ಇಂದಿನ ರಾಜಕಾರಣದಲ್ಲಿ ಕಬಡ್ಡಿ, ಚದುರಂಗ ಎರಡೂ ಗೊತ್ತಿರಬೇಕು: ವಿಪಕ್ಷಗಳಿಗೆ ವಿಜಯೇಂದ್ರ ಟಾಂಗ್

By Gowthami K  |  First Published Jul 25, 2022, 5:00 PM IST

ವಿಪಕ್ಷಗಳ ನಡವಳಿಕೆ ಬೀದಿ ನಾಟಕವಾಗಿದೆ, ಕಾಂಗ್ರೆಸ್ ನೋಡಿ ರಾಜ್ಯದ ಜನ ಹಾಸ್ಯ ಮಾಡುತ್ತಿದ್ದಾರೆ ಎಂದು ಬಾಗಲಕೋಟೆ ಜಿಲ್ಲೆಯ ಇಲಕಲ್ ಪಟ್ಟಣದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.


ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್

ಬಾಗಲಕೋಟೆ (ಜು.25): ಇಂದಿನ ರಾಜಕಾರಣ ತಂತಿಯ ಮೇಲೆ ನಡೆದಂತೆ ಇದೆ, ಹೀಗಾಗಿ ರಾಜಕಾರಣಕ್ಕಾಗಿ ಕಬಡ್ಡಿನೂ ಗೊತ್ತಿರಬೇಕು, ಚದುರಂಗದ ಆಟನೂ ಗೊತ್ತಿರಬೇಕು  ಎಂದು ಹೇಳುವ ಮೂಲಕ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ‌.ವೈ.ವಿಜಯೇಂದ್ರ ವಿರೋಧ ಪಕ್ಷಗಳಿಗೆ ಟಾಂಗ್ ನೀಡಿದರು.
ಅವರು ಬಾಗಲಕೋಟೆ ಜಿಲ್ಲೆಯ ಇಲಕಲ್ ಪಟ್ಟಣಕ್ಕೆ ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, ಮರಿ ಯಡಿಯೂರಪ್ಪನಾಗಿ ವಿಪಕ್ಷಗಳಿಗೆ ನನ್ನ ಭಯವಿದೆ ಎಂಬ ವಿಜಯೇಂದ್ರ ಹೇಳಿಕೆಗೆ ಸಮರ್ಥನೆ ಇಂದಿನ ರಾಜಕಾರಣ ಅಂದ್ರೆ ತಂತಿ ಮೇಲೆ ನಡೆದ ಹಾಗಿದೆ, ಹೀಗಾಗಿ ರಾಜಕಾರಣಕ್ಕಾಗಿ ಕಬಡ್ಡಿನೂ ಗೊತ್ತಿರಬೇಕು, ಚದುರಂಗ ಆಟನೂ ಗೊತ್ತಿರಬೇಕು, ಡೋಂಟ್ ರೀಡ್ ಟೂ ಮಚ್  ಬಿಟವಿನ್ ದ್ ಲೈನ್ಸ್ ಎಂದ ಅವರು, ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಇದೆ. ಇವತ್ತು ಕರ್ನಾಟಕದಲ್ಲಿ ವಿರೋಧ ಪಕ್ಷಗಳು ಸಿಎಂ ಸ್ಥಾನಕ್ಕೆ ಕಿತ್ತಾಡುತ್ತಿದ್ದಾರೆ. ವಿಪಕ್ಷಗಳ ನಡುವಳಿಕೆ ಬೀದಿ ನಾಟಕವಾಗಿದೆ. ಕಾಂಗ್ರೆಸ್ ಪಕ್ಷದ ನಡವಳಿಕೆ ನೋಡಿ ರಾಜ್ಯದ ಜನ ಹಾಸ್ಯ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಯಡಿಯೂರಪ್ಪ ಹಾದಿಯಲ್ಲಿ ಬೊಮ್ಮಾಯಿ‌ ಸಾಗುತ್ತಿದ್ದಾರೆ. ತುಳಿತಕ್ಕೆ ಒಳಗಾದ ಜನಾಂಗವನ್ನ ಮೇಲೆತ್ತುವ ಕೆಲಸ ಬೊಮ್ಮಾಯಿ ಅವರು ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಮತ್ತೇ ಬಿಜೆಪಿ ಸರ್ಕಾರ ಬರುತ್ತೇ, ಉತ್ತಮ ಜನಪರ ಕಾರ್ಯ ಕೊಡುತ್ತೆ ಅನ್ನೋ ವಿಶ್ವಾಸ ಇದೆ ಎಂದರು.

