Karnataka Politics: ಬಿಜೆಪಿಯಿಂದ ಭಾವನಾತ್ಮಕ ರಾಜಕಾರಣ: ಸಿದ್ದರಾಮಯ್ಯ

By Girish Goudar  |  First Published Mar 24, 2022, 5:26 AM IST

*   ಭಾವನೆಗಳೊಂದಿಗೆ ಆಟ
*   ಸಂವಿಧಾನಬದ್ಧ ಆಡಳಿತಕ್ಕೆ ತಿಲಾಂಜಲಿ
*  ವಿಪಕ್ಷ ನಾಯಕನಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
 


ಬೆಂಗಳೂರು(ಮಾ.24): ಬಿಜೆಪಿಯವರು(BJP) ಸಂವಿಧಾನಬದ್ಧವಾಗಿ ಆಡಳಿತ ನಡೆಸದೆ ಭಾವನಾತ್ಮಕ ರಾಜಕಾರಣ(Emotional Politics) ಮಾಡುತ್ತಿದ್ದಾರೆ. ಜನರ ಮನಸ್ಸನ್ನು ಕೆರಳಿಸಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಅನೇಕ ಯುವಕರು ಬಲಿಪಶುವಾಗುತ್ತಿದ್ದಾರೆ. ಸಂವಿಧಾನದ ಬಗ್ಗೆ ಯಾರಿಗೆ ಗೌರವವಿಲ್ಲವೋ ಅಂತಹವರ ಕೈಗೆ ದೇಶ ಸಿಕ್ಕಿ ಹಾಕಿಕೊಂಡಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಹೇಳಿದರು.

ಚಿತ್ರಕಲಾ ಪರಿಷತ್‌ನಲ್ಲಿ ಏರ್ಪಡಿಸಿದ್ದ ಡಾ.ರಾಮಮನೋಹರ ಲೋಹಿಯಾ ಜನ್ಮದಿನಾಚರಣೆ ಸಮಾರಂಭದಲ್ಲಿ ಡಾ.ರಾಮಮನೋಹರ ಲೋಹಿಯಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಇಂದು ದೇಶ ಮತ್ತು ಅನೇಕ ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದ್ದು ಬಲಪಂಥೀಯರ ಕೈಗೆ ಸಿಕ್ಕಿ ಹಾಕಿಕೊಂಡಿದೆ. ಸಮಸ್ಯೆಗಳ ಬಗ್ಗೆ ಚರ್ಚೆ ಮಾಡದೆ ಭಾವನಾತ್ಮಕ ವಿಷಯಗಳನ್ನು ಮುನ್ನಲೆಗೆ ತರುತ್ತಿದ್ದಾರೆ ಎಂದು ಟೀಕಿಸಿದರು.

Tap to resize

Latest Videos

KH Muniyappa: ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದಾದರೆ ಸ್ವಾಗತ

ವೈಚಾರಿಕತೆ, ತತ್ವ, ಸಿದ್ಧಾಂತದಲ್ಲಿ ಬಿಜೆಪಿಯವರಿಗೆ ನಂಬಿಕೆಯಿಲ್ಲ. ಯುವ ಶಕ್ತಿಯನ್ನು ದಾರಿ ತಪ್ಪಿಸುತ್ತಿದ್ದಾರೆ. ಪ್ರಜಾಪ್ರಭುತ್ವಕ್ಕೆ ಮಾರಕವಾಗಿ ಆಡಳಿತ ನಡೆಸುತ್ತಿದ್ದಾರೆ. ಅಭಿವೃದ್ಧಿ ಮರೆತು ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಭಾವನೆಗಳ ಜೊತೆ ಆಟ ಆಡುತ್ತಿದ್ದಾರೆ. ಸಂವಿಧಾನದ(Constitution) ಬಗ್ಗೆ ಇವರಿಗೆ ಗೌರವವಿಲ್ಲ ಎಂದು ಆರೋಪಿಸಿದರು.

ಜೈಲಿಗೆ ಹೋಗುವ ಆಸೆ ಈಡೇರಲಿಲ್ಲ:

1975ರಲ್ಲಿ ತುರ್ತು ಪರಿಸ್ಥಿತಿಯನ್ನು(Emergency in 1975) ವಿರೋಧಿಸಿ ಮೈಸೂರಿನ(Mysuru)s ಸಯ್ಯಾಜಿರಾವ್‌ ರಸ್ತೆಯಲ್ಲಿ ಸೋಷಿಯಲಿಸ್ಟ್‌ ಪಕ್ಷದಿಂದ ಪ್ರತಿಭಟನೆ ನಡೆಸಿದ್ದೆವು. ಆಗ ನನ್ನನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿ ಬಳಿಕ ಬಿಟ್ಟು ಕಳುಹಿಸಿದ್ದರು. ಜೈಲಿಗೆ ಹಾಕುತ್ತಾರೆ, ಒಂದಾರು ತಿಂಗಳು ಬರುವುದಿಲ್ಲ ಎಂದು ಮನೆಯವರಿಗೆ ಹೇಳಿ ಆಸೆಯಿಂದ ಬಂದಿದ್ದೆ. ಆದರೆ ನನ್ನ ಆಸೆ ಈಡೇರಲಿಲ್ಲ. ಸಪ್ಪೆ ಮೊರೆ ಹಾಕಿಕೊಂಡು ಮನೆಗೆ ಹಿಂದಿರುಗಿದ್ದೆ ಎಂದು ಹಳೆಯದನ್ನು ನೆನಪಿಸಿಕೊಂಡರು.

