
ವರದಿ- ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್, ರಾಮನಗರ
ರಾಮನಗರ, (ಜುಲೈ.23): ಕಳೆದ ಎರಡ್ಮೂರು ವರ್ಷಗಳಿದ ಸ್ವಕೇತ್ರ ಕನಕಪುರಕ್ಕೆ ಟೈಮ್ ಕೊಡದೇ ರಾಜ್ಯಾದ್ಯಂತ ಪ್ರವಾಸ ಮಾಡ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಂದು(ಶನಿವಾರ) ಕನಕಪುರದಲ್ಲಿ ಕೆಡಿಪಿ ಸಭೆ ನಡೆಸಿದರು.
ತಾಲ್ಲೂಕಿನಲ್ಲಿ ಸಾಕಷ್ಟು ಭ್ರಷ್ಟಾಚಾರದ ಆರೋಪ ಕೇಳಿಬಂದ ಹಿನ್ನಲೆ ಸಭೆ ಕರೆದಿದ್ದ ಡಿಕೆಶಿ ಅಧಿಕಾರಿಗಳಿಗೆ ಚಳಿ ಬಿಡಿಸಿದ್ರು, ಒಂದೊಂದು ಖಾತೆಗೆ ಒಂದೊಂದು ರೇಟ್ ಫಿಕ್ಸ್ ಮಾಡಿ ರೆವನ್ಯೂ ಇಲಾಖೆ ಅಧಿಕಾರಿಗಳನ್ನು ಸಾಲಾಗಿ ನಿಲ್ಲಿಸಿ ತರಾಟೆಗೆ ತೆಗೆದುಕೊಂಡರು.
ನಾನು ಕ್ಷೇತ್ರಕ್ಕ ಬರೋಕೆ ಆಗಿಲ್ಲ ಎಂಬ ಕಾರಣಕ್ಕೆ ಸಾರ್ವಜನಿಕರನ್ನು ಪ್ರತಿದಿನ ಕಛೇರಿಗೆ ಅಲೆಸುತ್ತಿದ್ದಾರೆ ಅಧಿಕಾರಿಗಳು. ಭಯವಿಲ್ಲದೇಕಮೀಷನ್ ಪಡೆಯುತ್ತಿದ್ದಾರೆ. ಈ ಹಾಗಾಗಿ ನನಗೆ ಸಾರ್ವಜನಿಕವಾಗಿ ಸಾಕಷ್ಟು ದೂರುಗಳು ಬಂದಿದ್ದಕ್ಕೆ ಇಂದು ಕೆಡಿಪಿ ಸಭೆ ಕರೆದಿದ್ದಾಗಿ ಡಿಕೆಶಿ ತಿಳಿಸಿದರು.
India Gate: ಡಿಕೆಶಿಗೇಕೆ ಈಗ ಒಕ್ಕಲಿಗರ ಮೇಲೆ ಕಣ್ಣು? ಏನೀ ಲೆಕ್ಕಾಚಾರ..?
ಅಂದಹಾಗೆ ನನ್ನ ಕ್ಷೇತ್ರದಲ್ಲೇ ಭ್ರಷ್ಟಾಚಾರ ತಾಂಡವವಾಡ್ತಿದೆ ಎಂದು ಸ್ವತಹ ಡಿಕೆ ಶಿವಕುಮಾರ್ ಅವರೇ ಒಪ್ಪಿಕೊಂಡಿದ್ದಾರೆ. ನಾನು ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನಿಡೋಕೆ ಆಗಿಲ್ಲ, ಹಾಗಾಗಿ ಹೋಟೆಲ್ ಗಳಲ್ಲಿ ತಿಂಡಿಗಳ ಮೆನ್ಯೂ ಹಾಕಿದಂತೆ ನೀವು ಕೂಡ ನಿಮ್ಮ ಲಂಚದ ರೇಟ್ ಗಳನ್ನು ಹಾಕಿಕೊಳ್ಳಿ, ಎಂದು ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು.