Tap to resize

Latest Videos

ಶಿಕಾರಿಪುರ ಸ್ಫರ್ಧೆ ಜನರ ಇಚ್ಚೆಯಂತೆ: ಶಿಕಾರಿಪೂರ ಕ್ಷೇತ್ರದಿಂದ ಸ್ಪರ್ಧೆ ಮಾಡುವ ವಿಚಾರದಲ್ಲಿ ಪೂಜ್ಯ ತಂದೆಯವರು ಅವರು ಸ್ಪಷ್ಟವಾಗಿ ಹೇಳಿದ್ದಾರೆ ಎಂದ ವಿಜಯೇಂದ್ರ , ಶಿಕಾರಿಪುರ ಕ್ಷೇತ್ರದ ಜನರ, ಬಿಜೆಪಿ ಮುಖಂಡರ, ಕಾರ್ಯಕರ್ತರ ಒತ್ತಾಯದ ಮೇರೆಗೆ ನಾನು ಚುನಾವಣಾ ಕಣದಿಂದ ಹಿಂದೆ ಸರೆಯುತ್ತಿದ್ದೇನೆ ಎಂದು ತಂದೆಯವರು ಹೇಳಿದ್ದಾರೆ. ನಮ್ಮ ಪಕ್ಷದ ಮುಖಂಡರು ಯಾರಾದ್ರೂ ಸ್ಪರ್ಧಿಸಿದ್ರೆ ಗೆಲ್ಲಿಸುವ ಕಾರ್ಯ ಮಾಡ್ತೇನೆ, ಮಾಜಿ ಸಿಎಂ ಬಿಎಸ್ ವೈ ಹೇಳಿದಾಗ ಕ್ಷೇತ್ರದ ಬಿಜೆಪಿ ಮುಖಂಡರು ನಾವ್ಯಾರು ಸ್ಪರ್ಧೆ ಮಾಡಲ್ಲ ಅಂದ್ರು, ನೀವೇ ಸ್ಪರ್ಧಿಸಬೇಕು, ಇಲ್ಲದಿದ್ರೆ  ವಿಜಯೇಂದ್ರ ಅವರನ್ನ ನಿಲ್ಲಿಸಬೇಕೆಂದು ಕ್ಷೇತ್ರದ ಬಿಜೆಪಿ ಮುಖಂಡರು ಆಗ್ರಹ ಮಾಡಿದ್ದಾರೆ. ಆ ಹಿನ್ನೆಲೆ ಪೂಜ್ಯ ತಂದೆಯವರು ಹೇಳಿಕೆ ನೀಡಿದ್ದಾರೆ, ಆದ್ರೆ ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ. ಬಿಜೆಪಿ ಪಕ್ಷದ ಅಭ್ಯರ್ಥಿ ಅಂತಿಮವಾಗಬೇಕಾದ್ರೆ ರಾಷ್ಟ್ರೀಯ ಮತ್ತು  ರಾಜ್ಯ  ನಾಯಕರು ತೀರ್ಮಾಣ ಮಾಡಬೇಕು. ಇದನ್ನೇ ಮಾನ್ಯ ಮಾಜಿ ಸಿಎಂ ಬಿಎಸ್ ವೈ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಹೇಳಿದರು.

ಬಿಜೆಪಿಯಲ್ಲಿ ವ್ಯಕ್ತಿ ಪೂಜೆ ನಡೆಯೋದಿಲ್ಲ, ಹಿರಿಯರ ಮಾರ್ಗದರ್ಶನದಂತೆ ಬಿಜೆಪಿ ಮತ್ತೇ ಅಧಿಕಾರಕ್ಕೆ :
ಹಳೇ ಮೈಸೂರು ಭಾಗದಲ್ಲೂ ವಿಜಯೇಂದ್ರ ಬಗ್ಗೆ ನಿರೀಕ್ಷೆ ಇಟ್ಟಿದ್ದಾರೆಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಯಾವೊಬ್ಬ ವ್ಯಕ್ತಿ ಒಂದು ಏರಿಯಾದಲ್ಲಿ, ಭಾಗದಲ್ಲಿ ಸ್ಫರ್ಧೆ ಮಾಡೋದ್ರಿಂದ‌ ಲಾಭವಾಗುತ್ತೇ, ನಷ್ಟವಾಗುತ್ತೇ ಅನ್ನೋ ಪ್ರಶ್ನೆಯೇ ಇಲ್ಲ. ಬಿಜೆಪಿ ಸಂಘಟಿತ ಪಕ್ಷವಾಗಿದೆ. ಬಿಜೆಪಿಯಲ್ಲಿ ವ್ಯಕ್ತಿ ಪೂಜೆ ನಡೆಯೋದಿಲ್ಲ, ನಾವೆಲ್ಲರೂ ಒಗ್ಗಟ್ಟಾಗಿ ಹಿರಿಯರ ಆಶೀರ್ವಾದದಿಂದ, ಮಾರ್ಗದರ್ಶನದಲ್ಲಿ ಬಿಜೆಪಿ ಅಧಿಕಾರಕ್ಕೆ ತರಬೇಕು. ರಾಜ್ಯಕ್ಕೆ ಒಳ್ಳೆಯ ಕೆಲಸವಾಗಬೇಕು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದರು.

