
ಮುಂಬೈ (ಏ.2): ಮರಾಠಿ ಹೊಸ ವರ್ಷವಾದ ಗುಡಿ ಪಾಡ್ವಾ ( Gudi Padwa ) ದಿನದಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ( Maharashtra Chief Minister Uddhav Thackeray) ಅವರು ರಾಜ್ಯ ಸರ್ಕಾರದ ಮೈತ್ರಿ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳ ಮಾತುಕತೆ ಕೇವಲ ವದಂತಿಗಳಾಗಿದ್ದು, ಸರ್ಕಾರ ಸ್ಥಾಪನೆಗೆ ನೆರವಾಗಿರುವ ಮೈತ್ರಿ ದೃಢವಾಗಿ ನಿಂತಿದೆ ಎಂದು ಹೇಳಿದ್ದಾರೆ.
ಸರ್ಕಾರವನ್ನು ಉರುಳಿಸುವ ಪ್ರಯತ್ನಗಳಿಗೆ ರಾಜ್ಯ ಸರ್ಕಾರ (state government ) ತಿರುಗೇಟು ನೀಡುತ್ತದೆ ಎಂದು ಠಾಕ್ರೆ ಹೇಳಿದ್ದಾರೆ. ರಾಜ್ಯವನ್ನು ಅಪಖ್ಯಾತಿ ಮಾಡಲು ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಆರೋಪಿಸಿದ ಅವರು, ದೇಶದ ಆರ್ಥಿಕತೆಗೆ (country economy) ರಾಜ್ಯವು ಹೆಚ್ಚು ಕೊಡುಗೆ ನೀಡುತ್ತಿರುವ ಮಹಾರಾಷ್ಟ್ರವನ್ನು ಅಪಖ್ಯಾತಿಗೊಳಿಸಿದರೆ ದೇಶಕ್ಕೆ ಹಾನಿಯಾಗುತ್ತದೆ ಎಂದು ಹೇಳಿದರು. ಸಾಂಕ್ರಾಮಿಕದ (pandemic) ಕಾರಣದಿಂದಾಗಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗಲಿಲ್ಲ, ಆದರೆ ಸರ್ಕಾರವು ತನ್ನ ಬದ್ಧತೆಯಲ್ಲಿ ಗಂಭೀರವಾಗಿದ್ದು, ಕೇವಲ ಘೋಷಣೆಗಳನ್ನು ಮಾಡದೆ ಕೆಲಸದ ಮೂಲಕ ಎಲ್ಲವನ್ನು ಸಾಬೀತುಪಡಿವಲ್ಲಿ ನಂಬಿದೆ ಎಂದು ಉದ್ಧವ್ ಠಾಕ್ರೆ ಹೇಳಿದರು.
ಪೊಲೀಸ್ ಇಲಾಖೆಗೆ ( police department ) ಹಲವಾರು ಸೌಲಭ್ಯಗಳನ್ನು ಉದ್ಘಾಟಿಸಲಾಗುತ್ತಿದೆ ಎಂದು ಠಾಕ್ರೆ ಹೇಳಿದರು. ಮರಾಠಿ ಭಾಷಾ ಭವನ (Marathi Bhasha Bhavan ) ಮತ್ತು ಹೊಸ ಮೆಟ್ರೊ ಮಾರ್ಗಗಳು (metro lines) ಮರಾಠಿ ಗುರುತಿನ ಸಂಕೇತವಾಗಿದೆ ಎಂದು ಮುಖ್ಯಮಂತ್ರಿ ಮಾತನಾಡಿದರು. ಕಳೆದೆರಡು ತಿಂಗಳಿಂದ ರಾಜ್ಯ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಬಿಜೆಪಿ ಆರೋಪಿಸಿದೆ. ಶಿವಸೇನೆಯನ್ನು ಕಾಂಗ್ರೆಸ್ ಮತ್ತು ಎನ್‌ಸಿಪಿ ಬಳಸುತ್ತಿದೆ ಮತ್ತು ಅದರ ಬಗ್ಗೆ ತಿಳಿದಿರಲಿಲ್ಲ ಎಂದು ರಾಜ್ಯ ಬಿಜೆಪಿ ನಾಯಕರು ಹೇಳಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಕಾರ್ಯಾಲಯವು ಮಾಧ್ಯಮ ವರದಿಗಳಿಗೆ ಪ್ರತಿಕ್ರಿಯೆಯಾಗಿ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಬಿಜೆಪಿಯ ಬಗ್ಗೆ 'ಮೃದುತ್ವ'ದಿಂದ ರಾಜ್ಯ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ವಿರುದ್ಧ ಶಿವಸೇನೆ ಅಸಮಾಧಾನಗೊಂಡಿದೆ ಎಂದು ಹೇಳಲಾಗಿದೆ. ಶುಕ್ರವಾರ ಸಿಎಂ ಠಾಕ್ರೆ ಮತ್ತು ಪಾಟೀಲ್ ಭೇಟಿ ಬಳಿಕ ಈ ಹೇಳಿಕೆ ನೀಡಲಾಗಿದೆ.
