ಬಿಜೆಪಿ ಶಾಸಕನಿಂದ ನಾಡಗೀತೆಗೆ ಅವಮಾನ, ಬೇಜವಾಬ್ದಾರಿ ವರ್ತನೆಗೆ ಸಾರ್ವಜನಿಕರ ಆಕ್ರೋಶ

By Suvarna NewsFirst Published Mar 13, 2022, 10:56 PM IST
Highlights

* ಬಿಜೆಪಿ ಶಾಸಕ ರಾಮಣ್ಣ ಲಮಾಣಿ ಒಂದೇ ದಿನ ಎರಡು ಎಡವಟ್ಟು
* ಶಾಸಕರ ಬೇಜವಾಬ್ದಾರಿ ವರ್ತನೆಗೆ ಸಾರ್ವಜನಿಕರ ಆಕ್ರೋಶ
* ಶಾಸಕ ರಾಮಣ್ಣ ಲಮಾಣಿಗೆ ಗ್ರಾಮಸ್ಥರಿಂದ ತರಾಟೆ

ಗದಗ, (ಮಾ.13):  ಬಿಜೆಪಿ ಶಾಸಕ ರಾಮಣ್ಣ ಲಮಾಣಿ(MLA Ramanna Lamani) ಇಂದು (ಭಾನುವಾರ) ಒಂದೇ ದಿನ ಎರಡು ಎಡವಟ್ಟು ಮಾಡಿಕೊಂಡು ಸಾರ್ವಜನಿಕರು ಟೀಕೆಗೆ ಗುರಿಯಾಗಿದ್ದಾರೆ.

ಮುಂಡರಗಿ ತಾಲೂಕಿನ ಶಿರೋಳ ಗ್ರಾಮದಲ್ಲಿ (Shirol village) ಶಾಸಕ ರಾಮಣ್ಣ ಲಮಾಣಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಇದರ ಬೆನ್ನಲ್ಲೇ ಮತ್ತೊಂದು ವಿಚಾರದಲ್ಲಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. 

Latest Videos

ಮಹಿಳೆಯರಿಗೆ ಬಂಪರ್ ಆಫರ್ ಘೋಷಿಸಿದ ಶ್ರೀರಾಮುಲು, ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬರ್ಬೇಕು ಅಷ್ಟೇ

ಹೌದು....ಶಿರಹಟ್ಟಿಯಲ್ಲಿ ಕೆಎಸ್​ಆರ್​ಟಿಸಿ ಬಸ್(KSRTC Bus) ಡಿಪೋ ಉದ್ಘಾಟನೆ ವೇಳೆ ಬಿಜೆಪಿ ಶಾಸಕ ರಾಮಣ್ಣ ಲಮಾಣಿಯವರು ನಾಡಗೀತೆಗೆ (State Anthem) ಅವಮಾನ ಮಾಡಿದ್ದಾರೆ. ನಾಡಗೀತೆ ಹಾಡುವಾಗ ಸಾರಿಗೆ ಸಚಿವ ಬಿ.ಶ್ರೀರಾಮುಲು (Sriramulu) ಜತೆ ಮಾತನಾಡಲು ಮುಂದಾಗಿದ್ದಾರೆ. ಶಾಸಕ ರಾಮಣ್ಣ ಲಮಾಣಿಯವರ ಈ ವರ್ತನೆಗೆ ಸಾರ್ವಜನಿಕರು(Public) ಟೀಕಿಸಿದ್ದಾರೆ.

ಒಬ್ಬ ಸಾಮಾನ್ಯ ವ್ಯಕ್ತಿಯೂ ನಾಡಗೀತೆಗೆ ಗೌರವ ನೀಡ್ತಾನೆ. ಆದರೆ ಈ ಎಂಎಲ್ಎ ಸಾಹೇಬ್ರಿಗೆ ಮಾತ್ರ ನಾಡಗೀತೆಗೆ ಗೌರವ ನೀಡಬೇಕು ಅನ್ನೋ ಕನಿಷ್ಠ ಪರಿಜ್ಞಾನವೇ ಇಲ್ಲದಂತೆ ಕಾಣುತ್ತದೆ. ಈ ಹಿಂದೆಯೂ ನಾಡಗೀತೆ ಹಾಡುವಾಗ ಪುಸ್ತಕ ಓದುವ ಮೂಲಕ ಅವಮಾನ ಮಾಡಿದ್ದರು. ಈಗ ಮತ್ತೆ ನಾಡಗೀತೆಗೆ ಅವಮಾನ ಮಾಡಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಡಗೀತೆ ಹಾಡುವಾಗ ಶಾಸಕ ರಾಮಣ್ಣ ಲಮಾಣಿ ಪಕ್ಕದಲ್ಲೇ ನಿಂತಿದ್ದ ಸಚಿವ ಶ್ರೀರಾಮುಲು ಅವರನ್ನು ಮುಟ್ಟಿ ಮುಟ್ಟಿ ಮಾತನಾಡಿಸಲು ಯತ್ನಿಸಿದ್ದಾರೆ. ಇಡೀ ಸಮಾರಂಭದಲ್ಲಿ ಸಣ್ಣಮಕ್ಕಳಿಂದ ಎಲ್ಲರೂ ಸಾವಧಾನ ಸ್ಥಿತಿಯಲ್ಲಿ ನಿಂತು ನಾಡಗೀತೆಗೆ ಗೌರವ ನೀಡುವಾಗ ಜವಾಬ್ದಾರಿಯುತ ಶಾಸಕರು, ಸಚಿವರನ್ನು ಮಾತನಾಡಿಸುವ ಯತ್ನ ಮಾಡುವ ಮೂಲಕ ನಾಡಗೀತೆಗೆ ಅವಮಾನ ಮಾಡಿದ್ದಾರೆ.

