ನನ್ನನ್ನು ಟೀಕಿಸಿದ್ರೆ ಜನ ಕಾಂಗ್ರೆಸ್‌ಗೆ ಓಟ್‌ ಹಾಕೋದಿಲ್ಲ: ಸಿ.ಟಿ.ರವಿ

By Kannadaprabha News  |  First Published Jan 23, 2023, 1:50 PM IST

ಯಾವ ಮುಖ ಇಟ್ಕೊಂಡು ಕಾಂಗ್ರೆಸ್‌ ಮತ ಕೇಳುತ್ತೆ, ನನ್ನನ್ನುಟೀಕಿಸುವುದರಿಂದ ಕಾಂಗ್ರೆಸ್‌ಗೆ ಜನ ಓಟು ಹಾಕುವುದಿಲ್ಲ. ಕಾಂಗ್ರೆಸ್‌ ಚಿಕ್ಕಮಗಳೂರಿಗೆ ಏನು ಕೊಡುಗೆ ನೀಡಿದೆ ಎಂದು ಶಾಸಕ ಸಿ.ಟಿ.ರವಿ ಪ್ರಶ್ನಿಸಿದ್ದಾರೆ. 


ಚಿಕ್ಕಮಗಳೂರು (ಜ.23): ಯಾವ ಮುಖ ಇಟ್ಕೊಂಡು ಕಾಂಗ್ರೆಸ್‌ ಮತ ಕೇಳುತ್ತೆ, ನನ್ನನ್ನುಟೀಕಿಸುವುದರಿಂದ ಕಾಂಗ್ರೆಸ್‌ಗೆ ಜನ ಓಟು ಹಾಕುವುದಿಲ್ಲ. ಕಾಂಗ್ರೆಸ್‌ ಚಿಕ್ಕಮಗಳೂರಿಗೆ ಏನು ಕೊಡುಗೆ ನೀಡಿದೆ ಎಂದು ಶಾಸಕ ಸಿ.ಟಿ.ರವಿ ಪ್ರಶ್ನಿಸಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದತ್ತಪೀಠಕ್ಕೆ ಅರ್ಚಕರನ್ನು ನೇಮಿಸಲು, ಮೆಡಿಕಲ್‌ ಕಾಲೇಜು ನಿರ್ಮಿಸಲು, ಕೆರೆಗಳಿಗೆ ನೀರು ತುಂಬಿಸಲು ಸಿದ್ದರಾಮಯ್ಯ ವಿರೋಧ ಮಾಡಿದ್ದರು, ಬಿಜೆಪಿ ಅವಧಿಯಲ್ಲಿ ಈ ಎಲ್ಲಾ ಕೆಲಸ ಮಾಡಲಾಗಿದೆ. ಚಿಕ್ಕಮಗಳೂರಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದ ಕಾಂಗ್ರೆಸ್‌ನವರು ಯಾವ ಮುಖ ಇಟ್ಕೊಂಡು ಮತ ಕೇಳುತ್ತಾರೆ ಎಂದು ಟೀಕಿಸಿದರು.

ನನ್ನನ್ನು ಬೈಯುವ ಮೂಲಕ ಚಿಕ್ಕಮಗಳೂರು ಜನರನ್ನು ಕೆಣಕಿದ್ದೀರಾ, ರೊಚ್ಚಿಗೆಬ್ಬಿಸಿದ್ದೀರಾ, ಬಿಜೆಪಿ ಎಲ್ಲಿಯೂ ಜಾತಿ ರಾಜಕಾರಣ ಮಾಡಿಲ್ಲ. ಮುಸ್ಲೀಮರನ್ನು ಅಭಿವೃದ್ಧಿಯಲ್ಲಿ ಜೊತೆ ಗೂಡಿಸಿಕೊಳ್ಳಲಾಗಿದೆ ಟೀಕೆ ಮಾಡುವುದು ಸಾಧನೆ ಅಲ್ಲ .ಆಲೂಗಡ್ಡೆ ಬಿತ್ತಿ ಚಿನ್ನ ಬೆಳೆದು ನೂರಾರು ಕೋಟಿ ರು. ಸಂಪಾದನೆ ಮಾಡಿರುವ ಕಾಂಗ್ರೆಸ್‌ ನಾಯಕರು ರೈತರಿಗೂ ಇದು ಹೇಗೆಂದು ಹೇಳಲಿ ಎಂದು ಡಿಕೆಶಿ ಹೆಸರು ಹೇಳಿದೆ ಶಾಸಕ ಸಿ.ಟಿ. ರವಿ ಆಗ್ರಹಿಸಿದರು. ರೈತರು ಆಲೂಗಡೆ ಹಾಕಿದರೆ ಆಲೂಗಡ್ಡೆ ಬೆಳೆಯತ್ತಾರೆ. ಆದರೆ, ಇವರು ಹಾಕಿದ ಆಲೂಗಡ್ಡೆ ಬೀಜಗಳು ಚಿನ್ನ ಕೊಡುತ್ತವೆ. ನಾನು ರೈತ ಕುಟುಂಬದಿಂದ ಬಂದಿದ್ದೇನೆ. ಇದು ಹೇಗೆಂಬುದು ಹೇಳಬೇಕೆಂದು ಸೂಕ್ಷ್ಮವಾಗಿ ಕೇಳುತ್ತೇನೆ ಎಂದರು.

