ಸರ್ಕಾರ ನಡೆಸೋದೇ ಕಷ್ಟ: ಅಸಹಾಯಕತೆ ಹೊರಹಾಕಿದ ರೇಣುಕಾಚಾರ್ಯ

By Suvarna News  |  First Published May 11, 2021, 3:11 PM IST

* ಕೊರೋನಾ ಆರ್ಥಿಕ ಪ್ಯಾಕೇಜ್ ಬಗ್ಗೆ ಅಸಹಾಯಕತೆ ಹೊರಹಾಕಿದ ರೇಣುಕಾಚಾರ್ಯ 
* ನಾಯಕತ್ವ ಬದಲಾವಣೆ ಇಲ್ಲ ವಿಚಾರದಲ್ಲಿ ಸ್ವ ಪಕ್ಷದ ನಾಯಕರಿಗೆ ರೇಣುಕಾಚಾರ್ಯ ಟಾಂಗ್
* ಜಿಂದಾಲ್ ಭೂಮಿ ಹಗ್ಗಾಜಗ್ಗಾಟಕ್ಕೆ ಸಿಎಂ ರಾಜಕೀಯ ಕಾರ್ಯದರ್ಶಿ ಪ್ರತಿಕ್ರಿಯೆ


ಬೆಂಗಳೂರು, (ಮೇ.11): ಇವತ್ತು ಸರ್ಕಾರ ನಡೆಸೋದೇ ಕಷ್ಟವಾಗಿದೆ. ಲಾಕ್​ಡೌನ್​ ಪರಿಸ್ಥಿತಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡೋದು ಕಷ್ಟ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಬಿಜೆಪಿ ಶಾಸಕ ರೇಣುಕಾಚಾರ್ಯ  ಅಸಹಾಯಕತೆ ಹೊರಹಾಕಿದ್ದಾರೆ

ಬೆಂಗಳೂರಿನ ಸಿಎಂ ಕಾವೇರಿ ನಿವಾಸದ ಬಳಿ ಇಂದು (ಮಂಗಳವಾರ) ಮಾತನಾಡಿದ ಅವರು, ಸಿದ್ದರಾಮಯ್ಯ. 10 ಸಾವಿರ ಪ್ಯಾಕೇಜ್ ಘೋಷಣೆಗೆ ಒತ್ತಾಯಿಸಿದ್ದಾರೆ. ಕೋವಿಡ್ ಬಂದು ಸರ್ಕಾರಕ್ಕೆ ಆರ್ಥಿ‌ಕ ಹೊಡೆತ ಬಿದ್ದಿದೆ. ನೀವು ಸಿಎಂ ಆಗಿದ್ದವರು ಅರ್ಥ ಮಾಡಿಕೊಳ್ಳಬೇಕು. ಬಿಟ್ಟಿ ಪ್ರಚಾರಕ್ಕೆ ನೀವು ಇಂತ ಹೇಳಿಕೆ ಕೊಡಬೇಡಿ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

Latest Videos

undefined

ಲಾಕ್‌ಡೌನ್‌ಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ, ಸಿಎಂಗೆ ಸಿದ್ದರಾಮಯ್ಯ ಪತ್ರ

ಇನ್ನು ಬಿಜೆಪಿ ಅಧಿಕಾರಕ್ಕೆ ಬಂದಾಗ ಪ್ರವಾಹದಿಂದ ನಷ್ಟವಾಯ್ತು. ಹೂವು, ಹಣ್ಣು ನಷ್ಟಕ್ಕೆ 25 ಸಾವಿರ ಕೊಟ್ಟರು. ಮನೆ ಕಳೆದುಕೊಂಡವರಿಗೆ 5 ಲಕ್ಷ ಕೊಟ್ಟರು. ಕಿಸಾನ್ ಸನ್ಮಾನ್ ಯೋಜನೆಗೆ 4 ಸಾವಿರ ಕೊಟ್ರು, ಅಸಂಘಟಿತ ಕಾರ್ಮಿಕರಿಗೆ 5 ಸಾವಿರ ಕೊಟ್ಟರು. ಈಗ ಕೋವಿಡ್ ಬಂದು ಆರ್ಥಿಕ ಸಂಕಷ್ಟ ಎದುರಾಗಿದೆ. ಇವತ್ತು ಸರ್ಕಾರ ನಡೆಸೋದೇ ಕಷ್ಟವಾಗಿದೆ. ಲಾಕ್​ಡೌನ್​ ಪರಿಸ್ಥಿತಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡೋದು ಕಷ್ಟ ಎಂದು ಸ್ಪಷ್ಟಪಡಿಸಿದರು.

