
ಕಲಬುರಗಿ (ಡಿ.7): ಸಚಿವ ಪ್ರಿಯಾಂಕ್ ಖರ್ಗೆ ಹಲ್ಲೆ ಮಾಡಿಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ಆರೋಪ ಮಾಡಿದ್ದ ಕಲಬುರಗಿ ಬಿಜೆಪಿ ಮುಖಂಡ ಮಣಿಕಂಠ ರಾಥೋಡ್ ಮತ್ತೆ ವಶಕ್ಕೆ ಪಡೆದ ಚೌಕ್ ಠಾಣೆ ಪೊಲೀಸರು
ನಗರದ ಭಾರತ್ ಪ್ರೈಡ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಮಣಿಕಂಠ ರಾಥೋಡ್ . ಶಹಾಬಾದ ಬಳಿ ತನ್ನ ಮೇಲೆ ಪ್ರಿಯಾಂಕ್ ಖರ್ಗೆ ಹಲ್ಲೆ ಮಾಡಿಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಆದರೆ ಸಚಿವ ಪ್ರಿಯಾಂಕ್ ಖರ್ಗೆ ಇದನ್ನು ಅಲ್ಲಗೆಳೆದಿದ್ದರು. ಇದೆಲ್ಲ ಕಟ್ಟುಕಥೆ, ಹಲ್ಲೆಯಾಗಿಲ್ಲ, ಕುಡಿದು ಕಾರು ಅಪಘಾತವಾಗಿದೆ ಅದನ್ನು ಹಲ್ಲೆ ಎಂದು ಬಿಂಬಿಸಲು ಯತ್ನಿಸಿದ್ದಾನೆ ಎನ್ನುವುದು ಕಲ್ಬುರ್ಗಿ ಪೊಲೀಸರ ತನಿಖೆಯಲ್ಲಿ ದೃಢಪಟ್ಟಿದೆ. ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿರುವ ಮಣಿಕಂಠ ರಾಥೋಡ್, ಬಿವೈ ವಿಜಯೇಂದ್ರ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದಿದ್ದ ಪ್ರಿಯಾಂಕ್ ಖರ್ಗೆ ಇದರ ಬೆನ್ನಲ್ಲೇ ಇದೀಗ ಮಣಿಕಂಠ ರಾಥೋಡ್ ಅಪಾರ್ಟ್‌ಮೆಂಟ್ ಗೆ ತೆರಳಿ ವಶಕ್ಕೆ ಪಡೆದಿರುವ ಕಲಬುರಗಿ ಪೊಲೀಸರು.
ಮಣಿಕಂಠ ರಾಥೋಡ್, ವಿಜಯೇಂದ್ರ ವಿರುದ್ಧ ಮಾನನಷ್ಟ ಕೇಸ್ ಹಾಕುವೆ: ಪ್ರಿಯಾಂಕ್ ಖರ್ಗೆ
ಆದರೆ ಪ್ರಿಯಾಂಕ್ ಖರ್ಗೆ ಹೇಳಿಕೆ, ಪೊಲೀಸರ ವರದಿ ತಳ್ಳಿಹಾಕಿರುವ ಮಣಿಕಂಠ ರಾಥೋಡ ತನಿಖೆಯ ವರದಿಯೇ ಸುಳ್ಳು, ನನ್ನ ಮೇಲೆ ಖರ್ಗೆ ಬೆಂಬಲಿಗರು ಹಲ್ಲೆ ಮಾಡಿರುವುದಕ್ಕೆ ದಾಖಲೆಗಳಿವೆ. ಅದಕ್ಕೆ ಸಂಬಂಧಿಸಿದಂತೆ ಸಾಕ್ಷಿ ಬಿಡುಗಡೆ ಮಾಡಲು ನಾನು ಸಿದ್ಧ ಎಂದಿದ್ದ ರಾಥೋಡ್. ಅದಕ್ಕಾಗಿ ಇಂದು ಹಲ್ಲೆಗೆ ಸಂಬಂಧಿಸಿದಂತೆ ದಾಖಲೆ ಬಿಡುಗಡೆ ಮಾಡಲು ಸುದ್ದಿಗೋಷ್ಠಿ ಕರೆದಿದ್ದ ಮಣಿಕಂಠ ರಾಥೋಡ್. ಸುದ್ದಿಗೋಷ್ಠಿಗೆ ಆಗಮಿಸುವ ಮುನ್ನವೇ ಅಪಾರ್ಟ್‌ಮೆಂಟ್‌ಗೆ ತೆರಳಿ ಬಂಧಿಸಿರುವ ಕಲಬುರಗಿ ಪೊಲೀಸರು ನಡೆ ಅನುಮಾನಕ್ಕೆ ಕಾರಣವಾಗಿದೆ.
ಮಾಲಗತ್ತಿ ಸಮೀಪದ ತಮ್ಮ ಫಾರ್ಮ್ ಹೌಸ್ ಮನೆಯಿಂದ ರಾತ್ರಿ 1.30 ಗಂಟೆ ಸುಮಾರಿಗೆ ಕಲಬುರಗಿ ಕಡೆಗೆ ಹೊರಟಿದ್ದಾಗ ಕಾಗಿಣಾ ಸೇತುವೆ ಮಾಲಗತ್ತಿ ಮಧ್ಯೆ ಕಾರು ತಡೆದು ಹಲ್ಲೆ ನಡೆಸಿದ ಬಳಿಕ ಗುಂಪು ಪರಾರಿಯಾಗಿದ್ದರು ಎಂದು ಆರೋಪಿಸಿದ್ದ ಮಣಿಕಂಠ.
ಪ್ರಿಯಾಂಕ್ ಖರ್ಗೆ ತವರಲ್ಲಿ ಗೂಂಡಾಗಿರಿ ಮೀತಿ ಮೀರಿದೆ; ಬಿವೈ ವಿಜಯೇಂದ್ರ ಕಿಡಿ
ಕಾರು ತಡೆದು ದುಷ್ಕರ್ಮಿಗಳು ಮದ್ಯದ ಬಾಟಲಿ, ಕಲ್ಲುಗಳಿಂದ ದಾಳಿ ಮಾಡಿದ್ದಾರೆ. ದಾಳಿಯಿಂದಾಗಿ ಮಣಿಕಂಠ ರಾಠೋಡ್ ತಲೆಗೆ ಮತ್ತು ಎದೆ, ತೋಳು, ಕಿವಿಬಳಿ ತೀವ್ರ ಪೆಟ್ಟಾಗಿದೆ. ತಲೆಯಿಂದ ರಕ್ತ ಸುರಿದು ಅವರು ನೆಲಕ್ಕೆ ಬಿದ್ದ ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಮಣಿಕಂಠ ಅವರ ಜೊತೆಗಿದ್ದ ಶ್ರೀಕಾಂತ ಸುಲೇಗಾಂವ್ ಎಂಬುವವರೂ ಗಾಯಗೊಂಡಿದ್ದರು. ಇಬ್ಬರನ್ನೂ ರಾತ್ರಿಯೇ ಕಲಬುರಗಿಯ ಮೆಡಿಕೇರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಿಯಾಂಕ್ ಖರ್ಗೆ ಬೆಂಬಲಿಗರಿಂದಲೇ ಹಲ್ಲೆ ಕೊಲೆ ಯತ್ನ ನಡೆದಿದೆ ಎಂದು ಆರೋಪಿ ಮಣಿಕಂಠ ರಾಥೋಡ್.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.