Tap to resize

Latest Videos

ಗೃಹ ಇಲಾಖೆ ಕಡ್ಲೆ ಮಿಠಾಯಿ ತಿನ್ನುತ್ತಿತ್ತಾ: ಆರಗ ಜ್ಞಾನೇಂದ್ರ ವಿರುದ್ಧ ಕಾಂಗ್ರೆಸ್‌ ಆಕ್ರೋಶ

ಸುಳ್ಳು ಸಿದ್ದರಾಮಯ್ಯ: ಕಾಂಗ್ರೆಸ್‌ ಅಧಿಕಾರ ಇರುವ ಕಡೆ ಉಚಿತ ವಿದ್ಯುತ್‌ ನೀಡಿ ತೋರಿಸಲಿ ಎಂದ ಸಿ.ಟಿ. ರವಿ, ಸುಳ್ಳು ಸಿದ್ದರಾಮಯ್ಯ, ಸುಳ್ಳು ಕಾಂಗ್ರೆಸ್‌ ಎಂದು ಟೀಕಿಸಿದರು. ಉಚಿತ ವಿದ್ಯುತ್‌, ಗೃಣಿಯರಿಗೆ ಆರ್ಥಿಕ ಸಹಾಯ ಮಾಡುವುದು ಕಾಂಗ್ರೆಸ್‌ ನೀತಿಯೆ ಆಗಿದ್ದರೆ ಕಾಂಗ್ರೆಸ್‌ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಯಾಕೆ ಅನುಷ್ಠಾನ ಮಾಡುತ್ತಿಲ್ಲವೆಂದು ಸವಾಲೆಸೆದರು. ನನ್ನ ಬಗ್ಗೆ ಸಲ್ಲದ ಆರೋಪ ಮಾಡುತ್ತಿರುವ ಅವರನ್ನು ಈಗ ಸುಳ್ಳು ಸಿದ್ದರಾಮಯ್ಯ ಎಂದು ಕರೆಯ ಬೇಕಾಗುತ್ತದೆ. ಕುಂಕುಮವನ್ನು ದ್ವೇಷಿಸುವ, ಗೋಹತ್ಯೆ ಸಮರ್ಥಿಸುವ, ಎಸ್‌ಡಿಪಿಐ ಪ್ರೀತಿಸುವ ಸಿದ್ದರಾಮಯ್ಯ ಅವರಿಂದ ಜನ ಏನೂ ನಿರೀಕ್ಷೆ ಮಾಡಲಾಗುವುದಿಲ್ಲ ಎಂದ ಸಿ.ಟಿ. ರವಿ, ಚಿಕ್ಕವನಿಂದ ನನ್ನನ್ನು ಚಿಕ್ಕಮಗಳೂರು ಜನ ನೋಡಿದ್ದಾರೆ. ಅಫೀಮು ಪದಕ್ಕೆ ಪ್ರಜ್ಞಾವಂತರಾದ ಚಿಕ್ಕಮಗಳೂರು ಜನ ಚುನಾವಣೆಯಲ್ಲಿ ಉತ್ತರ ಕೊಡುತ್ತಾರೆ ಎಂದು ಹೇಳಿದರು.

