ಗೃಹ ಸಚಿವ ಅರಗ ಜ್ಞಾನೇಂದ್ರ ಆರ್‌ಎಸ್ಎಸ್ ಏಜೆಂಟ್: ಶಾಸಕಿ ಅಂಜಲಿ ನಿಂಬಾಳ್ಕರ್

By Govindaraj SFirst Published Apr 9, 2022, 3:54 PM IST
Highlights

ಹಿಂದುತ್ವ ದಾರಿ ಮೇಲೆ ಯುವಕರ ದಾರಿ ತಪ್ಪಿಸುವ ಕೆಲಸ ನಡೀತಿದೆ ಎಂದು ಶಾಸಕಿ ಅಂಜಲಿ ನಿಂಬಾಳ್ಕರ್ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಶಾಸಕಿ ಅಂಜಲಿ ನಿಂಬಾಳ್ಕರ್, 'ಬ್ರಿಟಿಷರು ಇಷ್ಟು ವರ್ಷ ರಾಜ್ಯ ಮಾಡಿ ಸಿಕಂದರ್ ಬಂದು ನಮ್ಮ ದೇಶ ಲೂಟಿ ಮಾಡಲು ಹೊರಟಿದ್ರು. 

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ (ಏ.09): ಹಿಂದುತ್ವ (Hindu) ದಾರಿ ಮೇಲೆ ಯುವಕರ ದಾರಿ ತಪ್ಪಿಸುವ ಕೆಲಸ ನಡೀತಿದೆ ಎಂದು ಶಾಸಕಿ ಅಂಜಲಿ ನಿಂಬಾಳ್ಕರ್ (MLA Anjali Nimbalkar) ಬಿಜೆಪಿ (BJP) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ (Belagavi) ಮಾತನಾಡಿದ ಶಾಸಕಿ ಅಂಜಲಿ ನಿಂಬಾಳ್ಕರ್, 'ಬ್ರಿಟಿಷರು ಇಷ್ಟು ವರ್ಷ ರಾಜ್ಯ ಮಾಡಿ ಸಿಕಂದರ್ ಬಂದು ನಮ್ಮ ದೇಶ ಲೂಟಿ ಮಾಡಲು ಹೊರಟಿದ್ರು. ‌ಮೊಘಲರು ಬಂದು ಹೋದ್ರು ಆದರೂ ಕೂಡ ಹಿಂದೂ ಧರ್ಮವನ್ನು ಯಾರೂ ಟಚ್ ಮಾಡಲು ಸಾಧ್ಯ ಆಗಿಲ್ಲ. ಆವಾಗಲೂ ಸಹ ಹಿಂದೂ ಧರ್ಮ ಇತ್ತು. ಇವತ್ತು ಸಹ ಇದೆ. ಈಗ ಬ್ರಿಟಿಷರು ಇಲ್ಲ, ಮೊಘಲರು ಇಲ್ಲ, ಸಿಕಂದರ್ ಇಲ್ಲ, ಅಫ್ಘಾನಿಸ್ತಾನ್‌ನಿಂದ ಯಾರೂ ಬರ್ತಿಲ್ಲ ನಮ್ಮ ಶಕ್ತಿ ಅಷ್ಟು ದೊಡ್ಡದು. ನಾವು ಮಾಡಿ  ತೋರಿಸಿದ್ದೀವಿ‌. ಹಿಂದೂ ಧರ್ಮ ಹಳೆಯ ಧರ್ಮ ಇದೆ. ಆ ಧರ್ಮ ಟೋಟಲಿ ಕಟ್ ಮಾಡಲಿಕ್ಕೆ ಯಾರಿಂದಲೂ ಸಾಧ್ಯವಿಲ್ಲ. 

