ಕಾಂಗ್ರೆಸ್‌ನಲ್ಲಿಯೇ ಇರುತ್ತಿದ್ದರೆ ನನಗೆ ಶೆಡ್ಡೇ ಗತಿಯಾಗುತ್ತಿತ್ತು. ಬಿಜೆಪಿಗೆ ಬಂದು ಶೆಡ್‌ನಿಂದ ಒಳ್ಳೆಯ ವ್ಯಕ್ತಿಯಾಗಿದ್ದೇನೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರಿಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರು (ಆ.30): ಕಾಂಗ್ರೆಸ್‌ನಲ್ಲಿಯೇ ಇರುತ್ತಿದ್ದರೆ ನನಗೆ ಶೆಡ್ಡೇ ಗತಿಯಾಗುತ್ತಿತ್ತು. ಬಿಜೆಪಿಗೆ ಬಂದು ಶೆಡ್‌ನಿಂದ ಒಳ್ಳೆಯ ವ್ಯಕ್ತಿಯಾಗಿದ್ದೇನೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರಿಗೆ ತಿರುಗೇಟು ನೀಡಿದ್ದಾರೆ.
ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ಧೂಳಿನಿಂದ ಬಂದವನು. ನಾನು ಕಟ್ಟಿರುವುದೇ ಶೆಡ್. ಹೀಗಾಗಿ ಸಚಿವರು ಶೆಡ್ ಗಿರಾಕಿ ಎಂದಿದ್ದಾರೆ. ಅವರಂತೆ ನಾನು ದೊಡ್ಡ ಗಿರಾಕಿಯಲ್ಲ ಎಂದು ವ್ಯಂಗ್ಯವಾಡಿದರು.
ಕಪ್ಪು ಚುಕ್ಕೆಯೇ ಇಲ್ಲ ಎಂದಿದ್ದ ಸಿಎಂಗೆ 'ಕಪ್ಪು ಕಾಗೆ' ಎಂದ ಛಲವಾದಿ ನಾರಾಯಣಸ್ವಾಮಿ!
ಕೆಐಎಡಿಬಿ ಸಿಎ ನಿವೇಶನ ವಿಚಾರ ಮಾತನಾಡಿದ್ದಕ್ಕೆ ಅವರು ಮಾತನಾಡಿದ್ದಾರೆ. ನಾನು 2006-07ನೇ ಸಾಲಿನಲ್ಲಿ ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಎರಡು ಎಕರೆ ಖರೀದಿಸಿದ್ದೇನೆ. ಮೊದಲು ಸಾಫ್ಟ್‌ವೇರ್ ಟೆಕ್ನಾಲಜೀಸ್ ಎಂಬುದಾಗಿ ತಗೊಂಡಿದ್ದೆ. ನಂತರ ಯೋಜನೆ ಬದಲಾಯಿತು. ಬೃಂದಾವನ ವೇರ್‌ಹೌಸ್ ಹೆಸರಿನ ಗೋದಾಮು ನಿರ್ಮಿಸಿದ್ದೇವೆ. ಬೇರೆಯವರಿಗೆ ಬಾಡಿಗೆ ಕೊಡಲು ಗೋದಾಮು ನಿರ್ಮಿಸಲಾಗುತ್ತದೆ. ಆ ಜಾಗ 800-900 ಅಡಿ ಆಳ ಇದ್ದು, ಮಣ್ಣು ಲೋಡ್ ತಂದು ಭರ್ತಿ ಮಾಡಿ ಕಾಂಪೌಂಡ್ ಹಾಕಿಸಲಾಯಿತು. 2013-14 ರಲ್ಲಿ ಆ ಭೂಮಿ ರದ್ದು ಮಾಡಲಾಯಿತು. ಸರ್ಕಾರದ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿಸಲಿಲ್ಲ. ಆಗ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದೆ. ನ್ಯಾಯಾಲಯವು ಶೇ.10ರಷ್ಟು ದಂಡ ಕಟ್ಟಿ ಭೂಮಿ ತೆಗೆದುಕೊಳ್ಳಲು ಆದೇಶ ನೀಡಿತು. ದಂಡ ಪಾವತಿಸಿ ಸೇಲ್ ಡೀಡ್ ಮಾಡಿಕೊಡಿ ಎಂದು ಮನವಿ ಮಾಡಿದೆ ಎಂದರು.
ನನ್ನನ್ನು ಕೆಣಕಿದರೆ ಕುಣಿಸಿಬಿಡುತ್ತೇನೆ:
‘ನನ್ನನ್ನು ಕೆಣಕಿದರೆ ಸಮ್ಮನಿರುವುದಿಲ್ಲ, ಕುಣಿಸಿಬಿಡುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆಗೆ ತಿರುಗೇಟು ನೀಡಿದರು. ನಾನು ತಿಮ್ಮಯ್ಯನ ಮಗ. ತಿಮ್ಮಯ್ಯನ ಪ್ರಭಾವ ನನಗೆ ಇಲ್ಲ. ನಿಮಗೆ ಮಲ್ಲಿಕಾರ್ಜುನ ಖರ್ಗೆ ಪ್ರಭಾವ ಇಲ್ಲದಿದ್ದರೆ ನೀವು ಗ್ರಾಮ ಪಂಚಾಯ್ತಿ ಸದಸ್ಯ ಕೂಡ ಆಗುತ್ತಿರಲಿಲ್ಲ ಎಂದು ಏರಿದ ಧ್ವನಿಯಲ್ಲಿ ಹೇಳಿದರು. ಇಷ್ಟೇ ಅಲ್ಲ. ಕೋರಮಂಗಲದಲ್ಲಿ ಇರುವುದು, ಕಲಬುರ್ಗಿಯಲ್ಲಿ ಇರುವುದು ಕೂಡ ಗೊತ್ತಿದೆ. ಇದನ್ನು ಇಲ್ಲಿಗೆ ಬಿಡುವುದಿಲ್ಲ. ದೆಹಲಿಗೆ ತೆಗೆದುಕೊಂಡು ಹೋಗುತ್ತೇನೆ. ನನ್ನ ಕೆಣಕಬೇಡಿ. ನನ್ನ ಬಗ್ಗೆ ಕೆಣಕಿದರೆ ಎಲ್ಲವನ್ನೂ ಹೊರಗೆ ಹೇಳುತ್ತೇನೆ ಎಂದು ಎಚ್ಚರಿಕೆ ನೀಡಿದರು.