ಸಿಂದಗಿಯಲ್ಲಿ ಪ್ರಜಾಧ್ವನಿ ಯಾತ್ರೆ: ಬಿಜೆಪಿ, ಜೆಡಿಎಸ್ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

Published : Feb 11, 2023, 07:28 PM IST
 ಸಿಂದಗಿಯಲ್ಲಿ ಪ್ರಜಾಧ್ವನಿ ಯಾತ್ರೆ: ಬಿಜೆಪಿ, ಜೆಡಿಎಸ್ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಸಾರಾಂಶ

ಸಿಂದಗಿ ಪಟ್ಟಣದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆ ಹಿನ್ನೆಲೆ ಆಗಮಿಸಿದ್ದ ಸಿದ್ದರಾಮಯ್ಯ ನಾನು ಹಿಂದೂ ಅಲ್ವಾ, ನಮ್ಮ ತಂದೆ, ತಾಯಿ ಹಿಂದೂ ಅಲ್ವಾ, ನನಗೆ ಸಿದ್ದರಾಮಯ್ಯ ಅಂತ ಹೆಸರಿಟ್ಟಿಲ್ವಾ ಎಂದು  ಸಿಡಿಮಿಡಿಗೊಂಡರು. ಸಿದ್ದರಾಮಯ್ಯ ಹಿಂದೂ, ಹಿಂದೂತ್ವ ಎಂದು ಓಟ್ ಬ್ಯಾಂಕ್ ಗಾಗಿ ಮಾತನಾಡ್ತಾರೆ ಎನ್ನುವ ಬಿಜೆಪಿ ನಾಯಕರ ಹೇಳಿಕೆಗೆ  ಗರಂ ಆದರು.

ವಿಜಯಪುರ (ಫೆ.11): ನಾನು ಹಿಂದೂ ಅಲ್ವಾ, ನಮ್ಮ ತಂದೆ, ತಾಯಿ ಹಿಂದೂ ಅಲ್ವಾ, ನನಗೆ ಸಿದ್ದರಾಮಯ್ಯ ಅಂತ ಹೆಸರಿಟ್ಟಿಲ್ವಾ ಎಂದು ಸಿದ್ದರಾಮಯ್ಯ ಸಿಡಿಮಿಡಿಗೊಂಡರು. ಸಿದ್ದರಾಮಯ್ಯ ಹಿಂದೂ, ಹಿಂದೂತ್ವ ಎಂದು ಓಟ್ ಬ್ಯಾಂಕ್ ಗಾಗಿ ಮಾತನಾಡ್ತಾರೆ ಎನ್ನುವ ಬಿಜೆಪಿ ನಾಯಕರ ಹೇಳಿಕೆಗೆ ಸಿದ್ದರಾಮಯ್ಯ ಗರಂ ಆದರು. ಸಿಂದಗಿ ಪಟ್ಟಣದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆ ಹಿನ್ನೆಲೆ ಆಗಮಿಸಿದ್ದ ಸಿದ್ದರಾಮಯ್ಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಹಿಂದುತ್ವ ಬಗ್ಗೆ ಮಾತನಾಡಿದರೆ ಓಟ್ ಬ್ಯಾಂಕ್ ಮಾಡುತ್ತಿದ್ದಾರೆ ಎಂದು ಹೇಳುತ್ತಾರೆ.  ಹಿಂದು- ಹಿಂದುತ್ವ ಅಂದರೆ ಏನು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಹರಿಹಾಯ್ದರು. 

ಹಿಂದೂತ್ವ ಎಂದಾಕ್ಷಣ ಬಿಜೆಪಿ ನಾಯಕರ ವಿರುದ್ಧ ಸಿದ್ದರಾಮಯ್ಯ ಗರಂ!
ಪ್ರಜಾಧ್ವನಿ ರಥಯಾತ್ರೆ ಇಂದು ಜಿಲ್ಲೆಯ ಸಿಂದಗಿ ಪಟ್ಟಣಕ್ಕೆ ಆಗಮಿಸಿದ ನಂತರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಸಿ.ಟಿ.ರವಿ ಹೇಳಿದ ಮಾತ್ರಕ್ಕೆ ನಾನು ಮುಸಲ್ಮಾನ್ ಆಗಲ್ವಾ. ಹಿಂದು ಬಗ್ಗೆ ಮಾತನಾಡಿದರೆ ತಮ್ಮನ್ನು ಹಿಂದು ವಿರೋಧಿ ಓಟ್ ಬ್ಯಾಂಕ್ ಗೋಸ್ಕರ್ ಮಾತನಾಡುತ್ತಾರೆ ಎನ್ನುತ್ತಾರೆ. ತಮ್ಮ ಅಧಿಕಾರ ಅವಧಿಯಲ್ಲಿ 15ಲಕ್ಷ ಮನೆಗಳನ್ನು ಹಂಚಿದ್ದೇನೆ, ಅದರಲ್ಲಿ ಕೇವಲ ಮುಸ್ಲಿಂರಿಗೆ ಹಂಚಿದ್ದೇನಾ, ಹಿಂದುಗಳು ಸಹ ಫಲಾನುಭವಿಗಳು ಇಲ್ಲವಾ? ಎಂದು ಪ್ರಶ್ನಿಸಿದರು. 

