ಮುಸ್ಲಿಂ ಯುವಕರನ್ನು ಮನೆ ಹೊಕ್ಕು ಹೊಡೆಯಬೇಕು, ಮತ್ತೊಂದು ವಿವಾದದ ಕಿಡಿಹೊತ್ತಿಸಿದ ಬಿಜೆಪಿ MLC

Published : Apr 09, 2022, 06:19 PM IST
ಮುಸ್ಲಿಂ ಯುವಕರನ್ನು ಮನೆ ಹೊಕ್ಕು ಹೊಡೆಯಬೇಕು, ಮತ್ತೊಂದು ವಿವಾದದ ಕಿಡಿಹೊತ್ತಿಸಿದ ಬಿಜೆಪಿ MLC

ಸಾರಾಂಶ

ಹಿಂದೂಗಳನ್ನ ಕೊಲ್ಲು ಅಂತಾ ಖುರಾನ್ ಆಯತಗಳಲ್ಲಿ ಹೇಳಲಾಗಿದೆ. ಮುಸ್ಲೀಮರಲ್ಲಿ 100 ಕ್ಕೆ 99 ರಷ್ಟು ಜನ ರಾಷ್ಟ್ರ ಹಾಗೂ ಹಿಂದೂ ವಿರೋಧಿಗಳು. ಪರಿಷತ್ ಮಾಜಿ ಸದಸ್ಯ ನಾರಾಯಣ ಸಾ ಬಾಂಢಗೆ ಸರಣಿ ವಿವಾದಿತ ಹೇಳಿಕೆ..

ವರದಿ: ಗಿರೀಶ್ ಕುಮಾರ್

ಗದಗ, (ಏ.09): ಮುಸ್ಲಿಂ ಯುವಕರನ್ನು ಮನೆ ಹೊಕ್ಕು ಹೊಡೆಯಬೇಕು ಎಂದು ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಗದಗನಲ್ಲಿ ಇಂದು (ಶನಿವಾರ) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಸಮಾಜದ ಯುವಕರು ಹಿಂದೂ ಸಮಾಜದ ಯುವತಿಯರನ್ನ ಕಣ್ಣೆತ್ತಿ ನೋಡಬಾರದು ಆ ರೀತಿ ಹಿಂದೂ ಸಮಾಜವನ್ನ ಜಾಗೃತ ಮಾಡಬೇಕಿದೆ.  ಬಲತ್ಕಾರದಿಂದ ಮಾಡಿದ್ರೆ ಮನೆಹೊಕ್ಕು ಹೊಡೆಯಬೇಕು.. ಇನ್ನೊಮ್ನೆ ಮುಸಲ್ಮಾರನು ಧೈರ್ಯ ಮಾಡಬಾರದು.. ಕೆಲವೊಬ್ಬರು ಅಲ್ಪ ಸಂಖ್ಯಾತರು ಅಂತಾರೆ.. ಮುಸಲ್ಮಾನರೇ ಅನ್ನಬೇಕು.. ಅಲ್ಪಸಂಖ್ಯಾತರು ಅಂದ್ರೆ ಜೈನರು, ಸಿಖ್ಖರು ಬರ್ತಾರೆ. ಕೆಲ ಸೋಗಲಾಡಿ ರಾಜಕಾರಣಿಗಳು ಅಲ್ಪ ಸಂಖ್ಯಾತರು ಅಂತಾ ಬಳಕೆ ಮಾಡ್ತಾರೆ‌‌ ಎಂದು ವಾಗ್ದಾಳಿ ನಡೆಸಿದರು.

ಕರ್ನಾಟಕದಲ್ಲಿ ಮುಸ್ಲಿಂರ ವಿರುದ್ಧ ಮತ್ತೊಂದು ಮೆಗಾ ಅಭಿಯಾನ?: ಮುತಾಲಿಕ್ ಹೇಳಿದ್ದಿಷ್ಟು

 ಖುರಾನ್‌ನ ಆಯತಗಳಲ್ಲಿ ಹಿಂದೂ ಜನರನ್ನ ಕೊಲ್ಲು ಅಂತಾ ಹೇಳಿಲಾಗಿದೆ ಎನ್ನುವ ಮೂಲಕ ಪರಿಷತ್ ಮಾಜಿ ಸದಸ್ಯ, ಎಸ್ ಎಸ್ ಕೆ ಸಮಾಜದ ಅಧ್ಯಕ್ಷ ನಾರಾಯಣ ಸಾ ಬಾಂಡಗೆ ಹೊಸ ವಿವಾದ ಸೃಷ್ಟಿಸಿದ್ದಾರೆ.. 

