ಪ್ರವೀಣ್ ಹತ್ಯೆಯಿಂದ ಬಿಜೆಪಿ ಯುವಮೋರ್ಚಾಕಾರ್ಯಕರ್ತರು ರಾಜೀನಾಮೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದ ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದರು ರಾಜೀನಾಮೆ ಕೊಟ್ಟ ತಕ್ಷಣ ಪಕ್ಷವೇನು ಮುಳುಗಿ ಹೋಗಲ್ಲ ಎಂದಿದ್ದರು.
ದಾವಣಗೆರೆ (ಜು.31): ಪ್ರವೀಣ್ ಹತ್ಯೆಯಿಂದ ಬಿಜೆಪಿ ಯುವಮೋರ್ಚಾಕಾರ್ಯಕರ್ತರು ರಾಜೀನಾಮೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದ ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದರು ರಾಜೀನಾಮೆ ಕೊಟ್ಟ ತಕ್ಷಣ ಪಕ್ಷವೇನು ಮುಳುಗಿ ಹೋಗಲ್ಲ, ಇದು 11 ಕೋಟಿ ಕಾರ್ಯಕರ್ತರನ್ನ ಹೊಂದಿರುವ ಪಕ್ಷ, ಅವರ್ಯಾರು ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ ಟಿವಿಯಲ್ಲಿ ಬರುವ ಉದ್ದೇಶಕ್ಕಾಗಿ ಆ ರೀತಿ ಮಾಡ್ತಾರೆ ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ಯುವಮೋರ್ಚಾ ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಬಿಜೆಪಿ ಕಾರ್ಯಕರ್ತರು, ಯುವಮೋರ್ಚಾ ಕಾರ್ಯಕರ್ತರ ಗ್ರೂಪ್‌ಗಳಲ್ಲಿ ಈ ಬಗ್ಗೆ ಪರವಿರೋಧದ ಬಗ್ಗೆ ಚರ್ಚೆ ನಡೆಸಿದ್ದರು. ಈ ಬಗ್ಗೆ ಎಚ್ಚೆತ್ತುಕೊಂಡ ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಪಕ್ಷದ ಕಾರ್ಯಕರ್ತರೇ ನಮ್ಮ ಆಸ್ತಿ, ನಾನು ಗೆಲ್ಲುವುದಕ್ಕು ಅವರೇ ಕಾರಣ: ಪಕ್ಷದ ಕಾರ್ಯಕರ್ತರೇ ನಮ್ಮ ಆಸ್ತಿ. ನಾನು ಗೆಲ್ಲುವುದಕ್ಕು ಮೋದಿಯವರು ಪ್ರಧಾನಿಯಾಗುವುದಕ್ಕೂ, ಯಡಿಯೂರಪ್ಪ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿ ಆಗುವುದಕ್ಕೂ ಕಾರ್ಯಕರ್ತರೇ ಕಾರಣ ನಾನು ಶನಿವಾರ ಉದ್ವೇಗದಲ್ಲಿ ನೀಡಿದ ಹೇಳಿಕೆಯ ಅರ್ಥವೇ ಬೇರೆ ಕಾರ್ಯಕರ್ತರು ರಾಜೀನಾಮೆ ನೀಡುತ್ತಾರೆ ಎಂದ್ರೆ ಅದು ಮನಸ್ಸಿಗೆ ಆಘಾತವಾಗುವ ನೋವಾಗುವ ವಿಷಯ ನಾನು ದಾವಣಗೆರೆ ಕಾರ್ಯಕರ್ತರನ್ನು ಮಾತ್ರ ಉದ್ದೇಶಿಸಿ ಮಾತನಾಡಿದ್ದೇ.
ರಾಜೀನಾಮೆ ಕೊಟ್ಟ ತಕ್ಷಣ ಪಕ್ಷವೇನು ಮುಳುಗಿ ಹೋಗಲ್ಲ, ಬಿಜೆಪಿ ಸಂಸದ ಟಾಂಗ್
ಈಗಾಗಲೇ ಸಮೂಹ ಸನ್ನಿಗೊಳಗಾಗಿ ರಾಜೀನಾಮೆ ನೀಡುವ ಮಾತನಾಡಿದ ಕಾರ್ಯಕರ್ತರ ಮನವೊಲಿಕೆಗೆ ನಾವು ಮುಂದಾಗಿದ್ದೇವೆ. ನಮ್ಮ ಪಕ್ಷದ ಜಿಲ್ಲಾದ್ಯಕ್ಷರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ನಾನು ಅವರನ್ನು ಕರೆಸಿ ಮಾತನಾಡಿದ್ದೇವೆ. ಹತ್ಯೆ ಪ್ರಕರಣದಲ್ಲಿ ಆ ಕುಟುಂಬಗಳ ಜೊತೆ ನಾವಿದ್ದೇವೆ. ಪ್ರತಿಯೊಬ್ಬ ಹಿಂದೂ ಕಾರ್ಯಕರ್ತರ ಹತ್ಯೆಯಾದಗಲು ಮನಸ್ಸಿಗೆ ಬೇಸರವಾಗುತ್ತದೆ. ಯಾರು ಹತಾಶರಾಗಬಾರದು. ಪಕ್ಷ ಪಕ್ಷದ ಮುಖಂಡರು ನಿಮ್ಮ ಜೊತೆಯಲ್ಲಿದ್ದಾರೆ. ಕಾರ್ಯಕರ್ತರು ಪಕ್ಷ ಹಾಗೂ ಸರ್ಕಾರಕ್ಕೆ ಮುಜುಗರವಾಗದಂತೆ ನಡೆದುಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.