ಸುಳ್ಳು ಮುಚ್ಚಿಕೊಳ್ಳಲು ಬಿಜೆಪಿ ಹೇಳಿಕೆ:
ಇವೆಲ್ಲಾ ಸುಳ್ಳು ಮುಚ್ಚಿ ಕೊಳ್ಳಲು ಬಿಜೆಪಿ ಈ ರೀತಿ ಹೇಳಿಕೆ ನೀಡುತ್ತದೆ ಎಂದು ಆರೋಪಿಸಿದರು. ಬಿಜೆಪಿಗೆ ಭ್ರಷ್ಟಾಚಾರ, ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಬದಲಾವಣೆ ಮಾಡಲು ಆಗಿಲ್ಲ, ರೈತರ ಬಿಕ್ಕಟ್ಟಿಗೆ ಪರಿಹಾರ ಒದಗಿಸಲಾಗಿಲ್ಲ, ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ 2017ರಲ್ಲಿ ಹೇಳಿದ್ದರು.‌ ಆದರೆ, ರೈತರ ಸಾಲ ದುಪ್ಪಟ್ಟಾಯಿತೇ ಹೊರತು ಆದಾಯ ದುಪ್ಪಟ್ಟು ಆಗಲಿಲ್ಲ ಎಂದು ಟೀಕಿಸಿದರು.

ಅಕ್ಕಿ 5 ಕೆ.ಜಿಗೆ ಇಳಿಸಿದ್ದು ಸುಳ್ಳಾ:
ಸಿದ್ದರಾಮಯ್ಯ ಆರೋಪಗಳೆಲ್ಲ ಸುಳ್ಳು ಎನ್ನುವ ಸಿಎಂ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ಈಗ ಏಳು ಕೆಜಿ ಇದ್ದ ಅಕ್ಕಿ 5 ಕೆಜಿಗೆ ಇಳಿಸಿದ್ದು ಸುಳ್ಳಾ? ಅಕ್ಕಿ ಕೇಂದ್ರ ಸರ್ಕಾರದ್ದು, ಚೀಲ ಮಾತ್ರ ಕಾಂಗ್ರೆಸ್‌ನದ್ದು ಎನ್ನುವ ಬಿಜೆಪಿಗರು ತಮ್ಮದೇ ಪಕ್ಷದ ಆಡಳಿತವಿರುವ ಉತ್ತರ ಪ್ರದೇಶ, ಗುಜರಾತ, ಅಸ್ಸಾಂನಲ್ಲಿ ಏಕೆ ಕೊಡುತ್ತಿಲ್ಲ? ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ಕೊಡುವು ದಾಗಿ ಭರವಸೆ ನೀಡಿದ್ದೇವೆ ಎಂದರು.