Latest Videos

ಇನ್ಮುಂದೆಯೂ ಆಗಲ್ಲ. ವೋಟ್‌ಗಾಗಿ (Vote) ಬಿಜೆಪಿ ಧರ್ಮ ರಾಜಕಾರಣ ಮಾಡುತ್ತಿದೆ ಇದು ಎಲ್ಲರಿಗೂ ಗೊತ್ತಿದೆ. ಆಲ್‌ರೇಡಿ ನಾವು ಹಿಂದೂ ರಾಷ್ಟ್ರ ಇದೀವಿ. ಶಿವಾಜಿ ಮಹಾರಾಜರ ಬಾಡಿಗಾರ್ಡ್ ಮುಸಲ್ಮಾನ ಇದ್ರು. ಹಿಂದವಿ ಸ್ವರಾಜ್ ನಾವು ಮಾಡಿ ತೋರಿಸಿದ್ದೀವಿ. ಈಗ ಏನು ಹಿಂದೂ ರಾಷ್ಟ್ರ ಮಾಡಲು ಇವರು ಹೊರಟಿದ್ದಾರೆ? ಆರ್‌ಎಸ್ಎಸ್ ಹಿಂದೂ ರಾಷ್ಟ್ರ ನಾವು ಒಪ್ಪಲ್ಲ. ಸ್ವಂತ ಧರ್ಮ ಇರುವಂತಹ ಹಿಂದೂ ಧರ್ಮ ಅಂದ್ರೆ ಏನ್ ಇದೆ ಇವರು ಸರಿಯಾಗಿ ಮೊದಲು ತಿಳಿದುಕೊಳ್ಳಬೇಕು. ಹಿಂದೂ ಧರ್ಮ ಅಂದ್ರೆ ಬರೀ ಹಿಂದೂ ಅಲ್ಲ. ಪೂಜೆ ಮಾಡುವ ಬ್ರಾಹ್ಮಣರು ಇದ್ದಾರೆ, ಎಸ್ ಸಿ ಸಮಾಜ ಸಹ ಅದರಲ್ಲಿ ಇದೆ. ಮುಸಲ್ಮಾನರು ಸಹ ಅದರಲ್ಲಿ ಇದಾರೆ. ಎಸ್ ಟಿ ಸಮುದಾಯ ಸಹ ಅದರಲ್ಲಿ ಇದೆ. ಎಲ್ಲ ಸೇರಿ ಹಿಂದೂ ಧರ್ಮ ಇದೆ. ಹಿಂದೂ ಧರ್ಮದ ಸಂಸ್ಕೃತಿ ಬಹಳ ದೊಡ್ಡದಿದೆ ಇವರಿಗೆ ಅಷ್ಟು ತಿಳವಳಿಕೆ ಇದೆ ಅಂತಾ ನನಗೆ ಅನಿಸಲ್ಲ' ಎಂದು ತಿಳಿಸಿದ್ದಾರೆ.

ಎಲೆಕ್ಷನ್‌ ಬಂದಾಗ ಬೆಳಗಾವಿ ಜಿಲ್ಲಾ ವಿಭಜನೆ ಕೂಗು: ರಾಜಕಾರಣಿಗಳ ವಿರುದ್ಧ ಸಿಡಿದೆದ್ದ ಜನ..!

ಗೃಹಸಚಿವ ಅರಗ ಜ್ಞಾನೇಂದ್ರ ಆರ್‌ಎಸ್ಎಸ್ ಏಜೆಂಟ್: ಗೃಹಸಚಿವ ಅರಗ ಜ್ಞಾನೇಂದ್ರ (Araga Jnanendra) ಆರ್‌ಎಸ್ಎಸ್ ಏಜೆಂಟ್ (RSS Agent) ಎಂದು ಶಾಸಕಿ ಅಂಜಲಿ ನಿಂಬಾಳ್ಕರ್ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ದಲಿತ ಯುವಕ ಚಂದ್ರು‌ ಕೊಲೆ ಪ್ರಕರಣ ಕುರಿತು ಅರಗ ಜ್ಞಾನೇಂದ್ರ ಹೇಳಿಕೆ ಖಂಡನೀಯವಾಗಿದ್ದು ಘಟನೆಯ ಬಗ್ಗೆ ಬೆಳಗ್ಗೆ ಬೆಂಗಳೂರು ಕಮಿಷನರ್ ಟ್ವೀಟ್ ಮಾಡಿದ್ರು‌. ಬಳಿಕ ಗೃಹ ಸಚಿವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ‌ ರಾಜ್ಯದಲ್ಲಿ ಶಾಂತಿ ಕದಡಲು ಗೃಹ ಸಚಿವರು ಯತ್ನಿಸುತ್ತಿದ್ದಾರೆ. ರಾಜ್ಯದಲ್ಲಿ ಶಾಂತಿ ನೆಲಸಲು ಗೃಹಸಚಿವರ ರಾಜೀನಾಮೆ ಪಡೆಯಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ ಶಾಸಕಿ ಅಂಜಲಿ ನಿಂಬಾಳ್ಕರ್ ಒತ್ತಾಯಿಸಿದ್ದಾರೆ‌.‌ ಮೂರು ವರ್ಷದಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ. ಮುಂದಿನ ವರ್ಷ ಚುನಾವಣೆ ಇದೆ. ಧರ್ಮಗಳ ಆಧರಿಸಿ ಚುನಾವಣೆ ಎದುರಿಸಲು ಬಿಜೆಪಿ ಮುಂದಾಗಿದೆ' ಎಂದು ಅಂಜಲಿ ನಿಂಬಾಳ್ಕರ್ ಆರೋಪಿಸಿದ್ದಾರೆ‌.

