
ಬೆಂಗಳೂರು, (ಡಿ.14): 15 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್ ಒಂದೂ ಸ್ಥಾನದಲ್ಲಿ ಗೆಲುವು ಗೆದ್ದಿಲ್ಲ. ಅಷ್ಟೇ ಅಲ್ಲದೇ ತನ್ನ ಭದ್ರಕೋಟೆಯಲ್ಲಿ ಗೆಲ್ಲಲು ಆಗಿಲ್ಲ.
"
ಇದರಿಂದ ಒಂದೊಂದಾಗಿಯೇ ಭದ್ರಕೋಟೆಗಳು ಅಲುಗಾಡು ಶುರುವಾಗಿದ್ದೆ ತಡ ಎಚ್.ಡಿ.ದೇವೇಗೌಡ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ.
ಸೋಲಿಂದ ಧೃತಿಗೆಟ್ಟಿಲ್ಲ, ಮತ್ತೆ ಪುಟಿದೇಳುತ್ತೇವೆ: ರೇವಣ್ಣ
ಸೋಲಿನ ನಂತರ ಪಕ್ಷ ಬಲಪಡಿಸಲು ಪಣ ತೊಡುವಂತೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮೊನ್ನೆ ನಡೆದ ಸಭೆಯಲ್ಲಿ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.
ಅಶಕ್ತವಾಗಿರುವ ಪಕ್ಷಕ್ಕೆ ಶಕ್ತಿ ತಂಬಲು ದೊಡ್ಡಗೌಡ್ರು 2ನೇ ಮೊಮ್ಮಗ, ಜೆಡಿಎಸ್ ಯೂಥ್ ಐಕಾನ್ ಪ್ರಜ್ವಲ್ರನ್ನು ಬಳಸಿಕೊಳ್ಳಲು ಯೋಜನೆ ರೂಪಿಸಿದ್ದು, ಅವರಿಗೆ ಉತ್ತರ ಕರ್ನಾಟಕದ ಜವಾಬ್ದಾರಿ ನೀಡಿದ್ದಾರೆ.
ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗಿದ್ದರೂ ಅವರು ಪಕ್ಷ ಸಂಘಟನೆಯಲ್ಲಿ ಅಷ್ಟಾಗಿ ಆಸಕ್ತಿ ತೋರಿಸುತ್ತಿಲ್ಲ. ಹೀಗಾಗಿ ಯುವಕರು ಬೇರೆ ಪಕ್ಷದ ಕಡೆ ವಾಲುತ್ತಿದ್ದಾರೆ. ಇದನ್ನ ತಡೆಯಲು ಸಂಸದರು ಆಗಿರುವ ಪ್ರಜ್ವಲ್ ರೇವಣ್ಣನ್ನ ಬಳಸಿಕೊಳ್ಳಲು ದೌಡ್ಡಗೌಡ್ರು ಪ್ಲ್ಯಾನ್ ಮಾಡಿದ್ದಾರೆ.
ಭದ್ರಕೋಟೆ ಕಳೆದುಕೊಂಡ ಜೆಡಿಎಸ್ : ಚುನಾವಣೆ ಬಳಿಕ ಫೀಲ್ಡಿಗಿಳಿದ ನಾಯಕರು
ತಾತನ ಸೂಚನೆ ಮೇರೆಗೆ ಪಕ್ಷ ಸಂಘಟನೆಗಾಗಿ ಸಂಸದ ಪ್ರಜ್ವಲ್ ರೇವಣ್ಣ ಫೀಲ್ಡಿಗಿಳಿಯಲು ಸಜ್ಜಾಗಿದ್ದಾರೆ. ಮೊದಲಿಗೆ ಉತ್ತರ ಕರ್ನಾಟಕದತ್ತ ಚಿತ್ತ ನೆಟ್ಟಿದ್ದು, ಪ್ರಜ್ವಲ್ ಒಂದು ತಿಂಗಳು ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ ಎನ್ನುವುದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ಸಂಕ್ರಾಂತಿ ನಂತರ ಉ.ಕ ಜಿಲ್ಲೆಗಳಲ್ಲಿ ಪ್ರಜ್ವಲ್ ಪ್ರವಾಸ ಮಾಡಲಿದ್ದಾರೆ. ಪ್ರತಿ ಜಿಲ್ಲೆಗೂ ಹೋಗಿ ಕಾರ್ಯಕರ್ತರು ಹಾಗೂ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಲಿದ್ದಾರೆ. ಪ್ರವಾಸದ ನಡುವೆಯೇ ಕಾರ್ಯಕರ್ತರ ನೋಂದಣಿಗೂ ಪ್ರಜ್ವಲ್ ಚಾಲನೆ ನೀಡಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.