ಸಿದ್ದರಾಮಯ್ಯನವರಿಗೆ ಇನ್ನು 75 ವರ್ಷ ಆಗಿಲ್ಲ. ಒಂದು ವರ್ಷ ಮೊದಲೇ ಆಚರಣೆ ಮಾಡಿಕೊಳ್ಳುತ್ತಿದ್ದಾರೆ ಎಂದು ಯತ್ನಾಳ್ ವ್ಯಂಗ್ಯ
ಬೆಳಗಾವಿ(ಜು.23): ಸಿದ್ದರಾಮಯ್ಯ ಅವರಿಗೆ ಇನ್ನೂ 75 ವರ್ಷ ಆಗಿಲ್ಲ. ಒಂದು ವರ್ಷ ಮೊದಲೇ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲ್ಲ. ಉತ್ಸವ ಹಾಗೂ ನಿವೃತ್ತಿ ಎರಡು ಮಾಡಿಕೊಳ್ಳುತ್ತಿದ್ದಾರೆ. ಇವೆಲ್ಲ ನಿವೃತ್ತಿ ಉತ್ಸವಗಳು ಎಂದು ವಿಜಯಪುರ ನಗರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಸಿದ್ರಾಮೋತ್ಸವ ಬಗ್ಗೆ ಲೇವಡಿ ಮಾಡಿದರು. ಈ ಕುರಿತು ಚಿಕ್ಕೋಡಿಯಲ್ಲಿ ಮಾತನಾಡಿದ ಅವರು, ಕೈನಲ್ಲಿ ಮುಖ್ಯಮಂತ್ರಿ ಆಗುವ ಅಭ್ಯರ್ಥಿಗಳೇ ಹೆಚ್ಚಾಗಿದ್ದಾರೆ. ಸಿದ್ದರಾಮಯ್ಯ ಹಿರಿಯರಿದ್ದಾರೆ. ಮುಖ್ಯಮಂತ್ರಿ ಆಗಬೇಕೆನ್ನುವುದು ತಪ್ಪಲ್ಲ. ಆದರೆ ಯಾರು ಮುಖ್ಯಮಂತ್ರಿ ಆಗುವವರೆಂದು ಅವರ ಪಕ್ಷ ನಿರ್ಣಯ ಮಾಡುತ್ತೆ. ಕಾಂಗ್ರೆಸ್ ನಾಯಕ ಎಂ.ಬಿ. ಪಾಟೀಲ ಮುಖ್ಯಮಂತ್ರಿ ಆಗುವ ವಿಚಾರವಾಗಿ ಮಾತನಾಡಿದ ಅವರು, ಎಂ.ಬಿ. ಪಾಟೀಲರಿಗೂ ಆಗಬೇಕು ಅಂತಾರೆ. ಆದರೆ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ತಾನೇ ಆಗಬೇಕಲ್ಲ. ಜನ ತೀರ್ಮಾನ ಮಾಡಿದರೆ ಮಾತ್ರ ಅವರು ಸಿಎಂ ಆಗುವರು ಎಂದರು.
ಕೈ ಸೋನಿಯಾ ಗಾಂಧಿಯ ಇಡಿ ವಿಚಾರಣೆ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಪ್ರತಿಭಟನೆ ಮಾಡುವುದು ತಪ್ಪು. ನೀವು ಲೂಟಿ ಮಾಡಿರಿ, ನೀವು ಪ್ರಾಮಾಣಿಕರಿದ್ದರೆ ಇಡಿ ಯಾಕೆ ಬರಿತ್ತೆ. ಭ್ರಷ್ಟಾಚಾರ ಮಾಡಿರುವುದು ಸತ್ಯ ಇದೆ. ನ್ಯಾಷನಲ್ ಹೆರಾಲ್ಡ್ ಅನ್ನುವ ಪತ್ರಿಕೆಯ ಒಟ್ಟು ಮೌಲ್ಯ . 5 ಸಾವಿರ ಕೋಟಿ ಇದೆ. ಅದನ್ನು ನೀವು . 50ರಿಂದ 70 ಕೋಟಿಗೆ ಖರೀದಿ ಮಾಡುತ್ತಿರಿ ಎಂದರೆ ಭ್ರಷ್ಟಾಚಾರ ಮೇಲ್ನೋಟಕ್ಕೆ ಅನ್ನಿಸುತ್ತದೆ. ಒಂದು ವೇಳೆ ನೀವು ಪ್ರಾಮಾಣಿಕರಿದ್ದರೆ ಇಡಿ ಎದುರಿಸಿರಿ. ಇಡಿಗೆ ಹೋಗಿರೋರಿಗೆಲ್ಲ ಶಿಕ್ಷೆ ಆಗಿಲ್ಲ ಎಂದು ಹೇಳಿದರು.
