ಗ್ಯಾರಂಟಿ ಯೋಜನೆ ನೋಡಲು ಬಿಜೆಪಿಗರು ಕರ್ನಾಟಕಕ್ಕೆ ಬನ್ನಿ: ಡಿ.ಕೆ.ಶಿವಕುಮಾರ್

By Kannadaprabha News  |  First Published Nov 10, 2024, 8:48 AM IST

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 60 ದಿನಗಳಲ್ಲಿ ಕೊಟ್ಟಂತಹ ಆರು ಭರವಸೆಗಳನ್ನು ಅನುಷ್ಠಾನಕ್ಕೆ ತಂದಿದ್ದು, ನುಡಿದಂತೆ ನಾವು ನಡೆದಿದ್ದೇವೆ ಎಂದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
 


ಮುಂಬೈ(ನ.10):  ಕಾಂಗ್ರೆಸ್ ಕೊಟ್ಟ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ನೋಡಲು ಬಿಜೆಪಿ ನಾಯಕರು ಕರ್ನಾಟಕ್ಕೆ ಬರಬೇಕು. ಅದಕ್ಕಾಗಿ ವಿಶೇಷ ವಿಮಾನ ಮತ್ತು ಬಸ್ ವ್ಯವಸ್ಥೆ ಕಲ್ಪಿಸುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಹಿರಂಗ ಸವಾಲು ಹಾಕಿದ್ದಾರೆ. 

ಇಲ್ಲಿನ ತಿಲಕ್ ಭವನದಲ್ಲಿ ಹಿಮಾಚಲ ಪ್ರದೇಶ ಮತ್ತು ತೆಲಂಗಾಣದ ಮುಖ್ಯಮಂತ್ರಿಯವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಕರ್ನಾಟಕದಲ್ಲಿ 22 ದಿನಗಳ ಕಾಲ ಸಂಚರಿಸಿದ್ದರು. ಈ ವೇಳೆ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ತಿಳಿದುಕೊಂಡು ಕರ್ನಾಟಕದಲ್ಲಿ 6 ಭರವಸೆಗಳನ್ನು ನೀಡಲಾಯಿತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 60 ದಿನಗಳಲ್ಲಿ ಕೊಟ್ಟಂತಹ ಆರು ಭರವಸೆಗಳನ್ನು ಅನುಷ್ಠಾನಕ್ಕೆ ತಂದಿದ್ದು, ನುಡಿದಂತೆ ನಾವು ನಡೆದಿದ್ದೇವೆ ಎಂದರು. 

Tap to resize

Latest Videos

undefined

ಬಿಜೆಪಿಯವರಿಗೆ ಯಾರ ಮೇಲೆ ನಂಬಿಕೆಯಿದೆ?: ಆ‌ರ್. ಅಶೋಕ್ ಹರಿಹಾಯ್ದ ಡಿಕೆಶಿ

ಗ್ಯಾರಂಟಿ ಯೋಜನೆಗಳಿಂದಾಗಿ ಬಿಜೆಪಿ ಆಡಳಿತವಿರುವ ದೇಶದ ಹಲವು ರಾಜ್ಯಗಳಿಗಿಂತ ಕರ್ನಾಟಕದ ಆರ್ಥಿಕತೆ ಉತ್ತಮವಾಗಿದೆ. ಬಿಜೆಪಿ ನಾಯಕರು ಕರ್ನಾಟಕಕ್ಕೆ ಬಂದು ಎಲ್ಲಾ ಜಿಲ್ಲೆಗಳಿಗೆ ಪ್ರಯಾಣಿಸಿ ಈ ಗ್ಯಾರಂಟಿ ಯೋಜ ನೆಗಳ ಪ್ರಗತಿ ಕುರಿತು ಜನರಲ್ಲಿ ವಿಚಾರಿಸಲಿ. ಅದನ್ನು ಬಿಟ್ಟು ಬಿಜೆಪಿ ನಾಯಕರು ಪತ್ರಿಕೆಗಳಲ್ಲಿ ಸುಳ್ಳು ಜಾಹೀರಾತು ನೀಡಿ ರಾಜ್ಯದ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. 

ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುದ್ದಿಂದರ್‌ಸುಖು, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ಎಐಸಿಸಿ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷ ಪವನ್ ಖೇರಾ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಲ್ಕಾ ಲಂಬಾ, ಅಖಿಲ ಭಾರತ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಹಾಗೂ ಸಹ ಪ್ರಭಾರಿ ಬಿ.ಎಂ. ಸಂದೀಪ್, ಯು.ಬಿ.ವೆಂಕಟೇಶ್, ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಸಂಧ್ಯಾತಾಯಿ ಸವ್ವಾಳಖೆ, ವಕ್ತಾರ ಚರಂಜಿತ್ ಸಪ್ರ ಮತ್ತಿತರರು ಉಪಸ್ಥಿತರಿದ್ದರು. 

ಸಿಡಿ ಬ್ರದರ್ಸ್‌ಗಳಿಗೆ ಸಿಡಿ, ವಿಡಿಯೋ, ಆಡಿಯೋ ಮಾಡೋದೆ ಕೆಲಸ: ಕುಮಾರಸ್ವಾಮಿ ವಾಗ್ದಾಳಿ

ಬಿಜೆಪಿ ನಮ್ಮ ಗ್ಯಾರಂಟಿಗಳನ್ನು ಕಾಪಿ ಮಾಡುತ್ತಿದೆ: ಡಿಸಿಎಂ 

ಡಿಕೆಶಿ ಆರೋಪ 'ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಸುಳ್ಳು ಜಾಹೀರಾತುಗಳನ್ನು ನೀಡುವ ಬಿಜೆಪಿಯವರು ಒಳಗೊಳಗೇ ನಮ್ಮ ಯೋಜನೆಗಳನ್ನು ಕಾಪಿ ಮಾಡುತ್ತಿದ್ದಾರೆ ಎಂದು ಡಿ. ಡಿ.ಕೆ.ಶಿವಕುಮಾರ್ ಆರೋಪಿಸಿದರು. 
'ಚುನಾವಣೆಗೂ ಮುನ್ನ ನಾವೇನು ಭರವಸೆ ನೀಡಿದ್ದೆವು. ಗೆದ್ದ ಬಳಿಕ ಅವುಗಳನ್ನು ಹೇಗೆ ಈಡೇರಿಸಿದ್ದೇವೆ. ನಾವು ಮತಗಳನ್ನು ನೋಡುತ್ತಿಲ್ಲ, ಬದಲಿಗೆ ಅಭಿವೃದ್ಧಿ ಯನ್ನು ನೋಡುತ್ತಿದ್ದೇವೆ. ನಾವು ಜನರ ಭಾವನೆಗಳ ಜೊತೆ ಆಟವಾಡುವುದಿಲ್ಲ. ಬದಲಿಗೆ ಅಭಿವೃದ್ಧಿ ಮಾಡುತ್ತಿದ್ದೇವೆ. ನಾವು ಜಾರಿಗೊಳಿಸಿದ ಗ್ಯಾರಂಟಿಗಳನ್ನು ಬಿಜೆಪಿ ಕಾಪಿ ಮಾಡುತ್ತಿದೆ' ಎಂದು ಕಿಡಿಕಾಡಿದರು. 

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಒಂದಲ್ಲಾ ಒಂದು ಜನಪರ ಯೋಜನೆ ಜಾರಿಗೊಳಿಸುತ್ತದೆ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರಿಂದ ಹಿಡಿದು ಮನಮೋಹನ ಸಿಂಗ್‌ ವರೆಗೆ ಯಾವುದೇ ಸರ್ಕಾರ ಜಾರಿಗೊಳಿಸಿದ ಯಾವ ಯೋಜನೆಯನ್ನೂ ನಾವು ರದ್ದುಪಡಿಸಿಲ್ಲ ಎಂದೂ ಡಿ.ಕೆ.ಶಿವಕುಮಾರ್ ಹೇಳಿದರು.

click me!