ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನ ಮೌನ ವಹಿಸಿದರೆ ಜನತಂತ್ರ ವ್ಯವಸ್ಥೆ ಅಪಾಯಕ್ಕೆ ಸಿಲುಕುತ್ತದೆ. ಶಿಕ್ಷಣ ಸಚಿವರ ಹೆಸರು ಮಧು. ಸ್ವಲ್ಪ ಮೃದುವಾಗಿರಬೇಕೆ ಹೊರತು ಶಿಕ್ಷಣ ನೀತಿಯನ್ನೇ ಕಿತ್ತೆಸೆಯುತ್ತೇನೆ ಎನ್ನುವುದು ಸರಿಯೇ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಟೀಕಿಸಿದರು.
ಮೈಸೂರು (ಸೆ.29): ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನ ಮೌನ ವಹಿಸಿದರೆ ಜನತಂತ್ರ ವ್ಯವಸ್ಥೆ ಅಪಾಯಕ್ಕೆ ಸಿಲುಕುತ್ತದೆ. ಶಿಕ್ಷಣ ಸಚಿವರ ಹೆಸರು ಮಧು. ಸ್ವಲ್ಪ ಮೃದುವಾಗಿರಬೇಕೆ ಹೊರತು ಶಿಕ್ಷಣ ನೀತಿಯನ್ನೇ ಕಿತ್ತೆಸೆಯುತ್ತೇನೆ ಎನ್ನುವುದು ಸರಿಯೇ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಟೀಕಿಸಿದರು. ನಗರದ ನಜರಬಾದ್ ನ ವಿಕೆ ಫಂಕ್ಷನ್ ಹಾಲ್ನಲ್ಲಿ ಪೀಪಲ್ಸ್ ಫೋರಮ್ ಫಾರ್ ಕರ್ನಾಟಕ ಎಜುಕೇಷನ್ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ- 2020 ಕುರಿತು ಶಿಕ್ಷಣ ತಜ್ಞರ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದಲ್ಲಿ ಯಾವುದೇ ಕಾಯಿದೆ ಜಾರಿಗೆ ಬರಬೇಕಾದರೂ ಪ್ರಜೆಗಳ ಧ್ವನಿ ಅಥವಾ ಚರ್ಚೆ ಬಹಳ ಮುಖ್ಯ. ಯಾರೇ ಆದರೂ ರಾಜಕಾರಣವನ್ನು ವೃತ್ತಿಯಾಗಿ ತೆಗೆದುಕೊಳ್ಳಬಾರದು. ಬದಲಿಗೆ ವ್ರತವಾಗಿ ತೆಗೆದುಕೊಳ್ಳಬೇಕು. ಅಂತಹವರ ಸಂಖ್ಯೆ ಬೆರಳೆಣಿಕೆಯಷ್ಟಿದೆ. ಕಾಯಿದೆ ಕುರಿತು ಚರ್ಚೆ ಆಗುವುದು ಒಳ್ಳೆಯ ಬೆಳವಣಿಗೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನ ಮೌನ ವಹಿಸಿದರೆ ಜನತಂತ್ರ ವ್ಯವಸ್ಥೆ ಅಪಾಯಕ್ಕೆ ಸಿಲುಕುತ್ತದೆ ಎಂದು ಅವರು ಹೇಳಿದರು.
ಲಿಂಗಾಯತ ಡಿಸಿಎಂ ಯಾರಿಗೆ ಬೇಕು, ಮಾಡೋದಿದ್ರೆ ಸಿಎಂ ಮಾಡಿ: ಶಾಮನೂರು ಶಿವಶಂಕರಪ್ಪ ಸ್ಪೋಟಕ ಹೇಳಿಕೆ
