ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಹಿಂದೆ ಕಾಂಗ್ರೆಸ್ ಕೈವಾಡ ಇದೆ ಎಂಬ ಸಚಿವ ಎಸ್ಟಿ ಸೋಮಶೇಖರ ಹೇಳಿಕೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು, (ಮಾ.10): ಮಾಜಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ಸೆಕ್ಸ್ ಸಿಡಿ ಹಿಂದ ಕಾಂಗ್ರೆಸ್‌ನವರು ಇದ್ದಾರೆ ಎನ್ನುವ ಸಚಿವ ಎಸ್.ಟಿ. ಸೋಮಶೇಖರ್ ಆರೋಪಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ.
ಇಂದು (ಬುಧವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಪ್ಯಾಂಟ್ ಜಾರಿದ್ರೆ ಅವರ ಪ್ಯಾಂಟ್ನ್ನು ಅವರೇ ಹಾಕಿಕೊಳ್ಳಬೇಕು. ಮತ್ತೊಬ್ಬರು ಪ್ಯಾಂಟ್ ಹಾಕೋಕೆ ಆಗಲ್ಲ. ಪೊಲಿಟಿಕಲ್ ಗೇಮ್ನಲ್ಲಿ ಕೆಲವರು ಷಡ್ಯಂತ್ರ ಮಾಡುತ್ತಾರೆ. ಹುಶಾರಾಗಿರಬೇಕು ಎಂದು ಟಾಂಗ್ ಕೊಟ್ಟರು.
ನಾನು 20 ವರ್ಷ ಕಾಂಗ್ರೆಸ್ನಲ್ಲೇ ಇದ್ದೆ, ಜಾರಕಿಹೊಳಿ ಸಿಡಿ ಮಾಡಿದ್ದೇ ಇವರು: ಸಚಿವರ ಸ್ಫೋಟಕ ಹೇಳಿಕೆ
25 ವರ್ಷ ಶಾಸಕರಾಗಿ, ಮೂರು ಬಾರಿ ಸಚಿವರಾಗಿರೋರು ದಡ್ಡರಾ?, ಸಿಡಿ ನಕಲಿಯೋ? ಅಸಲಿಯೋ? ಅನ್ನುವುದನ್ನು ಮಾಧ್ಯಮಗಳು ನಿರ್ಧರಿಸಲಿ, ಪಾಪ ರಮೇಶ್ ಜಾರಕಿಹೊಳಿ ನೊಂದಿದ್ದಾನೆ ಎಂದು ವ್ಯಂಗ್ಯವಾಡಿದರು.
ಎಸ್ಟಿ ಸೋಮಶೇಖರ್ ಅವರನ್ನು ನಾನು ಬಿಜೆಪಿಗಿಂತ ಚೆನ್ನಾಗಿ ಬಲ್ಲೇನು, ಸಿಡಿ ಹಿಂದೆ ಕಾಂಗ್ರೆಸ್ ಕೈವಾಡ ಇದ್ದರೇ ಏನೇನಿದೆಯೋ ಅದನ್ನು ಮಾಧ್ಯಮಗಳ ಮುಂದೆ ಅವರೇ ಹೇಳಲಿ. 20 ವರ್ಷಗಳಿಂದ ಅವರು ಕಾಂಗ್ರೆಸ್ನಲ್ಲಿದ್ದರಲ್ಲಾ? ಅವಾಗ ಏನೇನು ಆಗಿದೆಯೋ ಅದನ್ನೂ ಹೇಳಲಿ ಎಂದು ತಿರುಗೇಟು ನೀಡಿದರು.
ರಮೇಶ್ ಜಾರಕಿಹೊಳಿಯನ್ನು ನಾನು ಚೆನ್ನಾಗಿ ಬಲ್ಲೇನು. ಅವನು ನಾನು ಒಂದು ಕಾಲದಲ್ಲಿ ಚೆನ್ನಾಗಿ ಇದ್ದೇವು. ನಂತರ ನನ್ನ ಬಗ್ಗೆ ಹುಚ್ಚುಚ್ಚು ಆಗಿ ಹೇಳಿಕೆ ಕೊಟ್ಟ. ಅವತ್ತಿಂದ ಅವನ ಸ್ನೇಹವನ್ನು ನಾನು ಬಿಟ್ಟೆ ಎಂದು ಸ್ಪಷ್ಟಪಡಿಸಿದರು.