ದೇಶದಲ್ಲಿ ಶ್ರೀರಾಮನಿಗೆ ಸಂಬಂಧಿಸಿದ ಪವಿತ್ರ ಕ್ಷೇತ್ರಗಳನ್ನು ಹೊಂದಿದ ಅಯೋಧ್ಯ, ಚಿತ್ರಕೂಟ, ಸೀತಾಪುರ, ರಾಮೇಶ್ವರಂ, ನಾಸಿಕ್, ಕೊಪ್ಪಳ ಸೇರಿ 10 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸೋತಿದೆ. ಈ ಬಗ್ಗೆ ಕಾಂಗ್ರೆಸ್ ಟೀಕೆ ಪೋಸ್ಟರ್ ಹಂಚಿಕೊಂಡು ಟೀಕೆ ಮುಂದುವರೆಸಿದೆ.
ಬೆಂಗಳೂರು (ಜೂ.09): ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣೆಗೂ ಮುನ್ನವೇ ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡಿ ಉದ್ಘಾಟನೆ ಮಾಡುವ ಮೂಲಕ ಹಿಂದೂ ಮತಗಳನ್ನು ಭದ್ರಪಡಿಸಿಕೊಂಡಿದ್ದರು. ಆದರೆ, ಶ್ರೀರಾಮನ ಜನ್ಮಭೂಮಿ ಅಯೋಧ್ಯೆ ಸೇರಿ ದೇಶದಲ್ಲಿ ಶ್ರೀರಾಮನಿಗೆ ನಂಟಿರುವ 10 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸೋಲನುಭವಿಸಿರುವುದು ಕಾಕತಾಳೀಯವಾಗಿದೆ. ಆದರೆ, ಇದನ್ನು ಕಾಂಗ್ರೆಸ್‌ನವರು ಶ್ರೀರಾಮನನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಂಡಿದ್ದಕ್ಕೆ ದೇವರೇ ಕಲಿಸಿದ ಪಾಠವೆಂದು ಟೀಕೆ ಮಾಡಿದ್ದಾರೆ.
ಹೌದು, ದೇಶದಲ್ಲಿ ಹಿಂದುತ್ವದ ಅಜೆಂಡಾವನ್ನು ಬಿಜೆಪಿ ಹೊಂದಿರುವುದು ವಾಸ್ತವಿಕ ಸತ್ಯವಾಗಿದೆ. 2024ರ ಲೋಕಸಭಾ ಚುನಾವಣೆಗೂ ಮುನ್ನ ದೇಶದಲ್ಲಿ ಕೋಟ್ಯಂತರ ಹಿಂದೂಗಳ ಆರಾಧ್ಯ ದೈವವಾಗಿರುವ ಶ್ರೀರಾಮ ಮಂದಿರವನ್ನು ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣ ಮಾಡಿ, ಅದನ್ನು ಸಕಾಲಕ್ಕೆ ಉದ್ಘಾಟನೆಯನ್ನೂ ಮಾಡಿದರು.
undefined
ಕೇಂದ್ರ ಸಚಿವರಾದ ವಿ.ಸೋಮಣ್ಣ; ನಮ್ಮಪ್ಪಂಗೆ ಇದೇ ಖಾತೆ ಕೊಡಬೇಕೆಂದ ಪುತ್ರ ಅರುಣ್ ಸೋಮಣ್ಣ
ಅದೇ ರೀತಿ ಕಾಂಗ್ರೆಸ್ ಮುಸ್ಲಿಂ ವೋಟ್‌ಗಳನ್ನು ಮತಬ್ಯಾಂಕ್ ಮಾಡಿಕೊಂಡಿದ್ದು, ದಲಿತರು, ಹಿಂದುಳಿದ ವರ್ಗಗಳ ಮತಗಳನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಕಾಂಗ್ರೆಸ್ ಹಣಿಯಲು ಬಿಜೆಪಿ ಹಿಂದುತ್ವದ ಅಸ್ತ್ರವನ್ನು ಬಳಸಿದ್ದು, ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಆದರೆ, ಶ್ರೀರಾಮ ಮಂದಿರ ನಿರ್ಮಾಣ ಮತ್ತು ಉದ್ಘಾಟನೆ ಕಾರ್ಯಕ್ರಮ ರಾಜಕೀಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಟೀಕೆ ಮಾಡಿ ದೊಡ್ಡ ಮಟ್ಟದಲ್ಲಿ ಪ್ರಚಾರವನ್ನು ಪಡೆದಿತ್ತು. ಜೊತೆಗೆ, ಶ್ರೀರಾಮ ಮಂದಿರ ಉದ್ಘಾಟನೆಗೆ ಕಾಂಗ್ರೆಸ್‌ನ ಯಾವೊಬ್ಬ ನಾಯಕರೂ ಹೋಗಿರಲಿಲ್ಲ.
