ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಲಂಗು ಲಗಾಮಿಲ್ಲದೆ ಮಾತನಾಡುತ್ತಿದ್ದಾರೆ, ಅವರ ತಂದೆಗಾದಂತೆ ಶಾಸ್ತಿ ಅವರಿಗೂ ಕೂಡಾ ಕೆಲವೇ ದಿನಗಳಲ್ಲಿ ಆಗುತ್ತದೆ, ಆಗ ಅವರ ಬಾಯಿ ಬಂದಾಗುತ್ತದೆ ಎಂದು ಬಿಜೆಪಿ ಎಂಎಲ್‌ಸಿ ಹಾಗೂ ಸಂಘಟನಾ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದ್ದಾರೆ.
ಕಲಬುರಗಿ (ಫೆ.11): ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಲಂಗು ಲಗಾಮಿಲ್ಲದೆ ಮಾತನಾಡುತ್ತಿದ್ದಾರೆ, ಅವರ ತಂದೆಗಾದಂತೆ ಶಾಸ್ತಿ ಅವರಿಗೂ ಕೂಡಾ ಕೆಲವೇ ದಿನಗಳಲ್ಲಿ ಆಗುತ್ತದೆ, ಆಗ ಅವರ ಬಾಯಿ ಬಂದಾಗುತ್ತದೆ ಎಂದು ಬಿಜೆಪಿ ಎಂಎಲ್‌ಸಿ ಹಾಗೂ ಸಂಘಟನಾ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದ್ದಾರೆ. ಕಲಬುರಗಿಯಲ್ಲಿಂದು ಸುದ್ದಿಗಾರರೊದಿಗೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಕ್ಕೆ ಖರ್ಗೆ ಅವರ ಕೊಡುಗೆ ಶೂನ್ಯ, ಬಂದಂತ ಹಣವನ್ನು ನುಂಗಿ ನೀರು ಕುಡಿದಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ, ಕಾಂಗ್ರೆಸ್ ನಾಯಕರು ಮಹಾನ್ ಕಳ್ಳರು. ಕಲ್ಯಾಣ ಕರ್ನಾಟಕ ಕ್ಕೆ ಬಂದ ಹಣವನ್ನು ಕಾಂಗ್ರೆಸ್ಸಿಗರು ಬಹುತೇಕರು ಒಂದಾಗಿ ದುರುಪಯೋಗ ಮಾಡಿಕೊಂಡಿದ್ದಾರೆ, ನುಂಗಿ ನೀರು ಕುಡದಿದ್ದಾರೆಂದು ಆರೋಪಿಸಿದ್ದಾರೆ. ಚಿತ್ತಾಪುರ ದಲ್ಲಿ ನೂರಕ್ಕೆ ನೂರರಷ್ಟು ಪ್ರಿಯಾಂಕ್ ರನ್ನು ಸೋಲಿಸುತ್ತೇವೆ ಎಂದ ರವಿ ಕುಮಾರ್ ಇನ್ನೂ ಕ್ರಿಕೆಟ್ ಮ್ಯಾಚ್ ಆರಂಭವಾಗಿಲ್ಲ. ಚುನಾವಣೆ ಫಿಕ್ಸ್ ಆಗಲಿ ಆಗ ಅವರಿಗೆ ಗೊತ್ತಾಗುತ್ತದೆ ಯಾರು ಬೌಲರ್, ಪಿಚ್ ಯಾವುದು ಅನ್ನೋದು? ಕನಿಷ್ಟ25 ಸಾವಿರ ಮತಗಳ ಅಂತರದಿಂದ ಪ್ರಿಯಾಂಕ್ ಖರ್ಗೆರನ್ನು ಸೋಲಿಸುತ್ತೇವೆ ಎಂದರು.
