ಅಪ್ಪ-ಮಕ್ಕಳ ಸಿ.ಡಿ ಸಹ ಇದೆ, ಇನ್ನೂ 23 ಜನರ CD ಇರುವ ಗಾಸಿಪ್: ಯತ್ನಾಳ್ ಬಾಂಬ್

Published : Mar 10, 2021, 07:40 PM IST
ಅಪ್ಪ-ಮಕ್ಕಳ ಸಿ.ಡಿ ಸಹ ಇದೆ, ಇನ್ನೂ 23 ಜನರ CD ಇರುವ ಗಾಸಿಪ್: ಯತ್ನಾಳ್ ಬಾಂಬ್

ಸಾರಾಂಶ

ರಾಸಲೀಲೆ ಸಿ.ಡಿ. ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇನ್ನೂ ಕೆಲವರ ಸಿ.ಡಿ. ಎನ್ನುವ ಮಾತುಗಳು ಕೇಳಿಬರುತ್ತಿವೆ. ಇನ್ನು ಈ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಬೆಂಗಳೂರು, (ಮಾ.10): ಅಪ್ಪಮಕ್ಕಳ ಸಿಡಿ ಸಹ ಕೆಲವರ ಬಳಿಯಿದ್ದು, ಆ ಸಿಡಿಗಳನ್ನು ಸಹ ಇಷ್ಟರಲ್ಲಿಯೇ ಬಿಡುಗಡೆ ಮಾಡುತ್ತಾರೆ. ಸಿಡಿ ಇಟ್ಟುಕೊಂಡೇ ಬ್ಲ್ಯಾಕ್ಮೇಲ್ ಮಾಡುವ ಎರಡು ಪಕ್ಷಗಳ ಕೆಲ ರಾಜಕೀಯ ನಾಯಕರು ನಮ್ಮ ರಾಜದಲ್ಲಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು (ಬುಧವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿ ಮಾಡೋದು ಇಷ್ಟು ಹಣ ಕೊಡಿ ಎಂದು ಬ್ಲಾಕ್‌ಮೇಲ್‌ ಮಾಡೋದು ಒಳ್ಳೆಯ ಬೆಳವಣಿಗೆಯಲ್ಲ. ಇನ್ನೂ 23 ಜನರ ಸಿಡಿ ಇದೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿದೆ.  ನನಗೆ ಸಿಡಿ ಮಾಡಿ ಗೊತ್ತಿಲ್ಲ ಸಿಡಿ ನೋಡೂ ಇಲ್ಲ. ಆದರೆ, ಇದೆಲ್ಲಾ ದುರದೃಷ್ಟಕರ ಎಂದು ತಿಳಿಸಿದರು.

ನಾನು 20 ವರ್ಷ ಕಾಂಗ್ರೆಸ್​ನಲ್ಲೇ ಇದ್ದೆ, ಜಾರಕಿಹೊಳಿ ಸಿಡಿ ಮಾಡಿದ್ದೇ ಇವರು: ಸಚಿವರ ಸ್ಫೋಟಕ ಹೇಳಿಕೆ

ಸಿಡಿ ಯಾರು ಮಾಡಿದ್ದು ಎಂಬುದು ತನಿಖೆ ನಂತರವಷ್ಟೇ ತಿಳಿಯಬೇಕು. ಕಾಂಗ್ರೆಸ್‌ನವರೂ ಇರಬಹುದು, ಬಿಜೆಪಿಯವರೂ ಇರಬಹುದು. ಏಕೆಂದರೆ ಈಗ ರಾಜ್ಯದಲ್ಲಿರುವುದು ಒಂದು ರೀತಿಯಲ್ಲಿ ಬಿಜೆಪಿ -ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಎಂದು ಲೇವಡಿ ಮಾಡಿದರು.

ಬ್ಲ್ಯಾಕ್​ ಮೇಲ್ ತಂತ್ರ ನಡೀತಾ ಇದೆ. ಕೆಲವು ಮಂದಿ ವಿಧಾನಸೌಧ ಸುತ್ತಲೂ.. ಇನ್ನೂ 23 ಜನರದ್ದು ಇದೆ. ಇನ್ನೊಂದು ವಾರದಲ್ಲಿ ಬಿಡುಗಡೆಯಾಗುತ್ತದೆ ಅನ್ನೋ ಗಾಸಿಪ್ ಹಬ್ಬುತ್ತಿದೆ. ಒಟ್ಟಾರೆ ಇದು ಜನಪ್ರತಿನಿಧಿಗಳ ಬ್ಲ್ಯಾಕ್ ಮೇಲ್ ಮಾಡುವ ತಂತ್ರವಾಗಿದೆ. ಎಲ್ಲಾ ಪಕ್ಷದಲ್ಲಿರುವ ಕೆಲವು ನಾಯಕರು ಇದನ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮೊನ್ನೆ ಹೇಳಿದ್ರು ಇನ್ನೂ ಆರು ಸಚಿವರ ಸಿಡಿ ಬಿಡುಗಡೆ ಆಗುತ್ತದೆ ಅಂತಾ. ನನಗೆ 23 ಜನರ ಹೆಸರನ್ನ ಹೇಳಿದರು. ಸದನ ನಡೆಯುವ ಸಂದರ್ಭದಲ್ಲಿ ಯಾರೋ ಒಬ್ಬ ಶಾಸಕರಿಗೆ ಫೋನ್ ಬರುತ್ತೆ. ನಿಮ್ಮ ಕುರಿತ ಸಿಡಿ ಇದೆ ಎಂದು ಬ್ಲ್ಯಾಕ್ ಮೇಲ್ ಮಾಡ್ತಾರೆ. ನೀವು ಇಷ್ಟು ಕೋಟಿ ಕೊಡಿ, ಇಲ್ಲದಿದ್ರೆ ಸಿಡಿ ಬಿಡುಗಡೆ ಮಾಡ್ತೇನೆ ಅಂತಾ ಬ್ಲಾಕ್ ಮೇಲೆ ಮಾಡಿರೋದು ಅದೆಷ್ಟೋ ನಡೆದಿದೆ. ಈ ಆಧಾರದ ಮೇಲೆ ನಾನು ಹೇಳಿಕೆ ನೀಡಿದ್ದೆ. ಈಗಲೂ ಕೂಡ ವಿಧಾನಸೌಧದ ಸುತ್ತಮುತ್ತ ಕೇಳಿ ಬರುತ್ತಿದೆ, ಇನ್ನೂ 23 ಜನರ CD ಇದೆ, ಬಿಡುಗಡೆಯಾಗುತ್ತದೆ ಅನ್ನೋದನ್ನ ಕೇಳಿದ್ದೇನೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

4 ವರ್ಷಗಳ ಬಳಿಕ ಕೊನೆಗೂ ಜಿಪಂ, ತಾಪಂಗಳಿಗೆ ಏಪ್ರಿಲಲ್ಲಿ ಚುನಾವಣೆ
ಸಾಮಾಜಿಕ ಭದ್ರತಾ ಪಿಂಚಣಿಯಲ್ಲಿ 24.55 ಲಕ್ಷ ಅನುಮಾನಾಸ್ಪದ ಫಲಾನುಭವಿಗಳು: ಕೃಷ್ಣ ಬೈರೇಗೌಡ