ಅರ್ಕಾವತಿ ಪ್ರಕರಣ: ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಸಿ.ಟಿ. ರವಿ

Published : Feb 24, 2023, 09:00 PM IST
ಅರ್ಕಾವತಿ ಪ್ರಕರಣ: ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಸಿ.ಟಿ. ರವಿ

ಸಾರಾಂಶ

ನ್ಯಾ.ಕೆಂಪಣ್ಣ ಆಯೋಗ 8 ಸಾವಿರ ಕೋಟಿ ಮೊತ್ತದ ಭೂಮಿ ಅಕ್ರಮ ಆಗಿದೆ ಎಂದು ವರದಿ ನೀಡಿದೆ. ಕಾಂಗ್ರೆಸ್ ಯಾಕೆ ಕ್ರಮ ಕೈಗೊಂಡಿಲ್ಲ?. ಸಿದ್ದರಾಮಯ್ಯ ನಿಜವಾದ ಖಜಾನೆ ಕಾವಲುಗಾರರಾಗಿದ್ರೆ ಯಾಕೆ ಕ್ರಮ ತೆಗೆದುಕೊಂಡಿಲ್ಲ?: ಸಿ.ಟಿ. ರವಿ 

ನವದೆಹಲಿ(ಫೆ.24):  ಖಜಾನೆ ರಕ್ಷಕನಂತೆ ಮಾತನಾಡುವ ಸಿದ್ದರಾಮಯ್ಯ ಅವರ ಮುಂದೆಯೇ ಅರ್ಕಾವತಿ ಪ್ರಕರಣದ ವಿಚಾರ ಇತ್ತು ಯಾಕೆ ಕ್ರಮ ಕೈಗೊಂಡಿಲ್ಲ?, ನ್ಯಾ.ಕೆಂಪಣ್ಣ ಆಯೋಗ 8 ಸಾವಿರ ಕೋಟಿ ಮೊತ್ತದ ಭೂಮಿ ಅಕ್ರಮ ಆಗಿದೆ ಎಂದು ವರದಿ ನೀಡಿದೆ. ಕಾಂಗ್ರೆಸ್ ಯಾಕೆ ಕ್ರಮ ಕೈಗೊಂಡಿಲ್ಲ?. ಸಿದ್ದರಾಮಯ್ಯ ನಿಜವಾದ ಖಜಾನೆ ಕಾವಲುಗಾರರಾಗಿದ್ರೆ ಯಾಕೆ ಕ್ರಮ ತೆಗೆದುಕೊಂಡಿಲ್ಲ? ಕ್ರಮಕೈಗೊಳ್ಳದ ಕಾರಣ ಸಂಶಯದ ಬೆಟ್ಟು ಕಾಂಗ್ರೆಸ್ ಕಡೆ ಹೋಗುತ್ತದೆ ಅಂತ ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ  ಪ್ರಶ್ನೆ ಮಾಡಿದ್ದಾರೆ. 

ಅರ್ಕಾವತಿ ಪ್ರಕರಣವನ್ನ ಬಿಜೆಪಿ ಸರ್ಕಾರ ತನಿಖೆ ಮಾಡಿಲ್ಲ ಕಾಂಗ್ರೆಸ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಶುಕ್ರವಾರ) ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 4 ವರ್ಷ ಕ್ರಮ ಕೈಗೊಳ್ಳದೇ ಇರುವುದು ನಮ್ಮದು ತಪ್ಪು ಎಂದ್ರೆ ನಾವು ಒಪ್ಪಿಕೊಳ್ತೆವೆ, ಆದ್ರೆ ಕ್ಯಾಬಿನೆಟ್ ಮುಂದೆ ಬಂದ ವರದಿಯ ವಿರುದ್ಧ ಸಿದ್ದರಾಮಯ್ಯ ಯಾಕೆ ಕ್ರಮ ಕೈಗೊಂಡಿಲ್ಲ ಅಂತ ಕಿಡಿ ಕಾರಿದ್ದಾರೆ. 

ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಮುಂದಾದ ಸಿ.ಟಿ.ರವಿ ಆಪ್ತ ಹೆಚ್.ಡಿ.ತಮ್ಮಯ್ಯ

ಅದು ಯಾಕೆ ನಮ್ಮ ಸರ್ಕಾರ ಹೊರಗೆ ತೆಗೆದಿಲ್ಲ ಎನ್ನುವುದು ನನಗೂ ಗೊತ್ತಿಲ್ಲದ ಸಂಗತಿ. ಅಧಿವೇಶನದ ಕೊನೆಯ ದಿನವಾದ್ರೂ ಸಿಎಂ ಬಸವರಾಜ ಬೊಮ್ಮಾಯಿ ಅವರು ಕ್ರಮ ಕೈಗೊಳ್ಳಯವುದಾಗಿ ಹೇಳಿದ್ದಾರೆ ಇದು ಸ್ವಾಗರ್ತಹ ಕ್ರಮ ಅಂತ ಸಿ.ಟಿ. ರವಿ ಹೇಳಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಾಂಗ್ರೆಸ್ ಒಳಜಗಳಕ್ಕೆ ಪ್ರತಿಪಕ್ಷ ಕಿಡಿ.. ನಾಯಕತ್ವವಿಲ್ಲದೆ ರಾಜ್ಯದ ಅಭಿವೃದ್ಧಿ ಅಸಾಧ್ಯ: ಆರ್.ಅಶೋಕ್‌
ಭಗವದ್ಗೀತೆ ಬೋಧನೆ ಪ್ರಸ್ತಾಪ ಹಿಂದೆ ಎಚ್ಜಿಕೆ ಅಜೆಂಡಾ : ಮಧು ಬಂಗಾರಪ್ಪ