ಲವ್ ಜಿಹಾದ್ ವಿರೋಧಿಸಿ ಗದಗ ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಅನೇಕ ವಿವಾದಿತ ಹೇಳಿಕೆ ನೀಡಿದ್ರು.. ಇತ್ತೀಚೆಗೆ ಹುಬ್ಬಳ್ಳಿ ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಲವ್ ಪ್ರಕರಣದ ಹಾಗೂ ಗದಗ ಪ್ರಕರಣ ಬಗ್ಗೆ ಪ್ರಸ್ತಾಪಿಸಿ ಮಾತನಾಡಿದ್ದ ಅವರು ಹುಡುಗಿ ವಾಪಾಸ್ ಬರಲ್ಲ ಅಂತಾ ಪೊಲೀಸರು ಹೇಳಿದ್ದಾರೆ. ಯಾಕೆ ಬರಲ್ಲ ಕೇಳಿ.. ಹುಡುಗಿಗೆ ಬ್ಲ್ಯಾಕ್ ಮೇಲ್ ಮಾಡಿರುತ್ತಾರೆ.‌ ನಿನ್ನ ಅಣ್ಣ ತಮ್ಮಂದಿರನ್ನ ಮುಗಿಸುತ್ತೇವೆ..ಮನೆ ಸುಡುತ್ತೇವೆ ಅಂತಾ ಮುಸಲ್ಮಾನರು ಧಮ್ಕಿ ಹಾಕಿರುತ್ತಾರೆ.‌.‌ ಅದಕ್ಕೆ ಪ್ರಕರಣದಲ್ಲಿ ವಾಪಾಸ್ ಬರಲ್ಲ ಅಂತಾ ಹೇಳಿಕೆ ಕೊಟ್ಟಿದ್ದಾರೆ.. 

ಮುಸ್ಲೀಮರಲ್ಲಿ 100ಕ್ಕೆ 99 ಜನರು ರಾಷ್ಟ್ರ ವಿರೋಧಿಗಳು ಹಿಂದೂ ವಿರೋಧಿಗಳು.. ಖುರಾನ್ ಓದುವ ಮೌಲ್ವಿ ಹೇಳುತ್ತಾರೆ 'ಆಯತ್ ನಂಬರ್ ತೈತೀಸ್ ಹಿಂದೂ ಲೋಗೋಕೋ ಮಾರೋ' (ಆಯತ್ ನಂಬರ್ 35 ಹಿಂದೂ ಜನರನ್ನ ಕೊಲ್ಲು) ಮಸೀದಿಯಲ್ಲಿ ಹೀಗೆ ಆಗುತ್ತೆ ಅಂತಾ ಹಿಂದಿಯಲ್ಲೇ ಹೇಳಿದ್ರು.. ಆಯತ್ ನಂಬರ್ ಮತ್ತೊಂದು ಜೋ ಮುಸಲ್ಮಾನ್ ನಹೀ ಹೈ ಉನ್ಕೊ ಕಹಾ ಮಿಲ್ತಾಹೈ ವಹಾ ಮಾರೋ (ಯಾರು ಮುಸಲ್ಮಾನರು ಅಲ್ಲವೋ ಅವರನ್ನ ಎಲ್ಲಿ ಸಿಗುತ್ತಾರೋ ಅಲ್ಲೇ ಕೊಲ್ಲಿ) ಮುಲ್ಲಾ, ಮೌಲ್ವಿಗಳು ಹೀಗೆ ಹೇಳುತ್ತಾರೆ ಅಂತಾ ಮಾಜಿ ಎಮ್ ಎಲ್ ಸಿ ಬಾಂಡಗೆ ಹೇಳಿದ್ರು.. ಮುಸಲ್ಮಾನರು ರಾಷ್ಟ್ರ ವಿರೋಧಿಗಳು ಅಂತಾ ಪುನರುಚ್ಛರಿಸಿ ಯಾರು ಕೇಸ್ ಹಾಕುತ್ತಾರೋ ಹಾಕಲಿ ಅಂತಾ ಸವಾಲು ಹಾಕಿದ್ದಾರೆ.. 

ಮುಸಲ್ಮಾನರಿಗೆ ಹಿಡನ್ ಅಜೆಂಡಾ ಇದೆ.. ಹಿಂದೂ ಸಮಾಜದ ಯುವತಿಯರನ್ನ ಟಾರ್ಗೆಟ್ ಮಾಡಿ, ಗೊಂದಲ ಸೃಷ್ಟಿಸಿ, ಉಪಯೋಗ ಮಾಡಿಕೊಂಡು ಮುಂದೇನು ಮಾಡಿದ್ದಾರೆ ಅನ್ನೋ ಬಗ್ಗೆ ವಾಟ್ಸಾಪ್ ನಲ್ಲಿ ಬಂದಿದೆ.. 

