ಗೌಡರೇ 5 ವರ್ಷ ಆಡಳಿತ ಮಾಡ್ಲಿಲ್ಲ, ಬೇರೆಯವರಿಗೆ ಬಿಡ್ತಾರಾ?: ಚಲುವರಾಯಸ್ವಾಮಿ

By Kannadaprabha News  |  First Published Nov 10, 2024, 7:58 AM IST

ದೇವೇಗೌಡರು ಸಿಎಂ ಆಗಿ 5 ವರ್ಷ ಇದ್ರಾ? ಪ್ರಧಾನಿಯಾಗಿ 5 ವರ್ಷ ಅಧಿಕಾರ ಮಾಡಿದ್ರಾ? ಅವರ ನೇತೃತ್ವದ ಸರ್ಕಾರ ಇದ್ದಾಗಲೇ 5 ವರ್ಷ ಆಡಳಿತ ಮಾಡಿಲ್ಲ. ಇನ್ನೂ ಬೇರೆಯವರು ಸರ್ಕಾರ ಮಾಡಿದ್ರೆ ಸುಮ್ಮನೆ ಇರ್ತಾರಾ, ಅದಕ್ಕೆ ಕಾಂಗ್ರೆಸ್‌ ಸರ್ಕಾರ ಕಿತ್ತು ಹಾಕುತ್ತೇವೆ ಅಂತಾರೆ ಎಂದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ 


ಚನ್ನಪಟ್ಟಣ(ನ.10):  ಎಚ್.ಡಿ.ದೇವೇಗೌಡ ಅವರ ನೇತೃತ್ವದ ಸರ್ಕಾರವೇ 5 ವರ್ಷ ಇರಲಿಲ್ಲ. ಇನ್ನು ಬೇರೆಯವರ ಸರ್ಕಾರ ಪೂರ್ಣಾವಧಿ ಪೂರೈಸಲು ಬಿಡ್ತಾರಾ. ಅದಕ್ಕೆ ಕಾಂಗ್ರೆಸ್‌ ಸರ್ಕಾರ ಕಿತ್ತುಹಾಕುತ್ತೇವೆ ಅಂತಿದ್ದಾರೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ. 

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ದೇವೇಗೌಡರು ಸಿಎಂ ಆಗಿ 5 ವರ್ಷ ಇದ್ರಾ? ಪ್ರಧಾನಿಯಾಗಿ 5 ವರ್ಷ ಅಧಿಕಾರ ಮಾಡಿದ್ರಾ? ಅವರ ನೇತೃತ್ವದ ಸರ್ಕಾರ ಇದ್ದಾಗಲೇ 5 ವರ್ಷ ಆಡಳಿತ ಮಾಡಿಲ್ಲ. ಇನ್ನೂ ಬೇರೆಯವರು ಸರ್ಕಾರ ಮಾಡಿದ್ರೆ ಸುಮ್ಮನೆ ಇರ್ತಾರಾ, ಅದಕ್ಕೆ ಕಾಂಗ್ರೆಸ್‌ ಸರ್ಕಾರ ಕಿತ್ತುಹಾಕುತ್ತೇವೆ ಅಂತಾರೆ ಎಂದರು. 

Tap to resize

Latest Videos

undefined

ನನ್ನಣ್ಣ 23ನೇ ವಯಸ್ಸಲ್ಲೇ ದೇವೇಗೌಡರ ವಿರುದ್ಧ ತೊಡೆ ತಟ್ಟಿದ್ದರು: ಡಿ.ಕೆ.ಸುರೇಶ್

ಗೌಡರಿಗೆ ಅವರದ್ದೇ ಸರ್ಕಾರದ ಮೇಲೆ ನಂಬಿಕೆ ಇರ್ಲಿಲ್ಲ. ಅವರ ಅವಧಿಯಲ್ಲಿ ಶಾಸಕರು ಮನೆಗೆ ಹೋದ್ರೆ ಈ ಸರ್ಕಾರ 2 ವರ್ಷ ಇರಲ್ಲ ಅನ್ನುತ್ತಿದ್ದರು ಎಂದರು.

click me!