ನಾನು ನಿಮ್ಮನ್ನ ಏನು ಕೇಳೊಕೆ ಆಗಿಲ್ಲ ಎಂದು ಈ ಮಟ್ಟಕ್ಕೆ ಬೆಳೆದಿದ್ದಿರಾ, ಸರಿಯಾದ ಸಮಯಕ್ಕೆ ಖಾತೆ, ವೃದ್ದಾಪ್ಯ ಮಾಡಿಕೊಳ್ಳದೆ ರೈತರನ್ನು ಪ್ರತಿನಿತ್ಯ ಕಛೇರಿಗೆ ಅಲೆಸುತ್ತಿದ್ದೀರಾ, ಜಿಲ್ಲಾ ಉಸ್ತುವಾರಿ ಸಚಿವರು, ಅದೇನೋ ಕ್ಲೀನ್ ಮಾಡ್ತೀನಿ ಅಂತಾ ಬಂದಿದ್ದೀರಾಲ್ಲ ಪಾಪ ಇದನ್ನೇನಾ ಮಾಡ್ತಾ ಇರೋದು ಎಂದು ಪರೋಕ್ಷವಾಗಿ ಸಚಿವ ಅಶ್ವಥ್ ನಾರಾಯಣ ಅವರಿಗೆ ಟಾಂಗ್ ನೀಡುವ ಮೂಲಕ ಅಧಿಕಾರಿಗಳಿಗೆ ಚಳಿ ಬಿಡಿಸಿದರು.
ಇನ್ನೂ ಕನಕಪುರ ತಾಲೂಕಿನಲ್ಲಿ ಮನೆ ಇಲ್ಲದ ಅಧಿಕಾರಿಗಳಿಗೆ ತರಾಟೆಗೆ ತೆಗದುಕೊಂಡ ಕೆಪಿಸಿಸಿ ಅಧ್ಯಕ್ಷ, ಬೆಂಗಳೂರಿನಿಂದ ಬಂದು ಇಲ್ಲಿ ನಿಮ್ಮ ರೇಟ್ ಮತ್ತೊಂದು ಏನ್ ಕೆಲಸ ಮಾಡಿದ್ದೀರಿನೀವು. ಚೀಫ್ ಸೆಕರೇಟ್ರೀಗೆ ಪತ್ರ ಬರೆಯುತ್ತೇನೆ. ನಮ್ಮ ತಾಲೂಕಿನಲ್ಲಿ ಇಲ್ಲದವರನ್ನ ಕಳಿಸೋಣ ನಮ್ಮಗೆ ಬೇಡ. ಬೆಂಗಳೂರಿನಲ್ಲಿ ಇದ್ದವರು ಅಲ್ಲೇ ಇರಲಿ. ನನಗೆ ನಮ್ಮಜನ ಮುಖ್ಯ ನೀವಲ್ಲ. ಕೆಲಸ ಮಾಡಲು ಇಷ್ಟ ಇಲ್ಲ ಅಂದ್ರೆ ಹೇಳಿ ನಾನಂತೂ ನಿಮ್ಮನ್ನ ಇಲ್ಲಿಗೆ ಹಾಕಿಸಿಕೊಂಡಿಲ್ಲ. ಹಾಗೆ ತಾಲೂಕಿನ ಅಧಿಕಾರಿಗಳಿದ್ದರೂ ವಾಟ್ಸಾಪ್ ಗ್ರೂಪ್ ಮಾಡಿ ದಿನ ನಿತ್ಯವು ಅಧಿಕರಿಗಳು ಕೆಲಸದ ಬಗ್ಗೆ ಮಾಹಿತಿ ನೀಡುವಂತೆ ಎಸಿ ಮಂಜುನಾಥ್ ಗೆ ಹೇಳಿದರು.
ಒಟ್ಟಾರೆ ರಾಜ್ಯಾದ್ಯಂತ ಪ್ರವಾಸ ಮಾಡ್ತಿದ್ದ ಡಿಕೆಶಿ ರಾಜ್ಯ ಸರ್ಕಾರದ ಮೇಲೆ ಭ್ರಷ್ಟಾಚಾರದ ಅರೋಪ ಮಾಡಿ ಗಮನ ಸೆಳೆಯುತ್ತಿದ್ದರು, ಇತ್ತ ಸ್ವಕ್ಷೇತ್ರದಲ್ಲೇ ವ್ಯಾಪಕ ಭ್ರಷ್ಟಾಚಾರ ತಾಂಡವದ ಬಗ್ಗೆ ಗಮನ ಸೆಳೆದ ಡಿಕೆಶಿ ಇಂದು ಸಭೆ ಮೂಲಕ ಅಧಿಕಾರಿಗಳಿಗೆ ಚಾಟಿ ಬೀಸಿದ್ರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.