* ಬಿಜೆಪಿಯವರು ಗುಬ್ಬಿ ವಾಸುಗೆ ಹಣ ನೀಡಿ ರಾಜ್ಯಸಭೆಯ ಚುನಾವಣೆಯಲ್ಲಿ ಮತ ಖರೀದಿ ಮಾಡಿದ್ದಾರೆ
* ಮಹಾರಾಷ್ಟ್ರ ರೀತಿ ಸರ್ಕಾರ ಕೆಡವುವುದಾದರೆ ಚುನಾವಣೆ ನಡೆಸುವುದು ಬೇಡ
* ಮೈಸೂರು ಮಹಾರಾಜರ ರೀತಿ ಎಲ್ಲಾ ನಾಮ ನಿರ್ದೇಶನ ಮಾಡಲಿ
ಹಾಸನ(ಜೂ.30): ಕಾಂಗ್ರೆಸ್ ಜತೆ ಸರ್ಕಾರ ರಚನೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರೇ ಎಚ್.ಡಿ.ಕುಮಾರಸ್ವಾಮಿಯವರನ್ನು ಕರೆದು, ಕಾಂಗ್ರೆಸ್ ಜೊತೆ ಹೊಗಬೇಡ, 5 ವರ್ಷ ನೀನೇ ಮುಖ್ಯಮಂತ್ರಿಯಾಗು ಎಂದಿದ್ದರು. ಅವರ ಮಾತು ಕೇಳಿದ್ದರೆ ಕುಮಾರಸ್ವಾಮಿ 5 ವರ್ಷ ಮುಖ್ಯಮಂತ್ರಿಯಾಗಿರುತ್ತಿದ್ದರು. ಆದರೆ ನಾವು ಕೋಮುವಾದಿಗಳ ಜೊತೆ ಹೋಗಬಾರದು ಎಂದು ಕಾಂಗ್ರೆಸ್ ಜೊತೆ ಸರ್ಕಾರ ಮಾಡಿದೆವು ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದವರು ಗುಬ್ಬಿ ವಾಸುಗೆ ಹಣ ನೀಡಿ ರಾಜ್ಯಸಭೆಯ ಚುನಾವಣೆಯಲ್ಲಿ ಮತ ಖರೀದಿ ಮಾಡಿದ್ದಾರೆ. ಮಹಾರಾಷ್ಟ್ರ ರೀತಿ ಸರ್ಕಾರ ಕೆಡವುವುದಾದರೆ ಚುನಾವಣೆ ನಡೆಸುವುದು ಬೇಡ ಅಂತ ತಿಳಿಸಿದ್ದಾರೆ.
ಮೋದಿ ಭೇಟಿ ಖರ್ಚಿನಲ್ಲಿ ಒಂದು ಗ್ರಾಮ ಉದ್ಧಾರವಾಗ್ತಿತ್ತು: ಕುಮಾರಸ್ವಾಮಿ
ಮೈಸೂರು ಮಹಾರಾಜರ ರೀತಿ ಎಲ್ಲಾ ನಾಮ ನಿರ್ದೇಶನ ಮಾಡಲಿ. ರಾಜ್ಯ ಸರ್ಕಾರದ ಅಧಿಕಾರ ರಾಜ್ಯಪಾಲರಿಗೆ ಕೊಡಲಿ. ಗೆದ್ದ ಶಾಸಕರನ್ನು ಬಾಂಬೆ ಹೋಟೆಲ್, ಗೋವಾಗಳಿಗೆ ಕರೆದುಕೊಂಡು ಹೋಗುವುದು ತಪ್ಪುತ್ತದೆ. ಚುನಾವಣೆಗೆ ಆಸ್ತಿ ಮಾರಿ ನಿಲ್ಲುವುದು ತಪ್ಪಲಿದೆ ಎಂದರು.