ಪ್ರಮಾಣ ವಚನಕ್ಕೂ ಮುನ್ನ ಸಿಎಂ ಕಾಲಿಗೆರಗಿ ಆಶೀರ್ವಾದ ಪಡೆದ ಶರಣು ಸಲಗರ

Suvarna News   | Asianet News
Published : Jun 08, 2021, 12:18 PM IST
ಪ್ರಮಾಣ ವಚನಕ್ಕೂ ಮುನ್ನ ಸಿಎಂ ಕಾಲಿಗೆರಗಿ ಆಶೀರ್ವಾದ ಪಡೆದ ಶರಣು ಸಲಗರ

ಸಾರಾಂಶ

ನೂತನ ಶಾಸಕ ಬಸವಕಲ್ಯಾಣ ಕ್ಷೇತ್ರದ ಶಾಸಕ ಶರಣು ಸಲಗರ ಇಂದು ಪ್ರಮಾಣ ವಚನ   ಸಿಎಂ ಭೇಟಿಯಾಗಿ ಆಶೀರ್ವಾದ ಪಡೆದ ನೂತನ ಶಾಸಕ ಸಲಗರ ಬಿ.ಎಸ್ ಯಡಿಯೂರಪ್ಪ  ನಿವಾಸಕ್ಕೆ ತೆರಳಿ ಕಾಲಿಗೆ ಎರಗಿ  ಆಶೀರ್ವಾದ ಪಡೆದ ಶರಣು ಸಲಗರ

ಬೆಂಗಳೂರು (ಜೂ.08): ರಾಜ್ಯ ಉಪ ಚುನಾವಣೆಯಲ್ಲಿ ಗೆಲುವು  ಸಾಧಿಸಿದ ನೂತನ ಶಾಸಕ ಬಸವಕಲ್ಯಾಣ ಕ್ಷೇತ್ರದ ಬಿಜೆಪಿ ಶಾಸಕ ಶರಣು ಸಲಗರ ಇಂದು ಪ್ರಮಾಣ ವಚನ ಸ್ವೀಕರಿಸಿದ್ದು, ಅದಕ್ಕೂ ಮುನ್ನ ಸಿಎಂ ಭೇಟಿಯಾಗಿ ಆಶೀರ್ವಾದ ಪಡೆದುಕೊಂಡರು.
 
ವಿಧಾನಸೌಧದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ಬಸವಕಲ್ಯಾಣ ಕ್ಷೇತ್ರದ ನೂತನ ಶಾಸಕ ಶರಣು ಸಲಗರ ಸಿಎಂ ಬಿ.ಎಸ್ ಯಡಿಯೂರಪ್ಪ  ನಿವಾಸಕ್ಕೆ ತೆರಳಿ ಕಾಲಿಗೆ ಎರಗಿ  ಆಶೀರ್ವಾದ ಪಡೆದುಕೊಂಡರು. 

ಜೆಡಿಎಸ್ ಕ್ಷೇತ್ರ ಬಸವಕಲ್ಯಾಣದಲ್ಲಿ 13 ವರ್ಷ ನಂತರ ನೆಲೆಕಂಡ ಬಿಜೆಪಿ

 ಬಸವ ಕಲ್ಯಾಣ ಕ್ಷೇತ್ರದಲ್ಲಿ ನಡೆ ಉಪ ಚುನಾವಣೆಯಲ್ಲಿ ಶರಣು ಸಲಗರ ಭರ್ಜರಿ ಗೆಲುವು ದಾಖಲಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಲ್ಲಮ್ಮ ಹಾಗೂ ಜೆಡಿಎಸ್ ಅಭ್ಯರ್ಥಿ ಯಾಸ್ರಬ್ ಖಾದ್ರಿ ಹಾಗೂ ಮಲ್ಲಿಕಾರ್ಜುನ್ ಖೂಬಾ ವಿರುದ್ಧ 19 ಸಾವಿರ ಹೆಚ್ಚುವರಿ ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. 

ಬಸವಕಲ್ಯಾಣ ಬೈಎಲೆಕ್ಷನ್‌: ಬಿಜೆಪಿ ಅಭ್ಯರ್ಥಿ ಶರಣು ಸಲಗರಗೆ ಪ್ರಚಂಡ ಗೆಲುವು

ಬರೋಬ್ಬರಿ 13 ವರ್ಷಗಳ ಬಳಿಕ ಬಸವಕಲ್ಯಾಣದಲ್ಲಿ ಸಲಗರ ಗೆಲುವಿನ ಮೂಲಕ ಬಿಜೆಪಿ ಖಾತೆ ತೆರೆದಂತಾಗಿತ್ತು.  ಬಸವಕಲ್ಯಾಣ ಕ್ಷೇತ್ರ 1957 ರಲ್ಲಿ ರಚನೆಯಾದಂದಿನಿಂದ  ಕೇವಲ 2 ಬಾರಿ ಬಿಜೆಪಿ ಗೆಲುವು ಸಾಧಿಸಿತ್ತು. ಇದು ಜೆಡಿಎಸ್ ಭದ್ರಕೋಟೆ ಎಂದೆ ಬಿಂಬಿತವಾಗಿದ್ದು ಈ ಬಾರಿ ಈ ಇತಿಹಾಸವನ್ನು ಮುರಿದು ಸಲಗರ ಗೆಲುವು ಸಾಧಿಸಿದ್ದರು. 

13 ವರ್ಷಗಳ ಬಳಿಕ ಕ್ಷೇತ್ರದಲ್ಲಿ ಕಮಲ ಅರಳಿಸಿ   ಬೀದರ್ ಜಿಲ್ಲೆಯ ಎರಡನೇ ಬಿಜೆಪಿ ಶಾಸಕರಾಗಿ ಸಲಗರ ಆಯ್ಕೆಯಾಗಿದ್ದು, ಇಂದು ಶಾಸಕರಾಗಿ ವಿಧಾನಸೌಧದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?