತದ ಸ್ವಾವಲಂಬನೆ ಕಡೆ ಹೆಜ್ಜೆ ಹಾಕುವ ಬಜೆಟ್ ಆಗಿದೆ ಎಂದರು.
ರಾಹುಲ್ ಗಾಂಧಿ ತರದವರು ಇದ್ದಿದ್ದರೆ ದೇವರೆ ಕಾಪಾಡಬೇಕಿತ್ತು.
ASSEMBLY ELECTION: ಚುನಾವಣೆಗೂ ಮುನ್ನವೇ ಗೆಲುವು ಸಾಧಿಸಿದ ಸಿ.ಟಿ. ರವಿ: ಗೆಲುವಿನ ಅಪ್ಪಣೆ ನೀಡಿದ ಚೌಡೇಶ್ವರಿ ದೇವಿ
ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ಕಟ್ಟಕಡೆಯ ಮನುಷ್ಯನನ್ನು ಲಕ್ಷ್ಯದಲ್ಲಿಟ್ಟುಕೊಂಡು ಯೋಜನೆಗಳನ್ನು ನೀಡುತ್ತಾ ಬಂದರು ಈ ಬಜೆಟ್‌ನಲ್ಲಿ ಅದಕ್ಕೆ ಅವಕಾಶ ನೀಡಿದ್ದಾರೆ. ಜಗತ್ತಿನಲ್ಲೆ ಹೆಚ್ಚು ಯುವ ಸಂಪತ್ತಿರುವ ರಾಷ್ಟ್ರ ಭಾರತ, ಶೇ.45 ರಷ್ಟಿರುವ ಯುವಕರನ್ನು ಬಳಸಿಕೊಳ್ಳುವ ಯೋಜನೆ, ಮೂಲ ಸೌಕರ್ಯಕ್ಕೆ ಹೂಡಿಕೆ ಮಾಡಬೇಕೆನ್ನುವುದಕ್ಕೆ ಆಧ್ಯತೆ ನೀಡಲಾಗಿದೆ. ಪರಿಸರ ಸ್ನೇಹಿಯಾಗಿ ಅಭಿವೃದ್ದಿಪಡಿಸಲು ಯೋಜನೆ, ಏಳು ಲಕ್ಷ ರೂ ವರೆಗೂ ಆದಾಯ ತೆರಿಗೆ ರಿಯಾಯಿತಿ. ಭದ್ರಾ ಮೇಲ್ದಂಡೆಗೆ 5 ಸಾವಿರ ಕೋಟಿ ರೂ ನೆರವು ನೀಡಲಾಗಿದ್ದು ಬಜೆಟ್‌ನ್ನು ಸಮಗ್ರವಾಗಿ ಅಧ್ಯಯನ ಮಾಡಿದ ನಂತರ ಕರ್ನಾಟಕಕ್ಕೆ ಯಾವ್ಯಾವುದಕ್ಕೆ ಲಾಭವಾಗಿದೆ ಎಂದು ಹೇಳಬಹುದು ಎಂದರು.
ಪೊಲಿಟೀಷಿಯನ್ ಹಾಗೂ ಸ್ಟೇಟ್ಸ್‌ಮನ್ ನಡುವೆ ದೊಡ್ಡ ಅಂತರ ವಿರುತ್ತದೆ. ರಾಜಕಾರಣಿ ಕೇವಲ ಮುಂದಿನ ಚುನಾವಣೆ ಬಗ್ಗೆ ಮಾತ್ರ ಯೋಚನೆ ಮಾಡ್ತಾನೆ, ಸ್ಟೇಟ್ಸ್‌ಮನ್ ಮುಂದಿನ ನೂರಾರು ವರ್ಷಗಳಕಾಲ ದೇಶ ಹೇಗಿರಬೇಕೆಂದು ಯೋಚಿಸುತ್ತಾನೆ ಹಾಗಾಗಿ ನಮ್ಮ ಪ್ರಧಾನಮಂತ್ರಿ ಸ್ಟೇಟ್ಸ್‌ಮನ್, ಜಗತ್ತು ಹೇಗಿರುತ್ತದೆ ಎಂದು ಯೋಚಿಸುತ್ತ ಭಾರತ ಜಗತ್ತಿನ ಸವಾಲು ಎದುರಿಸಲು ಹೇಗೆ ತಯಾರಾಗಬೇಕೆಂದು ಆಲೋಚಿಸಿ ಬಜೆಟ್ ನೀಡಿದ್ದಾರೆ. ಹಾಗಾಗದಿದ್ದಿದ್ದರೆ ನಾವೂ ಕೂಡ ಪಾಕಿಸ್ತಾನಿಗಳ ರೀತಿ ಭಿಕ್ಷೆ ಎತ್ತುವ ಸ್ಥಿತಿಗೆ ಬರುತ್ತಿದ್ದೆವು, ಆದರೆ ಜಗತ್ತಿನಲ್ಲಿ ಗೌರವ ಸಂಪಾದಿಸುವಂತ ರಾಷ್ಟ್ರವಾಗಿ ಬದಲಾಗಿರೋದಕ್ಕೆ ಕಾರಣವೆ ಓರ್ವ ಸ್ಟೇಟ್ಸ್‌ಮನ್ ಲೀಡರ್‌ಷಿಪ್ ವಹಿಸಿರೋದಕ್ಕೆ ಇಲ್ಲದಿದ್ದರೆ ಕೇಜ್ರಿವಾಲ್ ತರದವರು ಇದಿದ್ದರೆ ನಮ್ಮ ದೇಶವೂ ಸಹ ಶ್ರೀಲಂಕಾ, ಪಾಕಿಸ್ಥಾನದ ಸ್ಥಿತಿ ಇರುತ್ತಿತ್ತು, ರಾಹುಲ್‌ಗಾಂಧಿ ತರದವರು ಇದ್ದಿದ್ದರೆ ದೇವರೆ ಕಾಪಾಡಬೇಕಿತ್ತು ಎಂದು ಶಾಸಕ ಸಿ.ಟಿ.ರವಿ ಟೀಕಿಸಿದರು.