ರಾಜಕೀಯ ವೇಷ ಬೇಡ: ನಿಮ್ಮ ಹೆಸರು [ಸಚಿವರು] ಮಧು ಸ್ವಲ್ಪ ಮೃದುವಾಗಿರಬೇಕು. ಕಿತ್ತು ಬಿಸಾಡುವುದು ಎಂದರೆ ಹೇಗೆ? ಯಾಕೆ ಈ ನೀತಿಯನ್ನು ತೆಗೆಯುತ್ತಿದ್ದೇವೆ ಎಂಬುದನ್ನು ಹೇಳಬೇಕು. ಅದಕ್ಕೆ ಚರ್ಚೆ ಆಗಬೇಕು. ಪ್ರತಿಯೊಂದನ್ನು ರಾಜಕೀಯ ವೇಷ ಹಾಕಿ ನೋಡಬಾರದು. ಕಾಯಿದೆ ರದ್ದುಪಡಿಸುವ ಮುನ್ನ ಸಂವಾದ ಚರ್ಚೆ ಆಗಬೇಕಲ್ಲವೇ? ಪರಿಪೂರ್ಣ ಅಧ್ಯಯನ ನಡೆಸಿದರೆ ಇದು ರಾಷ್ಟ್ರಕ್ಕೆ ಬೇಕಾದ ನೀತಿ ಆಗುತ್ತದೆ. ಬಿಜೆಪಿ ಜಾರಿಗೆ ತಂದಿದೆ ಎಂಬ ಕಾರಣಕ್ಕೆ ಚರ್ಚೆ ಬೇಡ. ಒಟ್ಟು ಜನಸಂಖ್ಯೆಯಲ್ಲಿ ಶೇ. 1ರಷ್ಟು ಮಂದಿಗೆ ಮಾತ್ರ ಸರ್ಕಾರಿ ಕೆಲಸ ಸಿಗಬಹುದು. ಉಳಿದವರು ಸ್ವಂತ ಬದುಕು ಕಟ್ಟಿಕೊಳ್ಳಲು ರಾಷ್ಟ್ರೀಯ ಶಿಕ್ಷಣ ನೀತಿ ಅನುಕೂಲವಾಗಿದೆ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಡ್ರಾಪ್ ಔಟ್ ಸಂಖ್ಯೆ ಹೆಚ್ಚಾಗುತ್ತದೆ ಎಂಬುದು ಸುಳ್ಳು. ಕರ್ನಾಟಕದ ಸಾಕ್ಷಿ ಪ್ರಜ್ಞೆ ಪ್ರಜ್ಞೆ ಬಡಿದೆಬ್ಬಿಸಬೇಕಿದ್ದರೆ ರಾಷ್ಟ್ರೀಯ ಶಿಕ್ಷಣ ನೀತಿ ತಜ್ಞರ ಸಭೆ ಕರೆಯಬೇಕು ಎಂದು ಅವರು ಹೇಳಿದರು. ಸಿದ್ದರಾಮಯ್ಯ ಸರ್ಕಾರ ಇದ್ದಾಗಲೇ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಪ್ರತಿಗೆ ಅನುಮತಿ ನೀಡಲಾಯಿತು. ಅವರ ಸರ್ಕಾರದ ಅವಧಿಯಲ್ಲಿ ರಚಿಸಿದ ಜ್ಞಾನ ಆಯೋಗದ ಅಧ್ಯಕ್ಷರಾಗಿದ್ದ ಡಾ. ಕಸ್ತೂರಿ ರಂಗನ್ಅವರ ಅಧ್ಯಕ್ಷತೆಯಲ್ಲಿಯೇ ಈ ನೀತಿ ರೂಪಿತವಾಗಿದೆ. ಇದನ್ನು ಬಜೆಟ್ನಲ್ಲಿ ಸಿದ್ದರಾಮಯ್ಯ ಒಂದೇ ವಾಖ್ಯೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ರದ್ದುಪಡಿಸುವುದಾಗಿ ಹೇಳಿರುವುದು ವಿಪರ್ಯಾಸ ಅಲ್ಲವೇ ಎಂದರು.
ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಕೆ. ಚಿದಾನಂದ ಗೌಡ ಮಾತನಾಡಿ, ಎನ್ ಇಪಿ ವಿದ್ಯಾರ್ಥಿ ಕೇಂದ್ರೀತವಾಗಿದೆ. ಈ ಹಿಂದಿನದ್ದು ವಿವಿ ಹಾಗೂ ಪ್ರಾಧ್ಯಾಪಕರ ಕೇಂದ್ರೀತಕೃತವಾಗಿತ್ತು. ಈ ನೀತಿಯಿಂದ ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚಳವಾಗಲಿದೆ. ಸಮೀಕ್ಷೆಯಿಂದಲೂ ಇದು ದೃಢಪಟ್ಟಿದೆ. 113 ದೇಶಗಳ ಸಮೀಕ್ಷೆ ಇದನ್ನು ದೃಢಪಡಿಸಿದೆ. 6 ನೇ ವಯಸ್ಸಿನ ಮಕ್ಕಳು ಮೊದಲ ಸ್ಥಾನದಲ್ಲಿರುವುದು 16 ನೇ ವಯಸ್ಸಿಗೆ ಬಂದಾಗ 26 ನೇ ಸ್ಥಾನಕ್ಕೆ ಕುಸಿದಿದೆ. ಒಂದನೆ ತರಗತಿಯಲ್ಲಿ 100 ರಷ್ಟು ಇದ್ದ ಸೃಜನಶೀಲತೆ 10 ನೇ ತರಗತಿಗೆ ಶೇ.10 ರಷ್ಟು ಇರುತ್ತದೆ. ಹಾಗಾಗಿ ಎನ್ ಇಪಿ ಹೆಚ್ಚು ಸಹಕಾರಿ ಆಗಲಿದೆ. ಎಂದರು.
