ಸಚಿವ ಸಂಪುಟ ವಿಸ್ತರಣೆ ಮಾಡಲೇಬೇಕು: ಸಿ.ಪಿ.ಯೋಗೇಶ್ವರ್

By Girish Goudar  |  First Published Dec 8, 2022, 9:45 PM IST

ಕರ್ನಾಟಕದಲ್ಲಿಯೂ ಸಹ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಉತ್ತರದಲ್ಲಿ ಗುಜರಾತ್, ದಕ್ಷಿಣದಲ್ಲಿ ಕರ್ನಾಟಕ ಕೂಡ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಪ್ರಬಲ ವಿರೋಧ ಪಕ್ಷವಾಗಿ ಕೆಲಸ ಮಾಡಲಿದೆ: ಯೋಗೇಶ್ವರ್


ಚನ್ನಪಟ್ಟಣ(ಡಿ.08): ಸಿಎಂ ಬಸವರಾಜ ಬೊಮ್ಮಾಯಿ ಅವರೂ ಕೂಡ ಗುಜರಾತ್ ಚುನಾವಣೆ ಬಳಿಕ ಸಚಿವ ಸಂಪುಟ ವಿಸ್ತರಣೆ ಮಾಡ್ತೇವೆ ಎಂದಿದ್ದರು. ನಾಳೆ ಅಥವಾ ನಾಡಿದ್ದು ವಿಸ್ತರಣೆ ಆಗಬಹುದು ಎಂಬ ನಿರೀಕ್ಷೆ ಇದೆ. ಮಾಡಲೇಬೇಕು ಎಂದು ವೈಯಕ್ತಿಕವಾಗಿ ನನಗೆ ಅನಿಸುತ್ತದೆ. ಸಿಎಂ ಕೂಡ ಕೆಲ ಬದಲಾವಣೆ ಮಾಡ್ತೇವೆ ಎಂದಿದ್ದರು. ಆ ನಿರೀಕ್ಷೆಯಲ್ಲಿದ್ದೇವೆ, ನೋಡೋಣ ಅಂತ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ. 

ಗುಜರಾತ್‌ನಲ್ಲಿ ಬಿಜೆಪಿಗೆ ಭರ್ಜರಿ ಗೆಲುವು ಹಿನ್ನೆಲೆಯಲ್ಲಿ ಇಂದು(ಗುರುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿ.ಪಿ.ಯೋಗೇಶ್ವರ್ ಅವರು, ಗುಜರಾತ್‌ನಲ್ಲಿ ಸತತವಾಗಿ 7 ನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಚುನಾವಣಾ ಪೂರ್ವದಲ್ಲಿ ಒಂದು ವ್ಯಾಖ್ಯಾನ ಇತ್ತು. ಈ ಬಾರಿ ಬಿಜೆಪಿಗೆ ಕಷ್ಟ ಎಂದು ಹೇಳಲಾಗ್ತಿತ್ತು. ಆದರೆ ಜನ ಮತ್ತೆ ಬಿಜೆಪಿಗೆ ಆರ್ಶೀವಾದ ಮಾಡಿದ್ದಾರೆ ಅಂತ ಹೇಳಿದ್ದಾರೆ. 

Tap to resize

Latest Videos

ರಾಹುಲ್ ಗಾಂಧಿ ಭಾರತ್ ಜೋಡೋ ಮೂಲಕ ಬರ್ತಿದ್ದಾರೆ, ಇದು ಒಳ್ಳೆಯದು: ಎಚ್.ವಿಶ್ವನಾಥ್

ಗುಜರಾತ್ ಫಲಿತಾಂಶ 2023ರ ಕರ್ನಾಟಕದ ಚುನಾವಣೆಯಲ್ಲೂ ಇದೇ ತರಹದ ಫಲಿತಾಂಶವನ್ನ ನಿರೀಕ್ಷೆ ಮಾಡಿದ್ದೇವೆ. ಕರ್ನಾಟಕದಲ್ಲಿಯೂ ಸಹ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಉತ್ತರದಲ್ಲಿ ಗುಜರಾತ್, ದಕ್ಷಿಣದಲ್ಲಿ ಕರ್ನಾಟಕ ಕೂಡ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಪ್ರಬಲ ವಿರೋಧ ಪಕ್ಷವಾಗಿ ಕೆಲಸ ಮಾಡಲಿದೆ ಅಂತ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ. 
 

click me!