ಹಾಸನದಲ್ಲಿ ಜೆಡಿಎಸ್ ಟಿಕೆಟ್‍ಗಾಗಿ ವಾರ್: ಶೃಂಗೇರಿ ಶಾರದಾಂಬೆ ಮೊರೆ ಹೋದ್ರಾ ರೇವಣ್ಣ ದಂಪತಿ
ನಾನು ರಾಜಕೀಯ ನಿವೃತ್ತಿ : ಸಿ.ಟಿ ರವಿ
ನನ್ನ ಎಂಎಲ್‌ಎ ಅವಧಿಯಲ್ಲಿ ಹಾಗೂ ನಾನು ಎಂಎಲ್‌ಎ ಆಗುವ ಮುನ್ನ 55 ವರ್ಷಗಳ ಕಾಲ ಬೇರೆ ಬೇರೆಯವರು ಶಾಸಕರಾಗಿದ್ದರು ಇಡೀ ಚಿಕ್ಕಮಗಳೂರಿಗೆ ಅವರೆಲ್ಲರೂ ಒಟ್ಟು ಎಷ್ಟು ಬಜೆಟ್ ತಂದಿದ್ದರೊ ಎರಡೂ ದಾಖಲೆಗಳನ್ನು ಒಂದು ತಕಡಿಯಲ್ಲಿ ತೂಗಿ ನನ್ನದು ಒಂದು ರೂ ಕಡಿಮೆಯಾದರೂ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಇಲ್ಲದಿದ್ದರೆ ಅವರೆಲ್ಲರೂ ಸೇರಿ ಸಿ.ಟಿ.ರವಿ ಯವರನ್ನು ಅವಿರೋಧವಾಗಿ ಆಯ್ಕೆ ಮಾಡುತ್ತೇನೆಂದು ಯಾರಾದರೂ ಚಾಲೆಂಜ್ ಸ್ವೀಕರಿಸುತ್ತಾರಾ? ಎಂದು ಶಾಸಕ ಸಿ.ಟಿ.ರವಿ ಬಹಿರಂಗ ಸವಾಲು ಹಾಕಿದರು.55 ವರ್ಷದಲ್ಲಿ ಚಿಕ್ಕಮಗಳೂರಿಗೆ ಎಷ್ಟು ಅನುದಾನ ತಂದಿದ್ದಾರೊ ನನ್ನ 19 ವರ್ಷದ ಅವಧಿಯಲ್ಲಿ ಅದಕ್ಕಿಂತ ಒಂದು ರೂ ವಾದರೂ ಹೆಚ್ಚು ತಂದಿದ್ದೇನೆ ದಾಖಲೆಗಳನ್ನು ತೆಗೆಯಲಿ ಸತ್ಯವಾಗಿದ್ದರೆ, ನಾನು ಕ್ಷೇತ್ರದ ಅಭಿವೃದ್ದಿ ಮಾಡಿರೋದು ನಿಜವಾಗಿದ್ದರೆ ಸಿ.ಟಿ.ರವಿಯವರನ್ನು ಅವಿರೋಧವಾಗಿ ಆಯ್ಕೆ ಮಾಡಲು ತಯಾರಿದ್ದಾರಾ? ಇಲ್ಲ ಸಲ್ಲದ ಸುಳ್ಳು ಆರೋಪ ಮಾಡುವ ವಿರೋಧ ಪಕ್ಷದವರು ಕ್ಷೇತ್ರದ ದಶದಿಕ್ಕುಗಳಿಗೂ ಕರೆದೊಯ್ಯಲಿ ಎಲ್ಲಿ ಅಭಿವೃದ್ದಿಯಾಗಿಲ್ಲ ಎಂದು ತೋರಿಸಲಿ ಎಂದು ಪ್ರಶ್ನಿಸಿದರು.