Loudspeaker Ban in Mosque ಮುಂಬೈನಲ್ಲಿ ಆಜಾನ್ ಗೆ ಧ್ವನಿವರ್ಧಕ ಬಳಕೆ ನಿಷೇಧಕ್ಕೆ ಬಿಜೆಪಿ ಆಗ್ರಹ!
ಕಾಂಗ್ರೆಸ್ ಕೂಡ ಮೈತ್ರಿಯಿಂದ ಸಂತೋಷವಾಗಿಲ್ಲ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಕಾಂಗ್ರೆಸ್ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ಅನುಸರಿಸಲು ಸರ್ಕಾರವನ್ನು ಒತ್ತಾಯಿಸಿತು, ಅದರ ಅಡಿಯಲ್ಲಿ ಎಂವಿಎ ಸರ್ಕಾರವನ್ನು ರಚಿಸಲಾಯಿತು ಮತ್ತು ಮೂರು ಪಕ್ಷಗಳೊಂದಿಗೆ ಮೈತ್ರಿ ಏರ್ಪಟ್ಟಿತ್ತು. ಆದರೆ, ಮೈತ್ರಿಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
Uddhav Thackeray ಧೈರ್ಯ ಅನ್ನೋದಿದ್ರೆ ದಾವೂದ್ ಇಬ್ರಾಹಿಂನನ್ನು ಕೊಂದು ತೋರಿಸಿ!
ಠಾಕ್ರೆ ಅನುಪಸ್ಥಿತಿಯಲ್ಲಿ ಮಹಾ ಮಂತ್ರಿಗಳ ಜೊತೆ ಸಭೆ: ಮಹಾರಾಷ್ಟ್ರದಲ್ಲಿ ಶಿವಸೇನೆ ( Shiv Sena ), ಎನ್‌ಸಿಪಿ ( NCP ) ಹಾಗೂ ಕಾಂಗ್ರೆಸ್ ( Congress ) ಮೈತ್ರಿಯ ಮಹಾ ವಿಕಾಸ್ ಅಘಾಡಿ (Maha Vikas Aghadi) ಸರ್ಕಾರ ಆಡಳಿತ ನಡೆಸುತ್ತಿದೆ. ಆದರೆ ಇಲ್ಲಿ ಹೆಸರಿಗೆ ಮಾತ್ರ ಉದ್ಧವ್ ಠಾಕ್ರೆ ಮುಖ್ಯಮಂತ್ರಿ, ಅಸಲಿ ಮುಖ್ಯಮಂತ್ರಿ ಎನ್‌ಸಿಪಿ ಪಕ್ಷದ (NCP Leader) ನಾಯಕ ಶರದ್ ಪವಾರ್ (Sharad Pawar) ಅನ್ನೋ ಮಾತನ್ನು ಬಿಜೆಪಿ ಸೇರಿದಂತೆ ಹಲವರು ಪದೇ ಪದೇ ಹೇಳಿ ಕುಟುಕಿದ್ದಾರೆ. ಇದೀಗ ಈ ಹೇಳಿಕೆಗೆ ಬಲವಾದ ಸಾಕ್ಷ್ಯ ಸಿಕ್ಕಿದೆ. ಸಿಎಂ ಉದ್ದವ್ ಠಾಕ್ರೆ ಅನುಪಸ್ಥಿತಿಯಲ್ಲಿ ಶರದ್ ಪವಾರ್ ಮಹಾರಾಷ್ಟ್ರ ಮಂತ್ರಿಗಳ ಸಭೆ ನಡೆಸಿದ್ದಾರೆ. ಇದನ್ನು ಬಿಜೆಪಿ ಸೇರಿದಂತೆ ಹಲವರು ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.