undefined
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನಪರ ಆಡಳಿತ: ಶಾಸಕ ಶರತ್ ಬಚ್ಚೇಗೌಡ
ನಾಯಕತ್ವ ಕೊರತೆ ಕಾಂಗ್ರೆಸ್ ಗಿದೆ ವಿನ ಬಿಜೆಪಿಗಿಲ್ಲಾ. ಸಿದ್ದರಾಮಯ್ಯ ಮೊದಲು ಕ್ಷೇತ್ರ ಹುಡುಕಿಕೊಳ್ಳಲಿ. ಕ್ಷೇತ್ರ ಹುಡಕೋ ಪರಿಸ್ಥಿತಿ ಸಿದ್ದರಾಮಯ್ಯರಿಗೆ ಬರಬಾರದಿತ್ತು, ಕೋಲಾರದಲ್ಲಿ ಸೋಲುವ ಭಯ ಅವರಿಗೆ ಕಾಡ್ತಿದೆ. ಇದೀಗ ಸವದತ್ತಿ ಕ್ಷೇತ್ರಕ್ಕೆ ಹೋಗ್ತಾರೆ ಅಂತ ಹೇಳಲಾಗುತ್ತಿದೆ. ಪ್ರಜಾಧ್ವನಿ ಯಾತ್ರೆಯಲ್ಲಿ ಪ್ರಜೆಗಳೆ ಇಲ್ಲಾ. ಸಿದ್ದರಾಮಯ್ಯ ಖಾಲಿ ಡಬ್ಬಾ, ಹೀಗಾಗಿ ಹೆಚ್ಚು ಸೌಂಡ್ ಮಾಡ್ತಿರುತ್ತಾರೆಂದು ಲೇವಡಿ ಮಾಡಿದರು.
ಕುಮಾರಸ್ವಾಮಿ ಬ್ರಾಹ್ಮಣರಿಗೆ ಅವಮಾನ ಮಾಡಿದ್ದಾರೆ. ಒಂದು ಸಮುದಾಯಕ್ಕೆ ಅಪಮಾನ ಮಾಡುವದು ಸರಿಯಲ್ಲಾ. ಹೀಗಾಗಿ ಕುಮಾರಸ್ವಾಮಿ ಆ ಸಮುದಾಯದ ಕ್ಷೇಮೆ ಕೇಳಬೇಕು ಎಂದರು. ಯಾಕೆ ಬ್ರಾಹ್ಮಣರು ಸಿಎಂ ಆಗಬಾರದಾ? ಕರ್ನಾಟಕ, ದೇಶವನ್ನು ಒಡೆದವರು ಯಾರು? ಮಾತನಾಡಲು ತಾಕತ್, ದಮ್ ಇದೆಯಾ ? ಈ ದೇಶವನ್ನು ವಿಭಜನೆ ಮಾಡಿದವರು ಯಾರು ? ಲೂಟಿ ಮಾಡಿದವರು ಯಾರು ? ಅನ್ನೋ ಬಗ್ಗೆ ಮಾತನಾಡಲಿ ಎಂದು ಎಂಎಲ್‌ಸಿ ರವಿಕುಮಾರ್ ಕಾಂಗ್ರೆಸ್ ಹಾಗೂ ಜೆಡಿಎಸ್ ರಡೂ ಪಕ್ಷಗಳ ಮುಖಂಡರಿಗೆ ಸವಾಲ್ ಹಾಕಿದರು.
ಸಂಸದ ತೇಜಸ್ವಿ ಸೂರ್ಯ ಅಮವಾಸ್ಯೆ ಇದ್ದಂತೆ: ಸಿದ್ದರಾಮಯ್ಯ
ಎಚ್‌ಡಿಕೆ ಹರಿಶ್ಚಂದ್ರರಲ್ಲ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇನೂ ಸತ್ಯಹರಿಶ್ಚಂದ್ರರಲ್ಲ. ಅವರ ಬಗ್ಗೆ ನಮಗೂ ಗೊತ್ತಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಮಾರ್ಮಿಕವಾಗಿ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಸಿಡಿ ಯಾತ್ರೆ ಮಾಡಲಿ ಎಂಬ ಕುಮಾರಸ್ವಾಮಿ ಅವರ ಟೀಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಿಡಿ, ತಾಜ್ ವೆಸ್ಟೆಂಡ್ ಹೋಟೆಲ್, ಅವರ ಮನೆ, ಅವರ ತೋಟದ ಮನೆ ಇವೆಲ್ಲ ಪ್ರಕರಣಗಳು ಗೊತ್ತಿವೆ. ಅವರು ಇದೇ ರೀತಿ ಮಾತನಾಡುತ್ತಿದ್ದರೆ ನಾವು ಕೂಡ ರಾಜಕಾರಣ ಮಾಡಲು ಬಂದವರು ಎನ್ನುವುದನ್ನು ತಿಳಿದುಕೊಳ್ಳಲಿ ಎಂದು ಹರಿಹಾಯ್ದರು.