
ಧಾರವಾಡ ಪರಮೇಶ್ವರ ಅಂಗಡಿ, ಏಷ್ಯಾ ನೆಟ್ ಸುವರ್ಣ ನ್ಯೂಸ್
ಧಾರವಾಡ (ಏ.9): ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿ ಮೋಹನ್ ಲಿಂಬಿಕಾಯಿ (Mohan Limbekai) ಆಗ್ತಾರೆ ಎಂಬುದು ನನಗೆ ಖುಷಿ ಇದೆ , ನಾನು ಯಾವುದಕ್ಕೂ ತಲೆಕೆಡಸಿಕ್ಕೊಳ್ಳಲ್ಲ ಶಿಕ್ಷಕರ ಕ್ಷೇತ್ರದಿಂದ (Teachers constituency)ಸ್ಪರ್ದೆಗೆ ಲಿಂಬಿಕಾಯಿ ಮತ್ತು ಹೊರಟ್ಟಿ ಮಧ್ಯೆ ಸದ್ಯ ವಾಕ್ಸಮರ ನಡೆದಿದೆ. ಬಿಜೆಪಿಯಿಂದ ಲಿಂಬಿಕಾಯಿ ಅಭ್ಯರ್ಥಿ ಆದರೆ ನನಗೆ ತೊಂದರೆ ಇಲ್ಲ ಬಿಜೆಪಿ (BJP) ಪಕ್ಷಕ್ಕೆ ಸೇರೋ ವಿಚಾರಕ್ಕೆ ಉಲ್ಟಾ ಹೊಡೆದ್ರಾ ಬಸವರಾಜ ಹೊರಟ್ಟಿ (Basavaraj Horatti) ಅನ್ನೋ ಮಾತುಗಳು ಸದ್ಯ ಹೇಳಿ ಬರುತ್ತಿವೆ.
ಧಾರವಾಡದಲ್ಲಿ ಮಾತನಾಡಿದ ಉಪಸಭಾಪತಿ ಬಸವರಾಜ ಹೊರಟ್ಟಿ, ಬಿಜೆಪಿ ಪಕ್ಷಕ್ಕೆ ನಾನು ಇನ್ನು ಹೊಗಿಲ್ಲ ನನಗೆ ಕೆಲ ಬಿಜೆಪಿಯವರು ಕೇಳಿದ್ರೂ ನಾನು ಎಲ್ಲವೂ ಡಿಕ್ಲೇರ್ ಆಗಲಿ ಎಂದು ಹೇಳಿದ್ದೆನೆ. ಇನ್ನು ಚುನಾವಣೆ ಘೋಷಣೆ ಆಗಲಿ ಆದ ಮೆಲೆ ಎಲ್ಲವನ್ನೂ ನಿರ್ಧಾರ ಮಾಡೋಣ ಅಂತ ವಿಚಾರ ಮಾಡುತ್ತಿದ್ದೆನೆ. ಇನ್ನು ಸಮಯ ಇದೆ, ನಾನು ಬಿಜೆಪಿ ಸೆರೋದರ ಬಗ್ಗೆ ಇನ್ನು ಸ್ಪಷ್ಟ ನಿರ್ಧಾರ ಮಾಡಿಲ್ಲ ನಾನು ಸುಳ್ಳ ಹೇಳಲ್ಲ, ಅವರು ನನಗೆ ಟಿಕೆಟ್ ಇಲ್ಲ ಅಂದ್ರು ಅಭ್ಯಂತರವೇನಿಲ್ಲ ಎಂದಿದ್ದಾರೆ.
ನಾನು ಚುನಾವಣೆಗೆ ನಿಲ್ಲೋದು ಗ್ಯಾರಂಟಿ, ಹೇಗೆ ನಿಲ್ತೇನೆ ಅನ್ನೋದನ್ನ ಹೇಳಲ್ಲ. ನಾನು ಯಾವ ಪಕ್ಷದಿಂದ ನಿಲ್ಲಲಿ ಬಿಡಲಿ ಶಿಕ್ಷಕರು ನನ್ನ ಸೋಲಿಸಲಿಕ್ಕೆ ಸಾಧ್ಯನೇ ಇಲ್ಲ ಅವರೆಲ್ಲರೂ ಸೇರಿ ನನ್ನನ್ನ ಗೆಲ್ಲಿಸೇ ತೀರುತ್ತಾರೆ ನನಗೆ ಬಿಜೆಪಿ ಅವರು ನಮ್ಮ ಪಕ್ಷದಿಂದ ನಿಲ್ಲಿ ಎಂದು ಕೇಳಿದ್ರು. ಸಹಜವಾಗಿ ನಾನು ಒಕೆ ಅಂದಿದ್ದೆನೆ. ನಾನು ಜೆಡಿಎಸ್ ನಿಂದ ದೊಡ್ಡವನಾಗಿದ್ದೆನೆ. ಯಾರಿಗೂ ಜೆಡಿಎಸ್ ಪಕ್ಷ ಬಿಟ್ಟು ಹೋಗಿ ಅಂತ ಹೇಳಿಲ್ಲ.
Karnataka Politics: 'ನಾವ್ಯಾರೂ ಕರೆದಿಲ್ಲ, ಹೊರಟ್ಟಿನೇ ಬಿಜೆಪಿಗೆ ಬರ್ತೀನಿ ಅಂತಾರೆ'
ಬದಲಾವಣೆಯ ವಿಚಾರವಾಗಿ ಈ ರೀತಿಯಾಗಿದೆ ಮುಂದೆ ಎನ್ ಆಗುತ್ತೆ ಎಂಬುದನ್ನ ಕಾದು ನೋಡೋಣ. ಶಿಕ್ಷಕರೇ ನಮಗೆ ನೀವೆ ದೇವರು ಅಂತ ಹೇಳ್ತಾ ಇದಾರೆ. ನಾನು ಶಿಕ್ಷಕರಿಗೆ ಅನ್ಯಾಯ ಮಾಡಲ್ಲ ನಾನು ಪಶ್ಚಿಮ ಶಿಕ್ಷಣ ಕ್ಷೆತ್ರದಿಂದ ನಿಲ್ಲೋದು ಗ್ಯಾರಂಟಿ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.