ಲೋಕಸಭಾ ಚುನಾವಣೆಯಲ್ಲಿ ಶ್ರೀರಾಮನಿಗೆ ನಂಟು ಹೊಂದಿರುವ ಪವಿತ್ರ ಸ್ಥಳಗಳನ್ನು ಹೊಂದಿದ ದೇಶದ 10 ಲೋಕಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಸೋಲು ಅನುಭವಿಸಿದ್ದಾರೆ. ಇದನ್ನು ಶ್ರೀರಾಮನನ್ನು ಹಾಗೂ ಧರ್ಮವನ್ನು ರಾಜಕೀಯಕ್ಕಾಗಿ ಬಳಸಿಕೊಂಡಿದ್ದಾಗಿ ಬಿಜೆಪಿಗೆ ಶ್ರೀರಾಮನೇ ಕೊಟ್ಟಿರುವ ಶಿಕ್ಷೆಯಾಗಿದೆ ಎಂದು ಕಾಂಗ್ರೆಸ್ ನಾಯಕರು ಟೀಕೆ ಮಾಡುತ್ತಿದ್ದಾರೆ. ಈ ಬಗ್ಗೆ ಶ್ರೀರಾಮನ ನಂಟಿರುವ ಲೋಕಸಭಾ ಕ್ಷೇತ್ರಗಳ ಪಟ್ಟಿ ಸಿದ್ಧಪಡಿಸಿ ಬಿಜೆಪಿ ಸೋತಿರುವ ಪೋಸ್ಟರ್ ಸಿದ್ಧಪಡಿಸಿ ಹಂಚಿಕೊಳ್ಳುತ್ತಿದ್ದಾರೆ.
ರಾಜ್ಯದ 5 ಮಂದಿಗೆ ಮಂತ್ರಿಗಿರಿ; ಕುಮಾರಣ್ಣ, ಸೋಮಣ್ಣ, ಜೋಶಿ ಮತ್ತು ಶೋಭಾ ಕರಂದ್ಲಾಜೆಗೆ ಸಚಿವ ಸ್ಥಾನ
ಬಿಜೆಪಿ ಸೋತಿರುವ ಶ್ರೀರಾಮನಿಗೆ ನಂಟಿರುವ ಕ್ಷೇತ್ರಗಳು ಮತ್ತು ಅವುಗಳ ವಿಶೇಷ
ಅಯೋಧ್ಯೆ - ಶ್ರೀರಾಮ ಜನ್ಮಭೂಮಿ, ಭವ್ಯ ಶ್ರೀರಾಮ ಮಂದಿರವನ್ನು ನಿರ್ಮಾಣ ಮಾಡಲಾಗಿದೆ.
ಚಿತ್ರಕೂಟ - ಶ್ರೀರಾಮ ವನವಾಸದ ಸಂದರ್ಭದಲ್ಲಿ 11 ವರ್ಷಗಳ ಕಾಲ ನೆಲೆಸಿದ ಸ್ಥಳವಾಗಿದೆ.
ಸೀತಾಪುರ - ಮಾತೆ ಜಾನಕಿ (ಸೀತಾ) ತೀರ್ಥಯಾತ್ರೆಯನ್ನು ನಡೆಸಿದ ಪವಿತ್ರ ಸ್ಥಳವಾಗಿದೆ.
ಬಸ್ತಿ- ಶ್ರೀರಾಮನ ಗುರು ವಷಿಷ್ಠ ಮಹರ್ಷಿಗಳ ಕರ್ಮಭೂಮಿಯಾಗಿದೆ.
ಸುಲ್ತಾನ್‌ಪುರ - ಶ್ರೀರಾಮನ ಪುತ್ರ ಕುಶ ಜನಿಸಿದ ಸ್ಥಳವಾಗಿದೆ.
ಪ್ರಯಾಗ್‌ರಾಜ್ - ಶ್ರೀರಾಮ ವನವಾಸಕ್ಕೆ ಹೋಗುವ ವೇಳೆ ಚಿತ್ರಕೂಟವನ್ನು ಪ್ರವೇಶಿಸುವ ಮುನ್ನ ಸೀತೆ, ಲಕ್ಷ್ಮಣನ ಜೊತೆಗೆ ಅಲ್ಪ ಕಾಲ ತಂಗಿದ್ದ ಸ್ಥಳವಾಗಿದೆ.
ರಾಮಟೆಕ್ - ವನವಾಸದ ಸಂದರ್ಭದಲ್ಲಿ ಶ್ರೀರಾಮ ವಿಶ್ರಾಂತಿ ಪಡೆದ ಸ್ಥಳಗಳಲ್ಲಿ ರಾಮಟೆಕ್ ಕೂಡ ಒಂದಾಗಿದೆ.
ನಾಸಿಕ್ - ಶ್ರೀರಾಮನ ಸಹೋದರ ಲಕ್ಷ್ಮಣ ಶೂರ್ಪಣಖಿಯ ಮೂಗು ಕತ್ತರಿಸಿದ ಸ್ಥಳವಾಗಿದೆ.
ಕೊಪ್ಪಳ- ಶ್ರೀರಾಮನ ಬಂಟ ಹನುಮಂತ ಜನಿಸಿದ ಸ್ಥಳ ಅಂಜನಾದ್ರಿ ಬೆಟ್ಟವನ್ನು ಹೊಂದಿರುವ ಕ್ಷೇತ್ರದ ಕೊಪ್ಪಳ ಲೋಕಸಭಾ ಕ್ಷೇತ್ರವಾಗಿದೆ.
ರಾಮೇಶ್ವರಂ- ಶ್ರೀರಾಮನು ಸೀತೆಯನ್ನು ಹುಡುಕಿ ಲಂಕಾಗೆ ಹೋಗುವ ಮುನ್ನ ರಾಮೇಶ್ವರಂನಲ್ಲಿ ಸ್ವತಃ ಶಿವಲಿಂಗವನ್ನು ಸ್ಥಾಪಿಸಿದ ಪವಿತ್ರ ಸ್ಥಳವಾಗಿದೆ.