* ಧಾರವಾಡದ ಅಂಜುಮನ್ ವಾಣಿಜ್ಯ ಕಟ್ಟಡದಲ್ಲಿ ಶೇ. 50 ರಷ್ಟು ಹಿಂದೂಗಳ ಅಂಗಡಿಗಳಿವೆ
* ಹಿಂದೂಗಳು, ಮುಸ್ಲಿಂರ ಅಂಗಡಿಗಳಲ್ಲಿ ವ್ಯಾಪಾರ ಮಾಡಬೇಡಿ ಅಂತಾ ಹೇಳಲು ತಾಕತ್ ಇದೆಯಾ?
* ಧಾರವಾಡದಲ್ಲಿ ಹಿಂದೂ ಮುಸ್ಲಿಂರು ಅಣ್ಣ ತಮ್ಮಂದಿರಂತೆ ಬದುಕುತ್ತಿದ್ದಾರೆ
ವರದಿ: ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ
ಧಾರವಾಡ(ಏ.03): ಬಿಜೆಪಿಯವರು(BJP) ಸಂವಿಧಾನದ ಬದಲು ಖುರಾನ್(Quran) ಓದುತ್ತಿದ್ದಾರೆ. ಮುಸ್ಲಿಮರಿಗಿಂತ ಬಿಜೆಪಿಯವರೇ ಹೆಚ್ಚು ಖುರಾನ್ ಓದುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ(Ismail Tamatagar) ಹೇಳಿದ್ದಾರೆ.
ಇಂದು(ಭಾನುವಾರ) ಧಾರವಾಡ(Dharwad) ಸರ್ಕಿಟ್ ಹೌಸ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಇಸ್ಮಾಯಿಲ್ ತಮಟಗಾರ ಅವರು, ಹಲಾಲ್(Halal) ಕಟ್, ಝಟ್ಕಾ(Jhatka) ಕಟ್ ಕುರಿತು ಸಮಾಜದ ಸಾಮರಸ್ಯ ಹಾಳು ಮಾಡುತ್ತಿದ್ದಾರೆ. ಧಾರವಾಡದ ಅಂಜುಮನ್ ವಾಣಿಜ್ಯ ಕಟ್ಟಡದಲ್ಲಿ ಶೇ. 50 ರಷ್ಟು ಹಿಂದೂಗಳ(Hindu) ಅಂಗಡಿಗಳಿವೆ. ಹಿಂದೂಗಳು, ಮುಸ್ಲಿಂರ(Muslim) ಅಂಗಡಿಗಳಲ್ಲಿ ವ್ಯಾಪಾರ ಮಾಡಬೇಡಿ ಅಂತಾ ಹೇಳಲು ತಾಕತ್ ಇದೆಯಾ? ಧಾರವಾಡದಲ್ಲಿ ಹಿಂದೂ ಮುಸ್ಲಿಂರು ಅಣ್ಣ ತಮ್ಮಂದಿರಂತೆ ಬದುಕುತ್ತಿದ್ದಾರೆ. ಮುಸ್ಲಿಂರು ಮುಂದಿನ ದಿನಗಳಲ್ಲಿ ಮಸೀದಿ ಬದಲು ಶಾಲಾ ಕಾಲೇಜು ಕಟ್ಟುತ್ತಾರೆ ಅಂತ ಹೇಳಿದ್ದಾರೆ.
ಮುಸ್ಲಿಮರು ಹಲಾಲ್ ಕಟ್ ಮಾಡಿಕೊಳ್ಳಲಿ ಬಿಡಿ, ಯಾಕೆ ವಿರೋಧಿಸ್ತೀರಾ? ಸಿದ್ದು ಪ್ರಶ್ನೆ
ಎರಡು ವರ್ಷದಲ್ಲಿ ರಾಜ್ಯದಲ್ಲಿ(Karnataka) ಇನ್ನೂರಕ್ಕೂ ಹೆಚ್ಚು ಮಹಿಳಾ ಕಾಲೇಜುಗಳು(Women Colleges) ಸ್ಥಾಪನೆಯಾಗುತ್ತವೆ. ಅಂಜುಮನ್ ಕಾಲೇಜಿನಲ್ಲಿ ಶೇ.40 ರಷ್ಟು ಹಿಂದೂ ವಿಧ್ಯಾರ್ಥಿಗಳಿದ್ದಾರೆ. ನಮ್ಮಲ್ಲಿ ಎಲ್ಲ ವರ್ಗದ ವಿದ್ಯಾರ್ಥಿಗಳಿದ್ದಾರೆ. ಎಲ್ಲರ ಧರ್ಮವನ್ನು ಅಂಜುಮನ್ ಗೌರವಿಸುತ್ತದೆ. ಮುಂದಿನ ದಿನಗಳಲ್ಲಿ ಹಿಜಾಬ್‌ಗೆ ಎಲ್ಲಿ ಅವಕಾಶ ಇದೆಯೋ ಅಲ್ಲಿ ಕಲಿಯುತ್ತಾರೆ. ಬಿಜೆಪಿ ಸರ್ಕಾರ, ಸಮಾಜದ ಸಾಮರಸ್ಯ ಹಾಳು ಮಾಡುತ್ತಿದೆ ಎಂದು ಇಸ್ಮಾಯಿಲ್ ತಮಟಗಾರ ಬಿಜೆಪಿ ಸರ್ಕಾರದ(BJP Government) ವಿರುದ್ಧ ಹರಿಹಾಯ್ದಿದ್ದಾರೆ.
