ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಜಾರಕಿಹೊಳಿ

By Suvarna NewsFirst Published Jun 26, 2021, 3:47 PM IST
Highlights

* ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸುತ್ತಿರುವ ರಮೇಶ್ ಜಾರಕಿಹೊಳಿ
* ಶ್ರೀಗಳು, ಮಾಜಿ ಸಿಎಂ ಭೇಟಿ ಆಯ್ತು ಈಗ ಆರ್‌ಎಸ್‌ಎಸ್‌ ನಾಯಕ ಭೇಟಿ
* ಕುತೂಹಲ ಮೂಡಿಸಿದ ರಮೇಶ್ ಜಾರಕಿಹೊಳಿ ಭೇಟಿ

ಬೆಳಗಾವಿ, (ಜೂನ್.26): ನಾಯಕತ್ವ ಬದಲಾವಣೆ ಕೂಗಿನ ಮಧ್ಯೆ ರಮೇಶ್ ಜಾರಕಿಹೊಳಿ ಅತ್ತ ಇತ್ತ ಓಡಾಡುತ್ತ, ಅವರನ್ನ ಇವರನ್ನ ಭೇಟಿ ಮಾಡುತ್ತಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ.

ಹೌದು..ಮೊನ್ನೆ ಮುಂಬೈನಲ್ಲಿ ದೇವೇಂದ್ರ ಫಡ್ನವಿಸ್ ಭೇಟಿ ಮಾಡಿದ ಬಳಿಕ ನಿನ್ನೆ (ಶುಕ್ರವಾರ) ಮೈಸೂರಿನಲ್ಲಿ ಸುತ್ತೂರು ಶ್ರೀ ಗಳನ್ನು ಭೇಟಿಯಾಗಿದ್ದರು. ಇದೀಗ ಇಂದು (ಶನಿವಾರ) ರಮೇಶ ಜಾರಕಿಹೊಳಿ ಶನಿವಾರ ಅಥಣಿಯಲ್ಲಿ ಅರ್ ಎಸ್‌ಎಸ್ ಮುಖಂಡರನ್ನು ಭೇಟಿಯಾಗಿದ್ದು, ಜಾರಕಿಹೊಳಿ ಈ ನಡೆ ಸಾಕಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ನನ್ನ ರಾಜೀನಾಮೆ ಮುಂಬೈನಲ್ಲೇ ತೀರ್ಮಾನ: ರಮೇಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ

ಶನಿವಾರ ಬೆಳಿಗ್ಗೆ ಅಥಣಿಗೆ ಆಗಮಿಸಿದ ರಮೇಶ ಜಾರಕಿಹೊಳಿ ಅರ್ ಎಸ್‌ಎಸ್ ಉತ್ತರ ಪ್ರಾಂತ ಸಂಚಾಲಕ ಅರವಿಂದ ದೇಶಪಾಂಡೆ ಅವರನ್ನು ಭೇಟಿಯಾದರು. ಈ ಭೇಟಿಯ ಸಮಯದಲ್ಲಿ ಪ್ರಸ್ತುತ ರಾಜಕೀಯ ಸ್ಥಿತಿಗತಿಯ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ತಮ್ಮ ಭೇಟಿಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ರಮೇಶ ಜಾರಕಿಹೊಳಿ ನಿರಾಕರಿಸಿದರು.

ಕೆಲವು ವಿಚಾರಗಳಿಂದ ನೊಂದು ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೆ ಎಂದು ರಮೇಶ್ ಜಾರಕಿಹೊಳಿ ಮೈಸೂರಿನಲ್ಲಿ ಹೇಳಿದ್ದರು. ಬಿಜೆಪಿಯಲ್ಲೇ ಕೆಲವರಿಂದ ನನಗೆ ಅನ್ಯಾಯವಾಗಿದ್ದು, ಅವರನ್ನು ಮನೆಗೆ ಕಳುಹಿಸದೆ ಬಿಡುವುದಿಲ್ಲ. ಯಾರಿಂದ ಅನ್ಯಾಯಆಗಿದೆ ಎಂಬುದನ್ನು ಈಗಲೇ ಹೇಳುವುದಿಲ್ಲ. 8-10 ದಿನಗಳಲ್ಲಿ ಎಲ್ಲವನ್ನೂ ವಿವರವಾಗಿ ಹೇಳುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿಕೆ ಕೊಟ್ಟಿದ್ದರು.

ಒಟ್ಟಿನಲ್ಲಿ ರಮೇಶ್ ಜಾರಕಿಹೊಳಿ ನಡೆ ದಿನ ದಿನದಿಂದ ದಿನಕ್ಕೆ ಕುತೂಹಲ ಮೂಡಿಸಿದೆ. ಏನ್ಮಾಡ್ತಿದ್ದಾರೋ ಏನೋ ಎನ್ನುವುದು ಒಂದು ತಿಳಿಯುತ್ತಿಲ್ಲ.

click me!