ರಾಜ್ಯಾಧ್ಯಕ್ಷ ಸಂದೀಪ್ ಕುಮಾರ್ ಸ್ಪಷ್ಟನೆ: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಿ ಸಮಿತಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಖಂಡಿಸಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿರುವ ಯುವ ಮೋರ್ಚಾ ಪದಾಧಿಕಾರಿಗಳ ರಾಜೀನಾಮೆಯನ್ನು ಅಂಗೀಕರಿಸುವುದಿಲ್ಲ. ಅವರೆಲ್ಲರ ಜೊತೆ ಮಾತುಕತೆ ನಡೆಸಿ ಮನವೊಲಿಸಲಾಗುತ್ತದೆ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಡಾ. ಸಂದೀಪ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಈಶ್ವರಪ್ಪ ಹೇಳಿದ್ದು: ನಾವೆಲ್ಲರೂ ಪಕ್ಷಕ್ಕೆ ದುಡಿದಿದ್ದೇವೆ. ನಮ್ಮಕ್ಕಿಂತ ಮೊದಲು ಅನೇಕರು ತ್ಯಾಗ ಮಾಡಿ ಕಟ್ಟಿರುವ ಪಕ್ಷ ಬಿಜೆಪಿ. ಪರಿಣಾಮ ನಾವೆಲ್ಲ ಸ್ಥಾನ - ಮಾನದಲ್ಲಿದ್ದೇವೆ. ನರೇಂದ್ರ ಮೋದಿ ಪ್ರಧಾನಿಯಾಗಿ ವಿಶ್ವವೇ ಮೆಚ್ಚುವಂತೆ ಕೆಲಸ ಮಾಡುತ್ತಿದ್ದಾರೆ. ಯುವ ಮೋರ್ಚಾ ಕಾರ್ಯಕರ್ತರು ಈಗಷ್ಟೇ ಕಣ್ಣು ಬಿಡುತ್ತಿದ್ದಾರೆ. ಆಗಲೇ ನಾನು ರಾಜೀನಾಮೆ ಕೊಡುತ್ತೇನೆ ಅಂತಾರೆ. ಯುವ ಮೋರ್ಚಾ ಯುವಕರು ಪಕ್ಷಕ್ಕೆ ನೀಡಿದ ಕೊಡುಗೆ ಏನು ಎಂದು ಕೆಎಸ್ ಈಶ್ವರಪ್ಪ ಪ್ರಶ್ನಿಸಿದ್ದರು
ಅಲ್ಪಸಂಖ್ಯಾತ ಗೂಂಡಗಳನ್ನು ಎನ್‌ಕೌಂಟರ್ ಮಾಡಬೇಕು: ಶಾಸಕ ರೇಣುಕಾಚಾರ್ಯ
ಶ್ಯಾಮ್ ಪ್ರಸಾದ್ ಮುಖರ್ಜಿ, ದೀನದಯಾಳ್ ಉಪಾಧ್ಯಾಯರ ಕಗ್ಗೊಲೆ ನಡೆಯಿತು. ಅವರು ಸತ್ತರು, ಆದರೆ ಅವರ ಸಿದ್ದಾಂತ ಸತ್ತಿದ್ಯಾ?. ಆಗ ಯಾರೂ ರಾಜೀನಾಮೆ ಕೊಟ್ಟು ಹಿಂದೆ ಸರಿಯಲಿಲ್ಲ. ರಾಜೀನಾಮೆ ಕೊಟ್ಟರೆ ಹಿಂದುತ್ವ ಮತ್ತು ನಮ್ಮ ಸಿದ್ಧಾಂತಕ್ಕೆ ಅಪಮಾನ ಮಾಡಿದಂತೆ ಎಂದು ನಮ್ಮ ಹಿರಿಯರು ನಮಗೆ ಹೇಳಿದ್ದಾರೆ. ನಾವು ಯಾವಾಗ ಸಾಯ್ತೀವೋ ಗೊತ್ತಿಲ್ಲ. ನೀವು ರಾಜೀನಾಮೆ ಯಾರಿಗೆ ಕೊಡುತ್ತಿದ್ದೀರಾ?. ಸಿದ್ಧಾಂತಕ್ಕೆ ರಾಜೀನಾಮೆ ಕೊಡುತ್ತೀರಾ ಎಂದು ಕಿಡಿಕಾರಿದ್ದರು.