ರಾಜ್ಯ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ್ರಾ ಬಿಜೆಪಿ ಹಿರಿಯ ನಾಯಕ? ಕುತೂಹಲದ ಹೇಳಿಕೆ

Published : Jun 30, 2022, 04:13 PM IST
ರಾಜ್ಯ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ್ರಾ ಬಿಜೆಪಿ ಹಿರಿಯ ನಾಯಕ? ಕುತೂಹಲದ ಹೇಳಿಕೆ

ಸಾರಾಂಶ

ನಾನು ಚುನಾವಣೆ, ರಾಜಕೀಯದಿಂದ ಹಿಂದೆ ಸರಿಯುತ್ತಿದ್ದೇನೆ. ಏನು ಅನ್ನಿಸುತ್ತೆ ಅದನ್ನು ಮಾತನಾಡಿಕೊಂಡು ಇರುತ್ತೇನೆ ಎಂದು ಹೇಳುವ ಮೂಲಕ ಬಿಜೆಪಿ ಹಿರಿಯ ನಾಯಕ ರಾಜಕೀಯ ನಿವೃತ್ತಿ ಸುಳಿವು ಕೊಟ್ಟಿದ್ದಾರೆ.

ಬೆಂಗಳೂರು (ಜೂನ್.30): ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೇನು ಏಳೆಂಟು ತಿಂಗಳು ಬಾಕಿ ಇದೆ.ಈ ಹಿನ್ನೆಲೆಯಲ್ಲಿ ನಾಕರು ತಮ್ಮ-ತಮ್ಮ ಕ್ಷೇತ್ರದಲ್ಲಿ ಠಿಕಾಣಿ ಹೂಡಿಸಿದ್ದು, 2023ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದ್ದಾರೆ.

ಇದರ ಮಧ್ಯೆ ಹಿರಿಯ ರಾಜಕಾರಣಿ, ಮಾಜಿ ಸಚಿವ, ಬಿಜೆಪಿ ವಿಧಾನಪರಿಷತ್ ಸದಸ್ಯ ಎಚ್‌. ವಿಶ್ವನಾಥ್ ಅವರು ರಾಜಕೀಯದಿಂದ ದೂರು ಉಳಿಯಲು ತೀರ್ಮಾನಿಸಿದಂತಿದೆ.

ಹೌದು...ನಾನು ಚುನಾವಣೆ, ರಾಜಕೀಯದಿಂದ ಹಿಂದೆ ಸರಿಯುತ್ತಿದ್ದೇನೆ. ಏನು ಅನ್ನಿಸುತ್ತೆ ಅದನ್ನು ಮಾತನಾಡಿಕೊಂಡು ಇರುತ್ತೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ರಾಜಕೀಯ ನಿವೃತ್ತಿ ಘೋಷಿಸಿದಂತಿದೆ. ಕಾಂಗ್ರೆಸ್ ತೊರೆದ ಬಳಿಕ ಜೆಡಿಎಸ್‌ನಿಂದ ಸ್ಪರ್ಧಿಸಿ ಹುಣಸೂರಿನಿಂದ ಗೆಲುವು ಸಾಧಿಸಿದ್ದರು. ಬಳಿಕ ಬದಲಾದ ರಾಜಕೀಯ ವಿದ್ಯಾಮಾನಗಳಿಂದ ಜೆಡಿಎಸ್‌ ಬಿಟ್ಟು ಬಿಜೆಪಿ ಸೇರ್ಪಡೆಯಾಗಿದ್ದರು. ಆದ್ರೆ, ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲುಕಂಡಿದ್ದರು. ಇದೀಗ ಪ್ರಸ್ತುತ ಬಿಜೆಪಿ, ಅವರನ್ನ ವಿಧಾನಪರಿಷತ್‌ ಸದಸ್ಯರನ್ನಾಗಿ ಮಾಡಿದೆ. ಆದ್ರೆ, ಮುಂದಿನ ಚುನಾವಣೆಯಿಂದ ಹಿಂದೆ ಸರಿಯುತ್ತಿತ್ತೇನೆ ಎಂದು ಹೇಳಿರುವುದು ತೀವ್ರ ಕುತೂಹಲ ಮೂಡಿಸಿದೆ.