 ಕುಮಾರಸ್ವಾಮಿ ರಾಜ್ಯ ಯಾತ್ರೆಯಿಂದ ಬಿಜೆಪಿಗೆ ನಷ್ಟ ಇಲ್ಲ:
 ರಾಜ್ಯಾದ್ಯಂತ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಡೆಸಲು ಮುಂದಾಗಿರೋ ಜೆಡಿಎಸ್ ಪಂಚರತ್ನ ಯಾತ್ರೆ ಎಫೆಕ್ಟ್ ವಿಚಾರವಾಗಿ ಮಾತನಾಡಿ, ಅದರಲ್ಲೇನಿದೇರಿ, ಪಾಪ ಚುನಾವಣೆ ಬಂತಲ್ಲಾ,ಎಲ್ಲ ರಾಜಕೀಯ ಪಕ್ಷದವರು ಮಾಡ್ತಾರೆ. ರಾಜಕೀಯ ಪಕ್ಷಗಳು ಅವರದ್ದೇಯಾದ ತಂತ್ರಗಳನ್ನ ಮಾಡ್ತಾರೆ. ರಾಜ್ಯದ ಜನ ಬಹಳಷ್ಟು ಪ್ರಜ್ಞಾವಂತರಿದ್ದಾರೆ. ಯಾರನ್ನ ಆಯ್ಕೆ ಮಾಡಿದ್ರೆ ರಾಜ್ಯದಲ್ಲಿ ಅಭಿವೃದ್ಧಿ ಆಗ್ತದೆ ಅನ್ನೋದು ಜನರಿಗೆ ಗೊತ್ತಿದೆ. ಮೋದಿಯವರಂತ ನಾಯಕತ್ವದಲ್ಲಿ ವಿಶ್ವಾಸ ಇಟ್ಟುಕೊಂಡ ಸಂದರ್ಭ ಇದು, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇರಬೇಕು. ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರಬೇಕು ಅನ್ನೋ ಆಸೆ ರಾಜ್ಯದ ಜನತೆಯಲ್ಲಿದೆ. ಬೇರೆ ಪಕ್ಷದವರು ಸಹಜ ಅವೆಲ್ಲ, ಚುನಾವಣೆ ಬಂದ ಸಮಯದಲ್ಲಿ ತಂತ್ರ-ಕುತಂತ್ರ ಎಲ್ಲವೂ ನಡಿತಾವೆ. ನಮಗೆ ವಿಶ್ವಾಸವಿದೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ ದು ಬಿ.ವೈ.ವಿಜಯೇಂದ್ರ ಹೇಳಿದರು.

ನಿನ್ನೆ ವಿಜಯೇಂದ್ರಗೆ ಟಿಕೆಟ್ ಅಂತ ಹೇಳಿದ್ರು, ಈಗ ಹೈಕಮಾಂಡ್ ತೀರ್ಮಾನ ಅಂದ್ರು, ಏನಿದು BSY ಲೆಕ್ಕಾಚಾರ?

ರೈತ ಮತ್ತು ನೇಕಾರರು ಸರ್ಕಾರದ ಎರಡು ಕಣ್ಣು:
ರಾಜ್ಯದಲ್ಲಿ ಇರುವ ರೈತರು ಮತ್ತು ನೇಕಾರರು ಸರ್ಕಾರದ ಎರಡು ಕಣ್ಣಾಗಿದ್ದು, ರೈತರ ಸಮಸ್ಯೆಗಳಂತೆ ನೇಕಾರರ ಸಮಸ್ಯೆಗಳಿಗೂ ಸ್ಪಂದಿಸಿ ಪರಿಹಾರ ನೀಡಲಾಗುವುದು, ಈ ಸಂಭಂದ ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲರೊಂದಿಗೆ ಸೇರಿ ನೇಕಾರರ ಸಮಸ್ಯೆ ಕುರಿತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿ, ಪರಿಹಾರ ನೀಡುವ ಪ್ರಯತ್ನ ಮಾಡಲಾಗುವುದು ಎಂದರು.

ನನಗೆ ತಾಕತ್ತಿದ್ರೆ ಜವಾಬ್ದಾರಿ ಸಿಗುತ್ತೆ: ವಿಜಯೇಂದ್ರ

ವಿಜಯೇಂದ್ರಗೆ ಅದ್ಧೂರಿ ಸ್ಚಾಗತ ಪಟಾಕಿ ಸಿಡಿಸಿ ಕಾರ್ಯಕರ್ತರ ಸಂಭ್ರಮ:
ಇಲಕಲ್ ಪಟ್ಟಣಕ್ಕೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗಮಿಸುತ್ತಲೇ ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ಮತ್ತು ಅವರ ಪುತ್ರ ರಾಜುಗೌಡ ಪಾಟೀಲ ಸೇರಿದಂತೆ ಬಿಜೆಪಿ ಕಾರ್ಯಕರ್ತರಿಂದ ಭರ್ಜರಿ ಸ್ವಾಗತ ನೀಡಲಾಯಿತು. ತೆರೆದ ವಾಹನದಲ್ಲಿ ಬಸವೇಶ್ವರ ವೃತ್ತದಿಂದ ನಗರದ ವಿವಿಧ ರಸ್ತೆಗಳಲ್ಲಿ ಬೃಹತ್ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
 

click me!