ಈಶ್ವರಪ್ಪ- ಯಡಿಯೂರಪ್ಪ ಅಸಮಾಧಾನ ಶಮನಕ್ಕೆ ಮುಂದಾದ ಹೈಕಮಾಂಡ್!

By Suvarna News  |  First Published Apr 3, 2021, 2:37 PM IST

ರಾಜ್ಯ ಬಿಜೆಪಿಯಲ್ಲಿ ಘಟಾನುಘಟಿ ನಾಯುಕರಗಳ ನಡುವೆ ಭಗಿಲೆದ್ದಿರುವ ಅಸಮಾಧಾನವನ್ನು ಶಮನ ಮಾಡಲು ಹೈಕಾಂಡ್ ಮುಂದಾಗಿದೆ. 


ಬೆಂಗಳೂರು, (ಏ.03): ಆಹಾರವಾಗಬಾರದು ಎಂಬ ಉದ್ದೇಶದಿಂದ ಎಚ್ಚರಗೊಂಡ  ಈಶ್ವರಪ್ಪ ಮತ್ತು ಯಡಿಯೂರಪ್ಪ ನಡುವಿನ ಆಂತರಿಕ ಕಲಹಕ್ಕೆ ಬ್ರೇಕ್ ಹಾಕಲು ಬಿಜೆಪಿ ಹೈಕಮಾಂಡ್ ತೀರ್ಮಾನಿಸಿದೆ.

ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರಣ್ಯ ಅವರನ್ನು  ಬೆಂಗಳೂರಿಗೆ ಕಳುಹಿಸಿ ಕಲಹಕ್ಕೆ ತೇಪೆ ಹಾಕಲು ತೀರ್ಮಾನಿಸಿದ್ದು, ಇದೇ ಏಪ್ರಿಲ್ 8 ರಂದು ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸಿ ಈಶ್ವರಪ್ಪ ಮತ್ತು ಮುಖ್ಯಮಂತ್ರಿ ನಡುವಿನ ಅಸಮಾಧಾನವನ್ನು ಶಮನ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Latest Videos

undefined

ಬಿಜೆಪಿ ಸರ್ಕಾರದಲ್ಲಿ ಸಚಿವರು ಮತ್ತು ಮುಖ್ಯಮಂತ್ರಿ ನಡುವೆ ಶೀತಲಸಮರ ಬೀದಿಗೆ ಬಂದ ಬಳಿಕ ಎಚ್ಚೆತ್ತುಕೊಂಡ ಬಿಜೆಪಿ ಹೈ ಕಮಾಂಡ್ ಪಂಚರಾಜ್ಯಗಳ ಚುನಾವಣೆ ಹಾಗ ಉಪ ಚುನಾವಣೆ ನಡುವೆ ನಡೆಯುತ್ತಿರುವ ಬೆಳವಣಿಗೆಯನ್ನು ತಹಬದಿಗೆ ತರಲು ಬಿಜೆಪಿ ನಾಯಕರು ಮಂದಾಗಿದ್ದಾರೆ.

ನಾನು ರೆಬೆಲ್‌ ಅಲ್ಲ, ಲಾಯಲ್‌: ‘ಲೆಟರ್‌ ಬಾಂಬ್‌’ ಸಮರ್ಥಿಸಿಕೊಂಡ ಸಚಿವ ಈಶ್ವರಪ್ಪ!

ಅನುದಾನ ಹಂಚಿಕೆ, ಇಲಾಖೆಯಲ್ಲಿ ಹಸ್ತಕ್ಷೇಪ ವಿಚಾರಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಸಚಿವ ಈಶ್ವರಪ್ಪ ಮತ್ತು ಮುಖ್ಯಮಂತ್ರಿ ನಡುವಿನ ಶೀತಲ ಸಮರಕ್ಕೆ ಬ್ರೇಕ್ ಹಾಕಲಿದ್ದಾರೆ ಎನ್ನಲಾಗಿದೆ. ಜೊತೆಗೆ ಮೂರು ಕ್ಷೇತ್ರಗಳ ಉಪ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ಅರುಣ್ ಸಿಂಗ್ ಭಾಗವಹಿಸಲಿದ್ದಾರೆ.

ಇದೆ 8 ರಂದು ರಾಜ್ಯಕ್ಕೆ ಬರಲಿರುವ ಅವರು ಮೂರು ದಿನಗಳು ಪಕ್ಷ, ಸಂಘಟನೆ, ಉಪ ಚುನಾವಣೆ ತಯಾರಿ, ಅಭ್ಯರ್ಥಿ ಗೆಲುವಿಗಾಗಿ ಬಿಜೆಪಿ ಮಾಡಿಕೊಂಡಿರುವ ಸಿದ್ದತೆಗಳ ಪ್ರಮುಖ ನಾಯಕರ ಜೊತೆ ಚೆರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ಮುಖ್ಯಮಂತ್ರಿ ಬೆಂಬಲಿತ ಶಾಸಕರು ಸಚಿವರ ಕಾರ್ಯವೈಖರಿ, ಅನುದಾನ ಹಂಚಿಕೆ ತಾರತಮ್ಯದ ಬಗ್ಗೆ ಅರುಣ್ ಸಿಂಗ್ ಗೆ ದೂರು ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಜೊತೆಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟಿಸುವಂತೆಯೂ ಸಿಎಂ ನಿಷ್ಠರ ಬಣ ಮನವಿ ಮಾಡುವ ಸಾಧ್ಯತೆ ಇದೆ.

click me!