ಗಣೇಶ್‌ ಅಮಾನತು ನಂತರ ರಾಜ್ಯ ರಾಜಕಾರಣಲ್ಲಿ ನಂಬಲಾಗದ ಬೆಳವಣಿಗೆ!

By Web DeskFirst Published Jan 21, 2019, 7:25 PM IST
Highlights

ಕಾಂಗ್ರೆಸ್ ಪಕ್ಷದಿಂದ ಕಂಪ್ಲಿ ಶಾಸಕ ಗಣೇಶ್ ಅವರನ್ನು ಅಮಾನತು ಮಾಡಲಾಗಿದೆ. ಈ ಬೆಳವಣಿಗೆ ರಾಜ್ಯ ರಾಜಕಾರಣದಲ್ಲಿ ಯಾವೆಲ್ಲ ಬದಲವಾವಣೆಗೆ ಕಾರಣ ಆಗಬಹುದು.

ಬೆಂಗಳೂರು[ಜ. 21] ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿದ್ದ ಗಣೇಶ್ ಅವರನ್ನು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿದೆ. ಆದರೆ ಈ ಬೆಳವಣಿಗೆ ಗೊತ್ತಿಲ್ಲದ ರೀತಿಯಲ್ಲಿ ಬೇರೆಯವರಿಗೆ ಲಾಭ ತಂದುಕೊಟ್ಟರೂ ಅಚ್ಚರಿ ಇಲ್ಲ.

ಬಳ್ಳಾರಿ ಶಾಸಕರ ನಡುವೆ ನಡೆದ ಗಲಾಟೆಯಲ್ಲಿ ಪ್ರಮುಖವಾಗಿ ಇದ್ದವರು ಮೂರು ಜನ. ಹಲ್ಲೆಗೊಳಗಾದ ಆನಂದ್‌ ಸಿಂಗ್, ಹಲ್ಲೆ ಮಾಡಿದ ಗಣೇಶ್ ಮತ್ತು  ಇನ್ನೊಬ್ಬ ಶಾಸಕ ಭೀಮಾ ನಾಯಕ್.

ಏಟು ತಿಂದ ಆನಂದ್‌ ಸಿಂಗ್‌ ಹೇಗಿದ್ದಾರೆ? ಫೋಟೋ ಹಿಂದಿನ ಸತ್ಯ!

ಕಾಂಗ್ರೆಸ್ ಅಮಾನತು ಮಾಡಿದ್ದರೂ ಶಾಸಕ ಗಣೇಶ್ ಶಾಸಕ ಸ್ಥಾನಕ್ಕೆ ಯಾವುದೆ ಕುತ್ತು ಬರುವುದಿಲ್ಲ. ಅವರ ಶಾಸಕ ಸ್ಥಾನದ ಹಕ್ಕು ಹಾಗೇ ಮುಂದುವರಿಯಲಿದೆ. ಒಂದು ವೇಳೆ ವಿಧಾನಸಭೆ ಒಳಗೆ ಓಟ್ ಮಾಡಬೇಕಾದ ಸಂದರ್ಭ ಬಂದಾಗ ಗಣೇಶ್ ಮತ ಬಹಳ ಪ್ರಮುಖವಾಗುತ್ತದೆ.

ರೆಸಾರ್ಟ್ ಪಾಲಿಟಿಕ್ಸ್ ಕಂಪ್ಲೀಟ್ ಡಿಟೇಲ್ಸ್

ಒಂದರ್ಥದಲ್ಲಿ ಗಣೇಶ್ ಅವರನ್ನು ಅಮಾನತು ಮಾಡಿ ಶಿಸ್ತಿನ ಕ್ರಮ ಜರುಗಿಸಿದ್ದೇವೆ ಎಂಬ ಸಂದೇಶವನ್ನು ಕಾಂಗ್ರೆಸ ರವಾನಿಸಿದ್ದರೂ ಇದು ಕಾಂಗ್ರೆಸ್‌ಗೆ ಏಟು ನೀಡಲಿದೆ. ಈಗಾಗಲೇ ಇಬ್ಬರು ಪಕ್ಷೇತರರು ದೋಸ್ತಿಗೆ ನೀಡಿದ್ದ ಬೆಂಬಲ ಹಿಂದಕ್ಕೆ ಪಡೆದಿದ್ದಾರೆ. ನಾಲ್ವರು ಶಾಸಕರು ಶಾಸಕಾಂಗ ಸಭೆಗೆ ಹಾಜರಾಗಿರಲಿಲ್ಲ. ಈ ನಡುವೆ ಗಣೇಶ್ ಅವರನ್ನು ಕಾಂಗ್ರೆಸ್‌ ಅಮಾನತು ಮಾಡಿದೆ.

click me!