ಕನ್ನಡಪರ ಹೋರಾಟಗಾರರ ಮೇಲೆ ರೌಡಿಶೀಟ ತೆರೆದಿದ್ದು ತಪ್ಪು:
ಬೆಳಗಾವಿ ಕನ್ನಡ ಹೋರಾಟಗಾರರ ವಿರುದ್ಧ ರೌಡಿಶೀಟರ್ ಓಪನ್ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ರೌಡಿಶೀಟ ಓಪನ್ ಮಾಡಬಾರದು, ಕನ್ನಡ ಹೋರಾಟಗಾರರ ವಿರುದ್ಧ ಕೇಸ್ ಹಾಕಬಾರದು ಎಂದರು. ಕೇಸ್ ಹಾಕಿದ್ದರೇ ತಕ್ಷಣವೇ ಕೇಸ್ ವಾಪಸ್ ಪಡೆದು, ಪ್ರಕರಣ ಹಿಂಪಡೆಯಬೇಕು. ಕನ್ನಡ ಭಾಷೆ, ಜಲ, ನೆಲಕ್ಕಾಗಿ ಹೋರಾಟ ಮಾಡಿದರೆ ಅವರ ಮೇಲೆ ಕೇಸ್ ಹಾಕಬಾರದು, ನಮ್ಮ ಭಾಷೆ, ನೆಲ, ಜಲಕ್ಕಾಗಿ ಹೋರಾಟ ಮಾಡೋದು ನಮ್ಮ ಹಕ್ಕು ಎಂದರು. ಅದನ್ನ ಉಳಿಸಬೇಕಾದ್ದು ನಮ್ಮ ಸಂವಿಧಾನಿಕ ಹಕ್ಕು, ಒಕ್ಕೂಟ ವ್ಯವಸ್ಥೆ ಇರೋದ್ಯಾಕೆ? ಎಂದು ಪ್ರಶ್ನಿಸಿದ ಅವರು, ಮಹಾರಾಷ್ಟ್ರದವರು ನಮ್ಮ ಭಾರತೀಯರೆ, ಹಾಗಂತ ಏನ್ ಮಾಡಿದ್ರು ನಡೆಯೋಲ್ಲ, ಕಾಲು ಕೆರೆದು ಬರ್ತಾರೆ, ಮಹಾಜನ್ ಆಯೋಗದ ವರದಿಯಲ್ಲಿ ತೀರ್ಮಾನ ಆಗಿಲ್ವಾ..? ಅಂತಿಮವಾಗಿ ಆಗಿದೆ ಮತ್ಯಾಕೆ ಕಾಲು ಕೆರೆದುಕೊಂಡು ಜಗಳಕ್ಕೆ ಬರ್ತಾರೆ ಎಂದರು.

ಸಿದ್ದರಾಮಯ್ಯಗೆ ಮೇಕಪ್‌ ಮಾಡಿ ಸಿಎಂ ಮಾಡಿದ್ದು ನಾನೇ: ಸಿ.ಎಂ.ಇಬ್ರಾಹಿಂ

ಜೆಡಿಎಸ್ ಬಗ್ಗೆ ವ್ಯಂಗ್ಯವಾಡಿದ ಸಿದ್ದರಾಮಯ್ಯ:
ಜೆಡಿಎಸ್ ನಾಯಕ ಕುಮಾರಸ್ವಾಮಿ ಮುಂದಿನ ಸಿಎಂ ಆಗದಿದ್ದರೆ, ತಾವು ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಜೆಡಿಎಸ್ ರಾಜಾಧ್ಯಕ್ಷ ಸಿ.ಎಂ‌.ಇಬ್ರಾಹಿಂ ಹೇಳಿಕೆಗೆ ವ್ಯಂಗ ಮಾಡಿದ, ಸಿದ್ದ ರಾಮಯ್ಯ ಪಾಪ ಅವರಿಗೆ ವಯಸ್ಸಾಗಿದೆ. ನಾನು ಜೆಡಿಎಸ್ ನಲ್ಲಿ ಇದ್ದಾಗ 58 ಸ್ಥಾನಗಳಿಸಿದ್ದೇವು, ಆ ಮೇಲೆ 28ಕ್ಕೆ ಇಳಿಯಿತು,  ಕಳೆದ ಬಾರಿ 37 ಸೀಟು ಬಂದಿವೆ ಎಂದರು.

Vijayapura: ಸಿಎಂ ಆಗಲೆಂದು ಹರಸಿ ಸಿದ್ದರಾಮಯ್ಯಗೆ ಕೂಡಿಟ್ಟ 5,000 ರೂ ದೇಣಿಗೆ ನೀಡಿದ ಬಾಲಕಿ!

ಈ ತಿಂಗಳ ಕೊನೆ ವಾರದಲ್ಲಿ ಕಾಂಗ್ರೆಸ್ ಪಟ್ಟಿ ಬಿಡುಗಡೆ: 
ಈ ಬಾರಿ ರಾಜ್ಯದಲ್ಲಿ 130 ಅಥವಾ 150ರಷ್ಟು ಸ್ಥಾನಗಳಿಸಿ ಅಧಿಕಾರಕ್ಕೆ ಬರುತ್ತೇವೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ಸಾಮಾಜಿಕ ನ್ಯಾಯದಡಿ ಸೀಟು ಹಂಚಿಕೆ ಮಾಡಲಾಗುವದು. ಈ ತಿಂಗಳು ಕೊನೆ ಟಿಕೇಟ್ ಫೈನಲ್ ಆಗಲಿದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಧಿವೇಶನ ವೇಳೆ ಹಳೆಯ ಬೇಡಿಕೆಗಳ ಹೊಸ ಕೂಗು!
ಸದನದಲ್ಲಿ ಆಡಳಿತ, ವಿಪಕ್ಷ ಭಾರೀ ಕದನ ಸಂಭವ!