'ನಿಮ್ಮ ಸೋನಿಯಾಜೀ, ರಾಹುಲ್​ಜೀ ಎಲ್ಲಿ ಹೋಗಿದ್ರು? ಶ್ರೀಗಳ ದರ್ಶನಕ್ಕೆ ಬಂದ್ರಾ?'

Published : Jan 23, 2019, 03:48 PM ISTUpdated : Jan 23, 2019, 04:02 PM IST
'ನಿಮ್ಮ ಸೋನಿಯಾಜೀ, ರಾಹುಲ್​ಜೀ ಎಲ್ಲಿ ಹೋಗಿದ್ರು? ಶ್ರೀಗಳ ದರ್ಶನಕ್ಕೆ ಬಂದ್ರಾ?'

ಸಾರಾಂಶ

ಸಿದ್ಧಗಂಗಾ ಶ್ರೀಗಳ ಅಂತಿಮ ದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಂದಿರಲ್ಲಿಲ್ಲ. ಇದು ಇದೀಗ ರಾಜ್ಯ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ. 

ಬೆಂಗಳೂರು, (ಜ23):  ಪ್ರಧಾನಿ ನರೇಂದ್ರ ಮೋದಿಗೆ ಸೆಲೆಬ್ರಿಟಿಗಳ ಮದುವೆಗೆ ಹೋಗಲು ಮಾತ್ರ ಸಮಯವಿದೆ ಎಂದು ಡಿಸಿಎಂ ಜಿ. ಪರಮೇಶ್ವರ್​​ ನೀಡಿರುವ ಹೇಳಿಕೆಗೆ ಸಂಸದ ಪ್ರತಾಪ್​ ಸಿಂಗ್​ ತಿರುಗೇಟು ನೀಡಿದ್ದಾರೆ.

ಶ್ರೀ ದರ್ಶನಕ್ಕೆ ಪ್ರಧಾನಿ ಮೋದಿ ಬರಲ್ಲ, ಕಾರಣಕೊಟ್ಟ ಯಡಿಯೂರಪ್ಪ

 ನಿಮ್ಮ ಸೋನಿಯಾಜೀ, ರಾಹುಲ್​ಜೀ ಎಲ್ಲಿ ಹೋಗಿದ್ದರು? ಅವರು ಬಂದ್ರಾ? ಇದಕ್ಕೆ ದಯವಿಟ್ಟು ಉತ್ತರ ಕೊಡ್ತೀರಾ? ಎಂದು ಪ್ರತಾಪ್​ ಸಿಂಹ ಟ್ವಿಟರ್​ನಲ್ಲಿ ಪ್ರಶ್ನಿಸಿದ್ದಾರೆ.

ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಗಳ ದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಜರಾಗದ ಹಿನ್ನೆಲೆ ಪ್ರಧಾನಿ ವಿರುದ್ಧ ಡಿಸಿಎಂ ಜಿ.ಪರಮೇಶ್ವರ್​​ ವಾಗ್ದಾಳಿ ನಡೆಸಿ ಟ್ವೀಟ್​​ ಮಾಡಿದ್ದರು. 

ಪ್ರಧಾನಿ ಮೋದಿಗೆ ಸೆಲೆಬ್ರಿಟಿಗಳ ಮದುವೆ ಸಮಾರಂಭ, ಸಿನಿಮಾ ನಟರನ್ನ ಭೇಟಿಯಾಗಲು ಕಾಲಾವಕಾಶ ಇದೆ. ಆದ್ರೆ ನಮ್ಮ ನಡೆದಾಡುವ ದೇವರ ದರ್ಶನಕ್ಕೆ ಬರಲು ಅವರ ಬಳಿ ಸಮಯವಿಲ್ಲ ಎಂದು ಕಿಡಿಕಾರಿದ್ದರು.

ಕಾಶಿಯಲ್ಲಿ ಶ್ರೀಗಳ ನೆನೆದ ಪ್ರಧಾನಿ ನರೇಂದ್ರ ಮೋದಿ

 ಶ್ರೀಗಳಿಗೆ ಭಾರತ ರತ್ನ ನೀಡಬೇಕೆಂದು ಸತತ ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಕೋಟ್ಲರ್​​ ಪ್ರಶಸ್ತಿಗೆ ನೀವು ನಿಜಕ್ಕೂ ಅರ್ಹರು ಎಂದು ಪರೋಕ್ಷವಾಗಿ ಕುಟುಕಿದ್ದರು. 

ಇದಕ್ಕೆ ಪ್ರತಿಕ್ರಿಯಿಸಿರೋ ಪ್ರತಾಪ್ ಸಿಂಹ ಸೋನಿಯಾ ಗಾಂಧಿ ಹಾಗೂ ರಾಹುಲ್​ ಗಾಂಧಿ ಕೂಡ ಶ್ರೀಗಳ ದರ್ಶನಕ್ಕೆ ಬರಲಿಲ್ಲವಲ್ಲ, ಇದಕ್ಕೆ ಉತ್ತರಿಸಿ ಎಂದು ಕೌಂಟರ್ ಕೊಟ್ಟಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
ದ್ವೇಷ ಭಾಷಣ ತಡೆಗೆ ಕಾನೂನು ಯತ್ನ: ಕಾಂಗ್ರೆಸ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