ರಾಷ್ಟ್ರ ರಾಜಕಾರಣಕ್ಕೆ ನಷ್ಟ:

ಚಿತ್ರಕಲಾ ಪರಿಷತ್‌ ಅಧ್ಯಕ್ಷ ಬಿ.ಎಲ್‌.ಶಂಕರ್‌(BL Shankar) ಮಾತನಾಡಿ, ದೇವರಾಜ ಅರಸು, ರಾಮಕೃಷ್ಣ ಹೆಗಡೆ, ಸಿದ್ದರಾಮಯ್ಯ ಅವರು ಮಾತ್ರ ನಾಯಕರನ್ನು ತಯಾರು ಮಾಡಿದ್ದಾರೆ. ಈ ಮಾತಿನಿಂದ ಯಾರಾದರೂ ಬೇಜಾರು ಮಾಡಿಕೊಂಡರೂ ಪರವಾಗಿಲ್ಲ. ಸಿದ್ದರಾಮಯ್ಯ ಅವರು ರಾಷ್ಟ್ರ ರಾಜಕಾರಣಕ್ಕೆ ಹೋಗದಿದ್ದರಿಂದ ಕರ್ನಾಟಕಕ್ಕೆ(Karnataka) ಲಾಭವಾಗಿದೆ. ಆದರೆ ರಾಷ್ಟ್ರ ರಾಜಕಾರಣಕ್ಕೆ ನಷ್ಟವಾಗಿದೆ ಎಂದು ಅಭಿಪ್ರಾಯಪಟ್ಟರು.

ಚಿಂತಕ ಪ್ರೊ.ಆನಂದ ಕುಮಾರ್‌, ಮಾಜಿ ಶಾಸಕ ಬಿ.ಆರ್‌.ಪಾಟೀಲ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ಡಾ.ಎಂ.ಪಿ.ನಾಡಗೌಡ, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರಕಲಾ ಪರಿಷತ್‌ನಲ್ಲಿ ಏರ್ಪಡಿಸಿದ್ದ ಡಾ.ರಾಮಮನೋಹರ ಲೋಹಿಯಾ ಜನ್ಮದಿನಾಚರಣೆ ಸಮಾರಂಭದಲ್ಲಿ ಡಾ.ರಾಮಮನೋಹರ ಲೋಹಿಯಾ ಪ್ರಶಸ್ತಿಯನ್ನು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ(Basavaraj Horatti) ಅವರು ಪ್ರದಾನ ಮಾಡಿದರು.

ಮೇಕೆದಾಟು: ತ.ನಾಡು ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ, ಬಿಜೆಪಿ ಬೆಂಬಲ, ಸಿದ್ದು ಕೆಂಡಾಮಂಡಲ

ಜನತಾ ಪರಿವಾರದ ಪ್ರೀತಿ, ವಿಶ್ವಾಸ ಎಲ್ಲೂ ಸಿಗುವುದಿಲ್ಲ. ಇದು ಅತಿಶಯೋಕ್ತಿಯಲ್ಲ. ಉತ್ತಮ ಆಡಳಿತ ನೀಡಿರುವುದರಿಂದ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಇಲ್ಲದಿದ್ದರೂ ಎಲ್ಲಿಗೇ ಹೋಗಲಿ, ಜನರು ಪ್ರೀತಿಯಿಂದ ಕಾಣುತ್ತಾರೆ ಅಂತ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ. 

‘ಜೇಮ್ಸ್‌’ ಸಿನಿಮಾ ಪ್ರದರ್ಶನ ಕಡಿತಕ್ಕೆ ಬಿಜೆಪಿಗರ ಒತ್ತಡ: ಸಿದ್ದರಾಮಯ್ಯ

ಬೆಂಗಳೂರು: ‘ದಿ ಕಾಶ್ಮೀರಿ ಫೈಲ್ಸ್‌’(The Kashmir Files) ಸಿನಿಮಾ ಪ್ರದರ್ಶನಕ್ಕಾಗಿ ನಟ ಪುನೀತ್‌ ರಾಜ್‌ಕುಮಾರ್‌(Puneeth Rajkumar) ಅಭಿನಯದ ‘ಜೇಮ್ಸ್‌’(James) ಚಿತ್ರ ಪ್ರದರ್ಶನವನ್ನು ಬಲತ್ಕಾರದಿಂದ ವಿವಿಧ ಚಿತ್ರಮಂದಿರಗಳಿಂದ ತೆಗೆಸಲು ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಪರದೆಗಳನ್ನು ಕಡಿತಗೊಳಿಸಲು ಬಿಜೆಪಿ ಶಾಸಕರು ಒತ್ತಡ ಹೇರುತ್ತಿದ್ದು, ಇಂತಹ ದೌರ್ಜನ್ಯ ಮಾಡಬಾರದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದರು. 
 

click me!