ದಾವಣಗೆರೆಯಲ್ಲಿ ಸಿದ್ದರಾಮೋತ್ಸವ: ಸಮಾವೇಶದ ಹಿಂದೆ ದುರುದ್ದೇಶ ಎಂದು ಡಿಕೆಶಿ ಬಣದ ವಿರೋಧ

ಈ ಬಗ್ಗೆ ಇಂದು(ಗುರುವಾರ) ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮತ್ತೆ ಕಾಂಗ್ರೆಸ್ ಕಡೆ ಹೋಗ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿ, ನನ್ನ ನಡೆ ಇತ್ತಗೆ, ಅತ್ತಗೆ ಹೋಗ್ತಾ ಇರುತ್ತೆ. ವಯಸ್ಸಾಯ್ತು, ನಮ್ಮ ನಡೆ ಇನ್ನೆಲ್ಲಿಗೆ ಹೋಗುತ್ತೆ. ನನಗೀಗ 75 ವರ್ಷ ಆಗೋಯ್ತು ಏನ್ಮಾಡೋದು? ಎಂದು ಪ್ರಶ್ನಿಸಿದರು. ಚುನಾವಣೆಗೆ ನಿಲ್ಲುತ್ತೀರಾ, ಮಗನನ್ನ ನಿಲ್ಲಿಸುತ್ತೀರಾ ಎಂಬ ಪ್ರಶ್ನೆಗೆ, ಮಗನಿಗೆ ಪಟ್ಟ ಕಟ್ಟೋಕೆ‌ ಹೋಗಿ ರಾಜ್ಯವನ್ನೇ ಕಳೆದುಕೊಂಡಿಲ್ವೇ? ಮಹಾರಾಷ್ಟ್ರದಲ್ಲೂ ಮಗನಿಂದ ರಾಜ್ಯ ಕಳೆದುಕೊಳ್ತಿಲ್ವೆ? ನನ್ನದು ನನ್ನದೇ, ಮಗನದ್ದು ಮಗನದ್ದು. ನಾನು ಮಂತ್ರಿಯಾದಾಗಲೂ ಅವನನ್ನು ಸೇರಿಸಿಲ್ಲ. ಕಚೇರಿ ಹತ್ತಿರ ಬಿಟ್ಟುಕೊಂಡಿರಲಿಲ್ಲ. ನಾನು ಚುನಾವಣೆ, ರಾಜಕೀಯದಿಂದ ಹಿಂದೆ ಸರಿಯುತ್ತಿದ್ದೇನೆ. ಏನು ಅನ್ನಿಸುತ್ತೆ ಅದನ್ನು ಮಾತನಾಡಿಕೊಂಡು ಇರುತ್ತೇನೆ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದಲ್ಲಿ ಆಗಿದ್ದೇ ಮಹಾರಾಷ್ಟ್ರದಲ್ಲಿ ಆಯ್ತು. ಇಲ್ಲಿ‌ ಸಿದ್ದರಾಮಯ್ಯ, ಹೆಚ್​ಡಿಕೆ ದುರಹಂಕಾರಕ್ಕೆ ಹಾಳಾಯ್ತು. ಅಲ್ಲಿ ಉದ್ಧವ್ ಠಾಕ್ರೆ ಮಗನೇ ಎಲ್ಲವನ್ನೂ‌ ನೋಡುತ್ತಿದ್ದ. ಹಾಗಾಗಿ ಅಲ್ಲಿ ಹಾಳಾಯ್ತು ಎಂದರು.

 ಇಲ್ಲಿ ಏನು ಗೌರವ ಕೊಡಬೇಕೋ ‌ಕೊಡ್ತಾರೆ. ಬಸವರಾಜ ಬೊಮ್ಮಾಯಿ ಕೊಡ್ತಾರೆ. ಇಲ್ಲಿ ಡಿಪೆಕ್ಷನ್ ಲಾ ಡಿಫರೆಂಟ್ ಆಗಿದೆ. ಮುಂದೆ ಕಾಂಗ್ರೆಸ್ ಬರುತ್ತೆ ಅಂತ ಯಾರು ಹೇಳ್ತಾರೆ. ಸಿದ್ದರಾಮೋತ್ಸವ ಇರೋದು ಕಾಂಗ್ರೆಸ್ ಉತ್ಸವ ಇಲ್ಲ. ಡಿ.ಕೆ.ಶಿವಕುಮಾರ್ ಮಾತ್ರ ಹೇಳೋದಷ್ಟೇ, ಕಾಂಗ್ರೆಸ್ ಸಮಾವೇಶ ಎಲ್ಲಿ ಮಾಡ್ತಾರೆ. ಸಿದ್ದರಾಮೋತ್ಸವ ಅಂತ ಇರೋದು ಎಂದು ತಿಳಿಸಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸದನದ ಗೌರವ ಎತ್ತಿಹಿಡಿಯಿರಿ: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಕಿವಿಮಾತು
ಎಂಎಸ್ಪಿ ಅಡಿಯಲ್ಲಿ ತೊಗರಿ ಖರೀದಿ ಆರಂಭಿಸಿ: ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