ಕೈಪಿಡಿ ಬಿಡುಗಡೆ: ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಎನ್ ಇಪಿ ಕುರಿತು ಸಮಗ್ರ ಮಾಹಿತಿ ಇರುವ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು. ಈ ವೇಳೆ ಮಾತನಾಡಿದ ಮೈಸೂರು ವಿವಿ ಸಿಂಡಿಕೇಟ್ಮಾಜಿ ಸದಸ್ಯ ಡಾ.ಈ.ಸಿ. ನಿಂಗರಾಜ ಗೌಡ ಮಾತನಾಡಿ, 1994 ರಲ್ಲಿ ಮಧ್ಯಪ್ರದೇಶದ ಇಂದೋರ್ ನಲ್ಲಿ ಎನ್ ಇಪಿ ಜಾರಿ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ನಂತರ ಈ ಬಗ್ಗೆ ಚರ್ಚೆ ಎಲ್ಲೆಡೆ ನಡೆಯಿತು ಎಂದರು.
ವಾಜಪೇಯಿ ಪ್ರಧಾನಿ ಆಗಿದ್ದಾಗ 87 ಲಕ್ಷ ಜನ ಸಹಿ ಸಂಗ್ರಹಿಸಲಾಗಿತ್ತು. ಲೋಕಸಭೆ ಚುನಾವಣೆಯ ಪ್ರಣಾಳಿಕೆಯಲ್ಲಿ ಎನ್ ಇಪಿ ಜಾರಿ ಬಗ್ಗೆ ಘೋಷಿಸಲಾಗಿತ್ತು. ಡಾ.ಕೆ. ಕಸ್ತೂರಿ ರಂಗನ್ ನೇತೃತ್ವದಲ್ಲಿ ಜಾರಿಗೆ ಬಂತು. 3 ಲಕ್ಷ ಸಲಹೆ ಬಂದಿತ್ತು. ನಳಂದ, ತಕ್ಷ ಶಿಲಾ, ಗುರುಕುಲ ಪದ್ದತಿಯಲ್ಲಿ ಎನ್ ಇಪಿ ಜಾರಿಗೆ ಬಂದರೆ ಸ್ವಾಮಿ ವಿವೇಕಾನಂದರು ಹೇಳಿದಂತೆ ಭಾರತ ವಿಶ್ವಗುರು ಆಗುತ್ತದೆ. ತರಾತುರಿಯಲ್ಲಿ ಕೇಂದ್ರ ಸರಕಾರ ಮಾಡಿಲ್ಲ. ಎನ್ ಒಪಿ ಜಾರಿಯಾದ ಮೊದಲ ರಾಜ್ಯ ಕರ್ನಾಟಕ. ದೃಢಸಂಕಲ್ಪ, ನಿರಂತರ ಸಂವಹನ, ಮಾಹಿತಿ ವಿನಿಮಯದಿಂದ ಜಾರಿಗೊಳಿಸಿದೆ. ವಿದ್ಯಾರ್ಥಿ ಸ್ನೇಹಿ ಆಗಿದೆ. ರಾಜಕೀಯ ಕಾರಣದಿಂದ ಇದನ್ನು ರದ್ದು ಮಾಡಬಾರದು ಎಂದು ಅವರು ಆಗ್ರಹಿಸಿದರು.
ನಟ Jaggesh ದಿಢೀರ್ ಆಸ್ಪತ್ರೆಗೆ ದಾಖಲು: ಆತಂಕ ಹುಟ್ಟಿಸಿದ ನವರಸ ನಾಯಕನ ಪೋಟೋಸ್!
ಬೆಂಗಳೂರು ವಿವಿಯ ವಿಶ್ರಾಂತ ಕುಲಪತಿ ಪ್ರೊ. ವೇಣುಗೋಪಾಲ್, ಶಾಸಕ ಟಿ.ಎಸ್. ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ, ಪ್ರೊ.ಜಿ.ಸಿ. ರಾಜಣ್ಣ, ವಸಂತ್ ಕುಮಾರ್, ಗ್ರಾಹಕರ ಪರಿಷತ್ ನ ಭಾಮಿ ಶೆಣೈ, ಯಶಸ್ವಿನಿ ಸೋಮಶೇಖರ್, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಗಿರಿಧರ್, ಅಪ್ಪಣ್ಣ, ರಘು ಕೌಟಿಲ್ಯ, ಗುಂಡಪ್ಪಗೌಡ, ಮಾಜಿ ಮೇಯರ್ ವಿಶ್ವನಾಥ್, ಮಲ್ಲರಾಜೇ ಅರಸ್ ಮೊದಲಾದವರು ಇದ್ದರು.