ಸೋಗಲಾಡಿ ಹಿಂದುತ್ವ ಬಿಡಿ ಗೌರವ ಪೂರ್ವಕವಾಗಿ ಕೇಳುತ್ತೇನೆ. ಮಠಾಧೀಶರೂ ಹಿಂದೂ ಸಮಾಜದ ಬಗ್ಗೆ ಮಾತನಾಡಿ.. ಕೆಲವೇ ಕೆಲವು ಜನರು ಮಾತಾಡುತ್ತಿದ್ದಾರೆ..  ಅನೇಕ ಮಠಾಧೀಶರು ಸಂಬಂಧವೇ ಇಲ್ಲ ಎನ್ನುವಂತಿದ್ದಾರೆ.. ದುರ್ದೈವ ಅಂದರೇ ಕೆಲವು ಮಠಾಧೀಶರು ಮಠದಲ್ಲಿ ನಮಾಜ್ ಮಾಡಲು ಅವಕಾಶ ಕೊಡುತ್ತಾರೆ.. ಹಾಗಾದ್ರೆ ಮಸೀದಿಯಲ್ಲಿ ಲಿಂಗ ಪೂಜೆ ಮಾಡಿ ನೋಡೋಣ ಅಂತಾ ಸವಾಲು ಹಾಕಿದ್ರು.. ಸೋಗಲಾಡಿ ಹಿಂದುತ್ವ ಬಿಡಬೇಕು.. ದೇಶದಲ್ಲಿ ಬದುಕಬೇಕಾದರೆ ಮುಸಲ್ಮಾನರನ್ನ ಹದ್ದುಬಸ್ತಿನಲ್ಲಿ ಇಡಬೇಕು.. ಅವರು ಮಕ್ಕಳಿಗೆ ಬಂದೂಕು ಟ್ರೇನಿಂಗ್ ಕೊಡುತ್ತಾರೆ.. ಭಯೋತ್ಪಾದಕರು ಮುಸಲ್ಮಾನರೆ ಅಂತಾ ಹೇಳಿಕೆ ನೀಡಿದ್ರು..

ಸರ್ವೇ ಜನಾ ಸುಖಿನೋ ಭವಂತು ಅಂತಾ ಹಿಂದೂಗಳು ಹೇಳಿತ್ತಾತೆ..ಆದ್ರೆ, ಮುಸಲ್ಮಾನರು ತಾವಷ್ಟೆ ಸುಖಿಗಳಾಗಿರಬೇಕು ಅಂತಾರೆ.. ಇದೇ ಹಿಂದೂ ಹಾಗೂ ಮುಸಲ್ಮಾನ ಸಮಾಜಕ್ಕೆ ಇರುವ ಅಂತರ.. ಅವರು ಎಂದಿಗೂ ನಮ್ಮವರಾಗುವುದಿಲ್ಲ.. ಅಬೇಡ್ಕರ್ ಅವರು ವಿಭಜನೆ ಸಂದರ್ಭದಲ್ಲಿ ಪಾಕಿಸ್ತಾನದ ಹಿಂದೂಗಳನ್ನ ದೇಶಕ್ಕೆ ಕರೆಸಬೇಕು.. ದೇಶದಲ್ಲಿರುವ ಮುಸಲ್ಮಾನರನ್ನ ಪಾಕಿಸ್ತಾನಕ್ಕೆ ಕಳುಹಿಸಬೇಕು ಎಂದಿದ್ದರು ಎಂದು ಬಾಂಡಗೆ ಹೇಳಿದ್ರು.. ಅಲ್ದೆ, ಕೆಲ ರಾಜಕೀಯ ಪಕ್ಷಗಳು ಮುಸಲ್ಮಾರಿಗೆ ಹುಟ್ಟಿದಂತೆ ಆಡುತ್ತವೇ ಅಂತಾನೂ ಹೇಳಿವ ಮೂಲಕ ಕಾಂಗ್ರೆಸ್ ಪಕ್ಷವನ್ನ ಪರೋಕ್ಷವಾಗಿ ಟೀಕಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೂರುವರೆ ದಶಕಗಳಿಂದ ಇದ್ದ ಒಳ ಮೀಸಲಾತಿಗಾಗಿ ಹೋರಾಟಕ್ಕೆ ಜಯ ಸಿಕ್ಕಿದೆ: ಸಚಿವ ಮುನಿಯಪ್ಪ
ಮೈಸೂರು ಸಿಲಿಂಡರ್ ಸ್ಫೋಟದ ಬಗ್ಗೆ ತನಿಖೆಗೆ ಸೂಚಿಸಿದ್ದೇನೆ: ಗೃಹ ಸಚಿವ ಪರಮೇಶ್ವರ್