'ನೀವು ಸಿಎಂ ಆಗಿರಿ ಉಳಿದ ಎಲ್ಲ ಖಾತೆಯ ಜವಾಬ್ದಾರಿ ವಿಜಯೇಂದ್ರಗೆ ಕೊಡಿ'

By Suvarna NewsFirst Published Apr 2, 2021, 6:15 PM IST
Highlights

ಈಶ್ವರಪ್ಪ ಪರ ಬ್ಯಾಟ್ ಬೀಸಿದ ಯತ್ನಾಳ್/ ರಾಜ್ಯದಲ್ಲಿ ಅಪ್ಪ ಮಕ್ಕಳ ಸರ್ಕಾರ ಅಧಿಕಾರ ನಡೆಸುತ್ತಿದೆ/ ಈಶ್ವರಪ್ಪ ಮೂಲ ಬಿಜೆಪಿಗರು/ ಎಲ್ಲಾ ಕಡೆ ಹಸ್ತಕ್ಷೇಪ  ಮಾಡಿದರೆ ಹೇಗೆ?

ವಿಜಯಪುರ(ಏ. 02)  ಬಿಜೆಪಿಯನ್ನು ಹಿಂದೆ ಕಟ್ಟಿದವರು ಈಶ್ವರಪ್ಪ. ನಿನ್ನೆ ಮೊನ್ನೆ ಬಂದಿರುವವರು ಅವರ ಬಗ್ಗೆ ಕಮೆಂಟ್ ಮಾಡುವದು ಸರಿ ಅಲ್ಲ. ನಾನು, ಯಡಿಯೂರಪ್ಪನವರು ಪಕ್ಷ ಬಿಟ್ಟು ಹೊರಗೆ ಹೋಗಿ ಬಂದಿವಿ. ಆದರೆ ಈಶ್ವರಪ್ಪ ನವರು ಮೂಲ ಬಿಜೆಪಿ, ಅವರು ಪಕ್ಷ ಬಿಟ್ಟು ಎಲ್ಲೂ ಹೋಗಿಲ್ಲ. ಕ್ಯಾಬಿನೆಟ್ ದರ್ಜೆಯ ಸಚಿವರಿಗೆ ಅಧಿಕಾರ ಇಲ್ಲ ಎಂದರೆ ಏನು ಮಾಡಬೇಕು? ಎಂದು ಶಾಸಕ  ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನೆ ಮಾಡಿದ್ದಾರೆ.

ಜಾರಕಿಹೋಳಿ ಅವರಿಗೆ ಎನೋ  ಒಂದು ಕೇಸ್ ಎಂದು ಅವರನ್ನು ಸೈಡ್ ಲೈನ್ ಮಾಡಿದರು ಈಗ ಗ್ರಾಮೀಣಾಭಿವೃದ್ಧಿ  ಇಲಾಖೆ ಕತೆ. ಮರಿಸ್ವಾಮಿಗೆ 65 ಕೋಟಿ ದಿಢೀರ್  ಕೊಡುತ್ತಾರೆ. ಮುಖ್ಯಮಂತ್ರಿ ಅಂದರೆ ಅವರು ಒಬ್ಬ ಕ್ಯಾಬಿನೆಟ್ ದರ್ಜೆಯ ಸಚಿವರು. ಎಲ್ಲರಲ್ಲೂ ಮುಖ್ಯನಾಗಿರಲಿ ಎಂದು ಮುಖ್ಯ ಮಂತ್ರ ಹುದ್ದೆ ಸೃಷ್ಟಿಯಾಗಿದೆ ಆದರೆ ಎಲ್ಲ ಇಲಾಖೆಯಲ್ಲೂ ತಾವು ಹಸ್ತಕ್ಷೇಪ ಮಾಡಿದರೆ ಹೇಗೆ ಎಂದು ಪ್ರಶ್ನೆ ಮಾಡಿದರು.

ಪತ್ರ ಬರೆದಿದ್ದೆ, ದೂರು ಕೊಟ್ಟಿಲ್ಲ ಎಂದ ಈಶ್ವರಪ್ಪ

ನೀವು ಮುಖ್ಯಮಂತ್ರಿ ಆಗಿರಿ ಉಳಿದ ಎಲ್ಲ ಖಾತೆಯ ಜವಾಬ್ದಾರಿ ವಿಜಯೇಂದ್ರಗೆ ಕೊಡಿ. ಪ್ರಸಾದ್ ಎಂಬ ಫೈನಾನ್ಸ್ ಸೆಕ್ರೇಟರಿ ಮುಖ್ಯಮಂತ್ರಿ ಗಳ ಜೊತೆ ಅಡ್ಜೆಸ್ಟ್  ಆಗುತ್ತಾರೆ ಅಪ್ಪ ಮಗ ಕಾವೇರಿ ಭವನದಲ್ಲಿ ಕುಳಿತು ಇಡೀ ಇಲಾಖೆಯನ್ನು ಡೀಲ್ ಮಾಡುತ್ತಿದೆ. ವಿಜಯೇಂದ್ರ ಯಾವ ಸಂವಿಧಾನಾತ್ಮಕ ಹುದ್ದೆಯಲ್ಲಿದ್ದಾನೆ ಎಂದು  ಪ್ರಶ್ನೆ ಮಾಡಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇಲ್ಲ. ಪ್ರಧಾನಿ ಮೋದಿ ಅವರ ಕನಸಿನ ಸರ್ಕಾರ ಇಲ್ಲ ಇಲ್ಲಿ ಅಪ್ಪ ಮಕ್ಕಳ ಸರ್ಕಾರ ಇದೆ. ಈಶ್ವರಪ್ಪ ವಿರುದ್ದ ಸಹಿ ಸಂಗ್ರಹ ಮಾಡುವದು ಇಡೀ ಪಕ್ಷದ ವಿರುದ್ದ ಸಹಿ ಸಂಗ್ರಹ ಮಾಡಿದಂತೆ. ಅವರು ಮಾಡಿರುವ ತಪ್ಪಾದರೂ ಏನು? ಒಂದು ವರ್ಷದಿಂದ ಈಶ್ವರಪ್ಪನವರಿಗೆ ತೊಂದರೆ ಕೊಡುತ್ತಿದ್ದಾರೆ. ಅವರರು ಇಷ್ಟು ತಾಳಿಕೊಂಡರು ಯತ್ನಾಳ ನಾಲಿಗೆ ಹರಿ ಬಿಡುತ್ತಾರೆ ಎಂದೆಲ್ಲ ಈಶ್ವರಪ್ಪ ಹೇಳಿದ್ದರು. ಈಗ ಈಶ್ವರಪ್ಲನವರಿಗೆ ತಲೆಕೆಟ್ಟಿದೆ, ಇನ್ನೂ ಬಾಳ ಮಂದಿಗೆ ತಲೆಕೆಡುತ್ತದೆ ಎಂದು ಯತ್ನಾಳ್ ಒಂದಕ್ಕೊಂದು ಸಂಬಂಧ ಇಲ್ಲದ ರೀತಿ ಮಾತನಾಡುತ್ತಾ ಹೋದರು.

ಇಂದು ಯಡಿಯೂರಪ್ಪ ನವರ ಕುಟುಂಬ ರಾಜಕಾರಣದಿಂದ ಕರ್ನಾಟಕ ಹಾಳಾಗುತ್ತಿದೆ. ಹಾಗಾಗಿ ಎಚ್ಚರಿಕೆ ಹೆಜ್ಜೆ ಇಡಬೇಕು ಎಂದು  ಹೇಳಿದರು.

 

click me!