ದೇಶದಲ್ಲಿ ಹಿಂದಿ ಏರಿಕೆ ಖಂಡನೀಯ: ಕೇಂದ್ರ ಗೃಹ ಸಚಿವರಿಂದ ಹಿಂದಿ ಭಾಷೆ ಹೇರಿಕೆ‌ ವಿಚಾರವಾಗಿ ಪ್ರತಿಕ್ರಿಯಿಸಿದ ಶಾಸಕಿ ಅಂಜಲಿ ನಿಂಬಾಳ್ಕರ್, 'ದೇಶದಲ್ಲಿ ವಿವಿಧತೆಯಲ್ಲಿ ಏಕತೆ ಇದೆ?ಹಿಂದು ಸಂಸ್ಕೃತಿಯೇ ವಿವಿಧತೆಯಲ್ಲಿ ಏಕತೆ ಹೊಂದಿದೆ. ದೇಶದಲ್ಲಿ ಹಿಂದಿ ಏರಿಕೆ ಖಂಡನೀಯ. ದೇಶದಲ್ಲಿ ಶೇಕಡಾ  60 ರಿಂದ 70 ರಷ್ಟು ಜನ ಬೇರೆ ಬೇರೆ ಭಾಷೆ ಮಾತನಾಡುತ್ತಾರೆ.‌ಭಾರತೀಯ ಸಂಸ್ಕೃತಿಯನ್ನು ಹಾಳು ಮಾಡಬೇಡಿ.‌ನಿಮ್ಮ ಹಿಂದು ರಾಷ್ಟ್ರಕ್ಕೆ ನಮ್ಮ ವಿರೋಧವಿದೆ. ಜಾತಿ, ಧರ್ಮದ ಹೆಸರಲ್ಲಿ ಜನರಿಗೆ ತಪ್ಪು ದಾರಿಗೆ ಎಳೆಯ  ಬೇಡಿ' ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ವಿರುದ್ಧ ಅಂಜಲಿ ನಿಂಬಾಳ್ಕರ್ ವಾಗ್ದಾಳಿ ನಡೆಸಿದ್ದಾರೆ‌‌.

ಪತಿ ಹೇಮಂತ್ ನಿಂಬಾಳ್ಕರ್ ಎರಡು ವರ್ಷ ರಜೆ ಪಡೆದು ಎಲ್‌ಎಲ್‌ಬಿ ಮಾಡ್ತಿದ್ದಾರೆ: ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ರಾಜಕೀಯ ಪ್ರವೇಶ ವಿಚಾರವಾಗಿ ಪ್ರತಿಕ್ರಿಯಿಸಿದ ಶಾಸಕಿ ಅಂಜಲಿ ನಿಂಬಾಳ್ಕರ್, 'ನಾನು ಖಾನಾಪುರ ನಲ್ಲಿ ಇರ್ತೀನಿ ನಿಜ‌.‌ ದಿನಕ್ಕೆ ಮೂರು, ನಾಲ್ಕು ಬಾರಿ ಮಾತನಾಡುತ್ತೇನೆ.‌ ನನಗೆ ಈ ಬಗ್ಗೆ ಸುದ್ದಿ ಬಂದಿಲ್ಲ, ನಿಮಗೆ ಎಲ್ಲಿಂದ ಬಂತು? ಈಗ ವಿದ್ಯಾಭ್ಯಾಸಕ್ಕಾಗಿ ರಜೆ ಪಡೆದಿದ್ದಾರೆ.‌ ಎರಡು ವರ್ಷ ರಜೆ ಪಡೆದು ಎಲ್ ಎಲ್ ಬಿ ಮಾಡುತ್ತಿದ್ದಾರೆ ರಾಜಕೀಯದಲ್ಲಿ ಯಾರು ಸೀನಿಯರ್, ಜೂನಿಯರ್ ಅಲ್ಲ' ಎಂದು ಅಂಜಲಿ ನಿಂಬಾಳ್ಕರ್ ತಿಳಿಸಿದ್ದಾರೆ.

