
ಬೆಂಗಳೂರು,[ಡಿ.14]: ಹೃದಯ ಸಂಬಂಧಿ ಚಿಕಿತ್ಸೆಗಾಗಿ ಬೆಂಗಳೂರಿನ ಕಾಸಗಿ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ನೂತನ ಶಾಸಕರು ಭೇಟಿ ಮಾಡಿದರು.
ಮಾಜಿ ಶಿಷ್ಯಂದಿರಾದ ಶಾಸಕ ಎಸ್.ಟಿ ಸೋಮಶೇಖರ್, ಶಾಸಕ ಭೈರತಿ ಬಸವರಾಜ್ ಹಾಗೂ ಮುನಿರತ್ನ ಇಂದು [ಶನಿವಾರ] ವಿಚಾರಿಸಿದರು. ಕಾಂಗ್ರೆಸ್ ಶಾಸಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗಿನಿಂದ ಸಿದ್ದರಾಮಯ್ಯ ಅವರ ಜತೆ ಮಾತನಾಡಿರಲಿಲ್ಲ. ಅಷ್ಟೇ ಅಲ್ಲದೇ ಸಿದ್ದರಾಮಯ್ಯನವರಿಗೆ ಹೇಗೆ ಮುಖ ತೋರಿಸಬೇಕೆಂದು ಹಳೆ ಶಿಷ್ಯಂದಿರು ಚಿಂತೆಯಲ್ಲಿದ್ದರು.
ಸಿದ್ದು ಆರೋಗ್ಯ ವಿಚಾರಿಸಿದ ವಿವಿಧ ಮಠಾಧೀಶರು: ಮತ್ತೊಂದೆಡೆ ವಿಶೇಷ ಪೂಜೆ
ಆದ್ರೆ, ಇದೇ ಚಾನ್ಸ್ ಅಂತ ಆಸ್ಪತ್ರೆಗೆ ದೌಡಾಯಿಸಿ ತಮ್ಮ ನಾಯಕನ ಯೋಗ ಕ್ಷೇಮ ವಿಚಾರಿಸಿದರು. ಇದೇ ವೇಳೆಯಲ್ಲಿ ಸೋಮಶೇಖರ್, ಭೈರತಿ, ಮುನಿರತ್ನ ಅವರನ್ನು ನೋಡಿ ಮಾಜಿ ಸಿಎಂ ಆಶ್ಚರ್ಯ ವ್ಯಕ್ತಪಡಿಸಿದರು.
ಅಲ್ಲದೇ, ಏನರಯ್ಯಾ ಒಟ್ಟಿಗೆ ಬಂದುಬಿಟ್ಟಿದ್ದೀರಿಲ್ಲ ಎಂದು ಸಿದ್ದರಾಮಯ್ಯ ವಿಚಾರಿಸಿದರು. ಇದಕ್ಕೆ ನೀವೆ ನಮ್ಮ ನಾಯಕರು ಸಾರ್ ಎಂದು ಮುನಿರತ್ನ, ಸೋಮಶೇಖರ್ ನುಡಿದರು. ಬಳಿಕ ಮಾತನಾಡಿದ ಸಿದ್ದರಾಮಯ್ಯ, ಯಾವಾಗಂತೆ ನಿಮ್ಮನ್ನ ಮಂತ್ರಿ ಮಾಡುವುದು, ಸಿಎಂ ಯಡಿಯೂರಪ್ಪ ಮಂತ್ರಿ ಮಾಡುತ್ತಾರೆ ಬಿಡಿ ಎಂದು ನಗೆ ಚಟಾಕಿ ಹಾರಿಸಿದರು.
ಚಿತ್ರಗಳಲ್ಲಿ: ಪಕ್ಷಬೇಧ ಮರೆತು ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ ಗಣ್ಯರು
ಇನ್ನು ಸಿದ್ದರಾಮಯ್ಯ ಭೇಟಿ ಬಳಿಕ ಬಿಜೆಪಿ ನೂತನ ಶಾಸಕ ಎಸ್.ಟಿ.ಸೋಮಶೇಖರ್ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿ, ಈ ಹಿಂದೆ ನಾವು ಮೂರು ಜನ ಸೇರಿ ಅವರ ಬಳಿ ಮಾತನಾಡಬೇಕು ಅಂದುಕೊಂಡಿದ್ದೇವು, ಇಷ್ಟು ದಿನ ಬಿಡುವಿರಲಿಲ್ಲ, ಇಂದು ಭೇಟಿ ಮಾಡಿ ಆರೋಗ್ಯ ವಿಚಾರಿಸಿದೇವು ಎಂದರು.
ಅಂತೆಯೇ, ನಮ್ಮ ನಾಯಕರಿಗೆ ಆಯಸ್ಸು, ಆರೋಗ್ಯ ಕೊಟ್ಟು ಭಗವಂತ ಕಾಪಾಡಲಿ. ಅವರು ಈ ಮೊದಲಿನಂತೆ 24×7 ಕೆಲಸ ಮಾಡಲಿ ಎಂದು ಪ್ರಾರ್ಥನೆ ಮಾಡಿದ್ದೇವೆ ಎಂದು ತಿಳಿಸಿದರು.
ಆಸ್ಪತ್ರೆಯಲ್ಲಿ ನಗೆ ಚಟಾಕೆ: ಈಶ್ವರಪ್ಪ ಡೈಲಾಗ್ ಸಕ್ಕತ್, ಸಿದ್ದು ಕೊಟ್ರು ಚಮಕ್ ವಿಡಿಯೋ
ಕಾಂಗ್ರೆಸ್ ಪಕ್ಷ ಬಿಟ್ಟ ನಂತರ ಮೊದಲ ಬಾರಿ ಭೇಟಿ ಮಾಡಿದ ವಿಚಾರವಾಗಿ ಉತ್ತರಿಸಿ, ಇಷ್ಟು ದಿನ ಅವಕಾಶ ಸಿಕ್ಕಿರಲಿಲ್ಲ. ಮಾನವೀಯತೆ ದೃಷ್ಟಿಯಿಂದ ಬಂದು ಆರೋಗ್ಯ ವಿಚಾರಿಸಿದ್ದೇವೆ. ರಾಜಕೀಯವಾಗಿ ಚರ್ಚೆ ನಾವು ಮಾಡಿಲ್ಲ. ಅವರು ಮಾಡಿಲ್ಲ ಎಂದು ಎಸ್.ಟಿ ಸೋಮಶೇಖರ್ ಸ್ಪಷ್ಟಪಡಿಸಿದರು.
ಇವರೆಲ್ಲ ಸಿದ್ದರಾಮಯ್ಯನವರ ಆಪ್ತವಲಯದಲ್ಲಿಯೇ ಗುರುತಿಸಿಕೊಂಡುವರು. ಆದ್ರೆ, ಬದಲಾದ ರಾಜಕೀಯ ವಿದ್ಯಮಾನಗಳಿಂದ ಕಾಂಗ್ರೆಸ್ ತಪರೆದು ಬಿಜೆಪಿ ಸೇರಿ ಬೈ ಎಲೆಕ್ಷನ್ ನಲ್ಲಿ ಗೆದ್ದು ಮತ್ತೆ ಶಾಸಕರಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.