ಬದುಕಿದ್ದಾಗ ಉತ್ಸವ ಆಚರಣೆ ಎಷ್ಟು ಸರಿ?: ಸಿದ್ದರಾಮೋತ್ಸವದ ಬಗ್ಗೆ ಸಚಿವ ಪಾಟೀಲ ಟಾಂಗ್
ಈಗ ನನ್ನ ಮೇಲೆ ಏನು ಇಲ್ಲ ಅಂತ ನನ್ನ ಮೇಲೆ ಇಡಿ ರೇಡ್ ಮಾಡುವುದಿಲ್ಲ. ಅದಕ್ಕೆ ನಾನು ಹೀಗೆ ಹೇಳಿಕೆ ನೀಡಿತ್ತ ಒರುತ್ತೇನೆ. ನೀವು ಇಡಿ ತನಿಖೆ ಸುಪ್ರೀಂಕೋರ್ಚ್ ನಿರ್ದೇಶನದ ಪ್ರಕಾರ ನಡೆಯುತ್ತೆ. ಇದನ್ನು ಮೋದಿ, ಬಿಜೆಪಿ ಆದೇಶ ಮಾಡಿಲ್ಲ . ಸುಬ್ರಮಣ್ಯ ಸ್ವಾಮಿ ಕೇಸ್‌ನಲ್ಲಿ ಇಡಿ ತನಿಖೆ ಆಗಬೇಕು ಎಂದು ಸುಪ್ರೀಂಕರ್ಟ್ ಹೇಳಿದೆ. ನೀವು ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಮಾಡುತ್ತೀರಾ ಅಂದರೆ ಸಂವಿಧಾನಕ್ಕೆ ಮಾಡಿದ ಅಪಮಾನ ಎಂದರು.
ಸೋನಿಯಾ, ರಾಹುಲ್‌ಗೆ ಮೆದುಳಿಲ್ಲ:
ಸಿದ್ದರಾಮಯ್ಯ ಲುಂಗಿ ಸುತ್ತಿಕೊಳ್ಳುತ್ತಾರೆ. ಪಾಪ ಸಿದ್ದರಾಮಯ್ಯ ಅವರಿಗೆ ಜಿಗಿಲಿಕ್ಕೆ ಅಗಲ್ಲ. ರಾಜಕಾರಣದಲ್ಲಿ ಇಂತಹ ಕಳ್ಳರದೇ ಬೋಗಸ್ ಪಬ್ಲಿಸಿಟಿ ಆಗ್ತಾ ಇದೆ. ಕಾಲು ಬೀಳುವುದು, ಜೇಬಿನಲ್ಲಿ ಚಪ್ಪಲಿ ಹಾಕಿಕೊಳ್ಳುವುದು. ನೀವೇ ತಂದೆ ತಾಯಿ ಅನ್ನುವುದು, ನೀವೇ ಅಪ್ಪಾಜಿ ಅನ್ನುವುದು ಇದರಿಂದಲೇ ರಾಜಕಾರಣ ಹಾಳಾಗಿದೆ ಎಂದ ಅವರು, ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ತಲೆ ಮೆದುಳು ಇದ್ದರೆ ದೇಶಕ್ಕೆ ಒಳ್ಳಯದಾಗುತ್ತಿತ್ತು ಎಂದು ತಿಳಿಸಿದರು.
ಮಂತ್ರಿಗಿರಿ ಬೇಡ:
ಬೊಮ್ಮಾಯಿ ಅವರಿಗೆ ಯಾರೂ ಸಚಿವ ಸ್ಥಾನ ಕೇಳುತ್ತಿಲ್ಲ. ಅವರೇ ಕ್ರಿಯೆಟ್ ಮಾಡುತ್ತಾರೆ. ನಾನು ದೆಹಲಿಗೆ ಹೋಗುತ್ತಿದ್ದೇನೆ. ವರಿಷ್ಠರೊಂದಿಗೆ ಮಾತನಾಡಿ ಸಂಪುಟ ರಚನೆ ಮಾಡುತ್ತೇನೆ ಎಂದು ಹೇಳುತ್ತಾರೆ. ಚುನಾವಣೆ ಸಮೀಪಿಸುತ್ತಿದೆ. ನಮಗೆ ಯಾವ ಮಂತ್ರಿಗಿರಿ ಬೇಡ. ಇದ್ದ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಕೊಡಿ ಸಾಕು. 8 ತಿಂಗಳಿಗೆ ಸಚಿವರಾಗಿ ಮಾಡುವುದೇನು ಇಲ್ಲ. ನನ್ನ ಕ್ಷೇತ್ರದಲ್ಲಿ ನಾನು ಸಾವಿರ ಕೋಟಿಯ ಅಭಿವೃದ್ಧಿ ಮಾಡುತ್ತಿದ್ದೇನೆ. ಮಂತ್ರಿ ಆದರೆ ಇಷ್ಟುಅನುದಾನ ಬರಲ್ಲ ಎಂದರು.