ಸಂಡೆ ಪೊಲಿಟೀಷಿಯನ್ ಮತ್ತೆ ಕೆಲವರು ಎಲ್ ಕ್ಷನ್ ಪೊಲಿಟೀಷಿಯನ್
ಕೆಲವರು ಸಂಡೆ ಪೊಲಿಟೀಷಿಯನ್ ಇರುತ್ತಾರೆ, ಮತ್ತೆ ಕೆಲವರು ಎಲೆಕ್ಷನ್ ಪೊಲಿಟೀಷಿಯನ್ ಇರ್‍ತಾರೆ ಅವರುಗಳಿಗೆ ಎಲೆಕ್ಷನ್ ಬಂದಾಗ ಜಾತಿ ನೆನಪಾಗುತ್ತದೆ, ಜನ ನೆನಪಗುತ್ತಾರೆ, ಕೋವಿಡ್ ಸಂಕಷ್ಟದಲ್ಲಿದ್ದಾಗ, ಜನ ನೀರಿಗೆ ಹಾಹಾಕಾರ ಪಡಬೇಕಾದರೆ ನಾಪತ್ತೆಯಾಗಿದ್ದವರು ಎಲೆಕ್ಷನ್ ಬಂದಾಗ ಪ್ರತ್ಯಕ್ಷವಾಗುತ್ತಾರೆ ಇನ್ನೊಬ್ಬರ ಮೇಲೆ ಆರೋಪ ಮಾಡುತ್ತಾರೆ ಆದರೆ ಮೆಡಿಕಲ್ ಕಾಲೇಜು ಯಾರು ತಂದಿದ್ದು, ಚಿಕ್ಕಮಗಳೂರು ಕಡೂರು ಹೈವೆ ಸೇರಿ ದಶ ದಿಕ್ಕುಗಳಲ್ಲೂ ಅಭಿವೃದ್ದಿ ಯಾರು ಮಾಡಿದ್ದು ನಾನು ಮಾಡದಿದ್ದರೆ ಅದೇನು ಮೇಲಿಂದ ಉದುರಿತಾ ? ಪುರಾತನ 11 ದೇವಾಲಯಗಳ ಪುನರೋತ್ಥಾನಕ್ಕೆ ಮುಂದಾಗಿದ್ದೇವೆ ಕಣ್ಣು ಕಾಣದವರಿಗೆ ಏನು ಹೇಳೋದು ಎಂದು ಪ್ರಶ್ನಿಸಿದರು.ನನಗೆ ನನ್ನ ಕರ್ತವ್ಯದ ಮೇಲೆ ನಂಬಿಕೆ ದೇವರ ಮೇಲೆ ಬಾರಹಾಕುತ್ತೇನೆ. ನಾನು ನನ್ನ ಕರ್ತವ್ಯವನ್ನಷ್ಟೆ ಮಾಡುತ್ತೇನೆ. ವಿದ್ಯಾರ್ಥಿ ಜೀವನದಿಂದಲೂ ನಾನು ಇದೇ ಊರಿನಲ್ಲಿ ಹುಟ್ಟಿ ಬೆಳೆದವನು, ಎಲ್ಲೂ ಎಂಎಲ್‌ಎ ಆಗಬೇಕೆಂದು ಕೆಲಸ ಮಾಡಲಿಲ್ಲ, ಕೆಲಸ ಮಾಡುತ್ತಾ ಎಂಎಲ್‌ಎ ಆಗಿದ್ದೇನೆ. ಮಂತ್ರಿ ಯಾಗಬೇಕೆಂದು ಬಯಸಿರಲಿಲ್ಲಾ ಪಕ್ಷ ಮಂತ್ರಿ ಮಾಡಿತು, ನಿನ್ನ ಆಯ್ಕೆ ಯಾವುದೆಂದು ಕೇಳಿದಾಗ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿ ಹೊತ್ತು ಪಕ್ಷದ ಕೆಲಸದೊಂದಿಗೆ ಅಭಿವೃದ್ದಿಗೂ ಆದ್ಯತೆಕೊಟ್ಟು ಕೆಲಸ ಮಾಡುತ್ತಿದ್ದೇನೆ. ದಾಖಲೆ ಪ್ರಮಾಣದ ಅಭಿವೃದ್ದಿ ಕೆಲಸ ತಂದಿದ್ದೇವೆ ಇಷ್ಟಾದ ಮೇಲೂ ಕೂಡ ವಿರೋಧಿಗಳು ಕಣ್ಣಿದ್ದು ಕುರುಡರಂತೆ ಏನು ಅಭಿವೃದ್ದಿಯಾಗಿಲ್ಲ ಎನ್ನುತ್ತಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದರು.