ಸಿದ್ದರಾಮೋತ್ಸವಕ್ಕೆ ಜನ ಸೇರಿಸುವ ಹೊಣೆಹೊತ್ತುಕೊಂಡ ಬಿಜೆಪಿ ಹಿರಿಯ ನಾಯಕನ ಪುತ್ರ

By Ramesh B  |  First Published Jul 25, 2022, 7:22 PM IST

ಮಾಜಿ‌ ಸಿಎಂ ಸಿದ್ದರಾಮಯ್ಯನವರ 75ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಆಚರಿಸುತ್ತಿರುವ ಸಿದ್ದರಾಮೋತ್ಸವಕ್ಕೆ ಬಿಜೆಪಿ ಹಿರಿಯ ನಾಯಕ ವ್ಯಂಗ್ಯವಾಡಿ ಟೀಕೆ ಮಾಡಿದ್ದಾರೆ. ಆದ್ರೆ, ಅವರ ಪುತ್ರ ಇದೀಗ  ಸಿದ್ದರಾಮೋತ್ಸವಕ್ಕೆ ಜನರನ್ನು ಸೇರಿಸುವ ಹೊಣೆ ಹೊತ್ತುಕೊಂಡಿದ್ದು, ಅಚ್ಚರಿಗೆ ಕಾರಣವಾಗಿದೆ.


ಮೈಸೂರು, (ಜುಲೈ.25): ಮಾಜಿ‌ ಸಿಎಂ ಸಿದ್ದರಾಮಯ್ಯನವರ 75ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಆಚರಿಸುತ್ತಿರುವ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆಗಳು ನಡೆದಿವೆ. ಅವರ ಆಪ್ತರು, ಅಭಿಮಾನಿಗಳು ಕಾರ್ಯಕ್ರಮದ ಬಗ್ಗೆ ಜಿಲ್ಲಾ, ತಾಲೂಕು ಮಟ್ಟದಲ್ಲಿ ಸಭೆ ನಡೆಸುತ್ತಿದ್ದಾರೆ.

75 ನೇ ಹುಟ್ಟುಹಬ್ಬದ ನಿಮಿತ್ತ ಅಮೃತ ಮಹೋತ್ಸವ ಹೆಸರಿನಲ್ಲಿ ದಾವಣಗೆರೆಯಲ್ಲಿ ಆಗಸ್ಟ್ 03ರಂದ ಅದ್ಧೂರಿ ಕಾರ್ಯಕ್ರಮವನ್ನು  ಆಯೋಜಿಸಲಾಗಿದೆ. ಆದ್ರೆ, ಇದಕ್ಕೆ ಕಾಂಗ್ರೆಸ್‌ನಲ್ಲಿ ಆಕ್ಷೇಮಗಳು ವ್ಯಕ್ತವಾಗುತ್ತಿವೆ. ಮತ್ತೊಂದೆಡೆ ಇದಕ್ಕೆ ಬಿಜೆಪಿ ಲೇವಡಿ ಮಾಡುತ್ತಲ್ಲೇ ಇದೆ. ಸಿದ್ದರಾಮೋತ್ಸವ ಅಲ್ಲ ಇದು ಸಿದ್ದರಾಮನವರ ಅಂತ್ಯೋತ್ಸವ ಅಂತೆಲ್ಲ ವ್ಯಂಗ್ಯವಾಡಿದೆ. ಅದರಲ್ಲೂ ಮುಖ್ಯವಾಗಿ ರಾಜಕೀಯ ವೈರಿ ಬಿಜೆಪಿ ಪರಿಷ್ ಸದಸ್ಯ ಎಚ್‌ ವಿಶ್ವನಾಥ್ ಆಕ್ಷೇಪಿಸಿದ್ದು, ಹುಟ್ಟುಹಬ್ಬ ಕಾರ್ಯಕರ್ತರ ಉತ್ಸವವಾಗಬೇಕು. ಆದರೆ ವ್ಯಕ್ತಿ ಪೂಜೆಯ ಉತ್ಸವವಾಗಬಾರದು ಎಂದು ಟೀಕೆಸಿದ್ದರು. ಆದ್ರೆ, ಇದೀಗ ವಿಶ್ವನಾಥ್ ಅವರ ಪುತ್ರ ಸಿದ್ದರಾಮೋತ್ಸಕ್ಕೆ ಕೈಜೋಡಿಸಿದ್ದು, ಇದು ಅಚ್ಚರಿಗೆ ಕಾರಣವಾಗಿದೆ.

Tap to resize

Latest Videos

News Hour Special: ಸಿದ್ದರಾಮೋತ್ಸವ ಹಿಂದಿನ ಉದ್ದೇಶ ಬಿಚ್ಚಿಟ್ಟ ಎಚ್‌ಸಿ ಮಹದೇವಪ್ಪ

ಸಿದ್ದರಾಮೋತ್ಸಕ್ಕೆ ಕೈಜೋಡಿಸಿದ ವಿಶ್ವನಾಥ್ ಪುತ್ರ
ಹೌದು.....ವಿಶ್ವನಾಥ್ ಅವರ ಪುತ್ರ ವಿಶ್ವನಾಥ್ ಪುತ್ರ ಅಮಿತ್, ಸಿದ್ದರಾಮೋತ್ಸವಕ್ಕೆ ಜನರನ್ನ ಸೇರಿಸುವ ಹೊಣೆ ಹೊತ್ತಿಕೊಂಡಿದ್ದಾರೆ. ಸಿದ್ದರಾಮಯ್ಯನವರು ಹಾಗೂ ತಮ್ಮ ತಂದೆ ರಾಜಕೀಯ ಬದ್ಧ ವೈರಿಗಳು. ಆದರೂ ಸಹ ಇದೀಗ ಅಮಿತ್ ಸಿದ್ದರಾಮೋತ್ಸವಕ್ಕ ಕೈಜೋಡಿಸಿರುವುದು ಅಚ್ಚರಿಗೆ ಕಾರಣವಾಗಿದೆ.

ಕುರುಬ ಸಮುದಾಯದ ಪ್ರಮುಖ ಮುಖಂಡರು ಮೈಸೂರಿನಲ್ಲಿ ಸಿದ್ದರಾಮೋತ್ಸವದ ಪೂರ್ವಭಾವಿ ಸಭೆ ನಡೆಸಿದರು. ಈ ಸಭೆಯಲ್ಲಿ ವಿಶ್ವನಾಥ್ ಪುತ್ರ   ಅಮಿತ್ ಭಾಗಿಯಾಗಿದ್ದು, ಸಿದ್ದರಾಮೋತ್ಸವಕ್ಕೆ ಜನರನ್ನ ಸೇರಿಸುವ ಹೊಣೆ ಅಮಿತ್ ಹೊತ್ತಿಕೊಂಡಿದ್ದಾರೆ.

ನಾನು ಜಿಲ್ಲಾ ಪಂಚಾಯಿತಿ ಚುನಾವಣೆ ಗೆಲ್ಲಲು ಸಿದ್ದರಾಮಯ್ಯ ಕಾರಣ.ನನ್ನ ಪರ ಪ್ರಚಾರಕ್ಕೆ ಬಂದು ನನ್ನನ್ನು ಗೆಲ್ಲಿಸಿದ್ರು.
ಸಿದ್ದರಾಮಯ್ಯ ಹೊಳೆಯುವ ವಜ್ರವಿದ್ದಂತೆ. ನಾವು ಮತ್ತಷ್ಟು ಹೊಳಪು ನೀಡುವ ಕೆಲಸ ಮಾಡಬೇಕು. ಶಾಸಕ ಹೆಚ್ ಪಿ ಮಂಜುನಾಥ್, ಮುಖಂಡ ರವಿಶಂಕರ್ ಜೊತೆಗೂಡಿ ಹೆಚ್ಚಿನ ಜನರನ್ನ ಸೇರಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ ಅಂದಿನ ಋಉಣ ತೀರಿಸಿಲು ಮುಂದಾಗಿದ್ದಾರೆ.

 ಆಗಸ್ಟ್ 3 ರಂದು  ಮಾಜಿ ಸಿಎಂ ಸಿದ್ದರಾಮಯ್ಯ ಅವರ 75 ನೇ ಹುಟ್ಟುಹಬ್ಬದ ನಿಮಿತ್ತ ಅಮೃತ ಮಹೋತ್ಸವ ಹೆಸರಿನಲ್ಲಿ ದಾವಣಗೆರೆಯಲ್ಲಿ ಅದ್ಧೂರಿ ಕಾರ್ಯಕ್ರಮವನ್ನು  ಆಯೋಜಿಸಲಾಗಿದೆ. ಸಿದ್ದರಾಮಯ್ಯನವರ ಆಪ್ತ ಶಾಸಕರು, ನಾಯಕರು ಕಾರ್ಯಕ್ರಮ ಆಯೋಜಿಸಿದ್ದು, ಇದಕ್ಕೆ ಕಾಂಗ್ರೆಸ್‌ನಲ್ಲಿ ಆಕ್ಷೇಪ ವ್ಯಕ್ತವಾಗುತ್ತಿವೆ. 

 ಮಾಜಿ‌ ಸಿಎಂ ಸಿದ್ದರಾಮಯ್ಯನವರ 75ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಆಚರಿಸುತ್ತಿರುವ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಹೆಚ್.ವಿಶ್ವನಾಥ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹುಟ್ಟುಹಬ್ಬ ಕಾರ್ಯಕರ್ತರ ಉತ್ಸವವಾಗಬೇಕು. ಆದರೆ ವ್ಯಕ್ತಿ ಪೂಜೆಯ ಉತ್ಸವವಾಗಬಾರದು. ಯಾವುದೇ ಉತ್ಸವವಾದರೂ‌ ಪಕ್ಷದ ಚೌಕಟ್ಟಿನೊಳಗೇ ಆಗಬೇಕು ಎಂದಿದ್ದರು.

click me!