ನಾಯಕತ್ವ ಬದಲಾವಣೆ ಇಲ್ಲ
ಇನ್ನು ಇದೇ ವೇಳೆ ಸಿಎಂ ಬಿಎಸ್‌ವೈ ನಾಯಕತ್ವ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ಜನರ ಸಂಕಷ್ಟದಲ್ಲಿ ನಾವು ಜನರ ಜೊತೆ ಇರಬೇಕು. ದೆಹಲಿಗೆ ಹೋದವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಯಾರು ಸಿಎಂ ವಿರುದ್ಧ ಹೋಗಿದ್ದಾರೋ ಗೊತ್ತಿಲ್ಲ. ನಾಯಕತ್ವ ಬದಲಾವಣೆಯಾಗಲ್ಲ .ಇದನ್ನ ನಮ್ಮ ವರಿಷ್ಠರು‌ ಸ್ಪಷ್ಟಪಡಿಸಿದ್ದಾರೆ ಎಂದರು.

ಸಿಎಂ ಭೇಟಿಯಾದ ನಳೀನ್ ಕುಮಾರ್ ಕಟೀಲ್: ಬಿಜೆಪಿಯಲ್ಲಿ ಸಮ್‌ಥಿಂಗ್...ಸಮ್‌ಥಿಂಗ್

ಯಾರು ದೂರು ನಿಡೋಕೆ ಹೋಗಿದ್ದಾರೊ ಗೊತ್ತಿಲ್ಲ.ನಾನು ಈ ಬಗ್ಗೆ ಕೇಳಿದ್ದೇನೆ ಅಷ್ಟೇ. ದೂರು ಕೊಡೋಕೆ ಹೋದ್ರೆ ಏನು ಮಾಡೋಕೆ ಆಗೋದಿಲ್ಲ. ದೂರು ಕೊಡುವವರ ಹಣೆಬರ ಎಂದು ಕಿಡಿಕಾರಿದರು. 

ಯೋಗೇಶ್ವರ್ ಗೆ ಪರೋಕ್ಷ ಟಂಗ್
ದೆಹಲಿಗೆ ಹೋಗಿ ದೂರು ಕೊಡೋರು ಆತ್ಮಾವಲೋಕನ ಮಾಡಿಕೊಳ್ಳಲಿ. ಮಂತ್ರಿ ಆದೋರು ಇಂಥ ವೇಳೆ ಕೆಲಸ ಮಾಡಬೇಕು. ಕ್ಷೇತ್ರದಲ್ಲಿದ್ದು ಜನರ ಕೆಲಸ ಮಾಡಬೇಕು. ರಾಜಕೀಯ ಮಾಡೋದಲ್ಲ. ದೂರು ಕೊಡೋದ್ರಿಂದ ಏನೂ ಪ್ರಯೋಜನ ಇಲ್ಲ. ಇಂಥ ಸಂದರ್ಭದಲ್ಲಿ ರಾಜಕಾರಣ ಮಾಡೋದು ಸರಿಯಲ್ಲ ಎಂದು ಪರೋಕ್ಷವಾಗಿ ಸಚಿವ ಸಿ ಪಿ ಯೋಗೇಶ್ವರ್ ಟಾಂಗ್ ಕೊಟ್ಟರು.

ಸಿಗದ ರಾಮನಗರ ಜಿಲ್ಲಾ ಉಸ್ತುವಾರಿ: ಯೋಗೇಶ್ವರ್‌ ಹೈಕಮಾಂಡ್‌ ಭೇಟಿ

ಜಿಂದಾಲ್ ಭೂಮಿ ಗೊಂದಲ
ಜಿಂದಾಲ್ ಗೆ ಭೂಮಿ ಕೊಡೋ ನಿರ್ಧಾರ ಸಂಪುಟ ಸಭೆಯಲ್ಲಿ ಕೈಗೊಂಡಿದ್ದು, ಸಿಎಂ ಸಾಧಕ ಬಾಧಕ ನೋಡಿಯೇ ತೀರ್ಮಾನ ಕೈಗೊಂಡಿರುತ್ತಾರೆ. ಇದರ‌ ಬಗ್ಗೆ ಸಿಎಂಗೆ ಕೆಲವರು ಪತ್ರ ಬರೆದಿದಾರೆ. ಪತ್ರ ಬರೆದವರ ಜತೆನೂ ನಾನು ಮಾತಾಡಿದ್ದು, ನಮಗೆ ಸಿಎಂ ಮೇಲೆ ಗೌರವ ಇದೆ ಅಂದ್ರು ಎಂದು ರೇಣುಕಾಚಾರ್ಯ ಹೇಳಿದರು.

ಜಿಂದಾಲ್‌ಗೆ ಭೂಮಿ: ಬಿಜೆಪಿ ಶಾಸಕರಿಂದಲೇ ವಿರೋಧ, ಬಿಎಸ್‌ವೈಗೆ ಶುರುವಾಯ್ತಾ ಲೆಟರ್ ಭಯ..?

click me!