ಹಲಾಲ್ v/s ಝಟ್ಕಾ ಕಟ್, ಸ್ಟನ್ನಿಂಗ್ ಕಡ್ಡಾಯ ಆದೇಶ ಹೊರಡಿಸಿಲ್ಲ: ಪ್ರಭು ಚವ್ಹಾಣ್ ಸ್ಪಷ್ಟನೆ
ಬೆಂಗಳೂರು: ಹಲಾಲ್ ಕಟ್ v/s ಝಟ್ಕಾ ಕಟ್ ನಡುವಿನ ವಿವಾದದ ಮಧ್ಯೆ ಪಶುಪಾಲನಾ ಇಲಾಖೆ ಎಂಟ್ರಿ ಕೊಟ್ಟಿದ್ದು, ಆದೇಶ ಪ್ರತಿಯೊಂದು ವರಲ್ ಆಗುತ್ತಿದೆ. ಇನ್ಮುಂದೆ ಆಹಾರಕ್ಕಾಗಿ ಪ್ರಾಣಿ ವಧೆ ಮಾಡುವಾಗ ಪ್ರಾಣಿಗಳಿಗೆ ಹಿಂಸೆ ನೀಡಬಾರದು. ಆಹಾರಕ್ಕಾಗಿ ಪ್ರಾಣಿ ವಧೆ ಮಾಡುವವರು ಇನ್ಮುಂದೆ ಸ್ಟನ್ನಿಂಗ್ (Stunning) ವಿಧಾನ ಕಡ್ಡಾಯಗೊಳಿಸುವಂತೆ ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಉಮಾಪತಿ ಆದೇಶಿಸಿದ್ದಾರೆ. ಆದ್ರೆ, ಸ್ಟನ್ನಿಂಗ್ ಕಡ್ಡಾಯ ನಿಯಮ ಆದೇಶವನ್ನು ನಾವು ಹೊರಡಿಸಿಲ್ಲ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಸ್ಪಷ್ಟಪಡಿಸಿದ್ದಾರೆ.
Belagavi: ಹಲಾಲ್-ಜಟ್ಕಾ ಮಧ್ಯೆ ಭಾವೈಕ್ಯತೆಯ ಸಂದೇಶ: ಮುಸ್ಲಿಮರಿಂದಲೂ ಕೃಷ್ಣಾ ಪುಣ್ಯ ಸ್ನಾನ
ಸ್ಟನ್ನಿಂಗ್ ಕಡ್ಡಾಯ ನಿಯಮ ಆದೇಶವನ್ನು ನಾವು ಹೊರಡಿಸಿಲ್ಲ. ನಮ್ಮ ಇಲಾಖೆಯಿಂದ ಯಾವುದೇ ಆದೇಶವನ್ನು ಹೊರಡಿಸಿಲ್ಲ ಎಂದು ಪ್ರಭು ಚವ್ಹಾಣ್ ಹೇಳಿಕೆ ನೀಡಿದ್ದಾರೆ. ಸ್ಟನ್ನಿಂಗ್ ಕಡ್ಡಾಯ ಆದೇಶ ಮಾಡಿಲ್ಲ. ಪತ್ರ ಬರೆದಿದ್ದಾರೆ ಅಷ್ಟೇ. ಹಲಾಲ್ ಕಟ್ ಮಾಡಬಾರದು ಎಂದು ಪತ್ರ ಬರೆದಿದ್ದಾರೆ ಅಷ್ಟೇ. ಯಾವುದೇ ರೀತಿಯ ಆದೇಶವನ್ನು ಹೊರಡಿಸಿಲ್ಲ. ಪತ್ರದ ಬಗ್ಗೆ ನಾನು ಪರಿಶೀಲನೆ ಮಾಡುತ್ತೇನೆ ಎಂದು ಪ್ರಭು ಚವ್ಹಾಣ್ ಸ್ಪಷ್ಟನೆ ನೀಡಿದರು.
2001 ರ PCA (Prevention of Cruelty to Animals Act) ಕಾಯ್ದೆಯ ಸೆಕ್ಷನ್ 6 ಸಬ್ ಸೆಕ್ಷನ್ 4 ರ ಪ್ರಕಾರ ಅಧಿಕೃತ ವಧಾಗಾರ/ಕೋಳಿ ಅಂಗಡಿಗಳಲ್ಲಿ ಸ್ಟನ್ನಿಂಗ್ ಮಾಡಿ ಪ್ರಜ್ಞೆ ತಪ್ಪಿಸಿ ವಧೆ ಮಾಡಬೇಕು. ಅಲ್ಲದೇ ಪರವಾನಗಿ ನೀಡುವಾಗ ಸ್ಟನ್ನಿಂಗ್ ಫೆಸಿಲಿಟಿ ಇರುವುದನ್ನ ಪರಿಶೀಲಿಸಿ ಪರವಾನಗಿ ನೀಡಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ. ರೂಲ್ಸ್ ಬ್ರೇಕ್ ಮಾಡೋರಿಗೆ 5 ಸಾವಿರದಿಂದ 50 ಸಾವಿರದವರೆಗೂ ದಂಡ ವಿಧಿಸುವ ಅವಕಾಶವೂ ಇದೆ. ಅಲ್ಲದೇ ಕಾಯ್ದೆಯಡಿ ಪ್ರಾಣಿ ಹಿಂಸೆಯ ಕೇಸ್ ಕೂಡಾ ದಾಖಲು ಮಾಡಲು ಕಾನೂನಿನಲ್ಲಿ ಅವಕಾಶ ಇದೆ. ಹೀಗಾಗಿ ಆಹಾರಕ್ಕಾಗಿ ಕೋಳಿ ಕುರಿ ವಧೆ ಮಾಡೋವ್ರು ಈ ನಿಯಮ ಅನುಸರಿಸಬೇಕು ಎಂದು ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಉಮಾಪತಿ ಆದೇಶ ಪತ್ರದಲ್ಲಿ ಹೇಳಿದ್ದಾರೆ.