ಪ್ರಜೆಗಳ ಧ್ವನಿ ನೀವು ಕೇಳಬೇಕು: ಪ್ರಜಾಧ್ವನಿ ಕೇಳಬೇಕು, ಆದರೆ, ಕಾಂಗ್ರೆಸ್‌ನವರು ಅವರ ಧ್ವನಿಗಳನ್ನು ಪ್ರಜೆಗಳಿಗೆ ಕೇಳಿಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು. ಪ್ರಜೆಗಳು ಜೋರಾಗಿ ಹೇಳುತ್ತಿದ್ದಾರೆ. ಇವರ ಸಂದರ್ಭದಲ್ಲಿ ಪಿಎಫ್‌ಐ, ಎಸ್‌ಟಿಪಿಐ ಕಾರ್ಯಕರ್ತರ ಬಿಡುಗಡೆ, ಅಮಾಯಕರ ಹತ್ಯೆ, ರೀಡೂ ಹೆಸರಿನಲ್ಲಿ ಕೋಟ್ಯಂತರ ರುಪಾಯಿ ಹಗರಣ, ಇವುಗಳ ಬಗ್ಗೆ ಪ್ರಜೆಗಳು ಓಪನ್‌ ಆಗಿ ಹೇಳ್ತಾ ಇದ್ದಾರೆ ಎಂದರು. ಪ್ರಜಾ ಧ್ವನಿ ಯಾತ್ರೆಯಲ್ಲಿ ಜನರನ್ನು ಸೇರಿಸುತ್ತಿದ್ದಾರೆ. ಆದರೆ, ಮೋದಿಗೆ ಜನ ಸೇರುತ್ತಿದ್ದಾರೆ. ಮೋದಿ ಬರ್ತಾರೆ ಅಂದರೆ ಲಕ್ಷಾಂತರ ಜನ ಸೇರುತ್ತಾರೆ. ಇವರೆಲ್ಲಾ ಸೇರುತ್ತಿರುವುದು ಪ್ರೀತಿಯಿಂದ ಎಂದ ಅವರು, ಪ್ರಜೆಗಳ ಬಲ ಮೋದಿಯವರಿಗೆ ಇದೆ. 

ಒಂದು ಪೈಸೆ ಲಂಚ ಪಡೆದಿದ್ದರೆ ರಾಜಕೀಯ ನಿವೃತ್ತಿ: ಸಿದ್ದು ಸವಾಲು

ನಮ್ಮ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸುವ ಸ್ಥಿತಿಯಲ್ಲಿ ಅವರಿಲ್ಲ, ಪ್ರಜೆಗಳೇ ಮಾಲೀಕರು ಅವರ ಧ್ವನಿ ಚುನಾವಣೆಯಲ್ಲಿ ಕೇಳುತ್ತೆ ಕಾಯಿರಿ ಎಂದು ಕಾಂಗ್ರೆಸ್‌ ಪಕ್ಷಕ್ಕೆ ಟಾಂಗ್‌ ಕೊಟ್ಟರು. ಈ ಬಾರಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ 150 ಸ್ಥಾನಗಳಲ್ಲಿ ಗೆಲ್ಲುತ್ತೇವೆಂದು ಕಾಂಗ್ರೆಸ್‌ ಹೇಳುತ್ತಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಸಿ.ಟಿ. ರವಿ, ಇದೇ ಮಾತು ಉತ್ತರ ಪ್ರದೇಶದಲ್ಲಿ ಹೇಳಿದ್ದರು. 399 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿ 387 ರಲ್ಲಿ ಠೇವಣಿ ಕಳೆದುಕೊಂಡ್ರು, ಗೋವಾದಲ್ಲಿ ಗೆದ್ದವರು ಬಿಜೆಪಿ ಸೇರಿದರು, ಗುಜರಾಜ್‌ನಲ್ಲೂ ಇದೆ ಪರಿಸ್ಥಿತಿ. ಅವರು ಸೌಂಡ್‌ ಮಾಡ್ತಾರೆ, ಗ್ರೌಂಡ್‌ನಲ್ಲಿ ಬಿಜೆಪಿ ಇದೆ. ಫಿಲ್ಡ್‌ನಲ್ಲಿ ಗೆಲ್ಲೋದು ಗ್ರೌಂಡ್‌, ಸೌಂಡ್‌ ಅಲ್ಲ ಎಂದರು.

click me!