ರಮೇಶ ಕುಮಾರ ಸತ್ಯ ಹೇಳಿದ್ದಾರೆ:
4 ತಲೆಮಾರಿಗಾಗುವಷ್ಟು ಮಾಡಿಕೊಂಡಿದ್ದೇವೆ ಎಂದು ರಮೇಶ ಕುಮಾರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವು, ರಮೇಶ ಕುಮಾರ ಹೇಳಿದ್ದು ನೂರಕ್ಕೆ ನೂರು ಸತ್ಯ. ಅವರು ಬಹಳ ವರ್ಷದ ನಂತರ ಸತ್ಯ ನುಡಿದಿದ್ದಾರೆ. 40 ವರ್ಷದ ರಾಜಕೀಯದಲ್ಲಿ ಇವತ್ತು ಸತ್ಯ ಹೇಳಿದ್ದಾರೆ. ಗಾಂಧಿ ಮನೆತನ, ಕಾಂಗ್ರೆಸ್ ಪಕ್ಷದ ಹೆಸರ ಮೇಲೆ ಮಾಡಿಕೊಂಡಿದ್ದಾರಲ್ಲ ಅದಕ್ಕೆ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಅಷ್ಟೇ ಹೇಳಿದ್ದಾರೆ. ಉಳಿದ ಪಕ್ಷಗಳಿಗೆ ಹೇಳಿಲ್ಲ ಎಂದು ವ್ಯಂಗ್ಯವಾಡಿದರು.
ಅದ್ಧೂರಿ ಜನ್ಮದಿನ ಆಚರಿಸುವ ಸಿದ್ದರಾಮಯ್ಯ ಯಾವ ಸಮಾಜವಾದಿ: ಈಶ್ವರಪ್ಪ
ಮೋದಿ ಪ್ರಧಾನಿ ಆದಾಗಿನಂದ 75ನೇ ವಯಸ್ಸಿಗೆ ನಿವೃತ್ತಿ ಪರಿಪಾಠ ಆರಂಭ
ಮೋದಿಯವರು ಪ್ರಧಾನಿ ಆದಾಗಿಂದ 75ನೇ ವರ್ಷಕ್ಕೆ ಚುನಾವಣೆ ನಿವೃತ್ತಿಯ ಪರಿ ಪಾಠ ಪ್ರಾರಂಭವಾಗಿದೆ. ಪಾಪ ಅವರು ಅದಕ್ಕೆ ಚುನಾವಣಾ ರಾಜಕೀಯದಿಂದ ನಿವೃತ್ತಿರಾಗಿದ್ದಾರೆ. ಆದರೆ ಉಳಿದ ರಾಜಕಾರಣದಲ್ಲಿ ಅವರು ಮುಂದುವರೆಯುವ ಸಂಕೇತ ಇದೆ ಎಂದು ವಿಜೇಂದ್ರನಿಗೆ ಯಡಿಯೂರಪ್ಪ ಶಿಕಾಪುರ ಕ್ಷೇತ್ರ ಬಿಟ್ಟುಕೊಟ್ಟವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು.
ವಿಜೇಂದ್ರಗೆ ಮೈಸೂರು ಭಾಗದ ಕ್ಷೇತ್ರದಲ್ಲಿ ಚುನಾವಣೆ ಎದುರಿಸುವ ಒತ್ತಡ ವಿಚಾರವಾಗಿ ಮಾತನಾಡಿ, ಒತ್ತಡ ಇದೆ ಎಂದು ಎಲ್ಲರು ಹೇಳಿಕೊಳ್ಳುವರು. ಮೈಸೂರಿನಿಂದ ಇದೆ, ಬೀದರ್‌ನಿಂದ ಇದೆ, ಬಸವಕಲ್ಯಾಣದಿಂದ ಒತ್ತಡ ಇದೆ ಎಂದು ಎಲ್ಲರೂ ಹೇಳಿಕೊಳ್ಳುತ್ತಾರೆ. ಆದರೆ ಶಿಕಾರಿಪುರದಲ್ಲಿ ತಂದೆ ಇಚ್ಚೆಯಂತೆ ಮಗ ನಡೆದುಕೊಳ್ಳುತ್ತಿದ್ದಾರೆ ಎಂದರು.