ಉದ್ಯಮಿ ಹತ್ಯೆ: ಭೂಗತ ಪಾತಕಿ ಬನ್ನಂಜೆ ರಾಜ ಸೇರಿ ಎಂಟು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ನನಗೆ ಬಿಜೆಪಿ ಸರ್ಕಾರ ಮೇಲೆ ಭರವಸೆ ಇಲ್ಲ: ಇನ್ನು ಖಾನಾಪುರ ಬಸ್ ನಿಲ್ದಾಣ ಶಂಕುಸ್ಥಾಪನೆ ವಿಚಾರದಲ್ಲಿ ರಾಜಕೀಯ ವಿಚಾರವಾಗಿ ಪ್ರತಿಕ್ರಿಯಿಸಿದ ಶಾಸಕಿ ಅಂಜಲಿ ನಿಂಬಾಳ್ಕರ್, 'ಎರಡು ವರ್ಷಗಳಿಂದ ಬಸ್ ನಿಲ್ದಾಣದ ವಿಚಾರದಲ್ಲೂ ರಾಜಕೀಯ ನಡೀತಿದೆ. ನಾನು ಸಚಿವ ಶ್ರೀರಾಮುಲು, ಗೋವಿಂದ ಕಾರಜೋಳ ಅನುಮತಿ ಪಡೆದು ಶಂಕುಸ್ಥಾಪನೆ ಮಾಡಿದ್ದೆ. ಕೋವಿಡ್ ಸಂದರ್ಭದಲ್ಲಿ ದುಡ್ಡು ಇಲ್ಲ ಎಂದು ಕೆಲಸ ನಿಲ್ಲಿಸಿದ್ರು‌‌‌. ಪ್ರತಿಯೊಂದು ಕ್ಷೇತ್ರದಲ್ಲಿ ಹಣ ಇಲ್ಲ ಎಂದು ಎಲ್ಲರಿಗೂ ಮೋಸ ಮಾಡುತ್ತಿದ್ದಾರೆ. ಬಿಜೆಪಿ ಶಾಸಕರ ಮೇಲೆ ಹಾಗೂ ನಮ್ಮ ಮೇಲೆ ಹೆಚ್ಚು ಅನ್ಯಾಯ ಆಗುತ್ತಿದೆ. ನನಗೆ ಬಿಜೆಪಿ ಸರ್ಕಾರ ಮೇಲೆ ಭರವಸೆ ಇಲ್ಲ ನಮಗೆ ಕೊಟ್ಟಿರೋ ಅನೇಕ ಬೇಡಿಕೆ ಈಡೇರಿಸಿಲ್ಲ' ಎಂದು ಬಿಜೆಪಿ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು‌.

ಗೃಹಸಚಿವ ಅರಗ ಜ್ಞಾನೇಂದ್ರ, ಸಿ.ಟಿ.ರವಿ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು: ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಳಿಕ ಬೆಳಗಾವಿ ನಗರ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿದ ಶಾಸಕಿ ಅಂಜಲಿ ನಿಂಬಾಳ್ಕರ್ ನೇತೃತ್ವದ ನಿಯೋಗ ಗೃಹ ಸಚಿವ ಅರಗ ಜ್ಞಾನೇಂದ್ರ, ಸಿ‌.ಟಿ.ರವಿ ವಿರುದ್ಧ ಬೆಳಗಾವಿ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದರು. ಬೆಂಗಳೂರಿನ ಜೆ.ಜೆ.ನಗರ ಠಾಣಾ ವ್ಯಾಪ್ತಿಯಲ್ಲಿ ಚಂದ್ರು‌ ಹತ್ಯೆ ಪ್ರಕರಣ ಸಂಬಂಧ ರಾಜ್ಯದಲ್ಲಿ ಅಶಾಂತಿ ನಿರ್ಮಿಸಲು ಪ್ರಚೋದನಾಕಾರಿ ಹೇಳಿಕೆ ನೀಡುತ್ತಿದ್ದಾರೆ. ಕೋಮು‌ ಗಲಭೆಗೆ ಪ್ರಚೋದನೆ ನೀಡುವ ಹೇಳಿಕೆ ವಿರುದ್ಧ ಕಾನೂನು ಕ್ರಮ ಜರುಗಿಸಲು ಬೆಳಗಾವಿ ನಗರ ಪೊಲೀಸ್ ಆಯುಕ್ತರಿಗೆ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ನೇತೃತ್ವದ ಕಾಂಗ್ರೆಸ್ ನಿಯೋಗ ಮನವಿ ಮಾಡಿದೆ‌‌.

click me!