ಈ ಹಿಂದೆಯೂ ಗದಗ ಜಿಲ್ಲಾಡಳಿತ ಭವನದಲ್ಲಿ ನಡೆದ ಸಭೆಯಲ್ಲೂ ನಾಡಗೀತೆ ಹಾಡುವಾಗ ಪುಸ್ತಕ ಓದುವ ಮೂಲಕ ಅವಮಾನ ಮಾಡಿದ್ರು. ಈಗ ಮತ್ತೆ ನಾಡಗೀತೆಗೆ ಅವಮಾನ ಮಾಡುವ ಮೂಲಕ ಬೇಜವಾಬ್ದಾರಿಯಿಂದ ವರ್ತನೆ ತೋರಿಸಿದ್ದಾರೆ.

ಜವಾಬ್ದಾರಿ ಸ್ಥಾನದಲ್ಲಿ ಇರುವ ಶಾಸಕ ರಾಮಣ್ಣ ಬೇಜವಾಬ್ದಾರಿ ವರ್ತನೆಗೆ ಶಿರಹಟ್ಟಿ ಪಟ್ಟಣದ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆ ಮಕ್ಕಳಿಗೆ ಇರುವಷ್ಟು ಕನಿಷ್ಠ ಜ್ಞಾನವಿಲ್ಲ ಅಂತ ಕಿಡಿಕಾರಿದ್ದಾರೆ. ನಾಡಗೀತೆ ಅವಮಾನ ಮಾಡಿದ ಶಾಸಕ ಕನ್ನಡನಾಡಿನ ಜನರ ಕ್ಷಮೆ ಕೇಳಬೇಕು ಎಂದು ಸ್ಥಳೀಯರಾದ ಶರಣು ಗೂಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸಕ ರಾಮಣ್ಣ ಲಮಾಣಿಗೆ ಗ್ರಾಮಸ್ಥರಿಂದ ತರಾಟೆ
ಮುಂಡರಗಿ ತಾಲೂಕಿನ ಶಿರೋಳ ಗ್ರಾಮದಲ್ಲಿ (Shirol village) ಶಾಸಕ ರಾಮಣ್ಣ ಲಮಾಣಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಗ್ರಾಮದ ರಸ್ತೆ ಮಾಡಿಸುವಂತೆ ಹಲವು ವರ್ಷಗಳಿಂದ ಮನವಿ ಮಾಡುತ್ತಾ ಬಂದಿದ್ದದರೂ ಸ್ಪಂದಿಸದ ಶಾಸಕ ರಾಮಣ್ಣ ಲಮಾಣಿಗೆ ಗ್ರಾಮಸ್ಥರು ಛೀಮಾರಿ ಹಾಕಿದ್ದಾರೆ.

 ನಡುರಸ್ತೆಯಲ್ಲೇ ಶಾಸಕರ ಕಾರು ತಡೆದು ತರಾಟೆಗೆ ತೆಗೆದುಕೊಂಡಿದ್ದಾರೆ ಗ್ರಾಮಸ್ಥರು. ರಾಮಣ್ಣ ಲಮಾಣಿ, ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದಾರೆ. ಗ್ರಾಮಕ್ಕೆ ಆಗಮಿಸಿದ್ದ ಶಾಸಕ ರಾಮಣ್ಣ ಲಮಾಣಿಗೆ (Shirahatti BJP MLA Ramanna Lamani) ದಿಗ್ಭಂಧನ ಹಾಕಿ ತರಾಟೆಗೆ ತೆಗೆದುಕೊಳ್ಳಲಾಗಿದೆ. ಆ ವೇಳೆ ರೈತರ ಆಕ್ರೋಶಕ್ಕೆ ಶಾಸಕ ರಾಮಣ್ಣ ತಡಬಡಾಯಿಸಿದ್ದಾರೆ. ಕೆಲಸ ಮಾಡ್ತಿರೋ, ಇಲ್ವೋ ಅಂತ ಶಾಸಕ ರಾಮಣ್ಣಗೆ ಗ್ರಾಮಸ್ಥರು ಪ್ರಶ್ನೆ ಮಾಡಿದ್ದಾರೆ.

click me!